ವಿಶಾಲ್ ಮ್ಯಾಸರ್
**
ಕವಿಯೊಬ್ಬ ಬರೆಯುತ್ತಾನೆ
ಇದು “ಕಲ್ಲು ಕರಗುವ ಸಮಯ”
ಕಲ್ಲುಗಳು ಮರಗುತ್ತವೆ ಒಳಗೊಳಗೇ
ಅಯ್ಯೊ ನಾವು ಕರಗಿದರೆ ನಾವು ನಾವಾಗಿ ಇರುತ್ತೀವಾ…?
ಕಲ್ಲು ಅರಳಿ ಹೂವಾದರೆ …?
ಥೂ ಥೂ ಕಲ್ಲು ದೇವರಿಗೆ
ಹೂವಿಡಬೇಕು

ದೇವರು ಹೂವಿನಂತೆ ಮೃದುವಲ್ಲ
ಒಂದು ದುಂಬಿಯನ್ನು ಹತ್ತಿರಕ್ಕೆ ಬಿಟ್ಟುಕೊಂಡಿಲ್ಲ
ಇನ್ನು ಜೇನು…?
ಹಾಲು ಉಕ್ಕದ ಎದೆಯ
ಬಗೆದರೆ ಬರೀಯ
ರಕ್ತ,ಮಾಂಸ
ಇದ್ದ ಜೇನೆಲ್ಲ ದ್ವಂಸ
ಕಲ್ಲು ಕರಗುವ ಸಮಯಕ್ಕೆ
ಏನೆಲ್ಲವಾಗಬಹುದು…
ಹನಿ ನೀರು ಹೀರದ ತುಟಿ
ಎಳನೀರು ಬಲು ತುಟ್ಟಿ
ಮುತ್ತು ತುಟ್ಟಿ
ತುತ್ತು ಬಲು ಗಟ್ಟಿ
ಕ್ಷಮಿಸಿ
ನಾನು ಕವಿಯಲ್ಲ
ಯಾವ ಶಿಲೆಯಲ್ಲೂ
ಶಿಲ್ಪ ಕಡೆಯುವುದಿಲ್ಲ
ಕಡೆದು ಕಡೆದು
ಕಲ್ಲ ಕೆಡಸುವುದಿಲ್ಲ…
0 Comments