ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯ ಉಳಿಸುವೆವು ಹತ್ಯೆಗಳ ಸರದಿಯಲಿ ಸಿಡಿದು ನಿಲ್ಲುತ್ತಾ …

ಮಾರ್ಗದಲಿ ಹೆಜ್ಜೆಯಾಗಿ..100_3382

ರಮೇಶ ಗಬ್ಬೂರು

kalburgi_0

ಸತ್ಯ ಉಳಿಸುವೆವು ಹತ್ಯೆಗಳ ಸರದಿಯಲಿ ಸಿಡಿದು ನಿಲ್ಲುತ್ತಾ ..
ಹುಡುಕುವುದು ಬಿಡೆವು ನಿಮ ತುಪಾಕಿಯ ಗುಂಡಿಗೆ ಗುಂಡಿಗೆಯ ಒಡ್ಡುತ್ತಾ..

ಸಾವನ್ನು ಬೆನ್ನಿಗಟ್ಟುಕೊಂಡು ಬರುವೆವು ನಿಮ ಕೋವಿಯಲಿ ಗೂಡು ಕಟ್ಟುತ್ತಾ..
ಮತಮೌಢ್ಯದ  ಹಾವನ್ನು ಹಿಡಿಯದೆ ಬಿಡೆವು ವಿಚಾರದ ಬುಟ್ಟಿ ಹೆಣೆಯುತ್ತಾ..

ನನ್ನ ಸುಟ್ಟರೂ ನನ್ನೊಳಗಿನ ಸತ್ಯ ಸುಡಲಾಗದು ಹೆದರದೆ ನಿಮ್ಮ ತುಕ್ಕು ಹಿಡಿದ ತುಪಾಕಿಗೆ ಉತ್ತರಿಸುತ್ತಾ..
ಸಾವಿನ ಜೊತೆ ಕ್ರಾಂತಿಯ ಸಂಗೀತ ಹಾಡುತ್ತಾ ಜನರ ಹಾಡು ಬರೆಯುತ್ತಾ..

ನಿಮ್ಮ ಹೊಗಳುವ ಹೂಹಾರ ತುರಾಯಿ ನಗ ನಾಣ್ಯಗಳ ಸಮಾಧಿ ಮಾಡುತ್ತಾ..
ಸತ್ಯವನೆ ಹೇಳುವೆನು ಸತ್ಯ ಮಾರ್ಗವ ಬಿಡೆನು ನಿಮ ಪರಿವಾರದ ಬಿಡಾರಕ್ಕೆ ಸತ್ಯವನು ಶಕ್ತಿಯಾಗಿಸುತ್ತಾ…

‍ಲೇಖಕರು avadhi-sandhyarani

1 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading