ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ್ ಕಾಮತ್ ಕಿಕ್: ಮೂಢನಂಬಿಕೆ

ಸಂದೀಪ್ ಕಾಮತ್

ಕಡಲತೀರ

ಟಿ.ವಿ ಕಾರ್ಯಕ್ರಮ…………….

 

ಬನ್ನಿ ವೀಕ್ಷಕರೆ ಈಗ ನಾವು ಮೂಢನಂಬಿಕೆಯ ಬಗ್ಗೆ ಚರ್ಚೆ ನಡೆಸೋಣ. ಯಾಕೆ ಜನ ಇನ್ನೂ ಈ ಮೂಢನಂಬಿಕೆಯನ್ನು ಮುಂದುವರೆಸುತ್ತಿದ್ದಾರೆ ಅನ್ನೋ ಚರ್ಚೆ ನಡೆಸೋಣ.

………………..ಚರ್ಚೆ……..ಚರ್ಚೆ…………ಚರ್ಚೆ………………..

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ………………………..

….ಜಾಹೀರಾತು…..

ಸಮಸ್ಯೆಯಿಂದ ಬಳಲುತ್ತೀದ್ದೀರಾ ಕೊಳ್ಳಿರಿ ಅದೃಷ್ಟದ ಹರಳುಗಳು. ನಿಮ್ಮ ಯಾವುದೇ ಸಮಸ್ಯೆಗೆ ಇಲ್ಲಿದೆ ಪರಿಹಾರ. ಅದೃಷ್ಟದ ಹರಳುಗಳು.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ……………………………………..

………………..ಚರ್ಚೆ……..ಚರ್ಚೆ…………ಚರ್ಚೆ………………..

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ………………………..

….ಜಾಹೀರಾತು…..

ಸ್ತ್ರೀ ಪ್ರೇಮ, ಪುರುಷ ಪ್ರೇಮ ವಶೀಕರಣ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ನಮ್ಮಲ್ಲಿದೆ ಪರಿಹಾರ. ಒಮ್ಮೆ ಭೇಟಿ ಕೊಡಿ.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ……………………………………..

………………..ಚರ್ಚೆ……..ಚರ್ಚೆ…………ಚರ್ಚೆ………………..

ವೀಕ್ಷಕರೆ ಒಂದು ಚಿಕ್ಕ ಬ್ರೇಕ್ ನ ನಂತರ ಚರ್ಚೆ ಮುಂದುವರೆಸೋಣ………………………..

….ಜಾಹೀರಾತು…..

ಇಲ್ಲಿದೆ ಒಂದು ವಿಚಿತ್ರ ಬಾವಿ. ಆ ಬಾವಿಯ ನೀರಿನಲ್ಲಿ ಸ್ನಾನ ಮಾಡಿದರೆ ಚರ್ಮ ರೋಗಗಳು ವಾಸಿ ಆಗ್ತಾವೆ. ಇಂಥ ವಿಸ್ಮಯ ನಡೆಯೋದಾದರೂ ಎಲ್ಲಿ. ವೀಕ್ಷಿಸಿ ‘ರಹಸ್ಯ ಲೋಕದಲ್ಲಿ’ ಇಂದು ರಾತ್ರಿ ೧೨.೦೦ ಘಂಟೆಗೆ.

ವೀಕ್ಷಕರೇ ಬ್ರೇಕ್ ನ ನಂತರ ಮತ್ತೆ ಸ್ವಾಗತ…………………………………….

………………..ಚರ್ಚೆ……..ಚರ್ಚೆ…………ಚರ್ಚೆ………………..

………………..ಚರ್ಚೆ……..ಚರ್ಚೆ…………ಚರ್ಚೆ………………..

ಚರ್ಚೆಯಲ್ಲಿ ಭಾಗವಹಿಸಿದ ತಮಗಲ್ಲರಿಗೂ ಧನ್ಯವಾದಗಳು.

ನೋಡಿದ್ರಲ್ಲ ವೀಕ್ಷಕರೇ 21 ನೇ ಶತಮಾನದಲ್ಲೂ ಎಂತೆಂಥ ಮೂಢನಂಬಿಕೆಗಳು ಉಳಿದುಕೊಂಡಿವೆ ಅಂತ! ಇಂಥ ಮೂಢನಂಬಿಕೆಗಳನ್ನು ಒದ್ದು ಓಡಿಸುವ ಕೆಲಸ ‘ನಿಮ್ಮಿಂದ’ ಆಗಬೇಕಾಗಿದೆ. ಮತ್ತೆ ನಾಳೆ ಬೆಳಿಗ್ಗೆ ಭೇಟಿ ಆಗೋಣ ಬೆಳಿಗ್ಗೆ ೭ ಘಂಟೆಗೆ ‘ಬೃಹತ್ ಗ್ಯಾಲಕ್ಸಿ’ ಕಾರ್ಯಕ್ರಮದಲ್ಲಿ.

ನಮಸ್ಕಾರ!

 

‍ಲೇಖಕರು G

13 December, 2011

3 Comments

  1. A P BHAT

    Very nice.While our kannada visual media day in day out compete each other promoting supertitions , get occasional jnanodaya to preach scientific ideas to viewers

  2. venu

    ಹahaha..ಸೂಪರೋ ಸೂಪರು…
    ವ್ಯಂಗ್ಯ ಅಂದರೆ ಇದು!

  3. Divya

    Really ultimate kick!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading