ಶ್ವಾಸ ಸಂವೇದ
ಪುಟವಿಟ್ಟ ಬಂಗಾರ ನನ್ನವ್ವ
ಕರಿಮಣ್ಣ ಈ ತಾಯ ಬಸಿರ ಋಣ ತೀರಿಸುವುದೆಂತು ?
ಆರೈಕೆ ಹಸಿವ ನೀಗಿ ಹಸಿರ ತೊಡಿಸಿತ್ತು
ತೊಡೆಗೊಂದಿಷ್ಟು- ತನುವಿಗೊಂದಿಷ್ಟು ಸತ್ವವ ತಂದಿತ್ತಿತ್ತು
ಬೆಳೆಯಲು; ಬುದ್ಧಿ ಬಲಿಯಲು,
ಈ ಬಯಲ ಆಲಯದೊಳಗೆ ಬಲವ ಬಳಸಲು,
ಒಂದಿಷ್ಟು ಕ್ರಾಂತಿಯ ಹಾಡಿ
ಕೀತರ್ಿಯ ಮುಡಿಗೇರಿಸಿಕೊಳ್ಳಲು.
ಈಗಿದೇನಿದೆ ! ?
ನೋಡ ನೋಡುತ್ತ ಮೇಲೆರುಗಲನುವಾಗಿರುವ
ಧೋ ಹಿಮದ ದೊಡ್ಡ ಪರ್ವತ
ಕೆಳಗಿಣುಕಿದರೋ ಆಳಾಘಾಧವಾದ ಕಂದರ.
ನಿವರ್ಾಹವಿಲ್ಲ
ಮುಡಿಮುಟ್ಟಬೇಕು ಬೆಟ್ಟ ಬಯಲಾಗುವನಕ.
ಏರಲು, ಎರಗಲು ಮತ್ತೆ ಮುಡಿಕಟ್ಟಬೇಕು
ಅಲ್ಲಿಂದಾಚೆ ನೇರ ಹೇಮಕೂಟಕ್ಕೆ; ಅಲ್ಲಿರುವ
ಔತಣಕೂಟಕ್ಕೊಬ್ಬತಿಥಿಯಾಗಿ
ಬಿಜಯಂಗೈಯ್ಯಬೇಕು.
ಸೋಲಿಸ ಬೇಡಯ್ಯ, ಗೆಲಿಸು.
ಮಾಯ್ಕಾರ ಮಾದೇವ
ನಿಂಗಂದಷ್ಟು ಸಾರಿ ಅಂದೇನು ಉಘೇ ಎಂದು.
ಕೊಡು ನನಗೆ ನಿನ್ನಲಿರುವ ಆ ಹುಟ್ಟುಗಳ
ನಿನ್ನಭಯ ಆಶ್ರಯದ ಹಾಯಿದೋಣಿಯಲಿ
ಈ ಭಾವ ಸಾಗರವ ದಾಟಬೇಕು.
ಅಸ್ತು ಅನ್ನು ಸಾಕು,
ಗೆದ್ದು ಬಂದೇನು ನಿನ್ನ ಗದ್ದುಗೆಗೆ
ಎದ್ದು ಬಂದೇನು
ಎಪ್ಪತ್ತೇಳುಮಲೆಯಲ್ಲಿ
ತಪ್ಪದೇ ನಾಟ್ಯವಾಡತಕ್ಕಂಥ ಆ ನಿನ್ನ ಸದ್ದೀಗೆ
ಹಾಲುಣಿಸೆ ಕಾದಿರುವ ನನ್ನವ್ವನ ಆ ಮುದ್ದೀಗೆ.]]>
ಶ್ವಾಸ ಸಂವೇದ – ನರೇಶ ಮಯ್ಯ ಕವಿತೆ
ನಿಮಗೆ ಇವೂ ಇಷ್ಟವಾಗಬಹುದು…





No words to explain,,,,very nice!