ಪ೦ಡಿತಾರಾಧ್ಯ ರ ಈ ಬರಹ ಜುಗಾರಿ ಕ್ರಾಸ್ ನಲ್ಲಿ. ನಿಮ್ಮ ಬರಹ/ಅಭಿಪ್ರಾಯಗಳಿಗೆ ಸ್ವಾಗತ.
ವಿಚಾರವಾದದ ಅನುಸಂಧಾನ ಮತ್ತು ನೈಚ್ಯಾನುಸಂಧಾನ
– ಪ೦ಡಿತಾರಾಧ್ಯ
ಪ್ರಿಯರೆ,
ವೈಚಾರಿಕ ಮನೋಭಾವವನ್ನು ಬೆಳೆಸುವ ಬಗ್ಗೆ ಸಂವಿಧಾನದಲ್ಲಿ ಸಂಕಲ್ಪವನ್ನು ಸ್ವೀಕರಿಸಿದ್ದೇವೆ.
ಆದರೆ ನಮ್ಮ ನಿತ್ಯ ಜೀವನದಲ್ಲಿ ಅವೈಚಾರಿಕವಾದ, ಸಂವಿಧಾನಬಾಹಿರ ಅಂಶಗಳು ವಿಜೃಂಭಿಸುತ್ತಿವೆ.
ತಾವು ಸಂವಿಧಾನಾತೀತರು ಎಂದು ಘೋಷಿಸಿಕೊಳ್ಳುವವರನ್ನು ವೈಚಾರಿಕತೆಯ ಮಾತುಗಳನ್ನು
ಆಡುವವರೂ ಆರಾಧಿಸುವ ಸ್ಥಿತಿ ಹೆಚ್ಚುತ್ತಿರುವುದು ಆತಂಕದ ಸಂಗತಿ. ವೈಚಾರಿಕ
ಮನೋಭಾವವನ್ನು ಬೆಳೆಸುವ ಸಂವಿಧಾನಾತ್ಮಕ ಹೊಣೆ ಹೊತ್ತಿರುವ ಸಮೂಹ ಮಾಧ್ಯಮಗಳು ಸಂವಿಧಾನ
ಬಾಹಿರ ಶಕ್ತಿಗಳನ್ನು, ಮೌಢ್ಯವನ್ನು ವೈಭವೀಕರಿಸುತ್ತಿರುವುದು ಮತಧರ್ಮ ನಿರಪೇಕ್ಷ
ಪ್ರಜಾಪ್ರಭುತ್ವದ ಮೂಲತತ್ತ್ವಕ್ಕೆ ವಿರುದ್ಧವಾದುದು.
ಧಾರ್ಮಿಕ ವ್ಯಕ್ತಿಗಳು ತಾವೂ ಪ್ರಗತಿಪರರೆಂದು ಹೇಳಿಕೊಳ್ಳಲು ಮುಂದಾಗುವುದನ್ನು
ಅರ್ಥಮಾಡಿಕೊಳ್ಳಬಹುದು.
ಆದರೆ ಅವರ ವೈಚಾರಿಕತೆ ಎನ್ನುವುದು ಅವರ ಮೂಲಭೂತ ಧಾರ್ಮಿಕ ನಂಬಿಕೆಗೆ
ಅನುಗುಣವಾಗಿರುವಷ್ಟರ ಮಟ್ಟಿಗೆ ಮಾತ್ರ ಎನ್ನುವುದನ್ನು ಮರೆಯುವಂತಿಲ್ಲ. ಆದ್ದರಿಂದ
ಅಂಥವರನ್ನು ಹೊರತುಪಡಿಸಿಯೇ ವಿಚಾರವಾದವನ್ನು ಯುವಕರಲ್ಲಿ ಬೆಳೆಸಬೇಕಾಗಿದೆ.
ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಕೋರುತ್ತೇನೆ.]]>






0 Comments