ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಷಪೂರಿತ ಲಸಿಕೆಗಳ ಪರೀಕ್ಷೆಯೂ, ಬಿಲ್ ಗೇಟ್ಸ್ ನ ಜನಸಂಖ್ಯಾ ನಿಯಂತ್ರಣ ಯೋಜನೆಯೂ

ಡಾ. ಶ್ರೀನಿವಾಸ ಕಕ್ಕಿಲ್ಲಾಯ ಆರೋಗ್ಯ ಸಂಪದ ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅತಿದೊಡ್ಡ ದಾನಿಯೆಂದು ಬಿಂಬಿಸಲ್ಪಡುತ್ತಿರುವ ಬಿಲ್ ಗೇಟ್ಸ್ ಮಹಾಶಯನ ಬಗ್ಗೆ ಈ ಹಿಂದೆಯೂ ಬರೆದಿದ್ದೆ. [ಇಲ್ಲಿದೆ] ಇಂದಿನ ಹಿಂದೂ ಪತ್ರಿಕೆಯ ವರದಿಯನ್ನು ನೋಡಿದ ಬಳಿಕ ಇನ್ನೊಮ್ಮೆ ಅವನ ಬಗ್ಗೆ ಬರೆಯಬೇಕಾಯಿತು. ಬಿಲ್ ಗೇಟ್ಸ್ ದತ್ತಿನಿಧಿಯ ‘ನೆರವಿನಿಂದ’ ಬಹುರಾಷ್ಟ್ರೀಯ ದೈತ್ಯ ಕಂಪೆನಿಗಳು ಹಲವು ಹೊಸಬಗೆಯ ಲಸಿಕೆಗಳನ್ನು ತಯಾರಿಸಿ ಅಭಿವೃದ್ಧಿಶೀಲ ದೇಶಗಳ ಜನರ ಮೇಲೆ, ಅದರಲ್ಲೂ ಮಕ್ಕಳ ಮೇಲೆ, ಪ್ರಯೋಗಿಸುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ವಿವಾದಗಳೆದ್ದಿವೆ.

ನಮ್ಮ ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಚತ್ತೀಸಘಡ ಮುಂತಾದ ರಾಜ್ಯಗಳ ಹಿಂದುಳಿದ ಒಳಭಾಗಗಳಲ್ಲಿ, ಯಾರ ಗೊಡವೆಗೂ ಇಲ್ಲದೆ ಜೀವಿಸುತ್ತಿರುವ ಬಡಪಾಯಿ ಬುಡಕಟ್ಟು ಜನಾಂಗಗಳ ಮಕ್ಕಳನ್ನು ಲಸಿಕೆಗಳು ಹಾಗೂ ಔಷಧಗಳ ಪರೀಕ್ಷೆಗಳಿಗಾಗಿ ಬಳಸಿಕೊಳ್ಳಲಾಗುತ್ತಿರುವುದು ಹೊಸತೇನಲ್ಲ. ಗರ್ಭನಾಳದ ಕ್ಯಾನ್ಸರನ್ನು ತಡೆಗಟ್ಟುತ್ತದೆನ್ನಲಾದ ಲಸಿಕೆಯ ಪರೀಕ್ಷೆಗಳಲ್ಲಿ ಪ್ರಯೋಗಪಶುಗಳಾಗಿದ್ದ ಕೆಲವು ಮಕ್ಕಳು ಸಾವನ್ನಪ್ಪಿದ ಬಳಿಕ ಒತ್ತಡಕ್ಕೊಳಗಾಗಿ ಈ ಲಸಿಕೆಯ ಪ್ರಯೋಗಗಳನ್ನು ನಿಲ್ಲಿಸಲಾಗಿತ್ತು. [youtube http://www.youtube.com/watch?v=6WQtRI7A064&feature=player_embedded] ಆದರೆ ನಮ್ಮ ದೇಶದಲ್ಲಿ ಇಂತಾಹಾ ಪರೀಕ್ಷಗಳನ್ನು ನಿಯಂತ್ರಿಸುವ ಕಾನೂನುಗಳು ಸಡಿಲವಾಗಿರುವುದು ಹಾಗೂ ನೀತಿಬಾಹಿರವಾದ ಕೆಲಸಗಳಲ್ಲಿ ಕಂಪೆನಿಗಳೊಂದಿಗೆ ಕೈ ಜೋಡಿಸಲು ಸಿದ್ಧರಿರುವ ವೈದ್ಯರುಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯರಿರುವುದು ಈ ಕಂಪೆನಿಗಳ ಪಾಲಿಗೆ ವರದಾನವಾಗಿ ಬಿಟ್ಟಿವೆ. ಹೀಗಾಗಿ ಇಂತಹಾ ಲಸಿಕೆಗಳ ಪ್ರಯೋಗಗಳು ಇನ್ನೂ ಎಗ್ಗಿಲ್ಲದೆ ಸಾಗುತ್ತಿವೆ. ಇಂದೋರಿನ ಚಾಚಾ ನೆಹರು ಬಾಲ ಚಿಕಿತ್ಸಾಲಯದಲ್ಲಿ ನಡೆಯುತ್ತಿದ್ದ ಇಂತಹಾ ಪರೀಕ್ಷೆಗಳ ವಿವರಗಳನ್ನು ಆನಂದ್ ರಾಯ್ ಎಂಬವರು ಮಾಹಿತಿ ಹಕ್ಕು ಕಾನೂನಿನ ನೆರವಿನಿಂದ ಹೊರತೆಗೆದಿದ್ದು, ಇಂದಿನ ಹಿಂದೂ ಪತ್ರಿಕೆಯಲ್ಲಿ ಅದು ವರದಿಯಾಗಿದೆ. ಇಂದೋರಿನ 836 ಮಕ್ಕಳಿಗೆ ಗರ್ಭನಾಳದ ಕ್ಯಾನ್ಸರಿನ ಲಸಿಕೆ, H1N1 ಫ್ಲೂ ಲಸಿಕೆ, ಹೆಪಟೈಟಿಸ್ ಲಸಿಕೆ ಮುಂತಾದುವುಗಳನ್ನು ಕಾನೂನುಬದ್ಧವಾದ ಯಾವ ಪರವಾನಿಗೆಯನ್ನೂ ಪಡೆಯದೆಯೇ ಚುಚ್ಚಲಾಗಿದ್ದು, ಈ ಪೈಕಿ ಕೆಲವು ಮಕ್ಕಳಲ್ಲಿ ದುಷ್ಪರಿಣಾಮಗಳಾಗಿವೆ. ಲಸಿಕೆಗಳ ಪರಿಣಾಮವನ್ನು ಹೆಚ್ಚಿಸುವ ನೆಪದಲ್ಲಿ ಪಾದರಸಯುಕ್ತ ಥಿಯೋಮರ್ಸಾಲ್, ಸ್ಕ್ವಾಲೀನ್, ಅಲ್ಯುಮಿನಿಯಂ, ಕೀಟನಾಶಕಗಳು, ಮಾರ್ಜಕಗಳು, ಕ್ಯಾನ್ಸರ್ ಕಾರಕಗಳು ಇತ್ಯಾದಿಗಳನ್ನು ಈ ಲಸಿಕೆಗಳಲ್ಲಿ ಬೆರೆಸಲಾಗಿದ್ದರೂ, ಪ್ರಯೋಗಗಳನ್ನು ನಡೆಸಿದ ವೈದ್ಯರು ಆ ಬಗ್ಗೆ ತಮಗೇನೂ ಗೊತ್ತಿಲ್ಲವೆಂಬಂತೆ ಹೇಳಿಕೆಯನ್ನಿತ್ತಿದ್ದಾರೆ. ಥಿಯೋಮರ್ಸಾಲ್ ಹಾಗೂ ಸ್ಕ್ವಾಲೀನ್ ಗಳನ್ನು ಅಮೆರಿಕಾದಲ್ಲಿ ನಿಷೇಧಿಸಲಾಗಿದ್ದರೂ, ನಮ್ಮ ದೇಶದಲ್ಲಿ ನಡೆಸುವ ಪ್ರಯೋಗಗಳಲ್ಲಿ ಅಲ್ಲಿನ ಕಂಪೆನಿಗಳು ಇವನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿವೆ. ಈ ರಾಸಾಯನಿಕಗಳಿಂದ ಹಲಬಗೆಯ ಮೆದುಳು ಹಾಗೂ ನರಸಂಬಂಧಿ ಕಾಹಿಲೆಗಳು ಉಂಟಾಗುವ ಸಾಧ್ಯತೆಗಳಿವೆಯೆಂದು ಹೇಳಲಾಗಿದ್ದು, ರೋಗರಕ್ಷಣೆಯ ಹೆಸರಲ್ಲಿ ನಡೆಸುವ ಈ ಪ್ರಯೋಗಗಳಿಗೆ ನಮ್ಮ ಅಮಾಯಕ ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಕೆಲ ತಿಂಗಳುಗಳ ಹಿಂದೆ ಮೆಕ್ಸಿಕೋದಲ್ಲಿ ನಡೆದಿದ್ದ ಟಿಇಡಿ ಗೋಷ್ಠಿಯೊಂದನ್ನುದ್ದೇಶಿಸಿ ಮಾತನಾಡಿದ್ದ ಮಹಾದಾನಿ ಬಿಲ್ ಗೇಟ್ಸ್, ತಾಪಮಾನದ ಏರಿಕೆಯನ್ನು ನಿಯಂತ್ರಿಸಬೇಕಾದರೆ ಜನಸಂಖ್ಯೆಯನ್ನು ನಿಯಂತ್ರಿಸಬೇಕಾದುದು ಅತೀ ಅಗತ್ಯವೆಂದೂ, ಲಸಿಕೆಗಳು ಹಾಗೂ ಕುಟುಂಬ ಯೋಜನಾ ಕಾರ್ಯಕ್ರಮಗಳು ಅದಕ್ಕಿರುವ ಮುಖ್ಯ ಸಾಧನಗಳೆಂದೂ ಹೇಳಿದ್ದು ಹಲವರಲ್ಲಿ ಸಂಶಯಗಳನ್ನು ಹುಟ್ಟಿಸಿತ್ತು. [5]ರೋಗರಕ್ಷಣೆಗಾಗಿ ನೀಡಬೇಕೆನ್ನಲಾಗುತ್ತಿರುವ ಲಸಿಕೆಗಳಿಂದ ಜನಸಂಖ್ಯಾ ನಿಯಂತ್ರಣವೇ? ನಮ್ಮ ದೇಶದ ಮಕ್ಕಳ ಮೇಲೆ ಬಿಲ್ ಗೇಟ್ಸ್ ಪ್ರಾಯೋಜಿತ ಸಂಸ್ಥೆಗಳು ನಡೆಸುತ್ತಿರುವ ಪ್ರಯೋಗಗಳನ್ನು ಗಮನಿಸಿದರೆ ಗೇಟ್ಸನ ಮಾತಿನ ಗೂಢಾರ್ಥವು ಹೊಳೆಯುವುದಿಲ್ಲವೇ? ನಮ್ಮ ವೈದ್ಯರುಗಳಿಗೂ, ನಮ್ಮನ್ನಾಳುವವರಿಗೂ ಅದು ಅರ್ಥವಾಗಬೇಕು, ಅಷ್ಟೇ]]>

‍ಲೇಖಕರು G

28 December, 2010

1 Comment

  1. shashi

    there is no free meal ……. its an universal truth.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading