ರಾಯಭಾಗದಲ್ಲಿ ಕಲಾ ಶಿಬಿರ
ಲೇಖನ ಮತ್ತು ಚಿತ್ರಗಳನ್ನು ಕಳುಹಿಸಿದವರು : ವೀರಣ್ಣ ಮಡಿವಾಳರ್
ಹಿರಿಯ ಕಲಾವಿದರಾದ ಬಾಬುರಾವ್ ನಡೋಣಿ ಮತ್ತು ಆಶಾರಾಣಿ ನಡೋಣಿ ದಂಪತಿಗಳ ನೇತೃತ್ವದಲ್ಲಿ ಕ್ರಿಯಾಚೇತನ ಸಾಂಸ್ಕೃತಿಕ ವೇದಿಕೆ, ರಾಯಬಾಗ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ದಿ.29, 30/06/2012 ರಂದು ಎರಡು ದಿನಗಳ ಕಾಲ ರಾಜ್ಯಮಟ್ಟದ ಚಿತ್ರಕಲಾ ಶಿಬಿರ, ಜಾನಪದ ಸೌರಭ, ಮತ್ತು ಮಕ್ಕಳ ಚಿತ್ರಕಲಾ ಪ್ರದರ್ಶನ ನಡೆಯಿತು. ಶಿಬಿರವನ್ನು ಹಿರಿಯ ಕಲಾವಿದ ಸಿ.ಚಂದ್ರಶೇಖರ ರವರು ಉದ್ಘಾಟಿಸಿದರು. ಶಿಬಿರದಲ್ಲಿ ಕಲಾವಿದರಾದ ತುಮಕೂರಿನ ಪ್ರಭು ಹರಸೂರ,ಧಾರವಾಡದ ದಯಾನಂದ ಕಾಮಕರ, ಹುಬ್ಬಳ್ಳಿಯ ಪ್ರತಾಪ ಬಹುರೂಪಿ ಮತ್ತು ಶರದ ಕಾಂಬಳೆ, ಕಾರವಾರದ ದಿಲೀಪಕುಮಾರ ಕಾಳೆ, ಗದಗಿನ ಕೃಷ್ಣ ಕೆ.ಎಂ, ಸಂಕೇಶ್ವರದ ಎಸ್.ಬಿ.ಕಾಂಬಳೆ, ವಿಜಾಪುರದ ಕು.ಸವಿತಾ ಪಾಟೀಲ, ಹಂಪಿಯ ರವಿ ನಾಯಕ, ರಾಯಬಾಗದ ಕು.ಸುನೀತಾ ಅಸೋದೆ ಭಾಗವಹಿಸಿದ್ದರು. ಜಾನಪದ ಸೌರಭದಲ್ಲಿ ಡಪಕಾನಿ ಕಲಾವಿದೆ ಬೌರವ್ವ ಕಾಂಬಳೆ , ಶ್ರೀಮತಿ ಮಣಜುಳಾ ವಿ.ಎಚ್ ಮುಂತಾದವರು ಭಾಗವಹಿಸಿದ್ದರು. ಮಕ್ಕಳ ಚಿತ್ರಕಲಾ ಪ್ರದರ್ಶನದಲ್ಲಿ ಚೈತನ್ಯ, ಅಖಿಲೇಶ,ಗಾಯತ್ರಿ, ನಿನಾದ, ನಿವೇದಿತಾ, ಹುಝೇಪ, ಶಿವಾನಂದ, ಪಲ್ಲವಿ, ಸಂಸ್ಕೃತಿ ಮುಂತಾದವರು ಭಾಗವಹಿಸಿದ್ದರು.
[gallery order="DESC" columns="4" orderby="ID"]]]>





0 Comments