“ಲೂಸಿಯ” ಸಿನಿಮಾ ನೋಡಿಕೊಂಡು ಟೂ ವೀಲರ್‍ನಲ್ಲಿ ಮನೆಗೆ ಬರುತ್ತಾ ಹಿಂದೆ ತಿರುಗಿ ನೋಡಿದರೆ ನನ್ನ ಶ್ರೀಮತಿ ಹಿಂಬದಿ ಸೀಟಿನಲ್ಲಿ. ನಾನು ಆಕೆಯನ್ನು ಸಿನಿಮಾಗೆ ಕರೆದುಕೊಂಡು ಹೋಗಿರಲಿಲ್ಲ. ಆದ್ರೂ ಹೀಗೆ ಸೀಟಿನಲ್ಲಿರಲು ಹೇಗೆ ಸಾಧ್ಯ? ಇದೇನು ಕನಸೋ-ನನಸೋ…ಆಕೆಯನ್ನು ಕೇಳಿದೆ ಸಿನಿಮಾ ಹೇಗಿತ್ತು ಅಂತ; ಒಂಥರ ಉಪೇಂದ್ರ ಸಿನಿಮಾ ಇದ್ದ ಹಾಗೆ ಇದೆ…ಒಂದು ಸಲ ನೋಡಿದರೆ ಅರ್ಥವಾಗೊಲ್ಲ..ಆದ್ರೂ ಒಂಥರ ಚೆನ್ನಾಗಿದೆ.ಅಂದಳು.

ಮನೆಗೆ ಬಂದು ಬಾಗಿಲು ತೆರೆದರೆ….”ಸಿನಿಮಾ ಹೇಗಿತ್ತು” ಬಿಸಿಬಿಸಿ ಗ್ರೀನ್ ಟೀ ಕೊಡಲಾ” ಎಂದಳು.
ಥತ್…ಇದ್ಯಾಕೋ ಸರಿಹೋಗಲಿಲ್ಲ ಎಂದುಕೊಂಡು, ಇವತ್ತು ಬೆಳಿಗ್ಗೆ ನಾನು ಎಷ್ಟು ಗಂಟೆಗೆ ಪೇಪರ್ ಏಜೆನ್ಸಿ ಕೆಲಸಕ್ಕೆ ಹೋಗಿದ್ದೆ…ಕೇಳಿದೆ.
ಯಾಕ್ರೀ ಈಗ್ಲೇ ಇಷ್ಟು ಮರೆವು…ನಿನ್ನೆ ಹಬ್ಬಕ್ಕಾಗಿ ಇವತ್ತು ಬೆಳಿಗ್ಗೆ ಪೇಪರ್ ಪ್ರಿಂಟ್ ಆಗೋಲ್ಲ ಅದಕ್ಕೆ ರಜ ಅಂತ ಬೆಳಿಗ್ಗೆ ಒಂಬತ್ತು ಗಂಟೆಯವರೆಗೆ ಮಲಗಿದ್ರಲ್ಲ…
ಹೌದಲ್ವ…ಇವತ್ತು ರಜವಿತ್ತಲ್ವ…ತತ್, ನನಗೇನಾಗಿದೆ….
“ರೀ ಸಿನಿಮಾದಲ್ಲಿ ನೀನಾಸಂ ಸತೀಶ್ ತುಂಬಾ ಚೆನ್ನಾಗಿ ಮಾಡಿದ್ದಾನೆ, ಹಾಡುಗಳಂತೂ ತುಂಬಾ ಇಷ್ಟವಾಯ್ತು” ಎಂದಳು.
ಹೌದಾ, ನೀನು ಯಾವಾಗ ನನಗಿಂತ ಮೊದಲೇ ಸಿನಿಮಾ ನೋಡಿದೆ” ಅಯ್ಯೋ ನೀವೇನ್ರಿ ಹೀಗೆ, ನಾನೂ ನಿಮ್ಮ ಜೊತೆ ಸಿನಿಮಾಗೆ ಬಂದಿದ್ದೆನಲ್ಲ…ಐನಾಕ್ಸ್ ಮಂತ್ರಿ ಸ್ಕೇರ್‍ನಲ್ಲಿ ಇವತ್ತು
ಮಧ್ಯಾಹ್ನ ನೋಡಿದೆವಲ್ಲ…ಯಾವ ಲೋಕದಲ್ಲಿ ಇದ್ದೀರಿ…

"ಲೂಸಿಯ" ಸಿನಿಮಾ ನೋಡಿಕೊಂಡು..
ನಿಮಗೆ ಇವೂ ಇಷ್ಟವಾಗಬಹುದು…




ನನ್ ಸ್ಥಿತಿ ಸೇಮ್ ಟು ಸೇಮ್.
ಲೂಸಿಯ ಸಿನಿಮಾ ಬಗ್ಗೆ ನನ್ನ ಪುಟ್ಟ ಅಭಿಪ್ರಾಯವನ್ನು ಇಷ್ಟಪಟ್ಟು ಅವಧಿಯಲ್ಲಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು ಅವಧಿ.
ಶಿವು.ಕೆ