ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ತವರು ಎದ್ದು ಬರುವುದಿಲ್ಲ..

-ದಾಕ್ಷಾಯಣಿ ಮಸೂತಿ

ನಮ್ಮದಲ್ಲ

ಇಲ್ಲಿ‌
ಸಾಕ್ಷೀಕರಿಸಲು
ನಡುಗುತ್ತದೆ
ತಣ್ಣನೆಯ ಮೌನದ
ಸ್ಮಶಾನವೂ ಕೂಡ

ಹೆಣಕ್ಕೂ
ನೂರು ಪ್ರಶ್ನೆಗಳು
ಬಡಿಯುತ್ತವೆ
ಸದ್ಯ‌ ಸತ್ತವರು
ಎದ್ದು ಬರುವುದಿಲ್ಲ

ಇಲ್ಲಿ ಎಲ್ಲವೂ
ಸಹಜ ಅಲ್ಲ ಅತಿ ಸಹಜ!
ಮೊನ್ನೆ ಇದ್ದು,
ಇಂದು ಹುಡುಗ ಹೆಣವಾದರೂ
ಬಾಲೆಯ ಕನಸುಗಳು‌ ನಲುಗಿ ಕಮರಿದರೂ
ಎದೆಯಲ್ಲಿನ ಹಾಡುಗಳ ದನಿ ಅಡಗಿ ಹೋದರೂ
ಬಸವಳಿದ ಜೀವಗಳು ಹೊಸಕಿಹೋದರೂ
ಸಂಜೆ ಮುಳುಗುವ ಸೂರ್ಯನಂತೆ
ಮತ್ತೆ ಹುಟ್ಟುವ ನೇಸರನಂತೆ!

ಬೇಕಾದರೆ ನೋಡಿ
ಒಮ್ಮೆ ಸ್ಟೇಟಸ್ಗಳನ್ನ
ಸದ್ಗತಿಯ ಪಟದ
ಪಕ್ಕದಲ್ಲಿ
ಶುಭಾಶಯ ಮೂಡಿರುತ್ತದೆ
ಇಲ್ಲಿರುವುದು ದಃಖವೋ
ಸುಖವೋ !
ಎಲ್ಲವೂ ಸರಿಯುತ್ತಲೇ
ಇರುತ್ತದೆ!

‍ಲೇಖಕರು Admin

10 January, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading