ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿನಯ್ ಕುಮಾರ್ ಕಾಲಂ : ನನ್ನನ್ನೊಂದು ಬೋನ್ಸಾಯ್ ಮರವಾಗಲು ಬಿಡಬೇಡ…


 
ಪ್ರೀತಿ ಮಾಡೋದಲ್ಲ ; ಆಗೋದು. ನಿನ್ನನ್ನು ನೋಡಿದ ಮೊದಲ ಕ್ಷಣ ನನಗೆ ಪ್ರೀತಿಯಾಯಿತು. ನನ್ನ ಹೃದಯದಲ್ಲಿ ನಾನೊಂದು ಪ್ರೀತಿಯ ಸಸಿ ನೆಟ್ಟುಬಿಟ್ಟೆ. ನಿನ್ನ ಪ್ರತಿಯೊಂದು ನೋಟ, ಮಾತು, ಸ್ಪರ್ಶ ಆ ಸಸಿಗೆ ನೀರೆರೆಯುತ್ತಿದ್ದವು. ನಿನ್ನ ಕೈಯ ಸ್ಪರ್ಶವಂತೂ ನನ್ನ ಕನಸ್ಸನ್ನು ಭೂಮಿಯಾಚೆಗೆ ಕೊಂಡೊಯ್ದಿದೆ. ನಿನ್ನ ಕೈಹಿಡಿಯುವಾಗೆಲ್ಲಾ ನನಗನ್ನಿಸಿದೆ ಎಷ್ಟು ಚಂದವಾಗಿದೆ ನನ್ನ ಕೈಯಳತೆಗೆ ಹೇಳಿಮಾಡಿಸಿದಂತಿದೆ ನನ್ನ ಕಣ್ಣುಮುಚ್ಚಿಸಿ ಸಾವಿರ ಹೆಣ್ಣುಗಳ ಹಸ್ತಲಾಘವ ಕೊಡಿಸಿದರೂ ನಿನ್ನ ಕೈ ಬಂದ ಕೂಡಲೆ ನಾನು ಗುರುತು ಹಚ್ಚಿ ಗಕ್ಕನೆ ಹಿಡಿಯಬಲ್ಲೆ. ನಿನ್ನ ಹಸ್ತರೆೇಖೆಗಳನ್ನು ಕೇಳು. ಅವುಗಳಂತೂ ನನ್ನ ಹಸ್ತರೆೇಖೆಗಳ ಜತೆಗೂಡಿ ಸಂಸಾರ ನಡೆಸಿ ಅವುಗಳಿಗೆ ಹುಟ್ಟಿದ ಮಕ್ಕಳನ್ನು ಸ್ಕೂಲಿಗೂ ಸೇರಿಸಿಬಿಟ್ಟಿವೆ ! ನಿನ್ನ ಕೈಹಿಡಿಯುವಾಗೆಲ್ಲಾ ನಾನು ಪ್ರೀತಿಯ ಸಂಕೇತ ಹಿಮಾಲಯವನ್ನು ಹಿಡಿದಷ್ಟೇ ಖುಷಿಯಾಗುತ್ತದೆ.
ನಿನಗೊಂದು ವಿಷಯ ಗೊತ್ತಾ? ನನ್ನ ಪಾಲಿಗೆ ಯಾವ ಹೊಸ ಸಂಗತಿ ನಡೆದರೂ ನಿನಗೇ ಮೊದಲು ತಿಳಿಸುತ್ತೇನೆ. ತಿಳಿಸಲು ಸಂಗತಿಗಳೇ ಇಲ್ಲದಾಗ ನಾನೇ ಹೊಸತನ್ನು ಸೃಷ್ಟಿಸುತ್ತೇನೆ. ನನ್ನ ಜೀವನದಲ್ಲೇ ನಾನು ತುಂಬಾ ಖುಷಿಪಟ್ಟ ದಿನ ಯಾವುದು ಗೊತ್ತಾ? ನನ್ನಿಂದ ಇಂಗ್ಲಿಷ್ ಕಲಿತು rank  ‍ಪಡೆದು ನನ್ನನ್ನು ತಬ್ಬಿದೆಯಲ್ಲಾ ಅವತ್ತು.
ಒಂದು ಕ್ಷಣ ನನ್ನ ಹೃದಯ ಚಲನೆಯನ್ನೇ ನಿಲ್ಲಿಸಿತ್ತು. ಆ ಗುಂಗಿನಿಂದ ಹೊರ ಬರುವಷ್ಟರಲ್ಲಿ ಮೂರು ದಿನ ಆಗಿಹೋಗಿತ್ತು. ನಾನೊಬ್ಬ ನಾಸ್ತಿಕ. ಆದರೆ ನೀನು ಸೈಕಲ್ಲಿನಿಂದ ಬಿದ್ದು ಕೈತರಚಿಕೊಂಡಾಗ ನಿನಗೆ ನೋವಾಗದಂತೆ ಮಾಡು ಎಂದು ಎಲ್ಲ ದೇವರಲ್ಲಿ ಹರಕೆ ಹೊತ್ತಿದ್ದೆ.
ಉಫ್!! ಇಷ್ಟಾದರೂ ಯಾಕೆ ನನ್ನ ಬಳಿ ಪ್ರೀತಿ ಹೇಳಿಕೊಂಡಿಲ್ಲ? ಎಂದು ನೀನು ನನ್ನನ್ನು ಕೇಳಬಹುದು. ನಾನು ಮೊದಲ ದಿನವೇ ಹೇಳಬಿಡಬಹುದಿತ್ತು. ನೀನು ಅವತ್ತು ಒಪ್ಪಿಕೊಳ್ಳುವ ಸ್ಥಿತಿಯಲ್ಲಿದ್ದೆ ಎಂಬುದೂ ನನಗೆ ಗೊತ್ತು. ನಾನು ಯಾಕೆ ಹೇಳೆಲಿಲ್ಲವೆಂದರೆ ನನ್ನದು ಪ್ರೀತಿ; ಆಕರ್ಷಣೆಯಲ್ಲ. ನನ್ನ ಪ್ರೀತಿಯ ಶಕ್ತಿ ನನಗೆ ಗೊತ್ತಾಗಬೇಕಿತ್ತು. ಅದು ನಿನಗೂ ತಿಳಿಯಬೇಕಿತ್ತು. ಅದನ್ನು ಜೋಪಾನವಾಗಿಡುವ, ವಧರ್ಿಸುವ, ನಿರಂತರತೆಯನ್ನು ಕಾಯುವ ವಿದ್ಯೆಯನ್ನು ನಾನು ಕಲಿಯಬೇಕಿತ್ತು.
ಈಗ ನನ್ನ ಪ್ರೀತಿಗೆ ದಶಮಾನದ ಸಂಭ್ರಮ. ಹತ್ತು ವರುಷಗಳಾದರೂ ನಿನ್ನ ಹಳದಿ ಬಣ್ಣದ ಚೂಡಿದಾರ್ ಬಣ್ಣ ಮಾಸಿಲ್ಲ. ಅದು ರಂಗನ್ನು ಹೆಚ್ಚಿಸಿಕೊಳ್ಳುತ್ತಲೇ ಇದೆ. ಕಾಲ ಬದಲಾಗಿದೆ. ನಾವೂ ಬದಲಾಗಿದ್ದೇವೆ. ನೀನು ನನ್ನನ್ನೂ ಮೀರಿಸಿ ಎತ್ತರಕ್ಕೆ ಬೆಳೆದಿದ್ದೀಯಾ. ನಾನು ನಿನ್ನನ್ನೂ ಮೀರಿಸಿ ಎತ್ತರಕ್ಕೆ ಬೆಳೆದಿದ್ದೇನೆ. ನನ್ನ ಬಿಳಿನೀಲಿ ಬಣ್ಣದ ಸೈಕಲ್ ಮೂಲೆಯಲ್ಲಿ ನಿಂತಿದೆ. ಅದರ
ಜಾಗವನ್ನು ಬಿಎಂಡಬ್ಲ್ಯೂ ಆಕ್ರಮಿಸಿಕೊಂಡಿದೆ. ಅದು ವಿಷಯವೇ ಅಲ್ಲ. ಯಾಕೆಂದರೆ ನೀನು ಬಂದು ಕೂರದಿದ್ದರೆ ನನ್ನ ಬಿಎಂಡಬ್ಲ್ಯೂಗೆ ಯಾವ ಬೆಲೆಯೂ ಇಲ್ಲ.
 
ಇಷ್ಟಾದ ಮೇಲೆ ನಿನಗೊಂದು ವಿಷಯವನ್ನು ಹೇಳಬೇಕು. ನಿನ್ನ ಮೇಲಿನ ಪ್ರೀತಿಯನ್ನು ಬೆಳೆಸುವ ಕಾಳಜಿಯಲ್ಲಿ ನನ್ನ ಆಸೆಗಳೆಲ್ಲವನ್ನೂ ಹತ್ತಿಕ್ವಿದ್ದೇನೆ. ಅವುಗಳೆಲ್ಲವೂ ಹೊಡೆತ ತಿಂದು ಪೋಷಣೆ ಇಲ್ಲದೆ ಬೋನ್ಸಾಯ್ ಮರವಾಗಿ ಬೆಳೆದಿವೆ. ನನ್ನ ಮನಸ್ಸು ಹಸಿರಾಗಿದೆ. ನನ್ನ ಮನಸ್ಸನ್ನು ಬೋನ್ಸಾಯ್ ಮರವಾಗಲು ಬಿಡಬೇಡ.
ನಾನು ನನ್ನನ್ನೇ ಮರೆತು, ಎಲ್ಲವನ್ನೂ ಬಿಟ್ಟು ನನ್ನ ಹಳೆಯ ಸೈಕಲ್ಲನ್ನು ರಿಪೇರಿ ಮಾಡಿಸಿ ನಿನಗಾಗಿ ನಾನು ಕಾಯುತ್ತಿದ್ದ ಅದೇ ಜಾಗದಲ್ಲಿರುತ್ತೇನೆ. ಬಂದುಬಿಡು. ನೀನು ಬಂದು ನನ್ನ ಮನದಲ್ಲಿ ಕೂತರೆ ನಾನು ಬೋನ್ಸಾಯ್ ಮರವಾಗದೆ ಆಲದ ಮರವಾಗುತ್ತೇನೆ. ನನ್ನ ಜೀವನದ ಬೇರನ್ನು ಆಳವಾಗಿ ಹರಡಿಕೊಳ್ಳುತ್ತೇನೆ.
ನಾನು ಒಪ್ಪಿಗೆಯಾ ? ನೀನು ಬರುವೆಯಾ ?
( ನನ್ನವಳಿಂದ ತಿರಸ್ಕೃತಗೊಂಡ ಪ್ರೇಮ ಪತ್ರ )
 
 
 

‍ಲೇಖಕರು G

5 October, 2013

1 Comment

  1. chandan

    good start vinay… u have wrote what u have tried to wrote, so much convincing..
    ನಿನ್ನ ಪ್ರತಿಯೊಂದು ನೋಟ, ಮಾತು, ಸ್ಪರ್ಶ ಆ ಸಸಿಗೆ ನೀರೆರೆಯುತ್ತಿದ್ದವು. ನಿನ್ನ ಕೈಯ ಸ್ಪರ್ಶವಂತೂ ನನ್ನ ಕನಸ್ಸನ್ನು ಭೂಮಿಯಾಚೆಗೆ ಕೊಂಡೊಯ್ದಿದೆ.
    ನಿನ್ನ ಮೇಲಿನ ಪ್ರೀತಿಯನ್ನು ಬೆಳೆಸುವ ಕಾಳಜಿಯಲ್ಲಿ ನನ್ನ ಆಸೆಗಳೆಲ್ಲವನ್ನೂ ಹತ್ತಿಕ್ವಿದ್ದೇನೆ. ಅವುಗಳೆಲ್ಲವೂ ಹೊಡೆತ ತಿಂದು ಪೋಷಣೆ ಇಲ್ಲದೆ ಬೋನ್ಸಾಯ್ ಮರವಾಗಿ ಬೆಳೆದಿವೆ i like these lines and the way used metaphor.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading