-ಉದಯಕುಮಾರ ಹಬ್ಬು
ಸಂಕ್ರಮಣ
ಆಕ್ರಮಣ
ಹಾವುಗಳ ತೋರಣ
ವಿಷದ ಹೂರಣ.
ಭರದಿ
ರಾವಣ
ಕುಂಭಕರ್ಣ
ಕಂಬಳಿ ಹೊದ್ದು.
ಗಾಢವಾಗಿ
ಮಲಗಿದ
ಕವಿಗಳು
ಕವಿತೆಗಳು
ಬೆನ್ನೆಲುಬಿಲ್ಲದ ಹಸಿ ಹಸಿ
ಸುಳ್ಳುಗಳು
ಮುಳ್ಳುಗಳು.
ಮೌನ ಮೊಸಳೆ
ಬಾಯ್ಬಿಡಲಾಗದ
ಮಂಗನಿಗೆ
ಮೋಸ
ಮಾಡಬಹುದು ಒಮ್ಮೆ
ನದಿ ನಡುವೆ
ಉಪಾಯ
ಹೃದಯ ಬಿಟ್ಟು ಬಂದ
ಸುಳ್ಳು ಉಪಾಯ
ಹೇಗಾದರೂ
ಬದುಕಿತು
ಬಡ ಜೀವ
ಸುಳ್ಳಿನಾಟಗಳಲ್ಲಿ
ತಂತಿಯ ಮೇಲೆ
ಬ್ಯಾಲೆನ್ಸ್ ಮಾಡುತ
ಅತ್ತಿತ್ತ. ಓಲಾಡಿದರೂ
ಬೀಳದಂತೆ
ರಕ್ಷಿಸಿದ ಬಿದಿರು ಕೋಲು.
ನಿದ್ದೆ ಬಂದರೆ ಘನವಾಗಿ
ಹೊದ್ದಿ ಮಲಗಿ.
ಬುದ್ಧಿಗೆ ವಿರಾಮ
ಆಗಿ ಗುಲಾಮ






0 Comments