ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂಜೆಗೆಂಪು- ಲಕ್ಷ್ಮಿ ಮಾತಿನ ತಂಪು ….

’ನನ್ನ ಮತ್ತು ಅನಂತ್ ನಡುವೆ ಒಂದು ಕೆಮಿಸ್ಟ್ರಿ ಇದೆ. ನಮ್ಮಿಬ್ಬರದು ಮೆಚ್ಯುರ್‍ಡ್ ಫ್ರೆಂಡ್‌ಶಿಪ್. ಪ್ರತಿಸಲವೂ ಶೂಟಿಂಗ್ ಮುಗಿದ ನಂತರ, ಸಾಕಿನ್ನು ಇನ್ಮೇಲೆ ಆಕ್ಟಿಂಗ್ ನಿಲ್ಲಿಸಿಬಿಡೋಣ ಅಂತ ಇಬ್ರೂ ಅಂದ್ಕೊಳ್ತಿರ್‍ತೇವೆ. ಆಗ ಅನಂತ್‌, ‘ಇದೇ ಲಾಸ್ಟು, ನಿಲ್ಲಿಸಿ ಬಿಡೋಣ ಲಕ್ಷ್ಮೀ, ಕ್ಯಾರೆಕ್ಟರ್ ಮಾಡ್ತಾ ಮಾಡ್ತಾ ನಾವೇ ಒಂದೊಂದು ಕ್ಯಾರೆಕ್ಟರ್ ಆಗಿಬಿಡ್ತಿವೊ ಏನೋ. ನನಗೇ… ನಾನ್ಯಾರು ಅನ್ನೋದನ್ನ ತಿಳ್ಕೊಬೇಕು ಲಕ್ಷ್ಮೀ…’ ಎಂದು ಹೇಳ್ತಿರ್‍ತಾರೆ. ನನಗೂ ಹಾಗೇ ಅನ್ನಸ್ತಿರತ್ತೆ. ಆದ್ರೆ….’ ಆದರೆ…? ಯಾವತ್ತು ನಿರ್ದೇಶಕ ಭಗವಾನ್- ಪುಟ್ಟಿ ಲಕ್ಷ್ಮೀಗೆ ಕ್ಯಾಡ್‌ಬರೀಸ್‌ನ ಆಸೆ ತೋರಿಸಿದರೋ, ಒಂದು ಸಿನಿಮಾಕ್ಕೆ ಎರಡೂವರೆ ಸಾವಿರ ರೂಪಾಯಿ ಎಂದರೋ, ಲಕ್ಷ್ಮೀ ಕಣ್ಣ್ಲಲಿ ವಜ್ರದೋಲೆ ಮಿನುಗೇ ಬಿಟ್ಟಿತು (ಆಗಿನ ವಜ್ರದೋಲೆಯ ರೇಟು!) ಅಂದಿನಿಂದ ಇಂದಿನವರೆಗೂ ಲಕ್ಷ್ಮೀಯದು ಪ್ಯಾಕ್‌ಅಪ್ ಆಗದ ಶೂಟಿಂಗ್. ಕಳಚಲಾಗದ ಮೇಕಪ್. ಸಂಪ್ರದಾಯಸ್ಥ ಕುಟುಂಬವಾದರೂ ಬೆಳೆದ್ದಿದು ಶುದ್ಧ ಗಂಡುಬೀರಿ ಹಾಗೆ ಎಂದು ಯಾವ ಸಂಕೋಚವ್ಲಿಲದೆಯೇ ಹೇಳಿಕೊಳ್ಳುವ ಈ ಧೈರ್ಯಲಕ್ಷ್ಮೀ ಹುಡುಗರ ದಂಡಿನಲ್ಲೇ ಓಡಾಡಿಕೊಂಡ್ದಿದವರು. ಗಿಲ್ಲಿದಾಂಡು ಆಡುತ್ತ, ಕಾಂಪೌಂಡ್ ಹಾರುತ್ತ ಹೀಗೆ.. ಹರೆಯಕ್ಕೆ ಕಾಲಿಡುತ್ತಿದ್ದಂತೆ ಹೊಸ್ತಿಲು ಕಾಲು ಕಟ್ಟತೊಡಗಿತು. ಆದರೆ ಅಷ್ಟೇ ಬೇಗ ಕೇರ್‌ಫ್ರೀ ಬದುಕಿನ ಬಾಗಿಲು ತೆರೆದ್ದಿದು ಸಿನಿಮಾ. ‘ಆಗ ಹದಿನಾಲ್ಕು-ಹದಿನೈದಿರಬೇಕು. ಮನೆಯಲ್ಲಿ ಎಲದಕ್ಕೂ ರಿಸ್ಟ್ರಿಕ್ಶನ್. ಸಂಜೆಯಾಗ್ತಿದ್ದ ಹಾಗೆ ಬಾಗಿಲಲ್ಲಿ ನಿಲ್ಲಬಾರದು. ಲಂಗಾ-ದಾವಣಿನೇ ಹಾಕ್ಕೊಳ್ಬೇಕು ಅಂತೆಲ್ಲಾ. ಕೋಪಿಸ್ಕೊಂಡು ಒಂದು ಸೈಡ್‌ಲುಕ್ ಕೊಟ್ಟವಳೇ.. ಕೋಣೆ ಬಾಗಿಲು ಹಾಕ್ಕೊಂಡು ಕನ್ನಡಿ ಮುಂದೆ ಅಳ್ತಾ ಕೂತ್ಕೊಂಡ್‌ಬಿಡ್ತಿದ್ದೆ. ಬೇಜಾರಿನಿಂದಲದಲ, ಹಟ! ಆಮೇಲೆ ಕನ್ನಡಿಯಲ್ಲಿ ನನ್ನನ್ನ ನಾನೇ ನೋಡ್ಕೊಳ್ತಾ ನೋಡ್ಕೊಳ್ತಾ ಅಳುವನ್ನೇ ಮರೆತುಬಿಡ್ತಿದ್ದೆ’. ಪೂರ್ಣ ಓದಿಗೆ ಮ್ಯಾಜಿಕ್ ಕಾರ್ಪೆಟ್]]>

‍ಲೇಖಕರು avadhi

15 October, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading