ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಂಚಯ' ಕಾವ್ಯ ಪ್ರಶಸ್ತಿ ಪ್ರಕಟ

4 Comments

  1. pravara

    ಎಲ್ಲರಿಗೂ ಅಭಿನಂದನೆಗಳು,,,,

  2. ರವಿ ಮೂರ್ನಾಡು,ಕ್ಯಾಮರೂನ್

    ಗೌರವಾನ್ವಿತ ಡಿ.ವಿ. ಪ್ರಹ್ಲಾದ್ ಅವರ ಹೆಸರಿಗೊಂದು ಸಲಾಮು.ಬೆಂಗಳೂರು ಸಂಚಯ ಬಳಗದ ಪ್ರಕಟಣೆ ನೋಡಿ ಖುಷಿ ಆಯಿತು.ಡಿ.ವಿ. ಪ್ರಹ್ಲಾದ್ ಅವರಿಗೆ ನನ್ನ ಹೆಸರು ನೆನಪಿರಬಹುದು.ಅವರೇ ಕೊಡಗು ಜಿಲ್ಲೆಯ ಕುಗ್ರಾಮವೊಂದರ ನನ್ನ ಕಾವ್ಯವನ್ನು ರಾಜ್ಯಮಟ್ಟಕ್ಕೆ ಪರಿಚಯಿಸಿದ ಮಾನ್ಯರು. ಮೂರು ಬಾರಿ ಸಂಚಯ ಪ್ರಶಸ್ತಿಯನ್ನು ಪಡೆದುಕೊಂಡದ್ದು ಕೊಡಗು ಜಿಲ್ಲೆಯ ಹೆಮ್ಮೆ ಎಂದು ಭಾವಿಸುತ್ತೇನೆ. ಮಾತ್ರವಲ್ಲ ಅತ್ಯುತ್ತಮ ಸೃಜನಶೀಲ ಸಾಹಿತ್ಯ ಪುಸ್ತಕಗಳನ್ನು ಬೆಂಗಳೂರಿನ ವೇದಿಕೆಯಲ್ಲಿ ಬಹುಮಾನವಾಗಿ ನೀಡಿ ರಾಜ್ಯದ ಶ್ರೇಷ್ಠ ಸಾಹಿತಿಗಳ ಸಮ್ಮುಖದಲ್ಲಿ ಅಭಿನಂದಿಸಿದರು. ಅವರಲ್ಲಿ ಎಚ್. ಎಸ್.ವೆಂಕಟೇಶ್ ಮೂರ್ತಿಯವರು ಒಬ್ಬರು.
    ಇವತ್ತು ವಿದೇಶದಲ್ಲಿದ್ದೇನೆ. 2006ರ ಜನವರಿ ತಿಂಗಳಲ್ಲಿ 3ನೇ ಬಾರಿಯ ರಾಜ್ಯ ಸಂಚಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪಡೆದೇ ನಾನು ಅದೇ ವರ್ಷದ ಫೆಬ್ರವರಿಯಲ್ಲಿ ಕೊಲ್ಲಿ ರಾಷ್ಟ್ರ ಬಹ್ರೈನಿಗೆ ಬಂದುಬಿಟ್ಟೆ. ಪ್ರಸಕ ಆಫ್ರೀಕಾದ ಕ್ಯಾಮನೂನಿನಲ್ಲಿ ಕುಳಿತು ಅದೇ ಸಂಚಯದ ನೆನಪನ್ನು ಮೆಲುಕು ಹಾಕುವಂತೆ ಮಾಡಿದ ಅವಧಿಗೆ ವಂದನೆಗಳು. ವಿದೇಶಕ್ಕೆ ಬಂದ ನಂತರವೂ ಡಿ.ವಿ. ಪ್ರಹ್ಲಾದ್ ಅವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆಗೆ ಪ್ರಯತ್ನಿಸಿದೆ.
    ಕೊಡಗು ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪರಿಚಯಿಸಿದ ಸಂಚಯ ಪ್ರಹ್ಲಾದ್ , ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ರಂಗನಾಥ್, ಮುಂಬೈ ಕನ್ನಡ ಸಂಘ, ಬೆಂಗಳೂರು ಆಕಾಶವಾಣಿ ಕೇಂದ್ರಕ್ಕೆ ಅಭಾರಿಯಾಗಿದ್ದೇನೆ.
    ಸಂಚಯದ ಬಗ್ಗೆ ಕಂಡುಕೊಂಡಂತೆ ನಾನು ಪ್ರಶಸ್ತಿ ಪಡೆದಾಗ ಪಟ್ಟಿಯಲ್ಲಿದ್ದ ಹಲವರ ಕಾವ್ಯ, ಲೇಖನಗಳನ್ನು ಅವಧಿಯಲ್ಲಿ ನೋಡುತ್ತಿದ್ದೇನೆ. ಅದರಲ್ಲಿ ರೂಪ ಹಾಸನ್ ಒಬ್ಬರು. ಸಂಚಯ ಕಾವ್ಯ ವೇದಿಕೆ ಪ್ರಸಕ್ತ ಸೃಜನಶೀಲ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ಮಾತ್ರವಲ್ಲ,ವೇದಿಕೆಯ ಮೂಲಕ ಅಪ್ಪಟ ಸಾಹಿತ್ಯ ಓದುಗರನ್ನು ಹುಟ್ಟುಹಾಕುತ್ತಿದೆ. ಅಂತಹ ಆಯ್ಕೆಯ ಕಾವ್ಯ,ಕಥೆ,ಲಲಿತ ಪ್ರಬಂಧಗಳು ಅವಧಿಯ ಮೂಲಕ ಜನ ಮಾನಸವನ್ನು ತಲುಪಲಿ ಎಂದು ಆಶಿಸುತ್ತೇನೆ.

  3. ರವಿ ಮೂರ್ನಾಡು,ಕ್ಯಾಮರೂನ್

    ಈ ನನ್ನ ನೆನಪಿನ ಮಾತು ಪ್ರೀತಿಯ ಸಂಚಯ ಪ್ರಹ್ಲಾದ್ ಅವರಿಗೆ ಅವಧಿ ಸಂಪಾದಕರ ಮೂಲಕ ವಿದೇಶದಿಂದ ರವಾನೆಯಾಗಲಿ ಎಂದು ಮನವಿ. ಸಂಚಯ ಪ್ರಹ್ಲಾದ್ ಅವರೇ ಬೆನ್ನು ತಟ್ಟಿ ಬೆಳೆದ ಅಂದಿನ ಸಾಹಿತ್ಯದ ಹುಡುಗ ನಾನು. ತುಂಬಾ ಖುಷಿ ಪಡುವರು. ಹಲವು ವರ್ಷಗಳ ನೆನಪು ಇದು. ಕೊಡಗು ಜಿಲ್ಲಾ ಸಾಹಿತ್ಯದ ಹೊಸ ಪರಂಪರೆ ಸಂಚಯ ಪ್ರಹ್ಲಾದ್ ಅವರಿಗೆ ಋಣಿಯಾಗಿದೆ. ಸಾಧ್ಯವಾದರೆ ಅವರ ದೂರವಾಣಿ ಸಂಖ್ಯೆ ದೊರಕಿಸಿಕೊಡಲು ಅವಧಿಯಲ್ಲಿ ಕೋರಿಕೆ.

    • ವೀರೇಂದ್ರ

      ಸರ್, ಮೇಲೆ ಲೆಟರ್ ಹೆಡ್ನಲ್ಲಿ ನಂಬರ್ ಇದೆಯಲ್ಲ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading