ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಸ್ಕೃತಿ ಮಳಗಿ ಕಥೆ ಹೇಳ್ತಾರೆ

ಬಂಗಾರದ ಪಂಜರ

ಸಂಸ್ಕೃತಿ ಮಳಗಿ

ಈಗ ನಾನು ಒಂದು ಕಥೆ ಹೇಳಲು ಹೊರಟಿದ್ದೇನೆ. ಅದಕ್ಕೂ ಮೊದಲು ಕೆಲ ಸನ್ನಿವೇಶಗಳನ್ನು ಹೇಳಲು ಬಯಸುತ್ತೇನೆ. ಮೊನ್ನೆ ಮೊನ್ನೆ ನಡೆದ ಒಂದು ದುರಂತ ದೇಶದೆಲ್ಲೆಡೆ ಎಲ್ಲ ಜನರ ಮನಸ್ಸಿನಲ್ಲಿ ಭಯ ಮೂಡುವಂತೆ ಮಾಡಿದೆ. ನಾಗರಿಕ ಸಮಾಜ ತಲೆ ತಗ್ಗಿಸುವಂತೆ, 6 ವರ್ಷದ ಶಾಲಾ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಘಟನೆ. ಆ ಮಗು ತನ್ನ ತಾಯಿಯನ್ನು ‘ರೇಪ್ ಅಂದ್ರೆ ಏನಮ್ಮಾ?’ ಎಂದು ಕೇಳಿದಾಗ ಜೀವ ಕಲಕುತ್ತದೆ. ಈ ಸಮಾಚಾರ ಹೊರಬಂದಾಗಿನಿಂದ ಎಲ್ಲ ಸುದ್ದಿ ವಾಹಿನಿಗಳಲ್ಲಿ ಇದೇ ಸಮಾಚಾರ. ಆ ಮಗುವಿನ ತಾಯಿ ತಂದೆ ಪಡುವ ದುಃಖ ಕಂಡು ಕರುಳು ಕಿತ್ತು ಬರುವಂತಾಯಿತು. 3 ವರ್ಷ ಮಗುವಿನಿಂದ 60 ವರ್ಷದ ವೃದ್ಧೆಯವರೆಗೂ ಮಹಿಳೆಯರು ಅತ್ಯಾಚಾರವೆಂಬ ಪುರುಷರ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ಉತ್ತರಪ್ರದೇಶ ಬಿಹಾರ ಮುಂತಾದ ರಾಜ್ಯಗಳಲ್ಲಿನ ಖಾಪ್ ಪಂಚಾಯತಿಯ ನಿರ್ಣಯಗಳು ಮೈನಡುಗಿಸುತ್ತವೆ.
ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಮುಗ್ಧ ಹೆಣ್ಣುಮಕ್ಕಳನ್ನು ನೆಲದ ಕಾನೂನಿಗೆ ವಿರುದ್ಧವಾಗಿ ನಿರ್ದಯವಾಗಿ ಹತ್ಯೆಗೈಯಲಾಗುತ್ತಿದೆ. ಇದಕ್ಕೆ ಯಾವುದೇ ಧರ್ಮದ ನಿರ್ಬಂಧವಿಲ್ಲ. ಕೆಲ ವರ್ಷಗಳ ಹಿಂದೆ ಒಬ್ಬ ಮಾವ ತನ್ನ ಸೊಸೆಯ ಮೇಲೆ ಅತ್ಯಚಾರ ಮಾಡಿದ. ಅದಕ್ಕಾಗಿ ಅವನಿಗೆ ಶಿಕ್ಷೆಯಾಯಿತು ಅಂದುಕೊಂಡಿರಾ? ಇಲ್ಲ! ಸಮುದಾಯದ ಕೋರ್ಟ ನೀಡಿದ ತೀರ್ಪು ಹೇಗಿದೆ ನೋಡಿ, ಅತ್ಯಾಚಾರಿ ಮಾವ ಸೊಸೆಯನ್ನೆ ಮದುವೆಯಾಗಬೇಕು. ಅವಳ ಮೊದಲ ಗಂಡನನ್ನು ಮಗನೆಂದುಕೊಳ್ಳಬೇಕಂತೆ!! ಹೇಗಿದೆ ನಿರ್ಣಯ! ಇಂತಹ ವಿಲಕ್ಷಣ ಕಾನೂನೆಗಳೆಲ್ಲ ಸ್ತ್ರೀಯರ ವಿರುದ್ಧವಾಗಿಯೇ ಇರುತ್ತವೆಂಬುದು ಇನ್ನೊಂದು ಅಚ್ಚರಿಯ ಸಂಗತಿ. ಅಲ್ಲಿ ತನಕ ಯಾಕೆ ಹೋಗೋದು ಇಲ್ಲೇ ನಮ್ಮ ರಾಜ್ಯದಲ್ಲೇ ಸ್ತ್ರೀ ಶೋಷಣೆಯ ಹಲವಾರು ಘಟನೆಗಳು ನಿತ್ಯವೂ ನಡೆಯುತ್ತಲೇ ಇವೆ.
ನಮ್ಮ ದೇಶದ ಗಂಡಸರಿಗೆ ಏನಾಗಿದೆಯೋ ಏನೋ ತಿಳಿಯುತ್ತಿಲ್ಲ. ಚಿಕ್ಕ ಕಂದಮ್ಮನಿಂದ ಹಿಡಿದು ಹಣ್ಣು ಹಣ್ಣು ಮುದುಕಿಯರ ಮೇಲೂ ಅತ್ಯಾಚಾರ ಎಸಗುತ್ತಿದ್ದಾರೆ. ದಿನದಿನವೂ ಅತ್ಯಾಚಾರದ ಸಮಾಚಾರಗಳನ್ನು ಕೇಳಿ ಕೇಳಿ ಹೇಸಿಗೆ ಬಂದಿದೆ. ಸಮಾಜದಲ್ಲಿ ವ್ಯಕ್ತಿಗಳ ಮೇಲಾಟದಲ್ಲಿ ಪ್ರಬಲರು ದುರ್ಬಲರನ್ನು ಶೋಷಿಸುತ್ತಾರೆ. ದೈಹಿಕವಾಗಿ ಗಂಡಿಗಿಂತ ಹೆಣ್ಣು ದುರ್ಬಲೆ. ಕೆಲವರಲ್ಲಿ ಈ ಮೇಲ್ ಡಾಮಿನೇಶನ್ ಒಂದು ಮೆಂಟಲ್ ಡಿಸ್ಆರ್ಡರಾಗಿ ವ್ಯಾಧಿರೂಪವಾಗಿ ಅಂಟಿಕೊಳ್ಳುತ್ತದೆ. ಈಗೀಗ ಇದೊಂದು ಸೋಶಿಯಲ್ ಡಿಸ್ಆರ್ಡರ್ ಆಗಿ ಪರಿರ್ವತನೆ ಆಗುತ್ತಿದ್ದು ಗಾಬರಿ ಹುಟ್ಟಿಸುವ ಸಂಗತಿ. ಸರಕಾರಗಳ ದಿವ್ಯ ಅಲಕ್ಷತನ, ಅಪರಾಧಿಗಳಿಗೆ ತಕ್ಷಣ ಶಿಕ್ಷೆಯಾಗದಿರುವುದು, ದುರ್ಬಲ ಕಾನೂನುಗಳಿಂದಾಗಿ ಕೆಲ ಗಂಡಸರು ಇಂತಹ ಹೇಯ ಕೃತ್ಯಗಳಿಗೆ ಮುಂದಾಗುತ್ತಾರೆ. ಪುರುಷ ಮೇಲಾಟ ಅಥವಾ ಸೋಶಿಯಲ್ ಡಿಸ್ಆರ್ಡರ್ನಿಂದಾಗಿ ಬೇಸತ್ತ ಹಲವಾರು ಧೈರ್ಯವಂತ ಮಹಿಳೆಯರು ಶೋಷಣೆಯ ವಿರುದ್ಧ ಹೋರಾಟಗಳನ್ನು ನಡೆಸುತ್ತಿದ್ದಾರೆ.
ಸ್ವಾತಂತ್ರ್ಯ ಭಾರತದಲ್ಲಿ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸ್ವಾತಂತ್ರ್ಯ ಕಸಿದುಕೊಳ್ಳುವವರೇ ಬಹಳ. ಎಷ್ಟೋ ಟಿಣಜಟಟರಜಟಿಣ ಹೆಣ್ಣುಮಕ್ಕಳು ಸಮಾಜದ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮನೆಯ ನಾಕುಗೋಡೆಗಳಲ್ಲಿ ಅವರ ಜಾಣ್ಮೆ ಕಲೆ ಸತ್ತುಹೋಗಿದೆ. ಇಂತಹ ಕಷ್ಟಗಳನ್ನು ಮೆಟ್ಟಿನಿಂತು ತನ್ನಲ್ಲಿರುವ ಅಲ್ಪಸ್ವಾತಂತ್ರ್ಯದಿಂದ ಎಲ್ಲಾ ಬಂಧನಗಳಿಂದ ಹೊರಬರಲು ಪ್ರಯತ್ನಿಸುತ್ತಿರುವ ಒಬ್ಬ ಯುವತಿಯ ಕಥೆ ‘ಬಂಗಾರದ ಪಂಜರ’ ಅವಳು ನಮ್ಮ ನಿಮ್ಮ ನಡುವೆಯೇ ಇರುವ ಇಂತಹ ಕೋಟ್ಯಂತರ ಶೋಷಿತರಲ್ಲಿ ಒಬ್ಬಳು. ಇವಳ ಹೆಸರನ್ನು ಗಂಗಾ ಎಂದಿಟ್ಟುಕೊಳ್ಳುವಾ. ಇವಳನ್ನು ನಾನು ಬಹಳ ಸಮೀಪದಿಂದ ನೋಡಿರುವುದರಿಂದ ಮೇಲಿನ ಹಿನ್ನೆಲೆಯಲ್ಲಿ ಅವಳ ಬಗ್ಗೆ ಅವಳ ಹೋರಾಟದ ಬಗ್ಗೆ ತಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸಿದ್ದೇನೆ. ಇಲ್ಲಿನ ಪಾತ್ರಗಳನ್ನು ಸನ್ನಿವೇಶಗಳನ್ನು ಸುರಕ್ಷತೆಗಾಗಿ ಬದಲಿಸಿದ್ದರೂ ಇದೊಂದು ಸತ್ಯ ಕಥೆ.

ನಾನು ವಾಸಿಸುವ ಪ್ರದೇಶದ ಸ್ವಲ್ಪ ದೂರದ, (ಬೇಕಿದ್ದರೆ ಹುಬ್ಬಳಿ ಎಂದಿಟ್ಟುಕೊಳ್ಳುವಾ) ಒಂದು ಹಿಂದುಳಿದ ಬಡಾವಣೆಯಲ್ಲಿ ಗಂಗಾಳ ವಾಸ. ತುಂಬ ಸುಂದರ ಹುಡುಗಿ. ಬುದ್ಧಿವಂತೆ ಬೇರೆ. ಆದರೆ ಸೌಮ್ಯ ಸ್ವಭಾವದವಳು. ಅವಳದ್ದು ತುಂಬು ಸಂಸಾರದ ಮನೆ. ಅಪ್ಪ ಅಮ್ಮ ಹಾಗೂ ಐದಾರು ಜನ ತಮ್ಮ ತಂಗಿಯರ ಜೊತೆ ಇದ್ದಾಳೆ. ತಾಯಿಗಿಂತ ಹೆಚ್ಚಾಗಿ ತಮ್ಮ ತಂಗಿಯರನ್ನು ನೋಡಿಕೊಳ್ಳುತ್ತಾಳೆ. ತಂದೆಯ ಕೆಲಸಗಳಿಗೂ ಸಹಾಯ ಮಾಡುತ್ತಾಳೆ. ರುಚಿಕರ ಅಡುಗೆ ಮಾಡುತ್ತಾಳೆ, ಹಿರಿ ಕಿರಿಯರ ಬೇಕುಬೇಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಹಾಗೆ ನೋಡಿದರೆ ಮನೆಯವರಿಗೆಲ್ಲಾ ಇವಳೆಂದರೆ ಅಚ್ಚು ಮಚ್ಚು. ಆಗರ್ಭ ಶ್ರೀಮಂತ ಮನೆತನ ಇವರದು. ತಂದೆ ಇವಳ ಹೆಸರಿನಲ್ಲಿಯೇ ಕೋಟ್ಯಂತರ ಆಸ್ತಿ ಮಾಡಿ ಇಟ್ಟಿದ್ದಾರೆ. ಇಷ್ಟಿದ್ದರೂ ಅವಳು ತನ್ನ ಬಗ್ಗೆ ಯಾವುದೇ ನಿಧರ್ಾರಗಳನ್ನೂ ತೆಗೆದುಕೊಳ್ಳುವಂತಿಲ್ಲ. ಇವಳು ಹಾಕಿಕೊಳ್ಳುವ ಬಟ್ಟೆಯಿಂದ ಹಿಡಿದು ಎಲ್ಲವೂ ಹಿರಿಯರ ತೀಮರ್ಾನದಂತೆ ಆಗಬೇಕು. ಕಾಲೇಜಿಗೆ ತಪ್ಪದೇ ಬರುತ್ತಾಳೆ. ಜಾಣೆಯಾದ್ದರಿಂದ ಸಹಜವಾಗಿ ಎಲ್ಲದರಲ್ಲೂ ಮುಂದು. ನಾನು ಮೊದಲ ಸಲ ಅವಳನ್ನು ನೋಡಿದಾಗ ಅವಳ ಮುಖದಲ್ಲಿ ಏನೋ ಒಂತರಹದ ವಿಷಾದವಿರುವುದನ್ನು ಗಮನಿಸಿದೆ. ಇಷ್ಟೊಂದು ಸಿರಿವಂತೆ, ರೂಪವಂತೆ ಜಾಣೆ. ಎಲ್ಲ ಇದ್ದರೂ ಏನೂ ಇಲ್ಲದಂತೆ ಇರುವ ಕಾರಣವೇನು ಎಂಬುದನ್ನು ಅರಿತಾಗ ಬೆರಗಾದೆ. ಹೀಗೂ ಇರುತ್ತಾರೆಯೇ ಅಂತ ವಿಸ್ಮಯವಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 67 ವರ್ಷಗಳಾದರೂ ನಮ್ಮ ಸುತ್ತ ಮುತ್ತಲಿನ ಸ್ಥಿತಿವಂತರೆನಿಸಿಕೊಂಡ ಮಹಿಳೆಯರ ಸ್ಥಿತಿ ಹೀಗೂ ಇದೆಯೇ ಎಂಬ ಸಂಗತಿಯನ್ನು ಕಂಡು ದಂಗಾದೆ. ಕಾರಣ ಅವಳು ಹುಟ್ಟಿ ಬೆಳೆದ ಪ್ರದೇಶ ಹಾಗೂ ಬದಲಾವಣೆಗೆ ತೆರೆದುಕೊಳ್ಳದ ಅವರ ಜನಾಂಗದ ಮನಸ್ಥಿತಿ. ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುತ್ತಾರೆ ಅವರು. ಹೆಣ್ಣು ಮಕ್ಕಳೆಂದರೆ ನಾಕು ಗೋಡೆಯ ಮಧ್ಯೆಯೇ ಇರತಕ್ಕದ್ದು ಹಾಗೂ ಮದುವೆಯಾದ ಮೇಲೂ ಅಲ್ಲಿಯೂ ಇದೇ (ಸಂಕಟದ) ಬದುಕನ್ನು ನಡೆಸಬೇಕು ಎನ್ನುವ ಮನೋಭಾವ. ಗಂಗಾ ಕೂಡಾ ಇವರ ಮಧ್ಯೆಯೇ ಹುಟ್ಟಿ ಬೆಳೆದವಳು. ನಾವು ಸ್ನೇಹಿತೆಯರು ತಮಾಷೆಗಾಗಿ, ‘ನಿನಗೇನು ಕಮ್ಮಿ, ಸಾಕಷ್ಟು ಆಸ್ತಿ ಹಣ ಎಲ್ಲಾ ಇದೆ’ ಅಂತ ಅಂದರೆ ಅವಳು ಒಳ್ಳೆ ಠಿಟಠಠಠಿಜಡಿ ಹಾಗೆ, ‘ನಿಜ ಇದೆಲ್ಲಾ ಇದೆ. ಆದರೆ ನಿಮಗಿರುವಂತೆ ಸ್ವಾತಂತ್ರ್ಯವೇ ಇಲ್ಲದಿದ್ದರೆ ಏನು ಪ್ರಯೋಜನ’ ಎಂದು ಪ್ರಶ್ನೆ ಕೇಳುತ್ತಾಳೆ. ಅವಳು ಎಂದೂ ಮತ್ತೊಬ್ಬರಿಗೆ ಕೇಡು ಬಗೆದಿಲ್ಲ ಬಯಸಿಲ್ಲ. ಮೊದಲೇ ಹೇಳಿದಂತೆ ಗಂಗಾ ತುಂಬ ಸುಂದರ ಹುಡುಗಿ. ಜಾಣೆ ಬೇರೆ. ಅದನ್ನು ಅವರ ಸಮಾಜದ ಹಲವರು ಸಹಿಸಿಕೊಳ್ಳಲಿಲ್ಲ. ಒಂದು ಸಂದರ್ಭದಲ್ಲಿ ಎಲ್ಲ ಹುಡುಗಿಯರಂತೆ ಮೊಬೈಲ್ ಬಳಸಲು ಇಚ್ಛಿಸಿದಳು. ಅವಳು ಮೊಬೈಲ್ ಬಳಸಿದ್ದನ್ನು ದೊಡ್ಡ ಅಪರಾಧವೆಂಬಂತೆ ಅವಳ ಮನಸ್ಸಿಗೆ ನೋವುಂಟು ಮಾಡಿದರು. ಮತ್ತೊಂದು ಅವಳು ಜಚಿಟಿಛಿಜ ಕಲಿಯುವುದನ್ನೂ ಇದೇ ಕಾರಣ ನೀಡಿ ಅವಳು ಏನೋ ಅಪರಾಧ ಮಾಡಿದದಾಳೆನ್ನುವಂತೆ ತುಚ್ಛವಾಗಿ, ವ್ಯಂಗ್ಯದ ಮಾತಿನಿಂದ ಅದನ್ನೂ ತಪ್ಪಿಸಿದರು. ಇವಳ ಸಮಾಜದಲ್ಲಿ ಹೆಣ್ಣು ಮಕ್ಕಳು ಹೆಚ್ಚು ಓದುವ ಹಕ್ಕು ಇಲ್ಲ. ಸಾಮಾಜಿಕವಾಗಿ ಯಾವುದೇ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಾರದು. ನೂರೆಂಟು ನಿಬಂಧನೆಗಳು ಕಟ್ಟಳೆಗಳು. ಒಟ್ಟಿನಲ್ಲಿ ಹೇಳಬೇಕೆಂದರೆ ಸ್ವತಂತ್ರ ಭಾರತದಲ್ಲಿ ಸ್ವಾತಂತ್ರ್ಯಹೀನ ಮಹಿಳೆಯರು.
ಎಲ್ಲ ಹರಯದ ಹುಡುಗಿಯರಂತೆ ಗಂಗಾ ಕೂಡಾ ತನ್ನ ಬಾಳ ಸಂಗಾತಿಯ ಬಗ್ಗೆ ಕನಸು ಕಟ್ಟಿದ್ದಳು. ತನ್ನ ಸ್ವಾತಂತ್ರ್ಯಕ್ಕೆ ಬೆಂಬಲ ಕೊಡುವ, ಒಳ್ಳೆಯ ಮನಸ್ಸಿನ ವಿಶಾಲ ಹೃದಯದ ಸಹೃದಯದ ಸ್ವಾವಲಂಬೀ ಸಂಗಾತಿಯ ಹಂಬಲ ಅವಳದ್ದು. ಅವಳಿಗೆ ಗೊತ್ತಿತ್ತು ತನ್ನ ಕನಸು ನನಸಾಗುವುದಿಲ್ಲವೆಂದು ತಾನು ಕೂಡ ತನ್ನ ಸಮಾಜದ ಇತರ ಹೆಣ್ಣುಮಕ್ಕಳಂತೆ ನಾಕು ಗೋಡೆಗಳ ಮಧ್ಯೆ ಬಂದಿಯಾಗಿ ಜೀವನ ಕಳೆಯಬೇಕಾಗುತ್ತದೆಂದು ಅಂದುಕೊಂಡಿದ್ದಳು. ಆದರೆ ದೇವರು ಅವಳ ಒಳ್ಳೆಯ ಮನಸ್ಸು ಹಾಗೂ ಒಳ್ಳೆಯತನವನ್ನು ಮೆಚ್ಚಿದನೆಂದು ಕಾಣುತ್ತದೆ. ಅವಳ ಕನಸಿನ ರಾಜಕುಮಾರನೇ ಅವಳಿಗೆ ದೊರಕಿದ್ದಾನೆ. ಪಿಎಚ್ಡಿ ಮಾಡುತ್ತಿರುವ ಸ್ವಾವಲಂಬಿ ಸುಶಿಕ್ಷಿತ ಹಾಗೂ ಸ್ಫುರದ್ರೂಪಿ ಹಾಗೂ ವಿಶಾಲ ಹೃದಯದ ಯುವಕ. ಅವಳ ಬೇಕುಬೇಡಗಳಿಗೆ ಸ್ಪಂದಿಸುವವ. ಅವಳಿಗೆ ಸಂತೋಷ ನೀಡಿದ ಇನ್ನೊಂದು ಸಂಗತಿ ಎಂದರೆ ಅವಳ ಜೀವನ ಸಂಗಾತಿಯಾಗುವವ ಅವರ ಪ್ರದೇಶಕ್ಕೆ ಸೇರಿದವನಲ್ಲ. ಗಂಗಾಳನ್ನು ತನ್ನ ಕಣ್ಣಿನ ಅಂಚಿನ ಮೇಲಿಟ್ಟು ನೋಡಿಕೊಳ್ಳುವ ಸ್ವಭಾವದವನು. ಇನ್ನಾದರೂ ಅವಳು ಬಂಗಾರದ ಪಂಜರದಿಂದ. ಹೊರಬಂದು, ನೀಲಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾಯಾಗಿ ಸಂತೋಷದಿಂದ ಹಾರಾಡಾಡುತ್ತ ಹಾಡುತ್ತ ನಲಿಯುತ್ತ ಬಾಳಲೆಂದು ಅವಳ ಸ್ನೇಹಿತೆಯಾಗಿ ಮನದುಂಬಿ ಹಾರೈಸುತ್ತೇನೆ.
ಮುಗಿಸುವ ಮುನ್ನ;
ಇದು ಸ್ವತಂತ್ರ ಭಾರತದ ಕನಸು ಕಂಗಳ ಹುಡುಗಿಯೊಬ್ಬಳ ಅಸಹಾಯಕ ಕಥೆ. ‘ ಣಜ ಣಡಿಣಜ ಜಿಚಿಛಿಜ ಠಜಿ ಟಿಜಚಿ’ ಈ ಅಸಮಾನತೆಯನ್ನು ಹೋಗಲಾಡಿಸುವ ಅಗತ್ಯ ಹಿಂದೆಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿದೆ. ಈ ಅಸಮಾನತೆಯನ್ನು ಹೋಗಲಾಡಿಸಬೇಕೆಂದರೆ ಮೊದಲು ನಾವು ನಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಕೊಳ್ಳಬೇಕು. ಜನರು ಅದರಲ್ಲೂ ಗಂಡಸರ ಮನಃ ಪರಿವರ್ತನೆಯಾಗಬೇಕು. ಇಂದು ಆ 6 ವರ್ಷದ ಮಗುವಿಗಾದ ಅನ್ಯಾಯ ನಾಳೆ ನಮ್ಮ ಮುದ್ದು ಕಂದಮ್ಮಗಳಿಗೇ ಆಗಬಹುದು. ಅಂದಾಗ ಮಾತ್ರ ಗಂಗಾಳಂತಹ ಸಾವಿರಾರು ಹೆಣ್ಣುಮಕ್ಕಳು ಮುಂದೆ ಬರುತ್ತಾರೆ.
ಹೆಣ್ಣನ್ನು ದೇವತೆ ಎಂದು ಪೂಜಿಸುವ ನಮ್ಮ ದೇಶದಲ್ಲಿ ಅವರಿಗೆ ಪೂಜೆಯಲ್ಲದಿದ್ದರೂ ಕನಿಷ್ಟ ಒಂದಿಷ್ಟು ನೆಮ್ಮದಿಯನ್ನು ನೀಡಬಹುದಲ್ಲವೇ. ಮಹಿಳೆಯರಾಗಿ ಹುಟಿದ್ದಕ್ಕೆ ನಮಗೆ ಶಿಕ್ಷೆಯನ್ನು ಕೊಡಬೇಡಿ ಶಿಕ್ಷಿತರನ್ನಾಗಿ ಮಾಡಿ. ಅದು ನಮ್ಮ ಹಕ್ಕೂ ಆಗಿದೆ!
 
 
 
 

‍ಲೇಖಕರು G

29 July, 2014

3 Comments

  1. Peter

    excellent article sanskriti..
    for rape strict punishment must be given to 1 or 2 people rest ll become alert and dont make same mistake.
    in art of war the author say that strict punishment should happen to one or two then the rest will obey..
    there ll be a king who appoint a person to teach a war to his ladies soldiers in his kingdom,, that person is best warrior but before training he keeps certain rules in front of king and the king say yes for that.
    after some days he starts is training to ladies warriors.
    every one ll be standing in row, he call 2 ladies in front and tell “if i give command to look right side then you should look right, if i give command look left then you should look left”.
    so he starts his command and the other ladies soldiers starts laughing at this training person, so he gets angry and tell the king to cut the head of this 2 ladies,, but the king says no they are my best soldiers i cant do, so the trainer say i kept my rules in front of you before to start training so you have to cut the head of these 2 ladies warrior head..
    so the king cuts their head and give it to him.
    next day he starts training none of the ladies warrior laugh or misbehave but, they obey the order of the trainer and become the best warrior..
    so he tells that if we tell 1st time to other and they dont understand its our fault,
    and if we tell 2nd time the again they dont understand means its their fault.
    so a strict punishment to 1 or 2 can bring big difference in the rape cases…

  2. sahyadri nagaraj

    ಪ್ರಿಯ ಸಂಸ್ಕೃತಿ, ನಿಮ್ಮ ಕತೆ-ಅದಕ್ಕೂ ಮುನ್ನ ಹೇಳಿದ ಮಾತುಗಳು ಸರಿ. ಆದರೆ ನಿಮ್ಮ ಹಾಗೆ ಎಷ್ಟು ಮಂದಿ ಹುಡುಗಿಯರು ಮಾತನಾಡುತ್ತಾರೆ? ಸಮಸ್ಯೆ ಇರೋದು ಇಲ್ಲಿಯೇ. ತನಗೆ ಸರಿ ಅನಿಸಿದ್ದನ್ನು ಹೇಳುವ (ಮನೆಯೊಳಗಾಗಲೀ, ಆಚೆಯಾಗಲೀ), ತನಗೆ ಪುರುಷಪ್ರಧಾನ ಮನಸ್ಥಿತಿ ಕೊಟ್ಟ ‘ಸಹನಾಮಯಿ’ ಬಿರುದನ್ನು ಕಿತ್ತೊಗೆಯುವ ದಿಟ್ಟೆಯರು ಕಡಿಮೆಯಾಗಿದ್ದಾರೆ ಎನಿಸುತ್ತದೆ. ಹಾಗೆ ಮಾಡಿದರೆ ವಾಚಾಳಿ, ಗಂಡುಬೀರಿ ಅಂತನ್ನುತ್ತಾರೆ ಅಷ್ಟೇ ತಾನೇ? ಅದೇನು ಹೊಸತಲ್ಲವಲ್ಲ? ಸೋ…ಮೊದಲು ಅನಿಸಿದ್ದನ್ನು ನಿರ್ಭಿಡೆಯಿಂದ ಹೇಳಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಳ್ಳುವತ್ತ, ಅದು ದಕ್ಕಿಲ್ಲ ಎಂದಾದರೆ ಪ್ರಯತ್ನಪೂರ್ವಕವಾಗಿ ಅದನ್ನು ದಕ್ಕಿಸಿಕೊಳ್ಳುವಂಥ ಮನಸ್ಥಿತಿ ನಮ್ಮ ಹೆಣ್ಣುಮಕ್ಕಳಿಗೆ ಬರಬೇಕು. ಅಂಥ ಪ್ರಯತ್ನಗಳಿಗೆ ಬರೆಯುವ ಜಾಣೆಯರು ಹೇಳುವ ಉದಾಹರಣೆಗಳು ಪ್ರೇರಕವಾಗಬೇಕು. ಆಗ ಈಗಿನ ಪರಿಸ್ಥಿತಿಯಲ್ಲಿ ಒಂದಿಷ್ಟು ವ್ಯತ್ಯಾಸ ಕಾಣಬಹುದು.
    -ಸಹ್ಯಾದ್ರಿ ನಾಗರಾಜ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading