ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಶ್ವರೂಪಂ: ಮತಾಂಧತೆಯ ವಿಶ್ವರೂಪಕ್ಕೆ ಮಣಿದ ಸಂವೇದನೆ


ನಾ ದಿವಾಕರ

ಉತ್ಪ್ರೇಕ್ಷೆ ಎಂದರೂ ಚಿಂತೆಯಿಲ್ಲ, ಚಿತ್ರ ನಟ ಕಮಲಹಾಸನ್ ಭಾರತೀಯ ಚಿತ್ರರಂಗ ಕಂಡಿರುವ ಅತ್ಯಂತ ಶ್ರೇಷ್ಠ ಕಲಾವಿದರಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತಹ ಒಬ್ಬ ಮೇರು ನಟ. ಇವರ ಹೆಸರಿನಲ್ಲಿ ಸಂಘಟನೆಗಳು ಇಲ್ಲದಿರಬಹುದು, ದೇವಸ್ಥಾನಗಳು ಇಲ್ಲದಿರಬಹುದು, ಹುಚ್ಚೆದ್ದು ಕುಣಿಯುವ ಅಭಿಮಾನಿ ಸಂಘಗಳು ಇಲ್ಲದಿರಬಹುದು, ರಾಜಕೀಯವಾಗಿ ಇವರ ಪ್ರಾಬಲ್ಯ ನಗಣ್ಯವಾಗಿರಬಹುದು, ಅಭಿಮಾನಿಗಳ ಆರಾಧ್ಯ ದೈವ ಅಲ್ಲದಿರಬಹುದು, ಆದರೆ ನಟನೆ ಎಂದರೆ ಅದಕ್ಕೊಂದು ವಿಶಿಷ್ಟ ಆಯಾಮ ಒದಗಿಸಿರುವ ಕೆಲವೇ ನಟರಲ್ಲಿ ಕಮಲಹಾಸನ್ ಅಪ್ರತಿಮರು ಎಂದರೆ ತಪ್ಪೇನಲ್ಲ. ಮೊದಲೇ ಹೇಳಿದಂತೆ ಇದು ಉತ್ಪ್ರೇಕ್ಷೆ ಎನಿಸಿದರೂ ಅಡ್ಡಿಯಿಲ್ಲ. ಅವರ ಪ್ರತಿಭೆಯನ್ನು ಅಳೆಯಲು ನಟನಾ ಕೌಶಲ್ಯವನ್ನೇ ಮಾನದಂಡವಾಗಿ ಇಟ್ಟುಕೊಂಡು ನೋಡಿದಾಗ ಕಮಲ್ ಒಬ್ಬ ಮೇರು ನಟ ಅಷ್ಟೇ ಅಲ್ಲ, ನಟನಾ ಕೌಶಲ್ಯಕ್ಕೇ ಮಾನದಂಡವಾಗಿ ಕಾಣುತ್ತಾರೆ. ಸಾಗರ ಸಂಗಮಂ, ಸ್ವಾತಿಮುತ್ಯಂ, ಮೂನ್ರಾಂಪಿರೈ, ನಾಯಕನ್, ಅವ್ವೈ ಷಣ್ಮುಗಿ ಹೀಗೆ ಕೆಲವೇ ಚಿತ್ರಗಳ ಕೆಲವೇ ದೃಶ್ಯಗಳು ಅವರ ನಟನಾ ಪ್ರತಿಭೆಗೆ ಸಾಕ್ಷೀಭೂತವಾಗಿ ನಿಲ್ಲುತ್ತವೆ.

ಇಂತಹ ಒಬ್ಬ ನಟನ ಚಿತ್ರದಲ್ಲಿ ಯಾವುದೇ ಲೋಪವಿದ್ದರೂ ಒಪ್ಪಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲ. ಆದರೆ ತಮ್ಮ ವೈವಿಧ್ಯಮಯ ನಟನೆಯೊಂದಿಗೆ ವೈವಿಧ್ಯಮಯ ಚಿತ್ರಗಳನ್ನೂ ರಸಿಕರಿಗೆ ನೀಡಿರುವ ಕಮಲ ಹಾಸನ್ ಈ ದೇಶದ ಸೆಕ್ಯುಲರ್ ತತ್ವಗಳಿಗೆ ವ್ಯತಿರಿಕ್ತವಾಗಿ ವತರ್ಿಸುವ ಬೆರಳೆಣಿಕೆಯ ಮತಾಂಧರಿಗೆ ಶರಣಾಗಿ ತಮ್ಮ ಚಿತ್ರದ ಕೆಲವು ಮಹತ್ವದ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿರುವುದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಅನಿಷ್ಠಗಳ ದ್ಯೋತಕವಾಗಿ ಕಾಣುತ್ತದೆ. ಸೆಕ್ಯುಲರ್ ರಾಜ್ಯವನ್ನು ಹುಡುಕಿಕೊಂಡು ಹೋಗುತ್ತೇನೆ ಇಲ್ಲವಾದಲ್ಲಿ ಎಂ.ಎಫ್ ಹುಸೇನ್ ಅವರಂತೆ ವಿದೇಶದಲ್ಲಿ ನೆಲೆಸುತ್ತೇನೆ ಎಂದು ಘೋಷಿಸಿದ್ದ ಕಮಲ್ ಮತಾಂಧರ ಒತ್ತಡಗಳಿಗೆ ಮಣಿಯಲು ಕಾರಣ ಚಿತ್ರಕ್ಕೆ ಹೂಡಿರುವ 95 ಕೋಟಿ ರೂ ಬಂಡವಾಳ ಮತ್ತು ಅದರ ಹಿಂದಿನ ಕಾಪರ್ೋರೇಟ್ ಹಿತಾಸಕ್ತಿಗಳು. ನವ ಉದಾರವಾದ ಮತ್ತು ಜಾಗತೀಕರಣದ ವಕ್ತಾರರು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವನ್ನು ಹೇಗೆ ನಯವಾಗಿ, ನಾಜೂಕಿನಿಂದ ಸಮಥರ್ಿಸುತ್ತಾರೆ ಎನ್ನಲು ವಿಶ್ವರೂಪಂ ಒಂದು ನಿದರ್ಶನ.
ವಿಶ್ವರೂಪಂ ಚಿತ್ರವನ್ನು ನೋಡುವ ಅವಕಾಶ ದೊರೆತಿಲ್ಲವಾದರೂ, ಮಾಧ್ಯಮಗಳ ಚಚರ್ೆಯಿಂದ ತಿಳಿದಿರುವಂತೆ ಈ ಚಿತ್ರದಲ್ಲಿ ಭಯೋತ್ಪಾದನೆಯನ್ನು ಪ್ರಧಾನ ಕಥಾವಸ್ತುವನ್ನಾಗಿ ಬಳಸಿದ್ದು, ಕೆಲವು ದೃಶ್ಯಗಳಲ್ಲಿ ಸಿಮಿ, ಕೊಯಮತ್ತೂರು, ಮಧುರೈ ಮತ್ತು ಇಲ್ಲಿ ಸಂಭವಿಸಿದ ಬಾಂಬ್ ಸ್ಫೋಟಗಳ ಪ್ರಸ್ತಾಪವಾಗಿದೆ. ವಿಶ್ವವನ್ನು ಕಾಡುತ್ತಿರುವ ಭಯೋತ್ಪಾದನೆಯ ಪಿಡುಗಿಗೆ ಇಸ್ಲಾಂ ಮತ್ತು ಜಿಹಾದ್ ಹೆಸರಿನಲ್ಲಿ ಜನರನ್ನು ಪ್ರಚೋದಿಸುತ್ತಿರುವ ಅಲ್ಖೈದಾ ಮತ್ತು ತಾಲಿಬಾನ್ ಪ್ರಸ್ತಾಪವಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಇಸ್ಲಾಂ ಧರ್ಮವನ್ನು ಮತ್ತು ಪವಿತ್ರ ಖುರಾನ್ ಗ್ರಂಥವನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಇದರಿಂದ ಮುಸ್ಲಿಂ ಬಾಂಧವರ ಧಾಮರ್ಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಈ ಕೆಲವು ದೃಶ್ಯಗಳು ಮುಸ್ಲಿಂ ಸಂಘಟನೆಗಳನ್ನು ಕೆರಳಿಸಿದ್ದು ದೇಶಾದ್ಯಂತ ಪ್ರತಿಭಟನೆಗಳನ್ನು ನಡೆಸಲಾಗಿದೆ. ನಿರೀಕ್ಷೆಯಂತೆ ಹಲವು ರಾಜ್ಯ ಸಕರ್ಾರಗಳು ಚಿತ್ರವನ್ನು ನಿಷೇಧಿಸಿದ್ದೂ ಆಯಿತು, ಈಗ ಆ ದೃಶ್ಯಗಳನ್ನು ಕತ್ತರಿಸಲು ಕಮಲ್ ಒಪ್ಪಿದ ನಂತರ ಪ್ರದರ್ಶನಕ್ಕೆ ಅನುಮತಿ ನೀಡಿದ್ದೂ ಆಯಿತು.

ವಿಶ್ವರೂಪಂ ವಿವಾದವನ್ನು ಎರಡು ಆಯಾಮಗಳಲ್ಲಿ ನೋಡಬಹುದು. ಮೊದಲನೆಯದಾಗಿ ಈ ದೇಶದಲ್ಲಿ ವ್ಯಾಪಕವಾಗಿ, ವ್ಯವಸ್ಥಿತವಾಗಿ, ಜಾತಿ-ಧರ್ಮಗಳ ಎಲ್ಲೆ ಮೀರಿ ಕಂಡುಬರುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ. ಸಾಮುದಾಯಿಕ ಹಿತಾಸಕ್ತಿಗಳು ಮತ್ತು ಅಸ್ಮಿತೆಗಳು ಮೇಲುಗೈ ಪಡೆಯುತ್ತಿದ್ದಂತೆ ಯಾವುದೇ ಒಬ್ಬ ಲೇಖಕ, ಕವಿ, ಬರಹಗಾರ, ಕಲಾವಿದ, ನಟ ತನ್ನ ಮನದಾಳದ ಇಂಗಿತಗಳನ್ನು, ಅಭಿಮತಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ವ್ಯಕ್ತಿಯ ಬುದ್ಧಿ ಮಾತನಾಡಿದಾಗ ಭಾಷಣ, ಉಪನ್ಯಾಸ ಮೂಡುತ್ತದೆ. ಮನಸ್ಸು, ಹೃದಯ ಮಾತನಾಡಿದಾಗ ಕಲಾಕೃತಿ, ಕಾವ್ಯ, ಕಥೆ ಕಾದಂಬರಿಗಳು ಮೂಡುತ್ತವೆ. ಚಲನಚಿತ್ರವೂ ಸಹ ಇದೇ ಮನಸು ಹೃದಯಗಳ ಇಂಗಿತಗಳನ್ನು ವ್ಯಕ್ತಪಡಿಸುವ ಒಂದು ಮನರಂಜನಾ ಮಾಧ್ಯಮ. ಆದರೆ ಇಂದು ಮನಸ್ಸು ಮಾತನಾಡುವುದು ಸಾಧ್ಯವೇ ಇಲ್ಲದಂತಾಗಿದೆ. ಹೃದಯದ ಭಾಷೆಗೆ ನಾನಾ ರೀತಿಯ ಕಡಿವಾಣ ಹಾಕಲಾಗುತ್ತಿದೆ. ವ್ಯಕ್ತಿಗತ ಮುಕ್ತ ಚಿಂತನೆಗಳ ಪಯಣದಲ್ಲಿ ಅಡೆತಡೆಗಳೇ ಹೆಚ್ಚಾಗಿದ್ದು, ಕ್ರಿಯಾಶೀಲತೆಯಿಂದ ಹೊಸತನ್ನು ಸೃಷ್ಟಿಸಲು ಬಯಸುವ ಕಲಾವಿದರು, ಲೇಖಕರು ಮತ್ತು ಎಲ್ಲ ರೀತಿಯ ಸೃಜನಶೀಲರು ಲೈಸೆನ್ಸ್ ಪಮರ್ಿಟ್ ರಾಜ್ ಸಂಸ್ಕೃತಿಗೆ ಒಳಪಡುತ್ತಿದ್ದಾರೆ.
ಹಾಗಾಗಿ ಕೆಲವೇ ಸಾಮುದಾಯಿಕ ಗುಂಪುಗಳಿಗೆ ಅಥವಾ ಸಮುದಾಯದ ಸ್ವಘೋಷಿತ ನೇತಾರರಿಗೆ ರುಚಿಸದ, ಅಪಥ್ಯವಾಗುವ ಕಥಾವಸ್ತುಗಳು, ಕಲಾಕೃತಿಗಳು, ಕಾವ್ಯಾಭಿವ್ಯಕ್ತಿಗಳು ಇಡೀ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಸಾಧನಗಳಾಗಿಬಿಡುತ್ತವೆ. ಇಲ್ಲಿ ಪ್ರತಿರೋಧ ವ್ಯಕ್ತಪಡಿಸುವವರನ್ನು ಪ್ರಶ್ನಿಸುವ ಇಚ್ಚಾಶಕ್ತಿಯೇ ಇಲ್ಲದೆ ಪ್ರಭುತ್ವದ ಪ್ರತಿನಿಧಿಗಳು ತಮ್ಮ ಅಧಿಕಾರದ ರಕ್ಷಣೆಗಾಗಿ ಪ್ರತಿರೋಧದ ದನಿಗಳಿಗೆ ಮಣಿದು ಕ್ರಿಯಾಶೀಲ ದನಿಗಳನ್ನು ಮಟ್ಟ ಹಾಕಲು ಹಾತೊರೆಯುತ್ತಿರುತ್ತಾರೆ. ಎಂ.ಎಫ್. ಹುಸೇನ್, ತಸ್ಲಿಮಾ ನಜ್ರೀನ್, ಇತ್ತೀಚೆಗೆ ಆಶಿಶ್ ನಂದಿ ಮತ್ತು ಈಗ ಕಮಲಹಾಸನ್ ಇದೇ ಪರಂಪರೆಗೆ ಬಲಿಯಾದ ಕೆಲವರು. ಒಂದು ಮನರಂಜನೆಯ ಮಾಧ್ಯಮದಲ್ಲಿ ಜನಾಕರ್ಷಣೆಗಾಗಿ ಬಳಸುವ ಹಲವಾರು ಪ್ರಸಂಗಗಳು ಕೆಲವು ನಿದರ್ಿಷ್ಟ ಸಮುದಾಯಗಳನ್ನು ಕೇಂದ್ರೀಕರಿಸುತ್ತವೆ. ಗ್ರಾಮೀಣ ಪ್ರದೇಶದಲ್ಲಿನ ದಬ್ಬಾಳಿಕೆಯನ್ನು ಬಿಂಬಿಸುವಾಗ, ಊಳಿಗಮಾನ್ಯ ವ್ಯವಸ್ಥೆಯನ್ನು ಬಿಂಬಿಸುವಾಗ ಪ್ರಬಲ ವರ್ಗಗಳನ್ನು ಪ್ರಧಾನವಾಗಿ ಬಳಸುವಂತೆಯೇ ಜಾತಿ ದೌರ್ಜನ್ಯವನ್ನು ಬಿಂಬಿಸುವಾಗ ಮೇಲ್ಜಾತಿಯವರನ್ನು ಬಿಂಬಿಸಲಾಗುತ್ತದೆ. ಹಾಗೆಯೇ ಭಯೋತ್ಪಾದನೆಯ ಸುತ್ತ ಹೆಣೆವ ಕಥೆಯಲ್ಲಿ ಜಿಹಾದಿ ರಾಜಕಾರಣ ಬಿಂಬಿತವಾಗುತ್ತದೆ.
ವಿಪಯರ್ಾಸವೆಂದರೆ ಆತ್ಮಾವಲೋಕನ ಮಾಡಿಕೊಳ್ಳುವ ಅವಕಾಶ ನೀಡುವ ಇಂತಹ ಮಾಧ್ಯಮಗಳು ನಮ್ಮ ದೇಶದಲ್ಲಿ ಆತ್ಮವಂಚನೆ ಮತ್ತು ಆತ್ಮದ್ರೋಹದ ಮಾರ್ಗಗಳಾಗಿಬಿಡುತ್ತವೆ. ಸಮುದಾಯದ ಭಾವನೆಗಳು ಸಾಮುದಾಯಿಕವಾಗಿ ವ್ಯಕ್ತವಾಗದಿದ್ದರೂ ಸಂಘಟನಾತ್ಮಕವಾಗಿ ವ್ಯಕ್ತವಾಗುತ್ತವೆ. ಈ ಸಂಘಟನಾತ್ಮಕ ಪ್ರಾಬಲ್ಯವೇ ಆಳುವ ವರ್ಗಗಳನ್ನು ವಿಚಲಿತಗೊಳಿಸಿಬಿಡುತ್ತವೆ. ಇಲ್ಲಿ ಜಯಲಲಿತಾ, ಅಲ್ಲಿ ಮಮತಾ ಬ್ಯಾನಜರ್ಿ ಮತ್ತೊಂದೆಡೆ ಪೃಥ್ವಿ ರಾಜ್ ಚೌಹಾಣ್ ಇಲ್ಲವೇ ಶೀಲಾ ದೀಕ್ಷಿತ್ ಅಥವಾ ನರೇಂದ್ರ ಮೋದಿ , ಯಾವುದೇ ಪಕ್ಷದವರಾಗಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಮೂಲಭೂತವಾದಿಗಳಿಗೆ, ಮತಾಂಧರಿಗೆ ಶರಣಾಗಿ ಸಾಂವಿಧಾನಿಕವಾಗಿ ಒದಗಿಸಲಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಸಿದ್ಧಹಸ್ತರಾಗಿರುತ್ತಾರೆ. ಇಲ್ಲಿ ವಾಸ್ತವಗಳಿಗಿಂತಲೂ ಭಾವನೆಗಳಿಗೆ, ಧರ್ಮಗಳಿಗಿಂತಲೂ ಧಾಮರ್ಿಕ ಭಾವನೆಗಳಿಗೆ, ತತ್ವಗಳಿಗಿಂತಲೂ ತಾತ್ವಿಕ ನಿಲುವುಗಳಿಗೆ ಮನ್ನಣೆ ದೊರೆಯುವುದರಿಂದ ಒಂದು ಪ್ರಬುದ್ಧ ಸಮಾಜವೂ ತನ್ನ ಸ್ವ ಪ್ರಜ್ಞೆ, ಸುಪ್ರಜ್ಞೆಯನ್ನು ಕಳೆದುಕೊಂಡು ಭಾವಾವೇಶಕ್ಕೆ ಬಲಿಯಾಗುತ್ತದೆ. ವಿಶ್ವರೂಪಂ ವಿವಾದದಲ್ಲಿ ಈ ಸಾಂಸ್ಕೃತಿಕ ಪರಂಪರೆಯ ವಿಶ್ವರೂಪ ದರ್ಶನವೇ ಆಗಿದೆ.
ಈ ವಿವಾದದ ಮತ್ತೊಂದು ಆಯಾಮವೆಂದರೆ ಕಾಪರ್ೋರೇಟ್ ಹಿತಾಸಕ್ತಿ ಮತ್ತು ಆಳ್ವಿಕರ ಕಾಪರ್ೋರೇಟ್ ಸಂಬಂಧಗಳು. ತಮ್ಮ ಕಲೆ ಮತ್ತು ಕಲಾಭಿವ್ಯಕ್ತಿ ಸ್ವಾತಂತ್ರ್ಯವನ್ನು ಏನೇ ಆಗಲಿ ಉಳಿಸಿಕೊಳ್ಳುತ್ತೇನೆ ಎಂದು ಪಣ ತೊಟ್ಟು ಹೋರಾಡಿದ್ದರೆ ಬಹುಶಃ ಕಮಲಹಾಸನ್ಗೆ ದೇಶದ ಪ್ರಜ್ಞಾವಂತ ಜನತೆ ಹೆಗಲು ನೀಡಲು ಹಿಂಜರಿಯುತ್ತಿರಲಿಲ್ಲ. ಚಿತ್ರ ತೆರೆ ಕಾಣುವುದು ವಿಳಂಬವಾಗಬಹುದಿತ್ತು. ಆದರೆ ನ್ಯಾಯಾಲಯದ ಕಟಕಟೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಜಯದೊರೆಯುವ ವಿಶ್ವಾಸದಿಂದ ಮುನ್ನಡೆಯಬಹುದಿತ್ತು. ಮತೀಯವಾದಿಗಳ ಅಬ್ಬರಕ್ಕೆ ಕಲಾಕೌಶಲತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮಣಿಯುವುದಿಲ್ಲ ಎಂದು ನಿರೂಪಿಸಲು ಇದು ಸದಾವಕಾಶವಾಗಿತ್ತು. ಗಡೀಪಾರಾದರೂ ತಮ್ಮ ನಿಲುವು ಬದಲಿಸದ ಎಂ.ಎಫ್ ಹುಸೇನ್ ಒಂದು ಉತ್ತಮ ನಿದರ್ಶನ. ಆದರೆ ಹುಸೇನ್ ಅವರ ಕಲಾಕೃತಿಗಳ ಹಿಂದೆ ಕೇವಲ ಕಲಾ ಸರಸ್ವತಿಯ ಸಂವೇದನೆ ಅಡಗಿತ್ತು. ಕಾಪರ್ೋರೇಟ್ ಬಂಡವಾಳ ಅಡಗಿರಲಿಲ್ಲ. ವಿಶ್ವರೂಪಂ ಹಿಂದೆ ಈ ಬಂಡವಾಳದ ವಿಶ್ವರೂಪವೇ ಅಡಗಿತ್ತು.
ಹಾಗಾಗಿ ದೇಶ ತೊರೆಯಲು ಸಿದ್ಧರಾಗಿದ್ದ ಕಮಲ್ ತಮ್ಮ ಬತ್ತಳಿಕೆಯ ಅಸ್ತ್ರಗಳನ್ನು ಬದಿಗಿಟ್ಟು, ಶಸ್ತ್ರ ತ್ಯಾಗ ಮಾಡಿ ಮತಾಂಧರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ತಮ್ಮ 95 ಕೋಟಿ ರೂಗಳ ಬಂಡವಾಳವನ್ನು ಮತ್ತು ಈ ಬಂಡವಾಳದ ಹಿಂದಿರುವವರ ಹಿತಾಸಕ್ತಿಗಳನ್ನೂ ಕಾಪಾಡಿಕೊಂಡಿದ್ದಾರೆ. ಇದು ಕಮಲ್ ಅವರ ವಿಜಯವಲ್ಲ. ಮತಾಂಧರ ವಿಜಯ. ಅಥವಾ ಕಾಪರ್ೋರೇಟ್ ಜಗತ್ತು ಮತಾಂಧರೊಡನೆ ಮಾಡಿಕೊಂಡ ಒಡಂಬಡಿಕೆಯ ಫಲ. ಬಹುಶಃ ಮುಂಬರುವ ದಿನಗಳಲ್ಲಿ ಪ್ರಚಲಿತ ವಿದ್ಯಮಾನಗಳಾದ ಕೋಮುವಾದ, ಮತೀಯವಾದ, ಭಯೋತ್ಪಾದನೆ, ಜಾತಿ ದೌರ್ಜನ್ಯ, ಮಹಿಳಾ ಸಂವೇದನೆ ಮತ್ತಿತರ ವಿಚಾರಗಳನ್ನೊಳಗೊಂಡ ಚಿತ್ರ ನಿಮರ್ಾಣ ಮಾಡುವ ಮುನ್ನ ಇದೇ ಮತಾಂಧ ಸಂಘಟನೆಗಳ ಪೂವರ್ಾನುಮತಿ ಪಡೆಯುವುದು ಅನಿವಾರ್ಯವಾಗಬಹುದು. ಅಘೋಷಿತ ಸೆನ್ಸಾರ್ ಮಂಡಲಿಯಂತೆ ಕಾರ್ಯ ನಿರ್ವಹಿಸುವ ಈ ಸಂಘಟನೆಗಳು ಕೇವಲ ಮುಸ್ಲಿಮರಿಗೆ ಸೀಮಿತವಾಗಿಲ್ಲ ಹಿಂದೂ ಸಂಘಟನೆಗಳೂ ಅಷ್ಟೇ ಪ್ರಬಲವಾಗಿ ತಮ್ಮ ಮತಾಂಧತೆಯನ್ನು ಪ್ರದಶರ್ಿಸಿವೆ. ಆದರೆ ಬಲಿಯಾಗಿರುವುದು ಮಾತ್ರ ಒಂದೇ. ಅದು ಈ ದೇಶದ ಸಾರ್ವಭೌಮ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ.

‍ಲೇಖಕರು G

4 February, 2013

ನಿಮಗೆ ಇವೂ ಇಷ್ಟವಾಗಬಹುದು…

2 Comments

  1. umesh desai

    these days ABHIVYAKTI has become a taboo subject and writers like me have to tread smoothly ..this has become quite a trend in INDIA so people will be afraid to speak Truth and Right

  2. ಓದುಗ, ಬೆಂಗಳೂರು

    ನಾ ದಿವಾಕರ್ ರವರು ಉತ್ತಮ ಚಿಂತಕರು, ಆದರೆ ವಿಶ್ವರೂಪಮ್ ವಿಷಯದಲ್ಲಿ ಈ ರೀತಿ ಎಡವುತ್ತಾರೆಂದು ಭಾವಿಸಿರಲಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಕೇವಲ ಒಬ್ಬ ಕಲಾವಿದನ ಸ್ವತ್ತೆಂಬಂತೆ ಭಾವಿಸಿರುವುದು ವಿಷಾದನೀಯ. ಇಲ್ಲಿ ಒಂದು ಬಹುದೊಡ್ಡ ವರ್ಗವು ವ್ಯಕ್ತಪಡಿಸಿರುವುದು ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ, ಹಾಗೂ ಭಾರತದ ಸಂವಿಧಾನವು ನೀಡಿರುವ ಪ್ರತಿಭಟಿಸುವ ಹಕ್ಕನ್ನೇ ಎಂಬುವುದನ್ನು ನಾವು ಅರಿಯಬೇಕು. ಧಾರ್ಮಿಕತೆಯೆಂಬುವುದು ಸಂವಿಧಾನವೇ ಅಂಗೀಕರಿಸಿರುವ ಸಮಾಜದ ಒಂದು ಅವಿಭಾಜ್ಯ ಭಾಗ. ಆ ಭಾವನೆಗಳಿಗೆ ಧಕ್ಕೆ ಬಂದರೆ ಅದನ್ನು ಪ್ರತಿಭಟಿಸುವುದು ಸ್ವಾಭವಿಕ, ಅದನ್ನು ಸಮಾಜಜೀವಿಯಾದ ಒಬ್ಬ ವ್ಯಕ್ತಿ ಮತಾಂಧತೆಯೆಂದು ಹೀಯಾಳಿಸುವುದು ಎಷ್ಟು ಸರಿ. ತಮ್ಮ ತಮ್ಮ ನಂಬಿಕೆ, ವಿಚಾರಧಾರೆ, ಇಸಮ್ ಗಳಿಗೆ ವಿರುದ್ದವಾಗಿ ವಿದ್ಯಮಾನ ಘಟಿಸಿದರೆ ಅವರವರು ಪ್ರತಿಭಟನೆಗಿಳಿಯುವುದು ಸಹಜ. ಲೇಖಕರ ಈ ಬರವಣಿಗೆಯೂ ಕೂಡಾ ಒಂದು ಪ್ರತಿಭಟನೆಯೇ ಆಗಿದೆ, ಇದರರ್ಥ ಲೇಖಕರನ್ನು ಕೋಮುವಾದಿ ಅಥವಾ ಮುಸ್ಲಿಮ್-ದ್ವೇಷಿ ಎಂದು ಕರೆಯಲಾಗದು. ಇಂತಹ ಸನ್ನಿವೇಶಗಳಲ್ಲಿ ತಳಮಟ್ಟದ ಸಾಮಾಜಿಕ ವಸ್ತುಸ್ಥಿತಿಯನ್ನು ಅರಿಯುವುದು ಬಹಳಾ ಮುಖ್ಯವಾಗುತ್ತದೆ. ಪ್ರತಿಭಟಿಸಿದ ವರ್ಗ ಯಾವುದೋ ರಾಜಕೀಯ ಲಾಭವನ್ನೂ ನೋಡಿಲ್ಲ ಅಥವಾ ಕಮಲ್ ಹಾಸನ್ ತರಹ ದುಡ್ಡು ಸಂಪಾದನೆ ಅಥವಾ ಲಾಭ-ನಷ್ಟದ ಲೆಕ್ಕಾಚಾರವನ್ನೂ ಹಾಕಿಲ್ಲ. ಒಬ್ಬ ಕಮಲ್ ಹಾಸನ್ ನ ಅಭಿವ್ಯಕ್ತಿ ಸ್ವಾತಂತ್ರ್ಯವು ಲಕ್ಷಾಂತರ ವ್ಯಕ್ತಿಗಳ ಭಾವನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಮುಖ್ಯವಾಗುತ್ತದೇಯೇ? ಮದ್ರಾಸ್ ಹೈ ಕೋರ್ಟ್ ಹೇಳಿದಂತೆ, ದೇಶದ ಐಕ್ಯತೆಯು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿದೆ. ಅಂದ ಹಾಗೆ, ನಮ್ಮ ಮಧ್ಯೆ ಪ್ರಚಲಿತವಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕಲ್ಪನೆಯೂ ಕೂಡಾ ಪಕ್ವವಾಗಿಲ್ಲ, ಅದಕ್ಕೆ ಯಾವುದೇ ಮಾನದಂಡವಾಗಲಿ, ವ್ಯಾಖ್ಯಾನವಾಗಲಿ ನಮ್ಮಲ್ಲಿ ಸಿಗುವುದಿಲ್ಲ. ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೆ ಆಗುವಂತೆ ಅದನ್ನು ಉಪಯೋಗಿಸುತ್ತಾರೆ. ಕಮಲ್ ಹಾಸನ್ ಆಗಿರಲಿ, ಮುಸ್ಲಿಮರಾಗಿರಲಿ, ಲೇಖಕರಾಗಿರಲಿ ಅಥವಾ ನಾನಗಿರಲಿ ದೂರು-ಪ್ರತಿದೂರು, ಪರಸ್ಪರ ಹೀಯಾಳಿಕೆ ಇತ್ಯಾದಿಗಳಿಂದ ಹೊರಬಂದು, ಎಲ್ಲರೂ ಸಮಾಜದ ಪ್ರಗತಿಗೆ ಯಾವುದು ಒಳಿತು, ಅಥವಾ ಒಂದು ಸಮಸ್ಯೆಯನ್ನು ಯಾವ ಉತ್ತಮ ರೀತಿಯಲ್ಲಿ ಬಗೆಹರಿಸಬಹುದು ಎಂಬುವುದನ್ನು ಆಲೋಚಿಸಿ ಕಾರ್ಯಮಗ್ನರಾಕಬೇಕಾಗಿದೆ. (ನಾ. ದಿವಾಕರ್ ರವರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬರವಣಿಗೆಯ ಮೂಲಕ ವ್ಯಕ್ತಪಡಿಸಿದ್ದಾರೆ, ನಾನೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಪಯೋಗಿಸಿಕೊಂಡು ಕಮೆಂಟ್ ಹಾಕಿದ್ದೇನೆ- ಇದರರ್ಥ ನಾನು ದಿವಾಕರ್-ದ್ವೇಷಿಯಲ್ಲ.)- ವಿನಯಪೂರ್ವಕವಾಗಿ ಓದುಗ, ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading