‘ಬಹುರೂಪಿ’ ಪ್ರಕಟಣೆ, ಶ್ರೀಪಾದ ಭಟ್ಟರ ರಂಗಾನುಭವದ ಕಥನ ‘ದಡವ ನೆಕ್ಕಿದ ಹೊಳೆ’ ಬಿಡುಗಡೆ.
ಹೊನ್ನಾವರದಲ್ಲಿ ಚಿಂತನ ರಂಗ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ‘ವಿಶ್ವ ರಂಗಭೂಮಿ ದಿನಾಚರಣೆ’ಯಲ್ಲಿ ಹಿರಿಯ ಸಾಹಿತಿ, ಕತೆಗಾರ ಡಾ. ಶ್ರೀಧರ ಬಳಗಾರ ಕೃತಿ ಬಿಡುಗಡೆ ಮಾಡಿದರು.
ಕವಿ ಮಾಧವಿ ಭಂಡಾರಿ ಕೆರೆಕೋಣ, ಚಿಂತನ ರಂಗ ಅಧ್ಯಯನ ಕೇಂದ್ರದ ಅಧ್ಯಕ್ಷರು ಕಿರಣ ಭಟ್, ಕಲಾವಿದ ದಾಮೋದರ ನಾಯ್ಕ, ಶ್ರೀನಿವಾಸ ನಾಯ್ಕ, ವಿದ್ಯಾಧರ ನಾಯ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ. ಶ್ರೀಪಾದ ಭಟ್ ರಂಗಭೂಮಿ ಮತ್ತು ವೈಶಿಷ್ಟ್ಯಗಳ ಕುರಿತು ಮಾತನಾಡಿದ ವೀಡಿಯೋ ಪ್ರದರ್ಶಿಸಲಾಯಿತು.
ಕೊನೆಯಲ್ಲಿ ವಿನಾಯಕ ಎಸ್ ಎಮ್, ಶ್ರೀನಿವಾಸ ವೈದ್ಯರ ಕಥೆ ‘ಶ್ರದ್ಧಾ’ದ ಕಥಾಭಿನಯ ಮಾಡಿದರು. ರಂಗಗೀತೆಗಳನ್ನು ಹಾಡಿದರು.















0 Comments