ನಟರಾಜ್ ಹುಳಿಯಾರ್ ಬರೆದ ಹೊಸ ನಾಟಕ
ಶೇಕ್ಸ್ಪಿಯರ್ ಮನೆಗೆ ಬಂದ

ವಿಲಿಯಂ ಶೇಕ್ಸ್ಪಿಯರ್ ಈ ಜಗತ್ತು ಕಂಡ ಅದ್ಭುತ ನಾಟಕಕಾರ ಹಾಗೂ ಅನನ್ಯ ಪ್ರತಿಭೆ. ಅವನ ವ್ಯಕ್ತಿತ್ವ ಹಾಗೂ ಕೃತಿಗಳನ್ನು ಈಗಾಗಲೇ ಸಾವಿರಾರು ಮಂದಿ ಸಾಹಿತಿಗಳು, ಚಿತ್ರ ಕಲಾವಿದರು, ಸಿನೆಮಾ ಹಾಗೂ ರಂಗಭೂಮಿಗಳ ನಟ ನಟಿಯರು, ನಿರ್ದೇಶಕರು, ನಾಟಕಕಾರರು ಹಾಗೂ ನಮ್ಮ ನಿಮ್ಮಂತಹವರು ಬಗೆಬಗೆಯಲ್ಲಿ ಅನುಸಂಧಾನ ಮಾಡಿದ್ದಾರೆ. `ಶೇಕ್ಸ್ಪಿಯರ್ ಮನೆಗೆ ಬಂದ’ ಎಂಬ ಈ ಹೊಸ ನಾಟಕ ಶೇಕ್ಸ್ಪಿಯರ್ನನ್ನು ಮತ್ತೊಮ್ಮೆ ಕನ್ನಡ ಸಾಂಸ್ಕೃತಿಕ ಲೋಕಕ್ಕೆ, ಮನೆಮನೆಗೆ ಬರಮಾಡಿಕೊಳ್ಳುವ ಹೊಸ ಸೃಜನಶೀಲ ಪ್ರಯತ್ನ.
`ಥಿಯೇಟರ್ ತತ್ಕಾಲ್’ ರಂಗಭೂಮಿಯ ಪ್ರೀತಿಯಿಂದ ರೂಪುಗೊಂಡಿರುವ ಹೊಸ ತಂಡ. ಅದು ಇದೀಗ ಒಂದು ಮಹತ್ವಾಕಾಂಕ್ಷೆಯ ರಂಗಪ್ರಯೋಗವನ್ನು ಅರ್ಪಿಸಲು ಶೇಕ್ಸ್ಪಿಯರ್ ಮನೆಗೆ ಬಂದ ನಾಟಕವನ್ನು ಕೈಗೆತ್ತಿಕೊಂಡಿದೆ. ಏಕಕಾಲಕ್ಕೆ ಶೇಕ್ಸ್ಪಿಯರ್ನ ವ್ಯಕ್ತಿತ್ವ, ಕಾವ್ಯ, ನಾಟಕಗಳು, ಅವುಗಳ ಬಗೆಬಗೆಯ ಓದು, ಸ್ಪಂದನ, ವಿಮರ್ಶೆ, ಶೇಕ್ಸ್ಪಿಯರ್ ಸುತ್ತ ಹಬ್ಬಿದ ಜನಪದ ಕತೆಗಳು, ಕಲ್ಪನೆ ಎಲ್ಲವನ್ನೂ ಬೆಸೆದ ಈ ವಿಶಿಷ್ಟ ನಾಟಕ ಮೊದಲಬಾರಿಗೆ ಆಗಸ್ಟ್ 26 ಮತ್ತು 27, 2013ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ರಂಗದ ಮೇಲೆ ಬರಲಿದೆ. ಅಂದು ಕನ್ನಡದ ವಿವಿಧ ಚಿತ್ರ ಕಲಾವಿದರು ಈ ನಾಟಕ ಕುರಿತು ರಚಿಸಿರುವ ಪೋಸ್ಟರ್ ಹಾಗೂ ವರ್ಣಚಿತ್ರಗಳ ಪ್ರದರ್ಶನ ಕೂಡ ನಡೆಯಲಿದೆ.
ನಟವರ್ಗ: ಭವಾನಿ ಪ್ರಕಾಶ್, ಗೋಪಾಲಕೃಷ್ಣ ದೇಶಪಾಂಡೆ, ಕಿರಣ್ ಆರ್. ನಾಯ್ಕ್, ಗಣಪತಿ ಗೌಡ, ವಿಶ್ವರಾಜ್ ಗುಲ್ಬರ್ಗಾ, ಸಂತೋಷ್ ಎಂ.ಎಸ್., ಪ್ರಮೋದ್ ಪಿ., ಅರ್ಚನ ಆರ್. ರಾವ್, ಶಿವಪ್ರಸಾದ್ ಕೆ.ವಿ., ನವೀನ್ ಎಸ್.ಡಿ.
ನಿರ್ದೇಶನ: ನಟರಾಜ ಹೊನ್ನವಳ್ಳಿ ಸಂಗೀತ: ಎಸ್.ಆರ್.ರಾಮಕೃಷ್ಣ





hrudayapurvaka shubhaashayagalu….
sakala shubhechchegalu, pradarshana veekshisalu kataranaagiddene !!