ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಂಗಾತ’ ಇನ್ನು ಧಾರವಾಡದಲ್ಲಿ..

ಪ್ರಿಯರೆ,

‘ಸಂಗಾತ’ ಪತ್ರಿಕೆಯ ವಿಳಾಸ ಬದಲಾಗಿದೆ. ಎರಡು ವರ್ಷದಿಂದ ನಮ್ಮೂರು ರಾಜೂರಿನಿಂದ ಪ್ರಕಟವಾಗುತ್ತಿರುವುದು ತಮಗೆಲ್ಲರಿಗೂ ಗೊತ್ತಿರುವ ಸಂಗತಿ. ಈಗ ನನ್ನಿಷ್ಟದ ಧಾರವಾಡಕ್ಕೆ ಸ್ಥಳಾಂತರಗೊಂಡಿದೆ.

ಧಾರವಾಡದ ಜಯನಗರದಲ್ಲಿ ಸಂಗಾತ ಪತ್ರಿಕೆ ಕಾರ್ಯಾಲಯ ಮತ್ತು ಸಂಗಾತ ಪುಸ್ತಕ ಅಂಗಡಿಯನ್ನು ಇವತ್ತು ಸರಳ ಕಾರ್ಯಕ್ರಮದ ಮೂಲಕ ಆರಂಭಿಸಲಾಯಿತು. ಪ್ರೀತಿಯಿಟ್ಟು ಆಗಮಿಸಿದ ಎಲ್ಲರಿಗೂ ನೆನಪುಗಳು ಸಲ್ಲುತ್ತವೆ.

ಸಂಗಾತ ಪುಸ್ತಕದ ಅಂಗಡಿಯಲ್ಲಿ ಎಲ್ಲ ಪ್ರಕಾಶಕರ ಪುಸ್ತಕಗಳೂ ದೊರೆಯಲಿವೆ. ಕಚೇರಿಯ ಕಡೆ ಒಮ್ಮೆ ಬಂದು ಹೋಗಿ.

ಹಲವು ಕನಸುಗಳೊಂದಿಗೆ ಮೂರು ವರ್ಷದ ನಂತರ ಮತ್ತೆ ಬಂದಿರುವೆ. ಧಾರವಾಡ ಹೇಳಲಾರದಂಥ ಎಂಥದೋ ಒಂದು ಸೆಳೆತದ ಊರು. ನನ್ನ ಓದು, ನೌಕರಿ, ಮದುವೆ ಎಲ್ಲ ಈ ಊರಲ್ಲೇ ಆಗಿದ್ದು. ಈಗ ಸಂಗಾತ ಪತ್ರಿಕೆಯ ಮೂಲಕ ಇಲ್ಲಿ ಮತ್ತೊಂದು ಬದುಕು ಶುರುವಾಗಿದೆ. ತಮ್ಮ ಪ್ರೀತಿ ಎಂದಿನಂತಿರಲಿ..

ಸಂಗಾತ ಪತ್ರಿಕೆಯ ಹೊಸ ವಿಳಾಸ :

ಟಿ.ಎಸ್.ಗೊರವರ
ಸಂಪಾದಕರು
ಸಂಗಾತ ಪತ್ರಿಕೆ
1ನೇ ಕ್ರಾಸ್, ಕೆಯುಡಿ ರಸ್ತೆ
ಜಯನಗರ
ಧಾರವಾಡ – 580001
ಮೊ : 9341757653

Email : sangaata2018@gmail.com

‍ಲೇಖಕರು avadhi

4 June, 2019

2 Comments

  1. Dhanyakumar

    ಬಿಟ್ಟು ಹೋಗದ ಅನುಬಂಧ ತಮ್ಮನ್ನು ತನ್ನೆಡೆಗೆ ಕರಯಿಸಿಕೊಂಡಿದೆ ಧಾರವಾಡ. ಧಾರವಾಡದ ಮಣ್ಣಿನ ಗುಣವೇ ಹಾಗಿದೆ. ಸುಸ್ವಾಗತ ತಮಗೆ ಮತ್ತು ತಮ್ಮ
    ” ಸಂಗಾತ”ಕ್ಕೆ.
    ಧನ್ಯಕುಮಾರ ಮಿಣಜಗಿ.

  2. mandalgiri prasanna

    Congratulations… TSG……

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading