ಇತ್ತೀಚಿಗೆ ವಿವೇಕ ಶಾನಭಾಗ್ ಅವರ ಘಾಚರ್ ಘೋಚರ್ ಕೃತಿಯ ಇಂಗ್ಲಿಷ್ ಅನುವಾದ ಬಿಡುಗಡೆಯಾಯ್ತು. ಅತಿಥಿಯಾಗಿದ್ದ ಗಿರೀಶ್ ಕಾರ್ನಾಡರು ನಗರ ಬದುಕು ಎನ್ನುವುದು ಏಕೆ ಕನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಕಳವಳಪಟ್ಟರು.
ವಸುಧೇಂದ್ರ ಈ ಹೇಳಿಕೆಯನ್ನು ಪ್ರಶ್ನಿಸಿದ್ದಾರೆ ”ಗಿರೀಶ ಕಾರ್ನಾಡರು ಮತ್ತೊಮ್ಮೆ ‘ಕನ್ನಡ ಸಾಹಿತ್ಯದಲ್ಲಿ ನಗರದ ಬದುಕು ಏಕೆ ಕಾಣಿಸಿಕೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ನನಗೆ ತಿಳಿದ ಮಟ್ಟಿಗೆ ಕಳೆದ ಮೂರು-ನಾಲ್ಕು ವರ್ಷಗಳಲ್ಲಿ ಅವರು ಇದೇ ಕಳವಳವನ್ನು ಐದನೇ ಬಾರಿ ವ್ಯಕ್ತಪಡಿಸಿದ್ದಾರೆ” ಎನ್ನುವ ಮೂಲಕ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕಥನವೆನ್ನುವುದು ನಗರಕ್ಕೆ ಸಂಬಂಧಿಸಿದ್ದೋ ಹಳ್ಳಿಗೆ ಸಂಬಂಧಿಸಿದ್ದೋ ಮಂಗಳ ಗ್ರಹಕ್ಕೆ ಸಂಬಂಧಿಸಿದ್ದೋ ಎನ್ನುವುದು ಸಾಹಿತ್ಯದ ಮೌಲ್ಯದ ದೃಷ್ಟಿಯಿಂದ ಮುಖ್ಯವಲ್ಲವಾದರೂ, ಸುಮ್ಮನೆ ಕುತೂಹಲಕ್ಕೆ ಅವರ ಮಾತನ್ನು ತರ್ಕಕ್ಕೆ ಒಡ್ಡೋಣ.
ಕಳೆದ ಮೂರು ದಶಕದ ಹಿಂದೆ ಈ ಮಾತನ್ನು ಸ್ವಲ್ಪ ಮಟ್ಟಿಗೆ ಒಪ್ಪಬಹುದಾಗಿತ್ತು ಎನ್ನಿಸುತ್ತದೆ. ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ ನಡೆಯುವುದು ಬೆಂಗಳೂರಿನಲ್ಲೇ ಆದರೂ ಆನಂತರ ಬೆಂಗಳೂರು ನಗರವು ಸಾಹಿತ್ಯದಲ್ಲಿ ಮೂಡಿದ್ದು ಸ್ವಲ್ಪ ಕಡಿಮೆಯೇ ಎನ್ನಬಹುದು.
ಮಾಸ್ತಿಯವರು ತಮ್ಮ ಸಣ್ಣ ಕತೆಗಳಲ್ಲಿ ಬೆಂಗಳೂರು ಪರಿಸರವನ್ನು ಕಟ್ಟಿಕೊಟ್ಟರೆ, ಬಳಿಕ ಲಂಕೇಶ್ ಕೆಲವು ಕತೆ-ಕಾದಂಬರಿಗಳಲ್ಲಿ ಈ ನಗರವನ್ನು ಚಿತ್ರಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಲೇಖಕರು ಬೆಂಗಳೂರು ನಗರವನ್ನು ಅದರ ಎಲ್ಲಾ ಆಯಾಮಗಳಲ್ಲಿ ಹಿಡಿದು ಕೊಟ್ಟಿದ್ದಾರೆ.
ಅದರ ಸಂಪೂರ್ಣ ವಿವರ ಇಲ್ಲಿದೆ
ಕಾರ್ನಾಡರು ಏನನ್ನು ಹೇಳಲು ಬಯಸುತ್ತಿದ್ದಾರೆ? ಅವರು ತಮ್ಮ ಈ ಮಾತುಗಳಿಂದ ಕನ್ನಡೇತರರಲ್ಲಿ ತಪ್ಪು ಅಭಿಪ್ರಾಯವನ್ನು ಮೂಡಿಸುತ್ತಿಲ್ಲವೆ? ಎಂದು ವಸುಧೇಂದ್ರ ಕೇಳಿದ ಪ್ರಶ್ನೆಗೆ ಪ್ರತಿಭಾ ನಂದಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ –
ಅವರು ಓದುತ್ತಿಲ್ಲ….. ಇದೇ ಮಾತನ್ನು ಅವರು ಎಲ್ಲಾ ಕಡೆ ಆಡುತ್ತಿದ್ದಾರೆ. ಅದಕ್ಕೇ ನಾನು ಅವರಿಗೆ ನನ್ನ ಕಾಫಿ ಹೌಸ್ ಕವನ ಸಂಕಲನ ಕೊಟ್ಟು ಇದು ಸಾವಿರ ಪರ್ಸೆಂಟ್ ಅರ್ಬನ್ – ನಗರ ಪ್ರಜ್ಞೆ ಅಂತ ಹೇಳಿದ್ದೆ. ಅವರು ಅದನ್ನು ಓದಿಲ್ಲ. ನಿನ್ನೆ ಅಲಿಯಾನ್ಸ್ ನಲ್ಲೂ ಬೇಕಾದಷ್ಟೂ ಜನ ಬರೀತಿದ್ದಾರೆ ಅಂದೆ. ಸಣ್ಣ ಕಥೆ ಬರೀತಿದ್ದಾರೆ ನಾನು ಹೇಳಿದ್ದು ಕಾದಂಬರಿ ಅಂದರು. ಪಕ್ಕದಲ್ಲೇ ಉಮಾ ಇದ್ದರು. ಅವರ ಕಾದಂಬರಿಯನ್ನು ಅವರು ಓದಿಲ್ಲ. ಉಮಾ ಏನು ಹಳ್ಳೀ ಬಗ್ಗೆ ಬರೀತಿದ್ದಾರಾ? ಅಲ್ಲದೇ ನನ್ನ ಮಾಧ್ಯಮ ಕಾವ್ಯ ಮತ್ತು ಕಥೆ. ಅದು ಸಾವಿರ ಪರ್ಸೆಂಟ್ ನಗರ ಪ್ರಜ್ಞೆ.
ನಿಮ್ಮ ಅಭಿಪ್ರಾಯ ಏನು?
ಕಾಮೆಂಟ್ ಮಾಡಿ..


ಅವರು ಓದುತ್ತಿಲ್ಲ….. ಇದೇ ಮಾತನ್ನು ಅವರು ಎಲ್ಲಾ ಕಡೆ ಆಡುತ್ತಿದ್ದಾರೆ. ಅದಕ್ಕೇ ನಾನು ಅವರಿಗೆ ನನ್ನ ಕಾಫಿ ಹೌಸ್ ಕವನ ಸಂಕಲನ ಕೊಟ್ಟು ಇದು ಸಾವಿರ ಪರ್ಸೆಂಟ್ ಅರ್ಬನ್ – ನಗರ ಪ್ರಜ್ಞೆ ಅಂತ ಹೇಳಿದ್ದೆ. ಅವರು ಅದನ್ನು ಓದಿಲ್ಲ. ನಿನ್ನೆ ಅಲಿಯಾನ್ಸ್ ನಲ್ಲೂ ಬೇಕಾದಷ್ಟೂ ಜನ ಬರೀತಿದ್ದಾರೆ ಅಂದೆ. ಸಣ್ಣ ಕಥೆ ಬರೀತಿದ್ದಾರೆ ನಾನು ಹೇಳಿದ್ದು ಕಾದಂಬರಿ ಅಂದರು. ಪಕ್ಕದಲ್ಲೇ ಉಮಾ ಇದ್ದರು. ಅವರ ಕಾದಂಬರಿಯನ್ನು ಅವರು ಓದಿಲ್ಲ. ಉಮಾ ಏನು ಹಳ್ಳೀ ಬಗ್ಗೆ ಬರೀತಿದ್ದಾರಾ? ಅಲ್ಲದೇ ನನ್ನ ಮಾಧ್ಯಮ ಕಾವ್ಯ ಮತ್ತು ಕಥೆ. ಅದು ಸಾವಿರ ಪರ್ಸೆಂಟ್ ನಗರ ಪ್ರಜ್ಞೆ.


‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಹಲವು ಲೇಖಕರು ತಮ್ಮ ವಿವರಣೆಗಳನ್ನು ಲೇಖನ, ಪುಸ್ತಕಗಳ ರೂಪದಲ್ಲಿ ನೀಡಿದ್ದಾರೆ. ಅವನ್ನು ನೋಡಿದಾಗ, ‘ಸದ್ಯ, ಈಗಲಾದರೂ ಇವರಿಗೆ ಅರ್ಥವಾಯಿತಲ್ಲ!’ ಎಂದು ಹಾಸ್ಯ ಮಾಡುವುದು ಹಳೆಯ ನಗೆಹನಿ.
ಯಯಾತಿ, ತೊಗಲಕ್ ಸಂಸ್ಕಾರ ಮೊದಲಾದವು ಬರುತ್ತಿದ್ದಾಗ ಬಿರುಕು ಕೂಡ ಬಂದಿತ್ತು. ಆಗಲೂ ನಗರ ಪ್ರಜ್ಞೆ ಬರೆಯಬೇಕಾದ ವಿಷಯ ಎಂದು ಏಕೆ ಇವರಿಗೆಲ್ಲ ಅನಿಸುತ್ತಿಲ್ಲ ಮಣ್ಣಿನ ವಾಸನೆಯಂತೆ ಪೆಟ್ರೋಲ್ ವಾಸನೆ ಗ್ರಹಿಸಲಾಗದಷ್ಟು ಸಂವೇದನೆಯ ಅಸೂಕ್ಷ್ಮತೆಯೆ ಎಂದು ಆಗ ಅನಿಸುತ್ತಿತ್ತು.
ಆಗ ಸಂಸ್ಕಾರ ಹಳ್ಳಿಯ ಸಂದರ್ಭದಲ್ಲಿ ನಡೆದರೇನು ಅಸ್ತಿತ್ವವಾದಿ ಚಿಂತನೆ ಅಲ್ಲಿರುವುದು ಮುಖ್ಯ ಎಂಬ ವಿವರಣೆಗಳು ಇದ್ದುವು. ಹೊಸ ತಲೆಮಾರಿನ ಬರಹಗಾರರಲ್ಲಿ ನಗರಗಳಲ್ಲಿ ಹುಟ್ಟಿದವರ ಸಂಖ್ಯೆ ಹೆಚ್ಚಿರುವುದರಿಂದ ಸಹಜವಾಗಿಯೇ ನಗರ ಪ್ರಜ್ಞೆ ಸಂವೇದನೆಗಳು ಅವರಲ್ಲಿ ಹೆಚ್ಚಿವೆ.
ವಸುಧೇಂದ್ರ ಮತ್ತು ಪ್ರತಿಭಾ ಮ್ಯಾಡಮ್ ಅವರೆ,
ಕಾರ್ನಾಡರು ಹಾಗೆ ಹೇಳಲು ಕಾರಣ ಬಹುಷಃ ಅವರು ಬಯಸಿದ ಲೇಖಕರು ನಗರ ಜೀವನದ ಬಗ್ಗೆ ಬರೆದಿಲ್ಲ. ಉಳಿದವರು ಬರೆದದ್ದನ್ನು ಅವರು ಓದಿದ್ದಾರೋ ಇಲ್ಲವೋ ಗೊತ್ತಿಲ್ಲ. Of course ಎಲ್ಲರೂ ಎಲ್ಲವನ್ನೂ ಓದುವುದು ಸಾಧ್ಯವಾಗುವುದಿಲ್ಲ. ಆದರೆ ಅದೆಷ್ಟೊ ವರ್ಷಗಳ ಹಿಂದೆಯೇ ಎಸ್. ಎಲ್. ಭೈರಪ್ಪನವರು ತಮ್ಮ ’ತಂತು’ ಕಾದಂಬರಿಯಲ್ಲಿ ನಗರೀಕರಣ ಮತ್ತು ಬದಲಾಗುತ್ತಿರುವ ಮೌಲ್ಯಗಳ ಬಗ್ಗೆ ಸಾಕಷ್ಟು ವಿಸ್ತಾರವಾಗಿಯೇ ಬರೆದಿದ್ದಾರೆ. ಇಂದಿನ ಯುವ ಜನಾಂಗ ಹೇಗಿರಬಹುದೆಂಬುದನ್ನು ಆಗಲೇ ಅವರು ಸರಿಯಾಗಿ ಪ್ರೆಡಿಕ್ಟ ಮಾಡಿದ್ದರು ಅನಿಸುತ್ತೆ, ಅಷ್ಟೇ ಅಲ್ಲ, ಜನಸಾಮಾನ್ಯರೂ ಕೂಡಾ ಹೆಚ್ಚಿನದನ್ನು ಸಾಧಿಸಲು ಹೇಗೆ ನೈತಿಕತೆಯನ್ನು ನಿಧಾನವಾಗಿ ಅತ್ಯಂತ ಸಹಜ ಕ್ರಿಯೆಯಂತೆ ಬಿಡುತ್ತಾ ಹೋಗುತ್ತಾರೆಂದು ನೈಜವಾಗಿ ದಾಖಲಿಸಿದ್ದಾರೆ. ಆದರೆ ಅವರು ಕನ್ನಡದ ಸೊಕಾಲ್ಡ್ ವಿಮರ್ಶಕರ ದೃಷ್ಟಿಗೆ ಯಾವತ್ತೂ ಬೀಳಲಿಲ್ಲ. ಇನ್ನು ಹೊಸ ಲೇಖಕರಲ್ಲಿ ವಸುಧೇಂದ್ರ ಅವರನ್ನೇ ತೆಗೆದುಕೊಳ್ಳಿ, ಸರ್, ನೀವು ಬಳ್ಳಾರಿಯ ಜೀವನದ ಬಗ್ಗೆ ಎಷ್ಟು ಬರೆದಿದ್ದೀರೋ ಅಷ್ಟೇ ಪ್ರಮಾಣದಲ್ಲಿ ಬೆಂಗಳೂರಿನ ಜೀವನದ ಬಗ್ಗೆ, ಅಪಾರ್ಟಮೆಂಟ್ ಸಂಸ್ಕೃತಿಯ ಬಗ್ಗೆ, ಸಾಫ್ಟವೇರ್ ಜಗತ್ತಿನ ಬಗ್ಗೆ, ಅಲ್ಲಿ ಕೆಲಸ ಉಳಿಸಿಕೊಳ್ಳುವ ಒತ್ತಡಗಳ ಬಗ್ಗೆ ಸಹಜ, ಸುಂದರ ಶೈಲಿಯಲ್ಲಿ ಮನಮುಟ್ಟುವ ಕಥೆಗಳನ್ನು, ಪ್ರಬಂಧಗಳನ್ನೂ ಬರೆದಿದ್ದೀರಿ. ನಿಮ್ಮ ’ಕ್ಷಮೆಯಿಲ್ಲದೂರಿನಲಿ’ ಅದಕ್ಕೊಂದು ಒಳ್ಳೆಯ ಉದಾಹರಣೆ. ಬೆಂಗಳೂರಿನ ಅಪಾರ್ಟಮೆಂಟ್ ಸಂಸ್ಕೃತಿಯ ಬಗ್ಗೆ, ಡ್ರೈವರ್ ಬಗ್ಗೆ, ಮನೆಕೆಲಸದವಳ ಬಗ್ಗೆ ನೀವು ಬರೆದ ಪ್ರಬಂಧಗಳೂ ಬೆಂಗಳೂರಿನಂಥ ಊರಿನಲ್ಲೂ ಮಾನವೀಯ ತುಡಿತಗಳಿರುವುದನ್ನೂ ಸಹಜ ಸುಂದರತೆಯಿಂದ ತೆರೆದಿಡುತ್ತವೆ. ಆದರೆ ಕಾರ್ನಾಡರಂಥ ಶ್ರೇಷ್ಠರು ಅವನ್ನೆಲ್ಲ ಓದುವುದಿಲ್ಲವೇನೋ! ಇನ್ನೂ ಎಷ್ಟೋ ಲೇಖಕರು ಪ್ರಸ್ತುತ ಒತ್ತಡಗಳು, ತಲ್ಲಣಗಳ ಬಗ್ಗೆ ಬರೆಯುತ್ತಲೇ ಇರುತ್ತಾರೆ. ಇನ್ನು ಪ್ರತಿಭಾ ಮ್ಯಾಡಮ್ ಅವರ ಅನುದಿನದ ಅಂತರಗಂಗೆ ಮಾತ್ರ ನಾನು ಓದಿದ್ದೇನೆ, ಮತ್ತೆ ಕೆಲವು ಕವನಗಳು. ಹಾಗಾಗಿ ಪ್ರಸ್ತುತ ವಿಷಯದಲ್ಲಿ ಅವರ ಬರಹಗಳು ಹೇಗಿವೆ ಎಂದು ಹೇಳಲಾರೆ. ಅವರ ಕವನಗಳು ಮಾತ್ರ ಸುಂದರವಾಗಿರುತ್ತವಷ್ಟೇ ಅಲ್ಲ, ಬಿಟ್ಟ ಬಾಣ ಸರಿಯಾಗಿ ನೆಟ್ಟಂತಿರುತ್ತದೆ.
ಇನ್ನು ಗುಂಪುಗಾರಿಕೆಯಂತೂ ಕನ್ನಡಕ್ಕೆ ಹೊಸದಲ್ಲವಾದರೂ ನನ್ನಂಥ ಮೂರ್ಖರಿಗೆ ಇತ್ತೀಚೆಗಷ್ಟೇ ತಿಳಿಯುತ್ತಿದೆ. ಮಜಾ ಎಂದರೆ ಇದು ಫೇಸಬುಕ್ಕಿನಲ್ಲಿ ಕೂಡ ಇದೆ. ಬಹಳಷ್ಟು ಕಾಮನ್ ಫ್ರೆಂಡ್ಸ್ ಇರುತ್ತಾರಾದರೂ ಕೆಲವರು ಕೆಲವರ ಬರಹಗಳನ್ನು ಮಾತ್ರ ಓದುತ್ತಾರೆ, ಮತ್ತು ಕಮೆಂಟ್ ಬರೆಯುತ್ತಾರೆ, ಇಲ್ಲವೇ ಲೈಕ್ ಕೊಡುತ್ತಾರೆ. ಇದು ಯಾವ ಮಟ್ಟಕ್ಕಿರುತ್ತದೆಂದರೆ ತಮಗೆ ಬೇಕಾದವರು ಬ್ಲ್ಯಾಂಕ್ ಫೋಟೊ ಕಳಿಸಿ ಇದು ನನ್ನ ಹೊಸ ಪ್ರೊಫೈಲ್ ಫೋಟೊ ಎಂದರೆ ೩೦೦-೪೦೦ ಲೈಕಗಳು ಅನಾಮತ್ತಾಗಿ ಬಂದಿರುತ್ತವೆ. ಅದೇ ಒಳ್ಳೆಯ ಒಂದು ಲೇಖನವನ್ನು ಓದುವ ಸಹನೆ ಬಹಳಷ್ಟು ಮಂದಿಗಿರುವುದಿಲ್ಲ, ಸಾಹಿತ್ಯದಲ್ಲಿ, ಫೇಸಬುಕ್ಕಿನಲ್ಲಿ ಅಷ್ಟಿಷ್ಟು ಹೆಸರು ಮಾಡಿದ್ದರಂತೂ ಮುಗಿದೇ ಹೋಯಿತು, ಅವರು ಫ್ರೆಂಡ್ಸ್ ಮಾಡಿಕೊಳ್ಳುವುದು ಕೇವಲ ಬೇರೆಯವರು ತಮ್ಮ ಸ್ಟೇಟಸ್ ಓದಲಿ ಎಂದು, ಹೊರತು ತಾವು ಇನ್ನೊಬ್ಬರ ಸ್ಟೇಟಸ್ ನೋಡುವ, ಓದುವ ಅವಶ್ಯಕತೆಯೇ ಇಲ್ಲ ಎನ್ನುವ ಭಾವನೆ ಅವರದು. ಇರಲಿ, ಇದನ್ನೇಕೆ ಬರೆದೆನೆಂದರೆ, ಸಾಹಿತ್ಯದಲ್ಲಿ ಈಗ ಸಾಮಾಜಿಕ ತಾಣಗಳು, e magazineಗಳ ಪಾತ್ರವನ್ನು ಕಡೆಗಣಿಸುವಂತಿಲ್ಲ ಅಲ್ಲವೇ? ಅಲ್ಲಿಂದ ಕೂಡ ಅನೇಕ ಬರಹಗಾರರು ಹುಟ್ಟಿ ಬರುತ್ತಿದ್ದಾರೆ, ಮತ್ತು ನನ್ನ ವಾಲು ನನ್ನದು, ನಾನು ಬರೆದದ್ದನ್ನು ಅಲ್ಲಿ ಅಂಟಿಸುತ್ತೇನೆ, ನೀನು ಓದದಿದ್ದರೆ ಬಿಡು ಎಂದು ಸವಾಲು ಹಾಕುತ್ತಿದ್ದಾರೆ.
ಇಂಥ ಬರಹಗಾರರೂ, ಹೊಸಬರೂ ಕೂಡ ಸಂವೇದನಶೀಲರಾಗಿರುವದನ್ನು ಕಾರ್ನಾಡರಂಥ ಹಳೆಯ ತಲೆಮಾರಿನವರು ಅರಗಿಸಿಕೊಳ್ಳಲು ಇನ್ನೂ ಬಹಳ ನೀರು ಕುಡಿಯಬೇಕೇನೋ!
ಸಿನಿಮಾಗಳನ್ನು ಒಂದು ಕೃತಿ ಎಂದು ಪರಿಗಣಿಸಿದರೆ, ಇತ್ತೀಚಿನ Ugly, Massan, Tithli, ಕನ್ನಡದ ಕೆಂಡಸಂಪಿಗೆ (ಒಂದು ಮಟ್ಟಿಗೆ), ಕೃಷ್ಣನ ಮ್ಯಾರೇಜ್ ಸ್ಟೋರಿ ನಗರ ಕೇಂದ್ರೀತ ಕೃತಿಗಳು. ಅದರಲ್ಲೂ Ugly, Massan ಮತ್ತು ಕೃಷ್ಣನ ಮ್ಯಾರೇಜ್ ಸ್ಟೋರಿ ಬಹುತೇಕ ಅಧುನಿಕ ವ್ಯವಸ್ಥೆಯನ್ನು ಅಧಾರವಾಗಿಟ್ಟು ಕೊಂಡು ರಚಿಸಿದಂತಹ ಚಿತ್ರಗಳು.
ಬರವಣಿಗೆಯಲ್ಲಿ ಪ್ರವೇಶ ಮಾಡಿದ್ದು ನಗರವೋ, ಗ್ರಾಮವೋ ಅನ್ನೂದಕಿಂತ ಗಮನಿಸಬೇಕಾದ, ಗಮನಸೆಳೆಯುವ ಅನೇಕ ಸಂಗತಿಗಳಿರುವಾಗ ಇಂಥ ಚರ್ಚೆಗಳು ಬಾಲಿಶ ಎನಿಸುತ್ತವೆ. ಇಷ್ಟಕ್ಕೂ ನಗರ ಪ್ರಜ್ಞೆ ಪ್ರವಾಹೋಪಾದಿಯಲ್ಲಿ ಹರಿದು ಬರುತ್ತಿರುವ ಈ ಸಂದರ್ಭದಲ್ಲಿ ಹಿರಿಯರೆನಿಸಿಕೊಳ್ಳುವ ಲೇಖಕರೊಬ್ಬರು ಹೀಗೆ ಮಾತನಾಡುವುದು ಎಷ್ಟು ಉಚಿತ?
ಶೂದ್ರ ಶ್ರೀನಿವಾಸರ ‘ಕನಸಿಗೊಂದು ಕಣ್ಣು’ ಮತ್ತು ‘ಅಲೆಮಾರಿಯ ಒಂದಷ್ಟು ದಿನಚರಿಯ ಟಿಪ್ಪಣಿ’ಯಲ್ಲಿ ಬೆಂಗಳೂರಿನ ಬದುಕು (ಕಲಾಸಿಪಾಳ್ಯ ದಿಂದ ಹಿಡಿದು ಕೋರಮಂಗಲದ ತನಕ, ಗಾಂಧಿಬಜಾರಿನಿಂದ ಗೋರಿಪಾಳ್ಯದ ತನಕ ……….. ) ಸಮೃದ್ಧವಾಗಿ ಹರಿದು ಬಂದಿದೆ. ಸಾಹಿತ್ಯವೆಂದರೆ ಕೇವಲ ‘ನಾಟಕ ‘, ‘ಕಥೆ’ ‘ಕಾದಂಬರಿ’ಗಳಷ್ಟೇ ಅಲ್ಲ ಅಲ್ಲವೇ?