ಪ್ರಿಯರೆ,
ನಾನು ಕಾರ್ಯನಿರ್ವಹಿಸುತ್ತಿದ್ದ ಪತ್ರಿಕೆಯ ಕೆಲಸ ಬಿಟ್ಟ ದಿನಗಳಿಂದಲೇ ಅಂದರೆ ಐದಾರು ತಿಂಗಳುಗಳಿಂದಲೇ ಈ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ತಯಾರಿ ನಡೆದಿತ್ತು.
ಅಂದುಕೊಂಡಂತೆ ರೂಪಿಸಲು ಇಷ್ಟು ದಿನಗಳು ಬೇಕಾಯಿತು.
ಈಗ ಪತ್ರಿಕೆ ವಾರದೊಳಗೆ ನಿಮ್ಮ ಕೈ ಸೇರಲಿದೆ.
ಸಂಪಾದಕೀಯ ಬಳಗದಲ್ಲಿ ಚೆಂದ ಬರೆಯುವ ವಾರಿಗೆಯ ಲೇಖಕರು, ಅನುಗಾಲದ ಗೆಳೆಯರಾದ ಆರಿಫ್ ರಾಜಾ, ಡಾ.ಸುರೇಶ್ ನಾಗಲಮಡಿಕೆ, ರಮೇಶ್ ಅರೋಲಿ ಇದ್ದಾರೆ.
ಮುಖಪುಟ ವಿನ್ಯಾಸವನ್ನು ಸೃಜನಶೀಲ ಕಲಾವಿದ ಟಿ.ಎಫ್.ಹಾದಿಮನಿಯವರು ಮಾಡಲಿದ್ದಾರೆ.
ಕನ್ನಡ ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಅನೇಕ ಪತ್ರಿಕೆಗಳು, ಅವುಗಳ ಪ್ರಯೋಗಗಳು ಕಣ್ಣ ಮುಂದಿವೆ. ಆ ಎಲ್ಲವನ್ನೂ ಮೀರುವ ದುಸ್ಸಾಹಸ ಖಂಡಿತ ಇದಲ್ಲ. ಆದರೆ, ರೂಢಿಗತ, ಸಿದ್ಧ ಮಾದರಿಗಳನ್ನು ಹೊರತುಪಡಿಸಿದ ವಸ್ತು ವೈವಿದ್ಯತೆಯಂತೂ ಇರಲಿದೆ. ಪರಂಪರೆಯೊಂದಿಗೆ ಮುಖಾಮುಖಿಯಾಗುತ್ತಲೇ ಹೊಸ ತಲೆಮಾರಿನ ಸಾಹಿತ್ಯದ ಈ ಹೊತ್ತಿನ ಚಲನೆಗಳ ಹಲವು ಪ್ರಕಾರಗಳ ಬರಹಗಳಿಗೆ ವೇದಿಕೆ ಕಲ್ಪಿಸುವ ಮತ್ತು ನಮ್ಮ ದೇಶದ ಬೇರೆ ರಾಜ್ಯಗಳ ಹೊಸ ತಲೆಮಾರಿನ ಬರಹಗಳನ್ನು ಪರಿಚಯಿಸಲು ಯೋಜಿಸಲಾಗಿದೆ.
ಸಾಹಿತ್ಯವೆಂದರೆ ಬರೀ ಕತೆ, ಕಾವ್ಯ, ಹೂ ಹಗುರ ಭಾವನೆಗಳಷ್ಟೇ ಅಲ್ಲ. ಅದು ಬಹುಮುಖಿ. ಸುಡುವ ಬಿಸಿಲು ಮತ್ತು ಬೆಳ್ದಿಂಗಳಿಗೆ ಫರುಕಿದೆ. ನಮ್ಮದು ‘ಬಹುತ್ವ ಭಾರತ’. ಆ ವಿಭಿನ್ನ, ಅಜ್ಞಾತ ಅನುಭವಗಳ ಧಾರೆ ಹರಿದು ಬಂದಾಗಲೇ ಸಾಹಿತ್ಯ ವಿಶಿಷ್ಟವಾಗುವುದು. ಸುಭಗವಾಗುವುದು. ಜೀವಕಳೆ ಚಿಮ್ಮುವುದು. ಈ ಗ್ರಹಿಕೆಯೊಂದಿಗೆ ಪ್ರತಿ ಸಂಚಿಕೆ ರೂಪುಗೊಳ್ಳಲಿದೆ. ಇದು ಖಂಡಿತ ಸಾಹಿತ್ಯ ಪ್ರಿಯರಿಗೆ ಇಷ್ಟವಾಗಬಹುದು.
ಬಿಡಿ ಸಂಚಿಕೆಗೆ ರೂ.150.
ವಾರ್ಷಿಕ ಚಂದಾ ರೂ. 500.
ಆಸಕ್ತರು T.S.Goravar, State Bank of India, Gajendragad, Account No :31699243539, IFSC code : SBIN0011275 ಇಲ್ಲಿಗೆ ವಾರ್ಷಿಕ ಚಂದಾ ಹಣ ಹಾಕಿ ವಿಳಾಸ ಕಳಿಸಿ.
ಚೆಕ್ ಕಳಿಸುವವರು ಬ್ಯಾಂಕ್ ಕಮಿಶನ್ ರೂಪಾಯಿ ಸೇರಿಸಿ, ಟಿ.ಎಸ್.ಗೊರವರ, ಅಂಚೆ : ರಾಜೂರ-582114, ರೋಣ ತಾಲ್ಲೂಕು, ಗದಗ ಜಿಲ್ಲೆ ಈ ವಿಳಾಸಕ್ಕೆ ಕಳಿಸಬಹುದು.
ಹೆಚ್ಚಿನ ಮಾಹಿತಿಗೆ ಮೊ : 9341757653, email: sangaata2018@gmail.com, tsgoravar@gmail.com ಸಂಪರ್ಕಿಸಬಹುದು.
ವಂದನೆಗಳೊಂದಿಗೆ,
‘ಸಂಗಾತ’ ಬಳಗದ ಪರವಾಗಿ
ಟಿ.ಎಸ್.ಗೊರವರ






ಸಂಗಾತ ತ್ರೈಮಾಸಿಕ ಪತ್ರಿಕೆಗೆ ಶುಭವಾಗಲಿ. ಪತ್ರಿಕೆ ಚೆನ್ನಾಗಿ ಮೂಡಿಬಂದಿದೆ. ನಾನು ಶ್ರೀ ಐ.ಜೆ.ಮ್ಯಾಗೇರಿ ಸರ್.ಮನೆಯಲ್ಲಿ ಪತ್ರಿಕೆ ಓದಿದೆ.. ಶುಭಾಶಯಗಳು.