ಕಲ್ಪನೆ
ಅವಳು ಹೋಗುತ್ತಿದ್ದ ದಾರಿಗೆದುರಾಗಿ ಅವರಿಬ್ಬರೂ ಬಂದರು. ಆ ಇಬ್ಬರೂ ಪುರುಷರು ಏನೋ ಮಾತನಾಡುತ್ತ ಬರುತ್ತಿದ್ದರು. ಹತ್ತಿರವಾದಂತೆ ಅವರು ಮಾತಾಡುತ್ತಿರುವುದು ಇವಳಿಗೆ ಕಿವಿಗೆ ಬೀಳಲಾರಂಭಿಸಿತು. ಎತ್ತರದ ಆ ವ್ಯಕ್ತಿ ಅಂದ,
`ಎಷ್ಟೋ ದಿನ ಆಗಿತ್ತು ಕಣೋ ನಾ ಕುಡೀದೆ… ಸಖತ್ತಾಗಿತ್ತು…’
ಇವಳಂದುಕೊಂಡಳು, `ಓ ನಿನ್ನೆ ರಾತ್ರಿ ಇವ್ನು ಕುಡಿದಿರಬೇಕು, ಅದನ್ನೇ ಹೇಳ್ತಿದ್ದಾನೆ… ಓಹ್, ಅದೇ ಹ್ಯಾಂಗ್ ಓವರ್ನಲ್ಲಿದ್ದಾನೋ ಏನೋ… ಛೇ, ಕುಡಿದ ಜನರೆಂದರೆ ನಂಗಾಗೋದಿಲ್ಲ. ಇಂಥವರ್ರೇ ಎದುರಾಗ್ಬೇಕ.. ಥಥ್.. ಕತ್ತಲು ಬೇರೆ, ಸುತ್ತಮುತ್ತ ಯಾರೂ ಇಲ್ಲ..’ ಶಾಪ ಹಾಕಿದಳು.
ಜತೆಗಿದ್ದವನು ಕೇಳಿದ, `ಏನು ಹೆಲ್ತ್ಗೆ ಒಳ್ಳೇದಲ್ಲ ಅಂತ ಬಿಟ್ಟಿದ್ಯಾ ಏನು?’
ಅವನು ಮುಂದುವರಿಸಿದ, `ಅಲ್ಲ, ಯೂಶುವಲಿ ನಾನು ಕುಡಿಯೋಲ್ಲ..’
`ಓಹ್, ಹಾಗಿದ್ದರೆ ಪಾರ್ಟಿಲಿ ಫ್ರೆಂಡ್ಸ್ ಒತ್ತಾಯಕ್ಕೆ ಕುಡಿದಿರಬೇಕು’ ಇವಳ ಮನಸ್ಸು ಒಗ್ಗರಣೆ ಹಾಕಿತು.
`ಆದ್ರೂ ಅವ್ರು ಒತ್ತಾಯ ಮಾಡಿದ್ರು ಅಂತ ಕುಡ್ದೆ ನೋಡು. ನಮ್ಮನೇಲಂತೂ ಕಾಫಿ ಮಾಡೋದೇ ಇಲ್ಲ’ ಅಂದನವು. ಅವರು ಮಾತಾಡುತ್ತಾ ಮುಂದೆ ಸಾಗಿದರು. ಇವಳೂ ತೆಪ್ಪಗೆ ನಡೆದಳು.
ಕಲಿಕೆ
ಅವನಿಗೆ ಆಫೀಸ್ನಲ್ಲಿ ಸಹೋದ್ಯೋಗಿಯ ಜತೆ ಜಗಳವಾಗಿತ್ತು. ಕೆಲಸದ ವಿಚಾರದಲ್ಲೇ ಭಿನ್ನಾಭಿಪ್ರಾಯ ಬಂದು ಮಾತಿಗೆ ಮಾತು ಬೆಳೆದು ಇಬ್ಬರೂ ಮುನಿಸಿಕೊಂಡಿದ್ದರು. ಇವನು ಮನೆಗೆ ಬರುತ್ತಿದ್ದಂತೆ ಪುಟ್ಟ ಮಗಳು ಹೇಳಿದಳು, ’ಅಪ್ಪಾ, ನಾನು ಇನ್ಮೇಲೆ ಕ್ಲಾಸ್ನಲ್ಲಿ ಧಾತ್ರಿ ಪಕ್ಕ ಕೂರೋದಿಲ್ಲ. ಷಿೇಜು ಪಕ್ಕ ಕೂತ್ಕೋತೀನಿ.’
’ಯಾಕೆ ಮಗಳೇ?’ ಅಂದ.
’ಧಾತ್ರಿಗೂ ನಂಗೂ ಜಗಳ ಆಗುತ್ತೆ’ ಅಂದಳು ಪುಟಾಣಿ.
’ಯಾಕೆ ಜಗಳ ಆಗುತ್ತೆ?’
’ಅವ್ಳು ನೀನು ಮೊನ್ನೆ ಹೇಳ್ಕೊಟ್ಯಲ್ಲ ಆ ಆಟಾನ ಹಾಗಲ್ಲ ಆಡೋದು ಅಂತ ಬೇರೇನೋ ಹೇಳ್ಕೊಡ್ತಿದ್ದಾಳೆ, ಅವ್ಳು ಹೇಳಿದ್ದೇ ಸರಿ ಅಂತೆ’
’ಅದಕ್ಯಾಕೆ ಜಗಳಾಡ್ಬೇಕು? ಯಾವುದು ಸರಿ ಅಂತ ಮ್ಯಾಡಮ್ನ ಕೇಳಿ, ಸುಮ್ನೆ ಜಗಳ ಮಾಡಿ ಟೂ ಯಾಕೆ ಬಿಡ್ಕೋತೀರ?’ ಹುಡುಗಿ ಸುಮ್ಮನಾದಳು.
ಮರುದಿನ ಆತ ಮಗಳನ್ನು ಶಾಲೆಗೆ ಬಿಟ್ಟಾಗ ಮಗಳು ಹೋಗಿ ತನ್ನ ಫ್ರೆಂಡ್ ಧಾತ್ರಿಯ ಪಕ್ಕವೇ ಕುಳಿತದ್ದು ಕಾಣಿಸಿತು. ಇವನೂ ಆಫೀಸಿಗೆ ಬಂದ. ತನ್ನ ಕಂಪ್ಯೂಟರ್ಗೆ ಲಾಗಿನ್ ಆದವನೇ ಮುನಿಸಿಕೊಂಡಿದ್ದ ತನ್ನ ಸಹೋದ್ಯೋಗಿಯ ಪಕ್ಕ ಹೋಗಿ ಭುಜದ ಮೇಲೆ ಕೈ ಹಾಕಿದ. ’ಬಾರೋ, ಟೀ ಕುಡ್ಕೊಂಡು ಬರೋಣ’ ಅಂದ. ಗೆಳೆಯನೂ ಎದ್ದ.







Olle Kathegalu. Ishta aadavu
badukina kchanagala nenapugaluchennagive katheyanthe nirupisiddu kuda thumba istavaythu
ಕಲಿಕೆ ಇಷ್ಟವಾಯಿತು.ಎಲ್ಲರ ಮನಸ್ತಿತಿ ಪರಿವರ್ತನೆ ಆದರೆ ಉತ್ತಮ.
ಪತ್ರಿಕೋದ್ಯಮದ ನಡುವೆ ಹುಟ್ಟುವ ಕತೆಗಳು ಕೊಂಚ ವಿಷಾದದಿಂದ ಕೂಡಿರುತ್ತವೆ. ನಿಮ್ಮ ಕತೆಗಳಲ್ಲಿ ಲವಲವಿಕೆಯಿದೆ. ಮತ್ತಷ್ಟು ಬರೆಯಿರಿ. ಈ ಹಿಂದೆ ಬರೆದವುಗಳನ್ನೂ ಓದಿದ್ದೆ. ಅವೂ ಚೆನ್ನಾಗಿದ್ದವು. ಬರೀತೀರಿ ವಿದ್ಯಾ.
ಬರಹ ಚೆನ್ನಾಗಿದೆ.’ ಕಲಿಕೆ’ ತುಂಬ ಇಷ್ಟ ಆಯಿತು .
laykiddu akka,,
ಇಷ್ಟವಾದವು
GOOD GOOD
houdhu houdhu vidyaa patrikodyamadalli kalhedu hoaga baaradu..baritaa irbeku..
thanks all… @ Jogi, vasudeva nadig – khandita sir
Simple and good