ರೇಖೆಗಳಿಗೆ ಇನ್ನಿಲ್ಲದಂತೆ ಮನ ಸೋತವರು ರವಿ ಅಜ್ಜೀಪುರ. ನವಕರ್ನಾಟಕ ಪ್ರಕಾಶನದಲ್ಲಿದ್ದು ಅನೇಕ ಪುಸ್ತಕಗಳಿಗೆ ಹೊಳಪು ನೀಡಿದವರು. ಜಿ ರಾಮಕೃಷ್ಣ ಸಂಪಾದಕತ್ವದ ಹೊಸತು ಪತ್ರಿಕೆ ರವಿ ರೇಖೆಗಳಿಂದ ಕಂಗೊಳಿಸುತ್ತಿತ್ತು. ನಂತರ ಫುಲ್ ಟೈಮ್ ಪತ್ರಿಕೋದ್ಯಮಕ್ಕೆ ಜಿಗಿಯುವ ಆಸೆಯಿಂದ ರವಿ ಬೆಳೆಗೆರೆ ಗರಡಿಗೆ ಸೇರಿಕೊಂಡರು. ಈಗ ‘ಓ ಮನಸೇ…’ ಸಂಪಾದಕೀಯ ವಿಭಾಗದ ಮುಖ್ಯರಲ್ಲೊಬ್ಬರು. ಬರೀ ರೇಖೆ ಮಾತ್ರ ಇಷ್ಟ ಎಂದುಕೊಂಡಿದ್ದಾಗಲೇ ಕವಿತೆ ಬರೆದು, ಕಥೆ ಬರೆದು, ಲೇಖನ ಬರೆದು ಬೆಚ್ಚಿಸಿದವರು.
ಹಾಯ್ ಬೆಂಗಳೂರ್ ವಿನ್ಯಾಸ ಬದಲಾಗಿರುವುದು ನೋಡಿದ್ದೀರಲ್ಲ? ಅದರ ಹಿಂದಿನ ಕೆಲಸ ಅಜ್ಜೀಪುರ್ ಅವರದ್ದು. ಅಪಾರ ಓದಿನ ಆಸಕ್ತಿಯ ರವಿ ಅಜ್ಜೀಪುರ ಕಳಿಸಿದ ಹೊಸ ವರ್ಷದ ಶುಭಾಷಯ ಈಗ ನಿಮಗಾಗಿ ಇಲ್ಲಿ ನೀಡುತ್ತಿದ್ದೇವೆ. ಚೆನ್ನಾಗಿದ್ದರೆ ರವಿಗೊಂದು ಮೈಲ್ ಕಳಿಸಿ…. raviajjipura@gmail.com






ravi ajjeepura nanange nanna cuba pustakada moolaka parichayavaadavaru. avara reke kandiddu hosatuvinalli. avara aksharagaloo ashte tumbaa chennagide.
It is a very beautiful card.
yenri idella?