
ಶ್ರೀಕಾಂತ್ ಪ್ರಭು
ಶಾಪಕ್ಕೆ ಮಾತು ಕೊಟ್ಟವಳಂತೆ ಇದ್ದಳಾಕೆ.
ಕಾಯುವಿಕೆಯೇ ಉಸಿರೆಂಬಂತೆ.
ಹೆಸರಿನಲ್ಲೇನಿದೆ.
ಅಹಲ್ಯೆ, ಊಮರ್ಿಳೆ, ಸೀತೆ, ದ್ರೌಪದಿ,ಶಬರಿ,ಕಾಳಿ,ದುಗರ್ೆ,ಚಂಡಿ,ಪೂಜಿಸುವವಳು, ಪೂಜಿಸಲ್ಪಟ್ಟವಳು. ಯಾರಾದರೂ ಸರಿ.
ನೋಡಿದಾಗೆಲ್ಲ ಹೀಗೆಯೇ ಇದ್ದಳು. ಅವನನ್ನು ನೋಡಿದ ನೆನಪಿಲ್ಲ.
ಒಂದು ದಿನ ಹೆಸರಿಲ್ಲದ ಜನಜಂಗುಳಿಯಲ್ಲಿ ಸೇರಿ ಮರೆಯಾಗಿ ಬಿಟ್ಟಳು.
ಅತ್ತಿತ್ತ ನೋಡಿದರೆ, ಅಲ್ಲಿ-ಇಲ್ಲಿ ಹುಡುಕಿದರೆ ಸಿಕ್ಕೇ ಸಿಗುತ್ತಾಳೆ.
ಅವನೂ ಇಲ್ಲೇ ಎಲ್ಲೋ ಸನಿಹದಲ್ಲಿ ದಾರಿ ತಪ್ಪಿ ಏನಕ್ಕೋ ಕಾಯುತ್ತಿರಬಹುದು.
ಯಾರಿಗೆ ಗೊತ್ತು.










ಕವಿತೆಯ ಸಾಲುಗಳನ್ನು ಓದಿ ಜೊತೆಗೆ ಫೋಟೋಗಳನ್ನು ನೋಡಿದರೆ ಯಾಕೋ ಕರುಳು ಕಿವಿಚಿದಂತಾಯಿತು.ಬಿ. ಎಂ ಶ್ರೀ ಯವರು ಅನುವಾದಿಸಿದ ಕವಿತೆ ದು:ಖಸೇತು ಹಾಗೆಯೇ ಸಿದ್ಧಲಿಂಗಯ್ಯನವರ ಒಂದು ಕವಿತೆ (ಶೀರ್ಷಿಕೆ ನೆನಪಾಗುತ್ತಿಲ್ಲ) ಯ ಸಾಲುಗಳು ಸ್ಮರಣೆಗೆ ಬಂತು.
ಥ್ಯಾಂಕ್ಸ್.
ಬಹಳಷ್ಟು ಮಂದಿ “ಯೂನಿಕೋಡ್”ನಲ್ಲಿ ಬರೆಯುವಾಗ ಕಾಗುಣಿತ ಅದರಲ್ಲೂ ಅರ್ಕಾವತ್ತು (ಸಂಯುಕ್ತಾಕ್ಷರ) ತಪ್ಪು ಬರೆಯುತ್ತಾರೆ. ಊರ್ಮಿಳೆ, ದುರ್ಗೆ ಇಂಥವುಗಳನ್ನು “ನುಡಿ”ಯಲ್ಲಿ ಬರೆಯುವಂತೆ ‘ಮಿ’…’ಗೆ’… ಬರೆದು ಕನ್ನಡದ ಒಂಬತ್ತು (9) ಸಂಖ್ಯೆ ಅಂದರೆ “ನುಡಿ”ಯಲ್ಲಿ ಷಿಫ್ಟ್-ಎಫ್ ಬಟನ್ ಒತ್ತುತ್ತಾರೆ. ಆಗ ‘ಊರ್ಮಿಳೆ’, ‘ದುರ್ಗೆ’ ಇಂಥವುಗಳು ಊಮರ್ಿಳೆ, ದುಗರ್ೆ, ಎಂದು ಮೂಡುತ್ತವೆ. ರ್ಮಿ…ರ್ಗೆ…ಎಂಬುವನ್ನು ಬರೆಯುವಾಗ ‘ರ’ ಬರೆದು ಷಿಫ್ಟ್-ಎಫ್ ಬಟನ್ ಒತ್ತಿ ‘ಮಿ’ಬರೆದರೆ ಊರ್ಮಿಳೆ.. ದುರ್ಗೆ.. ಪಡಿಮೂಡುತ್ತವೆ. ಬಹಳಷ್ಟು ಪ್ರಜ್ಞಾವಂತರೂ ಇಂತಹ ಪ್ರಮಾದ ಮಾಡುತ್ತಿರುವುದು ವಿಪರ್ಯಾಸ.
ತಮ್ಮ ಸಲಹೆಗೆ ಧನ್ಯವಾದಗಳು. ನಾನು ಬರಹ ಉಪಯೋಗಿಸಿ ಬರೆದದ್ದು. ನನ್ನ ಕಾಪಿಯಲ್ಲಿ ಸರಿಯಾಗಿದೆ. ಕಂಪ್ಯೂಟರ್ ಕೆಲವು ಸಲ ಈ ರೀತಿ ಕಿರಿ ಕಿರಿ ಮಾಡುತ್ತದೆ ಅಂದುಕೊಂಡಿದ್ದೇನೆ.ನನಗೂ ಅದಕ್ಕೂ ಅಷ್ಟಕ್ಕಷ್ಟೆ. ಬರಹದಲ್ಲಿ ನಾನು ಉಪಯೋಗಿಸಿದ್ದು ಹೀಗೆ. ಊರ್ಮಿಳೆ, ದುರ್ಗೆ. (UrmiLe, durge.) ತುಂಬಾ ದಿನಗಳಿಂದ ಈ ಕಡೆ ಬಂದಿರಲಿಲ್ಲ ಆದ್ದರಿಂದ ತಮಗೆ ಉತ್ತರ ಕೊಡಲು ತಡವಾಯಿತು. ದಯವಿಟ್ಟು ಕ್ಷಮಿಸಿ.ಥ್ಯಾಂಕ್ಸ್. (This reply unsent copied from “baraha” shows the names properly as they should be. Hope they won’t change on posting )
They have not changed on posting. !!!!