ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಹೊಸ ಕವಿತೆ- ನನ್ನ ದೇವಿ!

ವಿಜಯಶ್ರೀ ಎಂ.ಹಾಲಾಡಿ

**

ಕಲ್ಲು ಬಂಡೆಗಳ

ಪ್ರವಾಹವೇ ಧುಮ್ಮಿಕ್ಕಿದರೂ

ಸಮುದ್ರಗಳು

ಮೊರೆದು ಕುಕ್ಕಿದರೂ

ತಡೆದು ನಿಲ್ಲಬಲ್ಲ

ಗಟ್ಟಿಗಿತ್ತಿ

ಕಾರುಣ್ಯ ಪ್ರೀತಿ

ಮಮತೆ ಬೆರೆಸಿ

ಕಾಪಿಡುತ್ತಾಳೆ

ಬಾಚಿ ಎದೆಗಪ್ಪಿ

ಸಾಂತ್ವನಿಸುತ್ತಾಳೆ

ನೋಯುವಷ್ಟು

ನೊಂದಿದ್ದಾಳೆ

ಹದ್ದು ಮೀರಿದಾಗ

ಚಚ್ಚಿ ಎಸೆದಿದ್ದಾಳೆ

ಹುಟ್ಟಡಗಿಸಿ

ಅಟ್ಟಹಾಸಗೈದಿದ್ದಾಳೆ

ಸೂರ್ಯ ಚಂದ್ರ ತಾರೆಗಳ

ತೂಗಿ ಮಲಗಿಸಬಲ್ಲಳು

ಬಿರುಗಾಳಿಯ ಗುಡಿಸಿ

ಲೋಕ ಪೊರೆಯಬಲ್ಲಳು

ಇವಳು

ಶಾಂತ ಸುಂದರ ನಿರಾಳ

ರೌದ್ರ ಭಯಾನಕ ಭೀಭತ್ಸ

ಅತ್ತು ಕೊರಗದೆ

ನಕ್ಕು ನಗಿಸಿದವಳು

…..

ನನ್ನ ದೇವಿ!

‍ಲೇಖಕರು avadhi

14 December, 2023

1 Comment

  1. ಶೋಭಾ ಹಿರೇಕೈ ಕಂಡ್ರಾಜಿ.

    ಆಪ್ತ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading