ಕೃಷ್ಣಮೂರ್ತಿ ಬಿಳಿಗೆರೆ
ಸುವ್ವಿ ಮನೆಗೆ ಕನ್ನ ಹಾಕಿ
ಹಾಡು ತರ್ತೀನಿ
ನಾನು ಹಾಡು ತರ್ತೀನಿ
ಸುವ್ವಿ ಮನೆಗೆ ಕನ್ನ ಹಾಕಿ
ಹಾಡು ಕದ್ದು ತರ್ತೀನಿ /ಪಲ್ಲವಿ/

ಹಾಡಿನ ಮೂಟೆ ಕಟ್ಟಿ ಕಟ್ಟಿ
ಸಾಲು ನಿಟ್ಟು ಹಾಕವಳೆ
ಹಾಡಿನ ಮೂಡೆ ಕಟ್ಟಿ ಕಟ್ಟಿ
ಅಟ್ಟದ ಮೇಲೆ ಒಟ್ಟವಳೆ
ರತ್ನಪಡಿ ಬೀಜದಾಡು
ಕೊಪ್ಪಲೊಳಗೆ ಸುಪ್ಪಿನಾಡು
ಬೇಲಿಸಾಲಿನಕ್ಕಿ ಹಾಡು
ಕಣಜದೊಳಗೆ ಮಡಗ್ಯಳೆ
ಬಣ್ಣದ ರೆಕ್ಕೆ ಚಿಟ್ಟೆ ಹಾಡು
ನವಿಲು ಗರಿಯ ಬಣ್ಣದಾಡು
ಎಮ್ಮೆ ಕರುವ ಕುಣಿತದಾಡು
ಪೆಟ್ಟಿಗೆಯೊಳಗೆ ಕೂಡ್ಯವಳೆ
ಬಿಸಿಲಿನ ಕೋಲು ಹಿಡಿದವಳೆ
ಹಾಡಿನ ಕಳ್ಳರ ಹಿಡಿಯಲೆ ಎಂದು
ಕಾಮನ ಬಿಲ್ಲಿನ ಪಂಜು ಹಿಡಿದು
ಕಾದುಕೊಂಡು ಕೂತವಳೆ
ಬೆಕ್ಕಿನ ಹಾಗೆ ಹೋಗ್ತೀನಿ
ನಾನೆ ಬೆಕ್ಕು ಆಗ್ತೀನಿ
ಮಿಯಾಂವ್ ಮಿಯಾಂವ್ ಹೇಳಿಕೊಟ್ಟು
ಹಾಡು ಕದ್ದು ತರ್ತೀನಿ
ಇರುವೆ ಹಾಗೆ ಹೋಗ್ತೀನಿ
ನಾನೆ ಇರುವೆ ಆಗ್ತೀನಿ
ಸುವ್ವಿಯ ಸುಮ್ನೆ ಪಾಸು ಮಾಡಿ
ಹಾಡು ಕದ್ದು ತರ್ತೀನಿ
ಹಾಡಲಿ ಗೂಡು ಕಟ್ಯವಳೆ
ಮರಳಲಿ ಮಂಟಪ ಮಾಡವಳೆ
ರಾಗದ ದೋಣಿಗೆ ತಾಳ ತುಂಬಿ
ಎಲ್ಲೋ ಹೊರಟು ನಿಂತವಳೆ






0 Comments