ಅಷ್ಟರಲ್ಲಿ ರಾಘವೇಶ್ವರರು ಹೊರಬಂದು ಮತ್ತೊಂದು ದೇವಸ್ಥಾನಕ್ಕೆ ತೆರಳಿದರು. ವಿವೇಕ್ ಕೂಡ ಹೊರಡುವಂತೆ ಆತನ ಅಪ್ಪ ಆಗಿನಿಂದಲೂ ಆತನ ಹಿಂದೆ ನಿಂತು ಆಗ್ರಹಪಡಿಸುತ್ತಲೇ ಇದ್ದರು. ಬಹುಶಃ ಮಗನನ್ನು ಮೀಡಿಯಾದಿಂದ ದೂರವಿರಿಸುವುದು ಸುರೇಶ್ ಉದ್ದೇಶವಾಗಿತ್ತು. ಇನ್ನೇನು ವಿವೇಕ್ ಅಲ್ಲಿಂದ ತೆರಳಬೇಕು ಅಷ್ಟರಲ್ಲಿ ನಾನು,
“ವಿವೇಕ್, ಐಶ್ವರ್ಯಾ ಕಿ ಶಾದೀ ಮೇ ನಹೀಂ ಜಾಯೆಂಗೆ?” ಅಂತ ಕೇಳಿಯೇ ಬಿಟ್ಟೆ.
ವಿವೇಕ್ ನನ್ನು ತಳ್ಳಿದ ಅವರಪ್ಪ ಸುರೇಶ್ ಮುಂದೆ ಬಂದವರೇ “ದೇಖೋ ಐಸೆ ಫಾಲ್ತು ಸವಾಲೊಂಕೆ ಲಿಯೆ ಹಮಾರೆ ಪಾಸ್ ಟೈಮ್ ನಹೀಂ ಹೈ….ಜೋ ಕುಛ್ ಭೀ ಪೂಛನಾ ಹೈ ವೋ ಗೋಮಾತಾ ಕೆ ಬಾರೇ ಮೇಂ ಪೂಛೋ….ಢಂ…ಢಂ….ಢುಸ್..ಢುಸ್…”ಎನ್ನುತ್ತ ಹೋಗಿಬಿಟ್ಟರು. ಅಷ್ಟೇ ಸಾಕಾಗಿತ್ತು ನನಗೆ. ಸೀದಾ ಹೈದ್ರಾಬಾದಿಗೆ ಫೋನಾಯಿಸಿ ಹಿಂಗಿಂಗೆ ಹಿಂಗಿಂಗೆ, ಕ್ಯಾಸೆಟ್ ಇಷ್ಟು ಗಂಟೆಗೆ ಶಿವಮೊಗ್ಗ, ನಿಮಗೆ ವಿಶುವಲ್ ಇಷ್ಟೊತ್ತಿಗೆ ಸಿಗುತ್ತೆ ಅಂತ ಫೋನ್ ಮಾಡಿದೆ
ಪೂರ್ಣ ಓದಿಗೆ- ಮೀಡಿಯಾ ಮೈಂಡ್
ವಿವೇಕ್ ಒಬೆರಾಯ್ ಪ್ರೇಮವೂ, ಟಿ ವಿ ಚಾನಲ್ಗಳೂ..
ನಿಮಗೆ ಇವೂ ಇಷ್ಟವಾಗಬಹುದು…





ಸುಘೋಷ್,
ನಿಮಗೆ ಶಾಭಾಸ್
ಎಂಬ ಬಹುಮಾನ
ಘೋಷ್‌ಅಣೆ ಮಾಡಿದ್ದೇನೆ.
ಅಂದು ನಿಮ್ಮ ಆ ಬೈಟನ್ನು ನೋಡಿ (ನಿಮ್ಮನ್ನು ಮತ್ತು ಅದೇ ಪ್ರೆಸೆನ್ಸ್ ಆಫ್ ಮೈಂಡ್‌ಗಾಗಿ ಸುರೇಶ್ ಒಬೆರಾಯ್ ಅವರನ್ನೂ) (ಸುಘೋಷ್, ಸುರೇಶ್ ಇಬ್ಬರನ್ನೂ) ಮೆಚ್ಚಿದ ಕೋಟ್ಯಂತರ ವೀಕ್ಷಕರಲ್ಲಿ ನಾನೂ ಒಬ್ಬ.
very nice article
ನಂಗಿಷ್ಟವಾಗಲಿಲ್ಲ ಸುಘೋಷ್. ಹೀಗೆ ಬೇಡದ ಪ್ರಶ್ನೆಗಳನ್ನು ಕೇಳುವುದು ಇಂದಿನ ಜರ್ನಲಿಸಂನ ಅನಿವಾರ್ಯವಾಗಿರುವುದು ವಿಷಾದದ ವಿಷಯ. ನೀವಿದನ್ನು ಒಂದು ಸ್ವಾರಸ್ಯಕರ ನೆನಪಾಗಿ ಬರೆದಿದ್ದರೆ ಓದಬಹುದಾಗಿತ್ತು. ಆದರೆ ಪ್ರಸೆನ್ಸ್ ಆಫ್ ಮೈಂಡ್ ಎಂದಿದ್ದೀರ. ನನಗ್ಯಾಕೋ ಇಂದಿನ ಪತ್ರಿಕೋದ್ಯಮ ಆಬ್ಸೆನ್ಸ್ ಆಫ್ ಮೈಂಡಿಗೆ ಇದು ಉದಾಹರಣೆ ಅನಿಸುತ್ತೆ.
idu tannannu taanu hogalikolluva pariye horatu javaabdaari patrikodyamavalla.let your nimma presense of mind and courage donot become a text for journalists. Bad in taste. A journalist should protect one’s private life as long as it does not affect the society at large. This is what we learnt when we were discussing great journalists such as Joseph Pulitzer. This is voyerstic journaism . Karunaa p s