ನನ್ನ ಹೊಸ ಪುಸ್ತಕ ‘ಬ್ಲಾಗಿಲನು ತೆರೆದು….’ಬರುವ ಸೋಮವಾರ-ಎಪ್ರಿಲ್ ೧೮ರನ್ದು ಬೆಂಗಳೂರಿನಲ್ಲಿ ಕನ್ನಡ ಭವನದ ನಯನ ಸಭಾಂಗಣದಲ್ಲಿ ಬಿಡುಗಡೆ. ಕಳೆದ ಒಂದೂವರೆ ವರ್ಷದಲ್ಲಿ ನನ್ನ ಬ್ಲಾಗಿನಲ್ಲಿ ಬರೆದ ಲೇಖನಗಳು ಮತ್ತು ಫೇಸ್ ಬುಕ್ ನಲ್ಲಿ ನಾನು ಬರೆದ ಟಿಪ್ಪಣಿಗಳು ಈ ಪುಸ್ತಕದಲ್ಲಿವೆ.
ಈ ಹೊಸ ಪುಸ್ತಕವನ್ನು ನಿಮಗೆ -ಫೇಸ್ ಬುಕ್ಕಿನ ಮತ್ತು ನನ್ನ ಬ್ಲಾಗಿನ ಸ್ನೇಹಿತರಿಗೆ -ಅರ್ಪಿಸಿದ್ದೇನೆ. ನಿಮ್ಮ ಪೂರ್ವ ಅನುಮತಿ ಕೇಳಿಲ್ಲ. ಆದರೆ ೧೫೨೧ ಮಂದಿ ನೀವು ಕಳೆದ ಒಂದೂವರೆ ವರ್ಷದಿಂದ ಅಂತರಜಾಲದಲ್ಲಿ ನನ್ನ ಬರಹಗಳಿಗೆ ಸ್ಫೂರ್ತಿ ಕೊಟ್ಟಿದ್ದೀರಿ.
ನೀವು ೧೮ರ ಕಾರ್ಯಕ್ರಮಕ್ಕೆ ಬಂದರೆ ನನಗೆ ಹೆಚ್ಚಿನ ಸಂಭ್ರಮ .
ಪ್ರ್ರಿತಿಯಿಂದ
ವಿವೇಕ ರೈ








ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುತ್ತೇನೆ.
ಕಾರ್ಯಕ್ರಮಕ್ಕೆ ಶುಭಾಶಯಗಳು. ಆರ್. ನರಸಿಂಹಮೂರ್ತಿ- ಮಂಗಳೂರು.
ಪ್ರೀತಿಯ ಮೇಷ್ಟ್ರ ಪುಸ್ತಕ ಬಿಡುಗಡೆಯ ಸುದ್ದಿ ಕೇಳಿ ಸಂತೋಷವಾಯಿತು. ಹೊರ ದೇಶದಲ್ಲಿದ್ದು ಬ್ಲಾಗು, ಪೇಸ್ ಬುಕ್ ಗಳ ಮೂಲಕ ಕನ್ನಡನಾಡಿನ ಮನಸ್ಸುಗಳ ಜತೆ ಸಂಪರ್ಕವಿಟ್ಟುಕೊಂಡು, ಆ ಮೂಲಕ ಅವರು ತೋರುವ ಪ್ರೀತಿ, ಪಡೆವ ಆತ್ಮೀಯತೆಯು ಬ್ಲಾಗು ಮತ್ತು ಪೇಸ್ ಬುಕ್ ಗೆ ಬೇರೆಯದೇ ಆಯಾಮವನ್ನು ಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ವಿವೇಕ ರೈ ಸಾರ್ ಗೆ ಅಭಿನಂದನೆಗಳು. ಸಾದ್ಯವಾದರೆ ಕಾರ್ಯಕ್ರಮಕ್ಕೆ ಬರಲು ಪ್ರಯತ್ನಿಸುವೆ.
good luck sir
ನಾನು ಸೋಮವಾರ ಬೆಂಗಳೂರಿನಲ್ಲಿರುವುದಿಲ್ಲ ಸರ್, ಕಾರ್ಯಕ್ರಮಕ್ಕೆ ಶುಭ ಕೋರುತ್ತೇನೆ.