
ವ್ಯಂಗ್ಯ ವಿಮರ್ಶಕ ವಸಂತ್ ಹೊಸಬೆಟ್ಟು ಅವರೊಂದು ಅಪರೂಪದ ಸಾಧನೆ ಮಾಡಿದ್ದಾರೆ. ಕನ್ನಡಪ್ರಭದಲ್ಲಿ ಇವರು ಬರೆದ ವ್ಯಂಗ್ಯಚಿತ್ರ ಅಂಕಣ ‘ವಾರೆ ವಾಹ್…! ಲಿಮ್ಕಾ ರೆಕಾರ್ಡ್ಸ್ ಗೆ ಸೇರಿದೆ.
ವಸಂತ ಹೊಸಬೆಟ್ಟು ಇಂಡಿಯನ್ ಎಕ್ಸ್ಪ್ರೆಸ್ ನ ಮಾರುಕಟ್ಟೆ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾರೆ. ವಸಂತ ಹೆಸರಾಗಿರುವುದು ಮಾತ್ರ ತಮ್ಮ ವ್ಯಂಗ್ಯಚಿತ್ರದಿಂದ. ಮಂಗಳೂರಿನ ಸಾಹಿತಿ ಸೀ ಹೊಸಬೆಟ್ಟು ಅವರ ಪುತ್ರ ವಸಂತ ಬಾಲ್ಯದಿಂದಲೇ ಗೆರೆಗೆ ಮನಸೋತವನು. ಈಗ ವ್ಯಂಗ್ಯ ವಿಮರ್ಶಕ ಕೂಡ. ಕಲಾ ವಿಮರ್ಶಕರೇ ವ್ಯಂಗ್ಯಚಿತ್ರ ವಿಮರ್ಶಕರೂ ಆಗಬೇಕಾದ ಈ ಸಂದರ್ಭದಲ್ಲಿ ವಸಂತ್ ವ್ಯಂಗ್ಯ ಲೋಕ ಮಾತ್ರವನ್ನೇ ತಮ್ಮ ಕ್ಷೇತ್ರವಾಗಿಸಿಕೊಂಡಿದ್ದಾರೆ.
೨೦೦೪ ರಿಂದ ಸತತವಾಗಿ ಇವರು ‘ಕನ್ನಡಪ್ರಭ’ ಕ್ಕೆ ಬರೆದ ವ್ಯಂಗ್ಯಚಿತ್ರ ಅಂಕಣಕ್ಕೆ ಈಗ ಲಿಮ್ಕಾ ಮನ್ನಣೆ. ಕಂಗ್ರಾಟ್ಸ್ ವಸಂತ್.
ಲಿಮ್ಕಾ ದಾಖಲೆ…ವಾರೆ ವಾಹ್ !
ನಿಮಗೆ ಇವೂ ಇಷ್ಟವಾಗಬಹುದು…





ವಸಂತ್ ಹೊಸಬೆಟ್ಟುರವರನ್ನು ನಾನು ಬೇಟಿ ಮಾಡಿದ್ದೇನೆ. ಸಹೃದಯಿ…ನನ್ನನ್ನು ನೋಡಿದ ಕೂಡಲೆ ಸ್ಥಳದಲ್ಲೇ ನನ್ನದೊಂದು ವ್ಯಂಗಚಿತ್ರವನ್ನು ಬರೆದುಕೊಟ್ಟಿದ್ದರು.
ಅವರೊಬ್ಬ ಕ್ರಿಯಾಶೀಲ ಸರಳ ವ್ಯಕ್ತಿ. ಲಿಮ್ಕಾ ದಾಖಲೆಗೆ ಅಭಿನಂದನೆಗಳು.
ಶುಭಾಶಯಗಳು
Congratulations 🙂