ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀಮಂತರಿಗೆ ಕೋಟಿಗಟ್ಟಲೆ ಸಬ್ಸಿಡಿ ನೀಡುವುದಕ್ಕೆ ಇವರ ವಿರೋಧವೇಕಿಲ್ಲ

ಈ ಬಸವರಾಜು

ಕಳೆದ ವಾರ ಹಾವೇರಿಗೆ ಭೇಟಿ ನೀಡಿದ್ದೆ. ನಮ್ಮ ಸಂಘಟನೆಯ ಕಾರ್ಯಕರ್ತ ಹಾಗೂ ಕಲಾವಿದ ಗೆಳೆಯರನ್ನು ಭೇಟಿ ಮಾಡಿದೆ. ಆ ದಿನ ಪೂರ್ತಿ ಅವರು ನನ್ನ ಜತೆಗಿದ್ದರು. ಮಾತನಾಡುತ್ತಾ ವೈಯಕ್ತಿಕ ಬದುಕಿನ ಬಗ್ಗೆ ವಿಚಾರಿಸಿದೆ. ಹಳ್ಳಿಯಲ್ಲಿ ಒಂದೂವರೆ ಎಕರೆ ಜಮೀನು, ಪುಟ್ಟ ಮನೆ ಅವರ ಆಸ್ತಿ. ಬರುವ ಸಂಪನ್ಮೂಲ ಸಂಸಾರವನ್ನು ಮುನ್ನಡೆಸಲು ಸಾಕಾಗುತ್ತಿದೆಯೇ ಎಂಬ ನನ್ನ ಪ್ರಶ್ನೆಗೆ ಅವರು ಇಲ್ಲ ಎಂದರು. ಇಲ್ಲಿ ಸಾಕು-ಬೇಡಗಳಿಗೆ ನಿರ್ದಿಷ್ಠವಾದ ಉತ್ತರ ಹುಡುಕುವುದು ಕಷ್ಠ. ತಕ್ಷಣ ನನಗೆ ಹೊಳೆದದ್ದು ಅನ್ನಭಾಗ್ಯ ಯೋಜನೆ!. ನಿಮಗೆ ಬಿಪಿಎಲ್ ಕಾರ್ಡ್ ಇದೆಯೇ? ಕೆ.ಜಿ.ಗೆ ಒಂದು ರೂನಂತೆ ತಿಂಗಳಿಗೆ 30 ಕೆ.ಜಿ ಅಕ್ಕಿ ದೊರೆಯುತ್ತಿದ್ದೆಯೇ ಎಂದೆ. ಅವರು ಹೌದು, ಅದರಿಂದ ತುಂಬಾ ಉಪಯೋಗ ಆಗುತ್ತಿದೆ ಎಂದರು. ಈ ರೀತಿಯಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ಅಕ್ಕಿ ನೀಡುತ್ತಿರುವುದು ಜನರನ್ನು ಸೋಮಾರಿಗಳನ್ನಾಗಿ ಮಾಡಿದೆಯೇ ಎಂದೆ. ಅವರು ಇಲ್ಲ, ಇದೊಂದು ಕಾರಣಕ್ಕಾಗಿ ಯಾರೂ ತಮ್ಮ ದುಡಿಮೆ ನಿಲ್ಲಿಸುವುದು ಇಲ್ಲ, ಇದೊಂದು ಅವರಿಗೆ ಸಿಕ್ಕಿರುವ ನೆರವು ಎಂದರು. ಇದು ನನ್ನ ಗೆಳೆಯರ ಉದಾಹರಣೆ ಮಾತ್ರವಲ್ಲ. ಬೇರೆ ಜಿಲ್ಲೆಯಲ್ಲೂ ಈ ಸೌಲಭ್ಯ ಪಡೆದಿರುವವರ ಜೊತೆ ಮಾತನಾಡಿದಾಗಲೂ ಈ ಸೌಲಭ್ಯದಿಂದ ಜನ ಸೋಮಾರಿಗಳಾಗಿರುವ ಉದಾಹರಣೆ ನನಗೆ ಸಿಗಲಿಲ್ಲ.


ಬೆಂಗಳೂರಿನಲ್ಲಿ ನಡೆದ ಫ್ರೆಂಡ್ಸ್ ಆಫ್ ಬಿಜೇಪಿ ಸಭೆಯಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗೆ ಒಬ್ಬರು ‘ಜನರನ್ನು ಸೋಮಾರಿ ಮಾಡುವ ಅನ್ನಭಾಗ್ಯದಂಥ’ ಅಗ್ಗದ ಯೋಜನೆಗಳನ್ನು ರದ್ಧು ಮಾಡುವಂತೆ ಸಲಹೆ ಮಾಡಿದ್ದು ಪತ್ರಿಕೆಯಲ್ಲಿ ವರದಿಯಾಗಿದೆ. ಇದಕ್ಕೆ ಅಭ್ಯರ್ಥಿ ನೇರವಾಗಿ ಉತ್ತರಿಸದಿದ್ದರೂ ತಾತ್ಕಾಲಿಕ ಹಾಗೂ ಅಗ್ಗದ ಪ್ರಚಾರದ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತರುವುದಿಲ್ಲ ಎಂದಿದ್ದಾರೆಯೇ ಹೊರತು ಅನ್ನಭಾಗ್ಯಕ್ಕೆ ಬೆಂಬಲವನ್ನಂತೂ ಸೂಚಿಸಿರುವುದಿಲ್ಲ. ಬಡಜನರಿಗೆ ಸಿಗುತ್ತಿರುವ ತುತ್ತು ಅನ್ನದ ಬಗ್ಗೆ ಇವರಿಗೆ ಏಕಿಷ್ಟು ದ್ವೇಶ? ಹಾಗಾದರೆ ಶ್ರೀಮಂತರಿಗೆ ಕೋಟಿಗಟ್ಟಲೆ ಸಬ್ಸಿಡಿ ನೀಡುವುದಕ್ಕೆ ಇವರ ವಿರೋಧವೇಕಿಲ್ಲ? ಇವರ ಆಲೋಚನೆ ಯಾರ ಪರವಾಗಿದೆ? ಎಂಬುದು ನನ್ನ ಪ್ರಶ್ನೆ. ನಮ್ಮ ಸಮಾಜದಲ್ಲಿ ಕನಿಷ್ಠ ಎಲ್ಲರೂ ಎರಡು ಹೊತ್ತಿನ ಊಟ ಮಾಡುವಂಥ ವ್ಯವಸ್ಥೆಯಾದರೂ ಇರಬೇಡವೇ? ಈ ರೀತಿಯಲ್ಲಿ ಯೋಚಿಸುವ ಬಿಜೆಪಿ ಪಕ್ಷದ ಗೆಳೆಯರು ಅಧಿಕಾರಕ್ಕೆ ಬಂದರೆ ಯಾವ ಯಾವ ಯೋಜನೆಗಳನ್ನು ರದ್ಧುಪಡಿಸಿ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಬಹುದು?

ಗುಜರಾತಿನಲ್ಲಿ ಸರ್ದಾರ್ ಪಟೇಲರ ಬೃಹತ್ ಪ್ರತಿಮೆಯ ನಿರ್ಮಾಣಕ್ಕೆ ಇವರು ದೇಶದಾದ್ಯಂತ ಕಬ್ಬಿಣ ಹಾಗೂ ಹಣವನ್ನು ಸಂಗ್ರಹಿಸುತ್ತಿದ್ದಾರೆ. ಆ ಪ್ರತಿಮೆಯ ನಿರ್ಮಾಣದಿಂದ ಎಷ್ಟು ಜನರ ಹೊಟ್ಟೆಯನ್ನು ತುಂಬಿಸಲು ಸಾಧ್ಯ? ಸಾಮಾನ್ಯ ಹಾಗೂ ಕಡು ಬಡವರ ಅನ್ನದ ಬಗ್ಗೆ ಇವರಿಗೆ ಏಕೆ ಇಷ್ಟೊಂದು ವಿರೋಧ?

‍ಲೇಖಕರು avadhi

12 April, 2014

3 Comments

  1. mahantesh.k

    ಕಳೆದ ವಾರ ನಾನೂ ಒಂದು ಕಚೇರಿಗೆ ಹೋಗಿದ್ದೆ ಅಲ್ಲಿ ಫಿಕ್ಕಿ(ಕರ್ನಾಟಕ ಫೆಡರೇಷನ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ)ಹೊರತರುವ ಮಾಸಿಕದಲ್ಲಿ ಯುಪಿಎ ಸರಕಾರ ಆಹಾರ ಸಬ್ಸಿಡಿಗೆ ನೀಡಿರುವ ಮೊತ್ತವನ್ನು ಅನುತ್ಪಾದಕ ವೆಚ್ಚವೆಂದು ಹೇಳಲಾಗಿದೆ ಆದರೆ ಕಳೆದ 5 ವರ್ಷದಲ್ಲಿ ಯಪಿಎ ಸರಕಾರ ನಮ್ಮ ದೇಶದ ಶ್ರೀಮಂತರಿಗೆ ನೀಡಿರುವ 5.10ಲಕ್ಷ ಕೋಟಿ ರಿಯಾಯ್ತಿ ಬಗ್ಗೆ ಯಾವುಬ್ಬ ಶ್ರೀಮಂತರು ಅಷ್ಟೇ ಯಾಕೆ ಮುಂದಿನ ಸರಕಾರವನ್ನು ರಚಿಸುವ ತುದಿಗಾಲಲ್ಲಿ ನಿಂತಿರುವ ಬಿಜೆಪಿ ಚಕಾರವೆತ್ತುತ್ತಿಲ್ಲ.ಹಾಗದರೆ ಇವರು ಯಾರ ಪರ?

  2. dhanaraj patre

    e visay prastapisidakke tumba dhannevadagalu sir.

  3. ಪರಮೇಶ್ವರ ಗುರುಸ್ವಾಮಿ

    100% ಸರಿಯಾಗಿ ಹೇಳಿದ್ದೀರಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading