ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಅವರ ಹೊಸ ಕವಿತೆ-ಹೂವಿನ ಬದಲು !

ವಿಜಯಶ್ರೀ ಎಂ.ಹಾಲಾಡಿ

**

ಮಿದು ಹೂಗಳನ್ನು

ಗಿಡದಿಂದ ಬಿಡಿಸಿ

ಪಕಳೆಗಳ ಬೇರ್ಪಡಿಸಿ

ನಡುವಿನ ಕುಸುಮವನ್ನು

ಕಿತ್ತೆಸೆದು

ದಳ ದಳವನ್ನು

ಮಿಕ್ಸಿಯಲಗಿಗೆ ಹಾಕಿ

ಗರ್ರನೆ ತಿರುಗಿಸಿ

ನೀರು ಬೆರೆಸಿ 

ಇನ್ನೊಮ್ಮೆ ಶೋಧಿಸಿ

ಬೇಕೆನಿಸಿದರೆ

ಮಗದೊಮ್ಮೆ 

ಕೈಯಲ್ಲಿ ಕಿವುಚಿ

ಉಳಿದ ರಸ

ಬಸಿದುಕೊಂಡು

ಚರಟ ಬಿಸಾಕಿ,

….

ಬಣ್ಣ ಬಣ್ಣದ ಗ್ಲಾಸಿಗೆ

ಬೆರೆಸಿ ಕುಡಿಯಲು ಕೊಡಿ

ಗಮನಿಸಿ !

ಹೂವಿನ ಬದಲು

ಅಷ್ಟೇ ಕೋಮಲ 

ಮನಸ್ಸಿನ ಹೆಣ್ಣನ್ನು

ಬಳಸಿಯೂ 

‘ಮೇಲಿನ ವಿಧಾನದಲ್ಲಿ’

ರುಚಿಯಾದ

ಜ್ಯೂಸ್ ತಯಾರಿಸಿ

ಸವಿಯಬಹುದು!!

**

‍ಲೇಖಕರು avadhi

17 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading