-ಅಲೆಮಾರಿ
ಇತ್ತೀಚೆಗೆ ರಾಜಕಾರಣ ಮತ್ತು ರಾಜಕಾರಣಿಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಯಡಿಯೂರಪ್ಪ ಸಹೋದ್ಯೋಗಿಗಳ ಭಿನ್ನಮತ, ಕುಮಾರಸ್ವಾಮಿ ಅವರ ತಂತ್ರಗಾರಿಕೆ, ರಾಜಕಾರಣಿಗಳು ಕೋಟಿ ಕೋಟಿಗಳಿಗೆ ಸೇಲ್ ಆಗ್ತಿರೋದು, ಮಂತ್ರಿಗಿರಿಗೋಸ್ಕರ ಬ್ಲಾಕ್ ಮೇಲ್ ಇತ್ಯಾದಿಗಳೆಲ್ಲ ರಾಜ್ಯದ ಜನರಲ್ಲಿ ರಾಜಕಾರಣಿಗಳ ಬಗ್ಗೆ ಎಳ್ಳಷ್ಟು ಗೌರವ ಉಳಿಸಿಲ್ಲ.
ಅಧಿಕಾರ ಬಳಸಿಕೊಂಡು ಭೂಮಿ ಬಾಚಿಕೊಂಡಿದ್ದು, ಪಕ್ಷದಿಂದ ಪಕ್ಷಕ್ಕೆ ಹಾರಿದ್ದು ಎಲ್ಲವನ್ನೂ ಕಂಡು ಮತದಾರ ತನ್ನ ಹಣೆ ಹಣೆ ಚಚ್ಚಿಕೊಂಡು ವಾಚಾಮಗೋಚರವಾಗಿ ಶಾಪವನ್ನೂಹಾಕಿದ್ದಾಯ್ತು.
`ಅವರ್ಯಾರು ಸರಿ ಇಲ್ಲ ಅಂತ ಇವರಿಗೆ ಓಟು ಹಾಕಿದೆ, ಅವರೂ ಮಾಡಿದ್ದನ್ನೇ ಮಾಡ್ತಿದ್ದಾರೆ. ಪ್ರಶ್ನೆ ಮಾಡಿದ್ರೆ, ಇಷ್ಟು ದಿನ ಅವರು ಮಾಡಿದ್ರೂ ನಾವ್ ಮಾಡಿದ್ರೇ ತಪ್ಪಾ’ ಅಂತಾರೆ ಅಂತ ಮತದಾರ ಛಿ, ಥೂ ಅಂತಾ ಉಗುಳಿದ್ದಾನೆ.
ಬಸ್ ಹತ್ತಿ, ಬಸ್ ಸ್ಟ್ಯಾಂಡಿನಿನಲ್ಲಿ ನಿಲ್ರಿ, ಟೀವಿ ಚಾನೆಲ್ಲುಗಳ ಚರ್ಚೆಗಳನ್ನು ನೋಡಿ, ಪತ್ರಿಕೆಗಳ ಓದುಗರ ಪತ್ರಗಳನ್ನು ಓದಿ ಎಲ್ಲ ಕಡೆ ರಾಜಕಾರಣಿಗಳ ಬಗ್ಗೆ ದ್ವೇಷ, ರೊಚ್ಚಿನ ಮಾತುಗಳು.
ಇರಾನಿನಲ್ಲಿ ಕಲ್ಲು ಹೊಡೆದು ಕೊಲ್ಲುವಂತೆ ಕೊಂದುಬಿಡಬೇಕು, ಎಲ್ಲ ರಾಜಕಾರಣಿಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಟ್ಟು ಸಾಯಿಸಬೇಕು ಅನ್ನೋ ಅತಿರೇಕದ ಮಾತುಗಳಿಗೂ ಕಡಮೆ ಇಲ್ಲ.
ಈ ”ಅತಿ”ಯಾದ ಪ್ರತಿಕ್ರಿಯೆ, ರಾಜಕಾರಣದ ಬಗ್ಗೆ ನಮ್ಮಲ್ಲಿ ಹುಟ್ಟುತ್ತಿರುವ ಸಿನಿಕತನ ಎಷ್ಟು ಸರಿ ಅನ್ನೋ ಪ್ರಶ್ನೆ ಕಾಡುತ್ತಿತ್ತು.
ಕಾಕತಾಳೀಯ ಅನ್ನೋ ಹಾಗೇ, ಔಟ್ ಲುಕ್ ಸಂಪಾದಕ ವಿನೋದ್ ಮೆಹ್ತಾ ಅವರ ”ಮಿಸ್ಟರ್ ಎಡಿಟರ್ ಹೌಸ್ ಕ್ಲೋಸ್ ಯು ಆರ್ ಟು ದಿ ಪಿ.ಎಂ.” ಅನ್ನೋ ಪುಸ್ತಕ ಸಿಕ್ಕಿತು. ಅದರಲ್ಲೊಂದು ಲೇಖನ, ”Indefence of Politicians..” ಅಂತ.
ರಾಜಕಾರಣಿಗಳ ಬಗ್ಗೆ ತಿಳಿವಳಿಕೆ ಇರುವವರು, ವಿಚಾರವಂತರು, ದ್ವೇಷಿಸುವುದು, ದೇಶದ ಅಭಿವೃದ್ಧಿಗೆ ರಾಜಕಾರಣಿಗಳೇ ಅಡ್ಡಿ ಎನ್ನುವಂತೆ ಅಭಿಪ್ರಾಯ ರೂಪಿಸುವ ಬಗ್ಗೆ ಅಚ್ಚರಿ, ಆಂತಕದಿಂದ ಬರೆದಿದ್ದಾರೆ ಮೆಹ್ತಾ. ಇದು ಚರ್ಚೆಯಾಗಬೇಕಾದ ವಿಷಯ ಅಂತಾರೆ ಅವರು.
Unfortunately, the low esteem in which politicians are held spells disaster for good governanance and healthy democracy..
The ‘hate politician’ mood, if allowed to persist and intensify can lead to even more dangerous consequence…
ಇದರ್ಥ ಭ್ರಷ್ಟ ರಾಜಕಾರಣವನ್ನು ಬೆಂಬಲಿಸುವುದಲ್ಲ, ಜಾಣ ಕುರುಡುತನವಿರಬೇಕೆಂದೂ ಅಲ್ಲ. ಎಲ್ಲ ರಾಜಕಾರಣಿಗಳು ಕೆಟ್ಟವರು, ರಾಜಕಾರಣಿಗಳು ಹೇಳುವ ಒಂದೇ ಒಂದು ಸತ್ಯ ಅಂದ್ರೆ ಸುಳ್ಳು ಅನ್ನುಂಥ ನಿಲುವು ತಳೆಯುವುದು ತಪ್ಪು. ಯಾಕಂದ್ರೆ..
If electorate comes to believe that politicians are not only irrelevent but an impediment to order and progress, they will begin to look at options of governance which either eliminate or minimise the role of elected representative. Alas, that way lies dictatorship and totalitarianism.
In a perfect world, naturally there would be no Politicians, but know of no Philosopher or scientist who has devised a system of representative democracy based on adult franchise without a pivotal role of politicians….….Here is small minority (politicians) possessed of the ambition to instruct, govern and rule.
****
ಯಾಕಂದ್ರೆ ತಾನೊಂದು ಪ್ರಜಾಪ್ರಭುತ್ವರಾಷ್ಟ್ರವಾಗಿರುವ ಇಂಗ್ಲೆಂಡಿನಲ್ಲಿ ಕೇವಲ 15 ಕೋಟಿ ಮತದಾರರಿದ್ದು, ಚುನಾವಣೆಗಳಲ್ಲಿ ಶೇ. 50ರಷ್ಟು ಮತದಾನ ವಾಗುವುದಿಲ್ಲವಂತೆ!!






ನಮ್ಮ ಇಡೀ ಸಾರ್ವಜನಿಕ ಜೀವನವೇ Corrupt ಅಂದರೆ – ಲಂಚಗುಳಿ ಎಂದದಷ್ಟೇ ಅಲ್ಲ – ಕಲುಷಿತದ ರಾಡಿಯೇ ಆಗಿರುವುದು ನೇರವಾಗಿ ನಮ್ಮ ಚುನಾವಣಾ ವ್ಯವಸ್ಥೆಯ ದೋಷದಿಂದ. ನೈಜ ಜನಮತದ ಪ್ರಾತಿನಿಧ್ಯಕ್ಕೆ ಅದು ಎಡೆ ಕೊಡುವುದೇ ಇಲ್ಲ. ಮತದಾರ ಸಮಾಜವನ್ನು ಒಡೆದು ಹುಡಿ-ಹುಡಿಗೊಳಿಸಿ, ಗೂಂಡಾ ಬೆಂಬಲದಿಂದ ಹಿಡಿ ಮಣ್ಣು ಆರಿಸಿಕೊಳ್ಳುವವರ ಪೈಕಿ ಕೆಲ Grainಗಳಷ್ಟು ಹೆಚ್ಚು ಹಿಡಿದವರೇ ಮತಕ್ಷೇತ್ರದ ಪಾಳೇಗಾರರಾಗಿ ಮೆರೆಯುವ ಅವಕಾಶ ಈ ವ್ಯವಸ್ಥೆಯಲ್ಲಿದೆ. ಇಡೀ ಮತದಾರ ಕೋಟಿಯ ಸರಾಸರಿ ಶೇ. 30ರಷ್ಟನ್ನೂ ಪ್ರತಿನಿಧಿಸಲಾರದ ಸಂಸತ್ತು ಅಥವಾ ಶಾಸನಸಭೆ ನಡೆಸುವ ಅಡಳಿತ ದಬ್ಬಾಳಿಕೆಯಲ್ಲದೆ, ನ್ಯಾಯ-ನೆಮ್ಮದಿಯ ಪ್ರಜಾಪ್ರಭುತ್ವವಾಗುವುದಾದರೂ ಹೇಗೆ?