ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲವ್ ಯೂ ಅಮೀರ್ ಖಾನ್!

– ದಯಾನ೦ದ್ ಟಿ ಕೆ   ಇವತ್ತಿನ “ಸತ್ಯಮೇವಜಯತೆ”ಯಲ್ಲಿ ಅಮೀರ್ ಖಾನ್ “ಅಂತರ್ಜಾತಿ ಪ್ರೇಮ, ಅಂತರ್ ಧರ್ಮೀಯ ವಿವಾಹಗಳು ಹಾಗೂ ಖಾಪ್ ಪಂಚಾಯ್ತಿಯ ಫತ್ವಾಗಳ” ಮೇಲಿನ ವಿಷಯವನ್ನು ಕೈಗೆತ್ತಿಕೊಂಡಿದ್ದರು. ಜಾತಿಶ್ರೇಷ್ಟತೆಯ ರಕ್ಷಣೆಗಾಗಿ ಪ್ರೇಮಿಗಳನ್ನೇ ಕತ್ತರಿಸಿಹಾಕುವ ಸಾಮಾಜಿಕ ಧಾರ್ಮಿಕ ಮನಸ್ಥಿತಿಯನ್ನು ತಪಾಸಣೆಗೆ ಒಳಪಡಿಸಿದ ಅಮೀರ್ ಖಾನ್ ಖಾಪ್ ಪಂಚಾಯ್ತಿಯ ಸರಪಂಚರನ್ನು ಎದುರಿಗೆ ಕೂರಿಸಿಕೊಂಡು ” ಇಂಡಿಯಾದ ಕಾನೂನಿಗಿಂತ ಖಾಪ್ ಕಾನೂನು ಯಾವ ಲೆಕ್ಕದಲ್ಲೂ ಸಮವಲ್ಲವೆಂದು” ಮುಖದಲ್ಲಿ ನೀರಿಳಿಸಿ ಕಳಿಸಿದ್ದು ಖುಷಿ ಕೊಡ್ತು. ಲವ್ ಯೂ ಅಮೀರ್ ಖಾನ್. ಲವರ್ಸ್ ಜಿಂದಾಬಾದ್ ಕಾರ್ಯಕ್ರಮ ನೋಡಲು ಇಲ್ಲಿ ಕ್ಲಿಕ್ಕಿಸಿ :      ]]>

‍ಲೇಖಕರು G

4 June, 2012

1 Comment

  1. ಸುಮ ಸುಧಾಕಿರಣ್

    ಆಮೀರ್ ಖಾನ್ ಈ ವಾರದ ಸತ್ಯಮೇವ ಜಯತೆ ನಲ್ಲಿ ಪ್ರೇಮ ವಿವಾಹವನ್ನು ವಿರೋಧಿಸುವ ಪೋಷಕರ ಬಗ್ಗೆ ನಡೆಸಿಕೊಟ್ಟ. ಪ್ರೇಮಿಸಿ ಮದುವೆಯಾಗಿದ್ದಕ್ಕಾಗಿ ಪ್ರಾಣ ತೆಗೆದ ಪೋಷಕರ , ಪಂಚಾಯತ್ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ತೋರಿಸಿದ್ದು ಸರಿಯಾಗಿತ್ತು. ಇಂತಹ ಮರ್ಯಾದಹತ್ಯೆಗಳು ನಿಜಕ್ಕೂ ಖಂಡನಾರ್ಹ. ಯಾವುದೇ ಸಭ್ಯ ಸಮಾಜದಲ್ಲಿ ನಡೆಯಬಾರದ್ದು .
    ಒಂದು ಬೇಸರದ ಸಂಗತಿ ಎಂದರೆ ಪ್ರೇಮವಿವಾಹದ ಇನ್ನೊಂದು ಮುಖದ ಬಗ್ಗೆ ಪ್ರಸ್ತಾಪವೇ ಇಲ್ಲದ್ದು.
    ಪ್ರೇಮವಿವಾಹವೆಂಬುದು ಇಬ್ಬರು ಪ್ರಬುದ್ಧ, ಜವಾಬ್ದಾರಯುತ ವ್ಯಕ್ತಿಗಳ ನಡುವೆ ನಡೆದಾಗ ಸುಂದರ . ಆದರೆ ಹದಿನೆಂಟು ಹತ್ತೊಂಬತ್ತರ ವಯಸ್ಸಿನಲ್ಲಿ ಇನ್ನೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಲಾಗದ ಸ್ಥಿತಿಯಲ್ಲಿ , ಕೇವಲ ವಯೋ ಸಹಜ ಆಕರ್ಷಣೆಯನ್ನು ಪ್ರೀತಿ ಎಂದು ತಿಳಿದು ಅದುವರೆಗೆ ಬೆಳೆಸಿದ ತಂದೆ ತಾಯಿಯರನ್ನು ವಿರೋಧಿಸಿ ಮನೆ ಬಿಟ್ಟು ಹೋಗುವವರು ಕೊನೆಗೆ ಬದುಕಿನ ಸಂಘರ್ಷದಲ್ಲಿ ಸೋತು ಸುಣ್ಣವಾಗುವ ಉದಾಹರಣೆಗಳು ಸಾಕಷ್ಟಿವೆ .
    ಆಮೀರ್ ತನ್ನ ಕಾರ್ಯಕ್ರಮದ ಮೂಲಕ ಪೋಷಕರಿಗೆ ಪ್ರೇಮವಿವಾಹನ್ನು ವಿರೋಧಿಸಬೇಡಿ ಎಂದು ತಿಳಿಹೇಳಿದ. ಪ್ರೇಮಿಗಳಿಗೆ ತಂದೆ ತಾಯಿಯ ಆಶೀರ್ವಾದ ಕೂಡ ಮುಖ್ಯ ಅವರ ಅನುಭವದ ಪಡೆಯಿರಿ ಎಂದು ಕೊನೆಯಲ್ಲಿ ಹೇಳಿದನಾದರೂ …ಇನ್ನಷ್ಟು ತಿಳಿ ಹೇಳಬಹುದಿತ್ತು. ಏಕೆಂದರೆ ಆತನ ಮಾತುಗಳಿಗೆ ಬೆಲೆ ಕೊಡುವ ಸಾವಿರಾರು ಯುವಜನರಿದ್ದಾರೆ .
    ನಮ್ಮ ಭಾರತೀಯ ಪದ್ಧತಿಯಲ್ಲಿ ವಿವಾಹವೆನ್ನುವುದು ಕೇವಲ ಇಬ್ಬರು ವ್ಯಕ್ತಿಗಳ ಸಂಗಮವಲ್ಲ . ಅದು ಎರಡು ಸಂಸಾರದ ಸಂಗಮ . ಹೀಗಿರುವಾಗ ಅಂತರಜಾತೀಯ ಅಥವಾ ಅಂತರಧರ್ಮೀಯ ಏನೇ ಆದರೂ ಇಬ್ಬರ ಕುಟುಂಬದ ಒಪ್ಪಿಗೆ ದೊರೆತಾಗಲಷ್ಟೆ ಬಾಳು ನೆಮ್ಮದಿಯಾಗಿರಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading