ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಲಂಕೇಶಪ್ಪ ಅವ್ನ ನೋಡಿ ಕಲಿ’ ಅಂದ್ರಂತೆ ಬೇಂದ್ರೆ ಅಜ್ಜ

ಚಿದಂಬರ ನರೇಂದ್ರ

ಹಿಂದೊಮ್ಮೆ ಧಾರವಾಡದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯಲ್ಲಿ ಒಂದು ಕವಿಗೋಷ್ಟಿ ನಡಯಿತಂತೆ. ನವ್ಯದ ಪ್ರಖರ ಕವಿಗಳಾದ ರಾಮಚಂದ್ರ ಶರ್ಮ ಮತ್ತು ಲಂಕೇಶ್, ಬೇಂದ್ರೆಯವರ ಸಮ್ಮುಖದಲ್ಲಿ ಕವನ ವಾಚನ ಮಾಡ್ತಾರೆ.
ಕವಿಗೋಷ್ಟಿ ಮುಗಿದ ನಂತರ ಬೇಂದ್ರೆಯವರು, ಶರ್ಮ ಮತ್ತು ಲಂಕೇಶ್ ರನ್ನು ಕರೆದು ಹೀಗೆ ಪ್ರತಿಕ್ರಯಿಸುತ್ತಾರೆ. “ನೋಡು ಲಂಕೇಶಪ್ಪ, ಈ ಶರ್ಮ ಎಷ್ಟ್ ಛಂದ ಕವಿತಾ ಓದ್ತಾನ, ಅವ್ನ್ ನೋಡಿ ಒಂದಿಷ್ಟು ಕಲಿ “. ಲಂಕೇಶ್ ರ ಮುಖ ಸಪ್ಪಗಾಯಿತು. ಶರ್ಮರ ಕಣ್ಣಲ್ಲಿ ತುಂಟ ನಗೆ.

ಬೇಂದ್ರೆ ಮುಂದುವರೆದು ಶರ್ಮರಿಗೆ ಹೇಳಿದರಂತೆ, “ನೋಡು ಶರ್ಮ, ಈ ಲಂಕೇಶಾ ಎಷ್ಟ ಛಂದ ಕವಿತಾ ಬರಿತಾನ, ಅವ್ನ ನೋಡಿ ಒಂದಿಷ್ಟು ಕಲಿ” ಈಗ ಖುಶಿಪಡುವ ಸರದಿ ಲಂಕೇಶರದ್ದು.
ಬೇಂದ್ರೆಯವರ ಸುತ್ತ ನೂರಾರು ದಂತ ಕಥೆಗಳಿವೆ. ಈ ಕಥೆ ಎಷ್ಟು ನಿಜವೋ, ಎಷ್ಟು ಸುಳ್ಳೋ ಗೊತ್ತಿಲ್ಲ, ಆದರೂ ಒಂದ್ ಥರ ಮಜವಾಗಿದೆ.

‍ಲೇಖಕರು G

27 June, 2014

3 Comments

  1. vidyashankar

    🙂 Only Bendre can do that

    • Anonymous

      ಬೇಂದ್ರೆ ಮತ್ತು ಅಂಥವರು ಬಹ್ಸಳ ಕಿಲಾಡಿಗಳು. ಅವರ ರೀತಿ ಕೀಆಆಆಅತಲೆ ಮಾಡುವುದೂ ಕಲಿಯ ಬೇಕು!

  2. Prabhakar M. Nimbargi

    Definitely reading a poem is totally different from writing a poem.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading