ನಾಯಿ ಬಗೆಗಿನ ಪ್ರೀತಿಯ ಮಾತು ಬಂದಾಗಲೆಲ್ಲ ಜಪಾನಿನ ‘ಹಚ್ಹಿಕೊ’, ಟೋಕಿಯೋದ ಸಿಬುಯ ರೈಲ್ವೇಸ್ಟೇಷನ್ ನಲ್ಲಿರುವ ಅದರ ಸ್ಮಾರಕವೂ ಇಲ್ಲವೇ ನಮ್ಮ ತೇಜಸ್ವಿ ಅವ್ರ ‘ಕಿವಿ’ ನೆನಪಾಗುತ್ತದೆ.. ಯಾಕಂದ್ರೆ ‘ಕಿವಿ’ಯ ಚುರುಕುತನ, ಶಿಕಾರಿ ಪ್ರೀತಿ, ಆತ್ಮೀಯ ಒಡನಾಟಗಳನ್ನು ತೇಜಸ್ವಿ ಅವರ ಬಹಳಷ್ಟು ಬರಹಗಳಲ್ಲಿ ನಾವು ಕಾಣಬಹುದು.. ಹಾಗೆ ನನಗೆ ಕುವೆಂಪು ಅವರ ಕಾದಂಬರಿ ಪಾತ್ರ ನಾಯಿಗುತ್ತಿಯ ‘ಹುಲಿಯ’ & ಮದ್ದೂರು ಬಳಿಯ ಆತಗೂರಿನ ‘ನಾಯಿಶಾಸನ’ ನೆನಪಾಗುತ್ತೆ.
ಮಲೆಗಳ ಮದುಮಗಳು ಓದಿದವರಿಗೆ ‘ಹುಲಿಯ’ ಗೊತ್ತೇ ಇರುತ್ತದೆ. ಅಲ್ಲಿನ ಇಡಿ ಪಾತ್ರವರ್ಗದಲ್ಲಿ ಹುಲಿಯನಿಗೆ ವಿಶೇಷ ಸ್ಥಾನವಿದೆ. ‘ಹುಲಿಯ’ನ ಬಗ್ಗೆ ಸವಿವರವಾಗಿ ಮತ್ತೊಮ್ಮೆ ಮಾತನಾಡುವುದಿದೆ … ಇವತ್ತು ಹೇಳಬೇಕಿರೋದು ‘ಕಾಳಿ’ಯ ಬಗ್ಗೆ ಮತ್ತು ಅದ್ರ ಬಗ್ಗೆ ಇರೋ ಶಾಸನದ ಕುರಿತು. ಮಂಡ್ಯ ಜಿಲ್ಲೆಯ ಗಂಗ ಮತ್ತು ಹೊಯ್ಸಳ ವಾಸ್ತುಶಿಲ್ಪ ಕುರಿತಾದ ಡಾಕ್ಯುಮೆಂಟರಿ ಮಾಡಲು ಹೊರಟಾಗ ಮೊದಲು ನನ್ನ ಕಣ್ಣಿಗೆ ಬಿದ್ದಿದ್ದೆ ಈ ಶಾಸನ.
ಇದುವರೆಗೂ ನಾವು ದಾನ-ದತ್ತಿ ಶಾಸನಗಳನ್ನು, ವಿಜಯಸ್ತಂಭಗಳನ್ನು , ವೀರಗಲ್ಲು, ಮಾಸ್ತಿ ಕಲ್ಲುಗಳನ್ನು ನೋಡಿದ್ದೆವು.. ಪ್ರೀತಿ ಪಾತ್ರರಿಗೆ ಕಟ್ಟಿಸಿದ ದೊಡ್ಡದೊಡ್ಡ ಮಹಲಿನ ಸಮಾಧಿಗಳನ್ನು ಕಂಡಿದ್ದೆವು. ಪ್ರೀತಿಯ ಸಾಕುನಾಯಿಗಾಗಿ ಶಾಸನ ಬರೆಸಿದವರನ್ನು ಕಂಡಿರಲಿಲ್ಲ.. ಆದ್ರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆತಗೂರಿನಲ್ಲಿ ೯-೧೦ನೇ ಶತಮಾನಕ್ಕೆ ಸೇರಿದ ಅಂತಹದೊಂದು ನಾಯಿ ಶಾಸನವಿದೆ. ಇದು ರಾಷ್ಟ್ರಕೂಟರ ಮೂರನೆ ಕೃಷ್ಣನ ಅತ್ಯಂತ ಅಚ್ಚು ಮೆಚ್ಚಿನ ನಾಯಿ ‘ಕಾಳಿ’ಗೆ ಸಂಬಂಧಿಸಿದ್ದು ಅಲ್ಲದೆ ಮೂರನೆ ಕೃಷ್ಣನ ಚೋಳರ ಮೇಲಿನ ದಿಗ್ವಿಜಯವನ್ನು ಕೂಡ ಕಾವ್ಯ ಶೈಲಿಯ ಕನ್ನಡದಲ್ಲಿ ಕೆತ್ತಲಾಗಿದೆ ಈ ಶಾಸನದಲ್ಲಿ.
ಅದೇನಾಯಿತೆಂದರೆ :
ರಾಷ್ಟ್ರಕೂಟರ ಸಾಮ್ರಾಜ್ಯದ ಕೊನೆಯ ಮಹಾಸಾಮ್ರಾಟ ಮೂರನೆ ಕೃಷ್ಣ ಕ್ರಿ.ಶ. ೯೪೦ ರ ಅವಧಿಯಲ್ಲಿ ಗಂಗವಾಡಿಯ ಗಂಗರಸ ಎರಡನೇ ರಾಚಮಲ್ಲನನ್ನು ಸೋಲಿಸಿ ಕೊಂದು, ಅವನ ತಮ್ಮ ಇಮ್ಮಡಿ ಬೂತುಗನಿಗೆ ಪಟ್ಟಕಟ್ಟಿ ಅವನ ಮಗನಿಗೆ ತನ್ನ ಮಗಳಾದ ಬಿಜ್ಜಲಬ್ಬೆಯನ್ನು ಕೊಟ್ಟು ಸಂಬಂಧ ಮಾಡಿಕೊಳ್ಳುತ್ತಾನೆ.

ಮುಂದೆ ಕ್ರಿ.ಶ. 949 ರಲ್ಲಿ ಮೂರನೆ ಕೃಷ್ಣ ಚೋಳರ ಮೇಲೆ ದಂಡೆತ್ತಿ ಹೋಗಿ ‘ತೊಕ್ಕುಲಂ’ ಯುದ್ಧದಲ್ಲಿ ಇಮ್ಮಡಿ ಬೂತುಗನ ಸಹಾಯದಿಂದ ಚೋಳರಾಜ ಒಂದನೇ ಪರಂತಕನ ಮಗ ರಾಜಾದಿತ್ಯನನ್ನು ಸೋಲಿಸಿ ಕೊಂದು ಕಂಚಿ, ತಂಜಾವೂರು ಪ್ರದೇಶಗಳನು ಗೆದ್ದುಕೊಳ್ಳುತ್ತಾನೆ.. ಯುದ್ದದಲ್ಲಿ ಇಮ್ಮಡಿ ಬೂತುಗನ ದಂಡನಾಯಕ ಮಣಲೇರ ಇಡೀ ಚೋಳ ಸೈನ್ಯವನ್ನು ಗಮನವನ್ನು ಬೇರೆಡೆಗೆ ಹರಿಸಿ ಆನೆಯ ಮೇಲೆ ಕುಳಿತ ರಾಜಾದಿತ್ಯನಿಗೆ ಬಾಣ ಬಿಟ್ಟು ಕೊಲ್ಲಲು ಸಹಾಯ ಮಾಡುತ್ತಾನೆ.. ಇದರಿಂದ ಬಹಳ ಸಂತುಷ್ಟಗೊಂಡ ಸಾಮ್ರಾಟ ಮಣಲೇರನ ಸಾಹಸವನ್ನು ಬಹುವಾಗಿ ಮೆಚ್ಚಿ ಯಾವ ಕೊಡುಗೆ ಬೇಕೆಂದು ಕೇಳಿದಾಗ ಮಣಲೇರ ಹಣ, ಚಿನ್ನ, ಭೂಮಿ, ಪದವಿಗಳನ್ನು ಕೇಳಬಹುದಾದರೂ ಅದೆಲ್ಲವ ಬಿಟ್ಟು ಕೃಷ್ಣನ ಪ್ರೀತಿಯ ನಾಯಿ ‘ಕಾಳಿ’ಯನ್ನು ಕೇಳುತ್ತಾನೆ.. ಈತನ ಶೌರ್ಯ, ಸರಳತೆ, ಸಜ್ಜನಿಕೆಗೆ ಮಾರು ಹೋದ ಕೃಷ್ಣ, ‘ಕಾಳಿ’ಯನ್ನು ಪ್ರೀತಿಯಿಂದಲೇ ಮಣಲೇರನಿಗೆ ಕೊಡುಗೆಯಾಗಿ ಕೊಡುತ್ತಾನೆ.. ಕಾಳಿಯ ಶೌರ್ಯ, ಚತುರತೆ ಎಲ್ಲರಿಗೂ ಗೊತ್ತಿರುವ ವಿಷಯ ಆಗಿತ್ತು. ಹಾಗೆಯೆ ಗೆಲುವಿಗೆ ಕಾರಣನಾದ ಗಂಗವಾಡಿಯ ದೊರೆ ಇಮ್ಮಡಿ ಬೂತುಗನಿಗೆ ಬನವಾಸಿ, ಬೆಳ್ತೋಳ , ಪುರುಗೆರೆ, ಬಾಗೆನಾಡ್ ಮುಂತಾದ ಬಹುದೊಡ್ಡ ಪ್ರದೇಶಗಳ ಉಂಬಳಿ ನೀಡುತ್ತಾನೆ … ರಾಮೇಶ್ವರಂ ನಲ್ಲಿ ವಿಜಯಸ್ತಂಭ ಸ್ಥಾಪಿಸುತ್ತಾನೆ. ಇತ್ತ ಮತ್ತೆ ಮಣಲೇರನಿಗೆ ಆತಗೂರು – ೧೨ ಗ್ರಾಮಗಳು ಇಮ್ಮಡಿ ಬೂತುಗನ ಕಡೆಯಿಂದ ಬಳುವಳಿಯಾಗಿ ಬರುತ್ತವೆ.
ಆಮೇಲೆ:
ಎಲ್ಲವು ಸುಖಸಮವಾಗಿ ಸಾಗುತ್ತ, ಕಾಳಿ & ಮಣಲೇರನ ನಡುವೆ ಪ್ರೀತಿ, ಮಮತೆ ಹೆಚ್ಚಾಗುತ್ತಿರಲು ಸುಮಾರು ಒಂದು ವರುಷ ಕಳೆದಿರಬಹುದು ಆತಗೂರು -೧೨ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಕಾಟ ಜಾಸ್ತಿಯಾಗಿ ಬೆಳೆ -ಬದುಕು ದುಸ್ತರವಾಗಲು ಮಣಲೇರ ತನ್ನ ಪಡೆ ಮತ್ತು ‘ಕಾಳಿ’ಯೊಂದಿಗೆ ಬೇಟೆಗೆ ಹೊರಡುತ್ತಾನೆ.

ಬೇಟೆ ಮುಗಿಸಿ ಬರೂವಾಗ ಕೆಳಲೆನಾಡಿನ ಬೆಳತೂರಿನ ಪಶ್ಚಿಮಕ್ಕೆ ಇರುವ ಕಲ್ಲುಗುಡ್ಡವೊಂದರಲ್ಲಿ ದೊಡ್ಡದಾದ ಕಾಡುಹಂದಿಯೊಂದಕ್ಕೆ ಎದುರಾಗುತ್ತಾರೆ. ಹೊಡೆದಾಟ ವಿಪರೀತಕ್ಕೆ ಹೋಗಿ ಮಣಲೇರ ಕುಸಿದು ಬೀಳಲು ‘ಕಾಳಿ’ ವೀರಾವೇಶದಿಂದ ಕಾದಾಡಿ ಹಂದಿಯನ್ನು ಕೊಲ್ಲುತ್ತದೆ ಹಾಗೆಯೆ ಬಹಳ ಪೆಟ್ಟಾಗಿದ್ದರಿಂದ ಅಲ್ಲಿಯೇ ಅಸುನೀಗುತ್ತದೆ.
ಸಾಮ್ರಾಟನಿಂದ ಪಡೆದುಕೊಂಡ ಪ್ರೀತಿಯ ನಾಯಿಯನ್ನು ಉಳಿಸಿಕೊಳ್ಳಲಾಗದೆ ಮಣಲೇರ ಮಮ್ಮಲ ಮರುಗುತ್ತಾನೆ.. ಕಡೆಗೆ ಆತಗೂರಿನ ಚಲ್ಲಲಿಂಗೇಶ್ವರದ ಪ್ರಾಂಗಣದಲ್ಲಿ ‘ಕಾಳಿ’ಯ ನೆನಪಿನಲ್ಲಿ ಸಮಾಧಿಯನ್ನು ಮಾಡಿ, ವೀರಗಲ್ಲನ್ನು ನೆಡಿಸಿ ಕಾವ್ಯಾತ್ಮಕವಾಗಿ ಶಾಸನ ಬರೆಸುತ್ತಾನೆ.. ಇಡೀ ಭಾರತದಲ್ಲಿಯೇ ಒಂದು ನಾಯಿಗೆ /ಪ್ರಾಣಿಗೆ ಶಾಸನ ಬರೆಸಿದ್ದು ಇದೇ ಮೊದಲು ಇರಬೇಕು.. ಅಷ್ಟಲ್ಲದೇ ಅದಕ್ಕೊಬ್ಬ ಗೊರವನನ್ನು (ಪೂಜಾರಿ) ನೇಮಿಸಿ ಊರಿನ ಹಿರಿಯಕೆರೆಯ ಕೆಳಗೆ ಮತ್ತಿಮರಗಳ ಬಳಿಯ ಕಾಲುವೆಯ ಸಮೀಪದಲ್ಲಿದ್ದ ಎರಡು ಖಂಡುಗ ಬೆಳೆಯುವ ಗದ್ದೆಯನ್ನು ದತ್ತಿಯಾಗಿ ಕೊಡುತ್ತಾನೆ.. ಬಿಟ್ಟ ದತ್ತಿ ಹಾಳಾಗಬಾರದೆಂದು ಶಾಸನದ ಕೊನೆಯಲ್ಲಿ ಈ ವೀರಗಲ್ಲಿಗೆ ಸಮುಚಿತ ಪೂಜೆ ಪುನಸ್ಕಾರಗಳು ಸಲ್ಲುವ ಮೊದಲೇ ಗೊರವ ಊಟ ಮಾಡಬಾರದೆಂದು ಎಚ್ಚರಿಕೆ ಬರೆಸಿದ್ದಾನೆ ..
ಈ ಶಾಸನದಲ್ಲಿ ಹಂದಿ ಮತ್ತು ಕಾಳಿ ಸೆಣೆಸಾಡುವ ಉಬ್ಬು ಶಿಲ್ಪವಿದ್ದು .. ಉಳಿದಂತೆ ಕನ್ನಡ ಕಾವ್ಯದ ಶೈಲಿಯಲ್ಲಿ ಶಾಸನ ಬರೆಯಲಾಗಿದೆ.
ಇವಾಗ :
ಸಧ್ಯಕ್ಕೆ ಈ ಶಾಸನವನ್ನು ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.
ಆತಗೂರಿನ ಚಲ್ಲಲಿಂಗೇಶ್ವರ ದೇವಳ, ಸಮೀಪದ ಅರೆತಿಪ್ಪೂರು ಜೈನ ಬಸದಿಗಳು ಎಲ್ಲವೂ ಅಳಿವಿನ ಅಂಚಿನಲ್ಲಿವೆ. ಮತ್ತೂ ಕೆಲವು ಅಳಿದು ಹೋಗಿವೆ. ಗಂಗರಸರ ಬಹಳಷ್ಟು ನಿರ್ಮಿತಿಗಳು ನಾಶವಾಗಿವೆ.. ಉಳಿದಿರುವಕ್ಕೆ ಸರಿಯಾದ ಸಂರಕ್ಷಣೆಗಳಿಲ್ಲ.
ಶಾಸನಗಳಲ್ಲಿ ಕೇವಲ ಯುದ್ದ , ವಿಸ್ತರಣೆ, ಧರ್ಮ, ಸಂಪತ್ತು, ರಾಜ್ಯ, ರಾಜಕೀಯ ಇವುಗಳಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಅನ್ಯೋನ್ಯ ಭಾವನಾತ್ಮಕ ಸಂಬಂಧವನ್ನು ಚಿತ್ರಿಸಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಹುಡುಕೋರಿಗೆ ಕೆಲವಾದರೂ ದಕ್ಕುತ್ತವೆ ಶಿಥಿಲಸ್ಥಿತಿಯಲ್ಲಾದರು ನಮ್ಮ ಸ್ಥಳೀಯ ಚರಿತ್ರೆಯ ಪುಟಗಳಲ್ಲಿ ಇಂತಹ ಅದೆಷ್ಟೋ ಕಥನಗಳು ಅಡಗಿವೆಯೋ ಯಾರಿಗೆ ಗೊತ್ತು .. ?!

ಅಪರೂಪದ ಮಾಹಿತಿ ಇರುವ ಲೇಖನ. interesting !
ಒಂದು ಹೊಸ ವಿಷಯ ತಿಳಿದಂತಾಯಿತು. ಚೆನ್ನಾಗಿದೆ ರಾಜೇಂದ್ರ ಅವರೆ.
goravanannu poojaariyaagi nemisiddu yaakendu aalochane maadidare – naayiyannu pavitra bhaavadinda kaanuva goravara ondu pangadave ideyantalla( naayigoravaru)?. haagaagi irabahudenisuttade.gorava poojaariyaadaaga naayiya samaadhige shradhe bhaktigalindale nadedukonadaanu emba nambike irabahudu.I bagge yaaroo helidante kaanuvudilla. nanna manassige holeda abhipraayavidu.tilidavaru helidare olleyadu.
10.4.2010ರಂದು ಇದೇ ವಿಷಯವಾಗಿ ಒಂದು ಟಿಪ್ಪಣಿಯನ್ನು ಬರೆದಿದ್ದೆ.
….ಶಾಸನಗಳಲ್ಲಿ ಕೇವಲ ಯುದ್ದ , ವಿಸ್ತರಣೆ, ಧರ್ಮ, ಸಂಪತ್ತು, ರಾಜ್ಯ, ರಾಜಕೀಯ ಇವುಗಳಷ್ಟೇ ಅಲ್ಲದೆ ಮನುಷ್ಯ ಮತ್ತು ಪ್ರಾಣಿ ನಡುವಿನ ಅನ್ಯೋನ್ಯ ಭಾವನಾತ್ಮಕ ಸಂಬಂಧವನ್ನು ಚಿತ್ರಿಸಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. ಹುಡುಕೋರಿಗೆ ಕೆಲವಾದರೂ ದಕ್ಕುತ್ತವೆ ಶಿಥಿಲಸ್ಥಿತಿಯಲ್ಲಾದರು ನಮ್ಮ ಸ್ಥಳೀಯ ಚರಿತ್ರೆಯ ಪುಟಗಳಲ್ಲಿ ಇಂತಹ ಅದೆಷ್ಟೋ ಕಥನಗಳು ಅಡಗಿವೆಯೋ ಯಾರಿಗೆ ಗೊತ್ತು .. ?!… ನಿಮ್ಮ ಮಾತುಗಳಿಗೆ ಪೂರಕವಾಗಿರುವುದರಿಂದ ಅದನ್ನು ಕೆಳಗೆ ನೀಡಿದ್ದೇನೆ.
ನಾಯಿಗೂ ಒಂದು ಸ್ಮಾರಕ!
ಈ ಹಿಂದೆ ಎಲ್ಲೋ, ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ ಒಂದು ನಾಯಿಯ ಸ್ಮಾರಕವೃತ್ತಾಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ.
ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕ ಶಾಸನವೊಂದು ಮಂಡ್ಯಜಿಲ್ಲೆಯ ಆತಕೂರಿನಲ್ಲಿದೆ (ಈಗ ಅದನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ). ಶಾಸನದ ಜೊತೆಯಲ್ಲಿ(ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣ ಮತ್ತು ಚೋಳದೊರೆ ಮೂರನೇ ರಾಜಾದಿತ್ಯನ ನಡುವೆ ತಕ್ಕೋಲ ಎಂಬಲ್ಲಿ ಯುದ್ಧದಲ್ಲಿ ರಾಜಾದಿತ್ಯ ಹತನಾಗುತ್ತಾನೆ. ರಾಜಾದಿತ್ಯನನ್ನು ಕೊಂದವು ಕೃಷ್ಣನ ದಂಡನಾಯಕನಾದ ಗಂಗದೊರೆ ಬೂತುಗ. ಈ ಬೂತುಗನಿಗೆ ನೆರವಾದವನು ಆತನ ಅಂಕಕಾರನಾದ ಮಣೆಲರ ಆತನ ಸಾಹಸವನ್ನು ಮೆಚ್ಚಿದ ಕೃಷ್ಣನು ‘ನಿನಗೆ ಏನು ಬೇಕು ಬೇಡಿಕೋ’ ಎಂದು ಕೇಳುತ್ತಾನೆ. ಆಗ ಮಣೆಲರ ಕೃಷ್ಣನ ಬಳಿಯಿದ್ದ ‘ಕಾಳಿ’ ಎಂಬ ಹೆಣ್ಣುನಾಯಿಯನ್ನು (ಶಿಲ್ಪದಲ್ಲೂ ಹೆಣ್ಣು ನಾಯಿಯನ್ನು ಕೆತ್ತಲಾಗಿದೆ) ಬೇಡಿ ಪಡೆದುಕೊಳ್ಳುತ್ತಾನೆ. (ದತ್ತಿ, ಜಹಗೀರು, ಸೇನಾಪತಿ ಮುಂತಾದವುಗಳನ್ನು ಬೇಡದೆ ಕೇವಲ ನಾಯಿಯನ್ನು ಮಣೆಲರ ಬೇಡಿದನೆಂದರೆ ಆ ನಾಯಿಯ ಸಾಹಸ ಎಂಥದ್ದಿರಬಹುದು!? ಹರಿ ಎಂಬುದು ಮಣೆಲರನ ಕುದುರೆಯ ಹೆಸರು. ಬಹುಶಃ ಮಣೆಲರ ಪ್ರಾಣಿಪ್ರಿಯನಾಗಿದ್ದರಬಹುದು).
ಆ ನಾಯಿಯೊಂದಿಗೆ ತನ್ನ ಸಹಯೋಧರ ಜೊತೆ ಊರಿಗೆ ಮಣೆಲರ ವಾಪಸ್ಸಾಗುತ್ತಿದ್ದಾಗ, ಕೆಳಲೆನಾಡಿನ ಬೆಳತೂರಿನ ಪಶ್ಚಿಮಕ್ಕೆ ಇರುವ ಕಲ್ಲುಗುಡ್ಡವೊಂದರಲ್ಲಿ ಹಂದಿಯೊಂದಕ್ಕೆ ಮುಖಾಮುಖಿಯಾಗುತ್ತಾರೆ. ‘ಕಾಳಿ’ ನಾಐಇಯನ್ನು ಹಂದಿಯ ಮೇಲೆ ಛೂ ಬಿಡುತ್ತಾಋಎ. ಹಂದಿಗೂ ನಾಯಿಘೂ ಭಯಂಕರವಾದ ಹೋರಾಟ ನಡೆಯುತ್ತದೆ. ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ಮಣೆಲರನಿಗೆ ಅತೀವ ದುಃಖವಾಗುತ್ತದೆ. ನಾಯಿಯ ಶವವನ್ನು ತನ್ನ ಊರಾದ ಆತಕೂರಿಗೆ ತಂದು ಚಲ್ಲೇಶ್ವರ ದೇವಾಲಯದ ಎದುರಿಗೆ ಸಂಸ್ಕಾರ ಮಾಡುತ್ತಾನೆ. ನಂತರ ಅದಕ್ಕೆ (ಹಂದಿ ನಾಯಿ ಹೋರಾಡುತ್ತಿರುವ ಹಾಗೂ ವಿವರಗಳನ್ನುಳ್ಳ) ಸ್ಮಾರಕಶಿಲೆಯನ್ನು ಮಾಡಿಸಿ ನೆಡೆಸುತ್ತಾನೆ. ಊರಿನ ಹಿರಿಯಕೆರೆಯ ಕೆಳಗೆ ಮತ್ತಿಮರಗಳ ಬಳಿಯ ಕಾಲುವೆಯ ಸಮೀಪದಲ್ಲಿದ್ದ ಎರಡು ಖಂಡುಗ ಬೆಳೆಯುವ ಗದ್ದೆಯನ್ನು ದತ್ತಿಯಾಗಿ ಬಿಟ್ಟು ಕಾಳಿ ಸಮಾಧಿಯ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ.
ನಾಯಿಗಾಗಿ ಬಿಟ್ಟ ದತ್ತಿಯನ್ನು ಯಾರಾದರೂ ಹಾಳು ಮಾಡುತ್ತಾರೆ ಎಂಬ ಭಯದಿಂದ ಉಗ್ರವಾದ ಶಾಪಾಶಯವನ್ನು (ಶಾಸನದ ಕೊನೆಯಲ್ಲಿ ಶಾಪಾಶಯವಿರುವುದು ರೂಢಿ) ‘ದತ್ತಿಯನ್ನು ಹಾಳು ಮಾಡಿದವನು ನಾಯಿಯನ್ನು ಸಂಭೋಗಿಸಿದ ಪಾಪಕ್ಕೆ ಗುರಿಯಾಗುತ್ತಾನೆ’ ಎಂದೂ ಬರೆಸಿದ್ದಾನೆ.
ಇತಿಹಾಸದಲ್ಲಿ ದಾಖಲಾಗಿರುವ ಇಂತಹ ಹಲವಾರು ವಿಷಯಗಳನ್ನು ತಿಳಿಯಬಯಸುವವರಿಗೆ ಈ ಕೆಳಗಿನ ಪುಸ್ತಕ ಒಂದು ಕೈದೀವಿಗೆ.
ಪುಸ್ತಕ: ಶಾಸನ ಸರಸ್ವತಿ
ಲೇಖಕರು: ಡಾ.ಕೈದಾಳ ರಾಮಸ್ವಾಮಿ ಗಣೇಶ, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಆಚಾರ್ಯ ಪಾಠಶಾಲಾ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು
ಪ್ರಕಾಶಕರು: ಕರ್ನಾಟಕ ಇತಿಹಾಸ ಸಂಶೋಧನ ಮಂಡಲ, ಧಾರವಾಡ, ೨೦೦೭-೨೦೦೮
ಪುಟಗಳು: ೧೯೦
ಬೆಲೆ: ರೂಪಾಯಿ ಎಪ್ಪತ್ತೈದು ಮಾತ್ರ
interesting RP….
Interesting 🙂
yes..it is so interesting…ಹೀಗೊಂದು ಇದೆ ಅಂಥಾನೇ ಗೊತ್ತಿರಲಿಲ್ಲ…ತುಂಬ ಸವಿವರವಾಗಿ ತಿಳಿಸಿದ್ದೀರಿ ಥ್ಯಾಂಕ್ಯೂ 🙂
dakshina kannada jilleya Moodabidreyalli ‘nayiya basadiyondide”, E nayigoo Chouta arasara kalada ondu rochaka itihasavide mtftu shilashasanavide endu keliddene. E basadiyannu nanu hattiradinda innoo nodilla.
ಇನ್ನೊಂದು ಟಿಪ್ಪಣಿ:
ಒಮ್ಮೆ ಕುವೆಂಪು ಅವರು ಗುಂಪಿನೊಂದಿಗೆ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ, ಅವರಿಗೆ ಅಚ್ಚುಮೆಚ್ಚಾಗಿದ್ದ ’ಕೇಸರಿ’ ಜೂಲುನಾಯಿ, ಒಂಟಿಗ ಹಂದಿಯೊಂದನ್ನು ತಡೆದು ಹೋರಾಡಿ, ಅದರ ಕೋರೆಗೆ ತುತ್ತಾಗುತ್ತದೆ. ಹೊಟ್ಟೆಯಿಂದ ಹೊರಕ್ಕೆ ಬಂದಿದ್ದ ಕರುಳಿನ ಭಾಗ, ನಾಯಿ ಬಿದ್ದು ಹೊರಳಾಡಿದಾಗ ಮಣ್ಣು ಕಸ ಕಡ್ಡಿಗಳಿಂದ ಆವೃತ್ತವಾಗುತ್ತದೆ. ಅದರ ಯಮಯಾತನೆಯನ್ನು ನೋಡಿ, ಅದು ಬದುಕುವುದಿಲ್ಲವೆಂದು ತಿರ್ಮಾನಿಸಿ ಅದರ ತಲೆಗೆ ಗುಂಡು ಹೊಡೆದು ಕೊಲ್ಲಲು ಕವಿಯೇ ಸೂಚನೆ ನೀಡುತ್ತಾರೆ. ಆದರೆ ಗುಂಡು ಹೊಡೆಯುವ ಎದೆಗಾರಿಕೆ ಅಲ್ಲಿ ಯಾರಿಗೂ ಇಲ್ಲ. ಕೇಸರಿಗೆ ಆ ಸ್ಥಿತಿಯನ್ನು ತಂದಿದ್ದ ಹಂದಿಯನ್ನು ಕೊಂದು ಅಂದಿನ ’ಹೀರೊ’ ಅಗಿದ್ದ ಈಡುಗಾರ ಮರಾಠಿ ’ಯಲ್ಲು’ ಎಂಬಾತ ಅದಕ್ಕೆ ಶುಶ್ರೂಷೆ ಮಾಡಲು ತೊಡಗುತ್ತಾನೆ. ಹೊರಬಂದಿದ್ದ ಕರುಳನ್ನು, ತಕ್ಕಮಟ್ಟಿಗೆ ಕೈಯಿಂದ ಸ್ವಚ್ಛಗೊಳಿಸಿ, ಹೊಟ್ಟೆಯೊಳಗೆ ತಳ್ಳಿ, ಸೂಜಿದಾರದಿಂದ ಹೇಗೆ ಹೇಗೋ ಒಲಿದುಬಿಡುತ್ತಾನೆ, ಮೂಟೆ ಹೊಲಿಯುವಂತೆ! ಅಷ್ಟೂ ಹೊತ್ತು ಕೇಸರಿ ಪಿಳುಪಿಳನೆ ಕಣ್ಣು ಬಿಟ್ಟುಕೊಂಡು ಉಳಿದವರ ಕಡೆ ದೈನ್ಯದೃಷ್ಟಿ ಬೀರುತ್ತಿತ್ತು. ಹಳ್ಳದಿಂದ ನೀರು ತಂದು ಕುಡಿಸಿದ ನಂತರ ಕಂಬಳಿಯೊಂದನ್ನು ಡೋಲಿಯ ರೀತಿಯಲ್ಲಿ ಮಾಡಿಕೊಂಡು ಮನೆಗೆ ಹೊತ್ತು ತರುತ್ತಾರೆ. ರಾತ್ರಿ ತುಂಬಾ ಹೊತ್ತು ನೋವಿನಿಂದ ಅಳುತ್ತಿದ್ದ ಕೇಸರಿ, ಬೆಳಗಿನ ಜಾವ ನೋಡಿದಾಗ ಸಂಪೂರ್ಣ ನಿಃಶಬ್ದವಾಗಿತ್ತು, ಪ್ರಾಣ ಹೋಗಿ! ಕೇಸರಿಗೆ ವೀರೋಚಿತವಾದ ಸಂಸ್ಕಾರ ಸಲ್ಲುತ್ತದೆ. (ಏನೋ ಕಾರಣದಿಂದ, ಹೀಗೆಯೆ ಹೊಟ್ಟೆಯ ಭಾಗದಲ್ಲಿ ಸ್ವಲ್ಪಮಾತ್ರ ಹೊರಬಂದಿದ್ದ ಕರುಳನ್ನು ಒಳಗೆ ತಳ್ಳಿ ನಮ್ಮ ಮನೆಯ ನಾಯಿಯೊಂದಕ್ಕೆ ನಮ್ಮ ತಂದೆಯವರೂ ಹೊಲಿಗೆ ಹಾಕಿದ್ದನ್ನು ನಾನು ನೋಡಿದ್ದೇನೆ. ಆಶ್ಚರ್ಯವೆಂದರೆ ಆ ನಾಯಿ ವರ್ಷಗಳ ಕಾಲ ಬದುಕಿತ್ತು).
ಕೇಸರಿಯ ಹೋರಾಟ, ಅದರ ಕೆಚ್ಚು ಮೊದಲಾದವನ್ನು ಕಂಡ ಬೇಟೆಗಾರ ಪುಟ್ಟಪ್ಪ; ಕವಿ ಕುವೆಂಪು ಆಗಿ ಕೇಸರಿಗೆ ಚರಮಗೀತೆ ಹಾಡುತ್ತಾರೆ. ಈ ಚರಮಗೀತೆ ಅಪ್ರಕಟಿತವಾಗಿದ್ದು, ಶೀರ್ಷಿಕೆಯೂ ಇರುವುದಿಲ್ಲ. ಆದರೆ, ’ಬೇಟೆಯಲ್ಲಿ ಕಾಡುಹಂದಿಯೊಡನೆ ಹೋರಾಡಿ ಮಡಿದ ಮುದ್ದು ನಾಯಿ ’ಕೇಸರಿ’ಯ ನೆನಪಿಗಾಗಿ ಬರೆದುದು’ ಎಂಬ ಟಿಪ್ಪಣಿಯನ್ನೊಳಗೊಂಡಿದೆ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ,
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ನಿನ್ನ ಬಾಳಿನ ಪಯಣ ಪೂರೈಸಿತಿಂದು
ಇನ್ನು ವಿಶ್ರಾಂತಿಯೈ ಮುಂದೆ ನಿನಗೆಂದೂ!
ನಿನ್ನ ಗೋರಿಯ ತೋರಲಾವ ಗುರುತಿಲ್ಲ;
ನಿನ್ನ ಕೀರ್ತಿಯ ಸಾರೆ ಬಡ ಚೈತ್ಯವಿಲ್ಲ.
ಆದರೇನಾ ಪೂತ ಪೊದೆ ಸಹಜ ಚೈತ್ಯ;
ನಿನ್ನ ಕೀರ್ತಿಯ ಕಲ್ಲೆ ಶಾಶ್ವತವು ನಿತ್ಯ.
ತಿಳಿನೀಲ ಬಾಂದಳವು ಮೆರೆಯುವುದು ಮೇಲೆ;
ಮುಗಿಲು ಕೊಡೆ ಹಿಡಿಯುವುದು, ಮೋಡಗಳು ತೇಲೆ.
ಇನಿದನಿಯ ಬೀರುವುದು ಲಾವುಗೆಯು ಇಲ್ಲಿ;
ಚೀರುಲಿಯ ಕೋಗಿಲೆಯು ವನದಳಿರಿನಲ್ಲಿ.
ಪೂತ ಪೊದೆಯನ್ನೇ ನಿತ್ಯಸ್ಮಾರಕವಾಗಿಸಿ, ಕೊಡೆ ಹಿಡಿದ ಮುಗಿಲು, ಚೀರುಲಿಯ ಕೋಗಿಲೆ ಮೊದಲಾದವನ್ನು ಜೊತೆಗಿರಿಸಿ ಕೇಸರಿಗೆ ವಿದಾಯ ಹೇಳುತ್ತಾರೆ. ಕೊಳಲೂದುವ ಗೋಪಾಲಕರು ಮುಂದೆ ಕೇಸರಿಯ ಸಾಹಸವನ್ನು ಕಥೆಯಾಗಿಸಿ ಹೇಳುತ್ತಾರೆ, ಕೇಳುತ್ತಾರೆ ಎಂಬ ಆಶೆಯೂ ಕವಿಗಿದೆ.
ಬೇಸರಾಗದು ನಿನಗೆ: ಗೋಪಾಲರಿಲ್ಲಿ
ಕೊಳಲೂದಿ ನಲಿಯುವರು ಬಯಲ ಹಸುರಲ್ಲಿ.
ವರುಷಗಳ ಮೇಲವರು ನಿನ್ನ ಕತೆ ಹೇಳಿ
ನಿಟ್ಟುಸಿರು ಬಿಡುವರೈ ಕಿವಿಗೊಟ್ಟು ಕೇಳಿ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಯುವೀ ನೆಲದಾಳದಲ್ಲಿ!
ಯುದ್ಧದಲ್ಲಿ ಹೋರಾಡಿ ಮಡಿದ ವೀರನನ್ನು ಅಪ್ಸರೆಯರು ಬಂದು ಸ್ವರ್ಗಕ್ಕೇ ಕರೆದೊಯ್ಯುತ್ತಾರೆ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ವೀರಗಲ್ಲುಗಳನ್ನು ಅದೇ ರೀತಿ ಚಿತ್ರಿಸಿರುತ್ತಾರೆ. ಇಲ್ಲಿ ಕವಿಯು ಆ ಹಿನ್ನೆಲೆಯಲ್ಲಿ
ಘೋರ ಸೂಕರದೊಡನೆ ಮಡಿದೆ ಕಾದಾಡಿ;
ನಾಕದೊಳು ನಲಿವೆ ನೀ ವೀರರೊಡಗೂಡಿ
ಸುಖದಿಂದ ನಿದ್ರಿಸೈ ಗಲಭೆ ಇಲ್ಲಿಲ್ಲ;
ಇಲ್ಲಿ ಹೊಗಳುವವರಿಲ್ಲ, ನಿಂದಿಸುವವರಿಲ್ಲ.
ಮೇಲಾಟ ಹೋರಾಟವೆಂಬುವಿಲ್ಲಿಲ್ಲ,
ಸಿರಿಸುತರು ಬಡವರೆಂಬುವ ಭೇದವಿಲ್ಲ.
ಎಲೆ ವೀರಕೇಸರಿಯೆ, ಮಲಗು ಮಲಗಿಲ್ಲಿ
ಹಸುರಿಂದ ನಲಿಯುವೀ ನೆಲದಾಳದಲ್ಲಿ!
ಎಂದು ಹಾಡುತ್ತಾರೆ. ಘೋರ ಸೂಕರದೊಡನೆ ಮಡಿದೆ ಕಾದಾಡಿ ಎಂಬ ಸಾಲು ಹಂದಿಯೂ ಸತ್ತಿತು ಎಂಬುದನ್ನು ಸೂಚಿಸುತ್ತದೆ. ಸಾವಿನಲ್ಲಿ ಎಲ್ಲರೂ – ಮನುಷ್ಯ ಪ್ರಾಣಿ ಪಕ್ಷಿ ಗಿಡ ಮರಗಳೆಲ್ಲವೂ ಸಮಾನರು; ಅದಕ್ಕೆ ಬಡವ ಬಲ್ಲಿದ ಎಂಬ ಬೇದವಿಲ್ಲ! ಮುಂದುವರೆದು, ಅದರ ಮರ್ತ್ಯದ ಸಾಹಸದ ಹಿನ್ನೆಲೆಯನ್ನು ತಿಳಿಸುತ್ತಲೇ, ಈಗ ಅವಾವೂ ಸಾಧ್ಯವಿಲ್ಲ ಎನ್ನುತ್ತಾರೆ.
ಮುಂದೆ ನೀ ಜಿಂಕೆಗಳನೋಡಿಸುವುದಿಲ್ಲ;
ನೀನಿನ್ನು ಹುಲಿಗಳನು ಅಟ್ಟುವುದು ಇಲ್ಲ.
ನಿನ್ನ ಕೂಗಿಗೆ ಕಾಡು ಗಿರಿ ಗುಹೆಗಳೆಲ್ಲ
ಇನ್ನೆಂದು ಮಾರ್ದನಿಯ ಬೀರುವುದೆ ಇಲ್ಲ.
ಬೇಟೆಗಾರರ ಕೂಗ ನೀ ಕೇಳಲಾರೆ;
ಸಿಡಿದ ಗುಂಡಿನ ಸದ್ದನಾಲಿಸಲು ಆರೆ,
ನಿತ್ಯ ಮೌನತೆ ನಿನ್ನ ನುಂಗಿರುವುದೀಗ;
ನಿನ್ನ ಗಂಟಲಿಗಾಯ್ತು ಮಿರ್ತುವಿನ ಬೀಗ.
ಹೋಗುವೆವು ನಾವೆಲ್ಲ ಮನೆಗೆ; ಮಲಗಿಲ್ಲ
ಹೊಸ ಹಸುರಿನಿಂದೆಸೆಯುವೀ ಪಸಲೆಯಲ್ಲಿ!
ಆದರೆ, ನೀನು ಹಿಂದೆಯೂ ಇದ್ದೆ, ಮುಂದೆಯೂ ಇರುತ್ತೀಯ ಬೇರೆ ಬೇರೆ ರೂಪದಲ್ಲಿ. ನಿನಗೆ ಸನ್ಮಾನವೂ ಉಂಟು; ಗೌರವವೂ ಉಂಟು ಎಂದು ಹೇಳುತ್ತಾ ಕೇಸರಿಯಾತ್ಮಕ್ಕೆ ಮಂಗಳವೆನ್ನುತ್ತಾ ಕವಿತೆ ಮುಕ್ತಾಯವಾಗುತ್ತದೆ.
ಇಲ್ಲ; ನೀನಿಲ್ಲಿಲ್ಲ, ನಿತ್ಯ ಸಂಚಾರಿ!
ನಲಿಯುತಿಹೆ ಯಾರು ಕಾಣದ ಊರ ಸೇರಿ.
ಪೂರ್ವ ಜನ್ಮದೊಳಾವ ವೀರನೋ ನೀನು?
ಕರ್ಮದಿಂದೀ ಜನ್ಮವೆತ್ತಿದೆಯೊ ಏನು?
ಯಾರು ಬಲ್ಲರು ಎಲ್ಲಿ ಜನಿಸಿಹೆಯೊ ಈಗ?
ಮುದ್ದು ಕೇಸರಿಯೆ, ನೀ ಎಲ್ಲಿದ್ದರೇನು?
ಯಾವ ಲೋಕವ ಸೇರಿ ಎಂತಿದ್ದರೇನು?
ಗುಂಡುಗಳು ಹಾರುವುವು ಸನ್ಮಾನಕಾಗಿ!
ಜಯವೆನ್ನುವೆವು ನಿನ್ನ ಗೌರವಕೆ ಕೂಗಿ!
ಶಾಂತಿ ಸುಖಗಳು ಬರಲಿ, ವೀರಾತ್ಮ, ನಿನಗೆ!
ಮಂಗಳವೊ ಮಂಗಳವು, ಕೇಸರಿಯೆ, ನಿನಗೆ!
Hosadondu vichaara. Hosa baravanige. Khushi aaytu
@ಸತ್ಯನಾರಾಯಣ ಸರ್ : ನಿಮ್ಮಲ್ಲಿ ಈ ಶಾಸನದ ಪಾಠವಿದೆಯೇನು ? ಎಪಿಗ್ರಪಿಯ ಆಫ್ ಕರ್ನಾಟಕದಲ್ಲಿ ನಾನು ಹುಡುಕಲು ಸಾಧ್ಯವಾಗಲಿಲ್ಲ.. ಗ್ಯಾಸಟಿಯರ್ ಹಾಗೂ ನನ್ನಲಿರುವ ಮಂಡ್ಯ ಕುರಿತ ಕೆಲವು ಪುಸ್ತಕಗಳಲ್ಲಿ ಸ್ವಲ್ಪ ಬೇರೆ ಬೇರೆ ತರದ ವಿವರಣೆಗಳಿವೆ… ಉದಾ: ಶಾಸನದಲ್ಲಿ ಉಲ್ಲಿಖಿತ ಶಾಪ/ಎಚ್ಚರಿಕೆ ಕುರಿತು..
ಶಾಸನದ ಸಂಪೂರ್ಣ ಪಾಠ ನನ್ನ ಬಳಿಯಿದೆ. ಸಧ್ಯಕ್ಕೆ ಮಂಡ್ಯ ಶಾಸನ ಸಂಪುಟಗಳು ನನ್ನ ಸ್ನೇಹಿತರ ಬಳಿ ಸೇರಿಕೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಶಾಸನ ಪ್ರವೇಶ ಮತ್ತು ಪ್ರೌಢ ತರಗತಿಗಳಿಗೆ ಪಠ್ಯವಾಗಿ ಇದ್ದ ಪುಸ್ತಕದಲ್ಲೂ ಈ ಶಾಸನವನ್ನು ಅಧ್ಯಯನಕ್ಕೆ ಒದಗಿಸಿದ್ದರು. ವಿಶೇಷ ಶಾಪಾಷಯಗಳ ಬಗ್ಗೆ ಚರ್ಚೆ ಮಾಡುವಾಗೆಲ್ಲಾ ಈ ಶಾಸನವನ್ನು ಉಲ್ಲೇಖಿಸುತ್ತಾರೆ.
ಪಾಠವನ್ನು ಸ್ನೇಹಿತರೊಬ್ಬರು ತಮ್ಮ ಬ್ಲಾಗಿನಲ್ಲಿ ಸೇರಿಸಿದ್ದಾರೆ. (ಸ್ಖಾಲಿತ್ಯಗಳಿವೆ) http://www.nammakannadanaadu.com/history/inscriptions.php ಈ ಲಿಂಕಿನಲ್ಲಿ ನೋಡಿ.
ಶಾಪಾಶಯದ ಸಾಲು ಹೀಗಿದೆ: ಈ ಮಣ್ಣನ್ ಅಳದೊನ್ ಆ ನಾಯ ಗೆಯ್ದ ಪಾಪಮ[ಂ] ಕೊಂಡನ್
ಶಾಸನದ ಪೂರ್ಣ ಪಾಠ ಸಿಕ್ಕಿತು. ಅದರ ಶಾಪಾಶಯದ ಪೂರ್ಣಪಾಠ ಹೀಗಿದೆ.
ಮಣ್ನನ ಒಕ್ಕಲ್ (ಮಣಲೆರನ ಒಕ್ಕಲು) ನಾಡನಾಳ್ವರ್ (ನಾಡನ್ನು ಆಳುತ್ತಿರುವವರು, ಮುಂದೆ ಆಳುವವರು)ಈ ಮಣ್ನನ್ ಅಳಿದೊನ್ ಆ ನಾಯಗೆಯ್ದ ಪಾಪಮಂ ಕೊಣ್ನೊನ್ ಆ ಸ್ಥಾನಮನ್ ಆಳ್ವ ಗೊರವನ್ ಆ ಕಲ್ಲಂ ಪೂಜಿಸದೆ ಉಣ್ಡರೊಪ್ಪಡೆ (ನಾಯಿಯ ವೀರಗಲ್ಲನ್ನು ಪೂಜಿಸದೆ ಊಟ ಮಾಡಿದೊಡೆ) ನಾಯಗೆಯ್ದ ಪಾಪಮಂ ಕೊಣ್ಡಂ
ಇನ್ನು ನಿಮ್ಮ ಬರಹದಲ್ಲಿ ಉಲ್ಲೇಖಿಸಿರುವ ..ಎಲ್ಲವು ಸುಖಸಮವಾಗಿ ಸಾಗುತ್ತ, ಕಾಳಿ & ಮಣಲೇರನ ನಡುವೆ ಪ್ರೀತಿ, ಮಮತೆ ಹೆಚ್ಚಾಗುತ್ತಿರಲು ಸುಮಾರು ಒಂದು ವರುಷ ಕಳೆದಿರಬಹುದು ಆತಗೂರು -೧೨ ಗ್ರಾಮಗಳ ವ್ಯಾಪ್ತಿಯಲ್ಲಿ ಕಾಡುಹಂದಿಗಳ ಕಾಟ ಜಾಸ್ತಿಯಾಗಿ ಬೆಳೆ -ಬದುಕು ದುಸ್ತರವಾಗಲು ಮಣಲೇರ ತನ್ನ ಪಡೆ ಮತ್ತು ‘ಕಾಳಿ’ಯೊಂದಿಗೆ ಬೇಟೆಗೆ ಹೊರಡುತ್ತಾನೆ… ಈ ವಿಷಯ ಶಾಸನದಲ್ಲಿ ಇಲ್ಲ.
ಕಾಳಿಯಂ ದಯೆಗೆಯ್ಯೆನ್ದು ಕೊಣ್ಡನ್ ಆ ನಾಯ ಕೆಳಲೆನಾಡ ಬೆಳತೂರ ಪಡುವಣ ದೆಸೆಯ ಮೊರಡಿಯೊಳ್ ಪಿರಿಯ ಪನ್ದಿಗೆ ಬಿಟ್ಟೊಡೆ….. ಹೀಗೆ ಮುಂದುವರೆಯುತ್ತದೆ.
ರಾಜೇಂದ್ರ ಪ್ರಸಾದ್. ಲೇಖನದಲ್ಲಿ ಒಂದು ಸಣ್ಣ ತಿದ್ದಪಡಿ. ಏನೆಂದರೆ, ಶಾಸನವನ್ನು ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಸರಂಕ್ಷಿಸಿ ಇಡಲಾದ ಶಾಸನಗಳ ಜೊತೆ ನಾನು ಅದನ್ನು ನೋಡಿದ್ದೆ. ಈಗ ಕನ್ ಪ್ಯೂಸ್ ಆಗ್ತಿದೆ. ಆರ್ಟ್ ಗ್ಯಾಲರಿಯಾ? ಅಥವಾ ನೀವು ಹೇಳಿದ ಹಾಗೆ ವಿಶ್ವಶ್ವರ ಮ್ಯೂಸಿಯಂ ? ನನಗೆ ನೆನಪಿರುವಂತೆ ಅದು ವೆಂಕಟಪ್ಪ ಗ್ಯಾಲರಿ ಅನಿಸುತ್ತೆ.ಒಮ್ಮೆ ನೋಡಿ. ಏಕೆಂದರೆ, ಕರ್ನಾಟಕದಲ್ಲಿ ಅದು ಅಪರೂಪದ ಶಾಸನ.
ಈ ಶಾಸನ ಈಗ ಬೆಂಗಳೂರಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿದೆ. ಈ ಸರ್ಕಾರಿ ಮ್ಯೂಸಿಯಮ್ ಇರುವುದು ವಿಶ್ವೇಶ್ವರ ಮ್ಯೂಸಿಯಮ್ಮಿನ ಪಕ್ಕದಲ್ಲಿ!
Arere! tumba olle mahiti! Thank you 🙂
ರಾಜಣ್ಣ ಅಸಕ್ತಿದಾಯಕವಾದ ಲೇಖನ..
ರೋಮ್ಯಾಂಟಿಕ್ ಕವಿ ರಾಜೇಂದ್ರ ತಮ್ಮ ಕವನಗಳ ಜೊತೆ ಈ ರೀತಿ ಆರ್ಟಿಕಲ್ ಬರಿಯೋ ಕೆಲಸ ಮುಂದವರಿಸಬೇಕು … ತುಂಬಾ ಚೆನ್ನಾಗಿ ಇದೇ
@ಸತ್ಯನಾರಾಯಣ ಸರ್ : ತುಂಬಾ ಉಪಕಾರವಾಯಿತು… ಥ್ಯಾಂಕ್ಯೂ ಸೊ ಮಚ್… & ತೊಕ್ಕುಲಮ್ ಯುದ್ದ ನಡೆದಿದ್ದು ಕ್ರಿ. ಶ. 949 ರಲ್ಲಿ ಹಾಗೆಯೇ ಈ ಶಾಸನದ ರಚನೆಯ ಶಕವರ್ಷ 872 ಕ್ರಿ.ಶ. 950ಕ್ಕೆ ಹೊಂದಿಕೊಳ್ಳುತ್ತದೆ.. ಹಾಗಾಗಿ ಒಂದು ವರ್ಷದ ಅವಧಿಯದ್ದು ಸ್ಥಳೀಯ ಹೇಳಿಕೆಗಳ ಅಂದಾಜಿನದಷ್ಟೆ.. ನೀವು ಹೇಳಿದಂತೆ ಅದು ಶಾಸನ ಉಲ್ಲೇಖಿತವಲ್ಲ..
ಓಕೆ…
ಶಾಸನದಲ್ಲಿ ಉಲ್ಲೇಖಿತವಾಗಿರುವ ಕಾಲ ಶಕವರ್ಷ 872 ಸೌಮ್ಯ ಸಂವತ್ಸರ. ಇದು ಕ್ರಿ.ಶ. 949-50ಕ್ಕೆ ಸರಿಹೊಂದುತ್ತದೆ. ಹಿಂದೂಪಂಚಾಂಗದ ಪ್ರಕಾರ ಯುಗಾದಿಯಿಂದ ಯುಗಾದಿಯವರೆಗೆ ಕಾಲಗಣನೆಯಾದ್ದರಿಂದ 949ರ ಕೊನೆಯ ಒಂಭತ್ತು ತಿಂಗಳು ಹಾಗೂ 950ರ ಆರಂಭದ ಮೂರು ತಿಂಗಳು ಎಂದು ಇಟ್ಟುಕೊಳ್ಳಬಹುದು.
@ಜಗದೀಶ್ ಕೊಪ್ಪ :ಸರ್ ಗೊಂದಲವನ್ನು ಸತ್ಯನಾರಾಯಣ್ ಸರ್ ಪರಿಹರಿಸಿದ್ದಾರೆ… ಈ ಶಾಸನ ವಿಶ್ವೇಶ್ವರ ಮ್ಯೂಸಿಯಮ್ಮಿನ ಪಕ್ಕದಲ್ಲಿನ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿದೆ.