ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ವೇತ ಭವನದಲ್ಲಿ ಒಂದು ಪಪ್ಪಿ

ob1jpgನಾನು ಗೆದ್ದರೆ ನಿನಗೊಂದು ಪುಟ್ಟ ನಾಯಿಮರಿ ಕೊಡಿಸ್ತೀನಿ..ಬರಾಕ್ ಒಬಾಮಾ ಎಂಬ ಅಪ್ಪ ತನ್ನ ಮಗಳು ಸಾಶ-ಗೆ ಪ್ರಾಮಿಸ್ ಮಾಡಿದ್ದ.
ಅಪ್ಪ ಎಲ್ಲೆಲ್ಲಿ ಯಾವ ಯಾವ ಬೀದಿ ಗಲ್ಲಿ ಸುತ್ತಿ ನಿದ್ದೆಗೆಟ್ಟು ಜನರ ಮಧ್ಯೆ ವೋಟಿನ ಬಿಕ್ಷೆ ಕೇಳಿದ್ದನೋ ಗೊತ್ತಿಲ್ಲಾ ಆದರೆ ಆ ಮಗು ದಿನವೂ ಆ ದೇವನ ಬಳಿ ಒಂದು ಬಿಕ್ಷೆ ಕೇಳುತ್ತಿತ್ತು. ಓ ಗಾಡ್ ನನ್ನ ಅಪ್ಪನನ್ನು ಖಂಡಿತಾ ಗೆಲ್ಲಿಸು. ಏಕೆಂದರೆ ಆತ ನನಗೆ ಒಂದು ಪುಟ್ಟ ನಾಯಿ ಮರಿ ಕೊಡಿಸುತ್ತೇನೆ ಎಂದು ಹೇಳಿದ್ದಾನೆ.
ದಯಾಮಯನಾದ ದೇವರು ಯಾವ ಗಳಿಗೆಯಲ್ಲಿ ಹ್ಞೂ ಅಂದನೋ…ಬರಾಕ್ ಒಬಾಮ ಎಂಬ ೪೭ ರ ಹುಮ್ಮಸ್ಸು ಅಮೆರಿಕಾದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಾನೆ. ರಾತ್ರಿ ಬೀದಿ ಬೀದಿಯಲ್ಲಿ ಜನ ಸೇರಿ ಹೋ ಎಂದು ಸದ್ದು ಮಾಡುತ್ತಾ ದೇಶದ ಬಾವುಟ ಬೀಸಿ ಒಬಾಮಾ ನಿಗೆ ಶುಭ ಕೊರುತ್ತಿದ್ದಾಗ ಗೆಲುವು ಆಚರಿಸುತ್ತಿದ್ದ ಅಪ್ಪನ ಅಂಗಿ ಜಗ್ಗಿ ಮಗಳು ಕೇಳಿದ್ದು- ಅಪ್ಪ ಪ್ರಾಮಿಸ್ ನೆನಪಿದೆ ತಾನೆ.
ಇನ್ನು ಮುಂದೆ ಶ್ವೇತ ಭವನದಲ್ಲಿ ಒಬಾಮ ಕುಟುಂಬ ಮತ್ತು ಒಂದು ಪುಟ್ಟ ಪಪ್ಪಿ

ob2jpg

‍ಲೇಖಕರು avadhi

6 November, 2008

1 Comment

  1. hanasoge

    will the puppy be called Bush?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading