ಊಟ ಹಾಕಿ ಊರಿಗೆಲ್ಲಾ ಹೇಳಿದ್ಲು ನಮ್ಮವ್ವ

ಜಡಿಯಪ್ಪ ಗೆದ್ಲಗಟ್ಟಿ
ಒಂದೇ ರೂಮ್ನಲ್ಲಿ ಒಬ್ಬೆ ಮೇಷ್ಟ್ರು ಕೆಳಗೆ ಕಲಿತು ಐದ್ನೆ ಕ್ಲಾಸಿಗೆ ಸಿಟಿ ಸೇರಿದಾಗ ಮಗ ಓದಿ ಮಾಡೊದಾದ್ರು ಏನೋ ಅಂತಾ ಬೇಜಾರಾಗಿದ್ದ ನಮ್ಮವ್ವನಿಗೆ ನಾನು ಎಮ್ಮೆ ಕಾಯ್ಕೊಂಡು ಬರೋದು ಕಲಿತ್ರೆ ಸಾಕು ಲೈಫು ಸೆಟ್ಲ್ ಆಗುತ್ತೇ ಅನ್ನೊ ನಂಬಿಕೆ.
ಇಂತ್ರದಲ್ಲಿ ನಾನು ಅದ್ಯಾರು ಬಂಡಯಗಾರರು ಹೋರಾಟಗಾರರು ಅಂತಾ ನಮ್ಮ ಸ್ಕೂಲಲ್ಲಿ ರಕ್ತದ ಬಣ್ಣ ಒಂದೇ ಬಡವನಿಗೂ ಶ್ರೀಮಂತನಿಗೂ ಅಂತಾಡಿಕೊಂಡು ಬಂದು ಬೀದಿ ನಾಟಕ ಮಾಡಿದವರ ಗುಂಪಿಗೆ ಮಾರು ಹೋಗಿದ್ದೆ.
ಹೋರಾಟಕ್ಕಿಂತ ಸ್ವಲ್ಪ ಕಲೆಯ ಹುಚ್ಚಿತ್ತು, ಮನೆಯಲ್ಲಿ ಬೀದಿ ನಾಟಕ ಅಂತಾ ಹೇಳಿದೆ ಅವರು ಹೌದು ನಮಗೆ ತುಂಬಾ ಚೆನ್ನಾಗಿ ಗೊತ್ತು ಡೊಂಬರಾಟ ಅಂದು ಅದಕ್ಕೆ ಕಾಲಿಟ್ರೆ ಕಾಲು ಮುರಿತೀನಿ ಅಂದ್ಲು ಅವ್ವ. ಮನೆಯಲ್ಲಿ ಹೇಳದೆ ಕದ್ದು ಮುಚ್ಚಿ ಸಿಟಿಯಲ್ಲಿ ನಮ್ಮ ಬೀದಿ ನಾಟಕ ನೆಡೆದಿತ್ತು, ಇದ್ದಕ್ಕಿದ್ದಂತೆ ಅದ್ಯಾರು ಸಂತೆಗೆ
ಬಂದವರು ನಾಟಕ ನೋಡಿ ಮನೆಗೆ ಸುದ್ದಿ ಮುಟ್ಟಿಸಿದ್ರು. ಸತ್ತೇ ಅಂದ್ರು ಬಿಡುವ ಮಟ್ಟದಲ್ಲಿರಲಿಲ್ಲ ಅಪ್ಪನ ಕೋಪ-ತಾಪ. ಆವತ್ತು ಅವ್ವ ಮತ್ತೊಮ್ಮೆ ನನಗೆ ಮರು ಜನ್ಮ ನೀಡಿ ಅಪ್ಪನಿಗೆ ಪ್ರಮಾಣ ಮಾಡಿದ್ದಳು ನಾನು ಎಮ್ಮೆ ತಮ್ಮಣ್ಣನಾಗುವುದರಲ್ಲಿ ಸಂದೇಹ ಬೇಡವೆಂದು.
ಸಿಟಿಯಲ್ಲಿ ಸಾಗಿದ್ದ ನಮ್ಮ ಹೋರಾಟದ ಬೀದಿ ನಾಟಕ ಒಂದಿಷ್ಟು ವರುಷಗಳು ಕಳೆದ ಮೇಲೆ ಸರಕಾರಿ ಇಲಾಖೆಯ ಆದೀನಕ್ಕೊಳಪಟ್ಟು ಹೋರಾಟದಿಂದ ಏಡ್ಸ್ ಜಾಗೃತಿ ಜಾಥವಾಗಿ ಹಳ್ಳಿ ಹಳ್ಳಿ ಸುತ್ತುವ ಅವಕಾಶದ ಜೊತೆ ಒಂದಿಷ್ಟು ಕಾಸು ಸಿಗಲಾರಂಬಿಸಿತು.
ಜಾಥದಿಂದ ನನ್ನ ಜಾಥಕ ಕೆಟ್ಟು ಜಾಥದ ಒಂದು ನಾಟಕ ನಮ್ಮೂರಲ್ಲಿ ಫಿಕ್ಸ್ ಆಗಿತ್ತು, ವರುಷಗಳು ಕಳೆದಂತೆ ನಾನು ನಾಯಕನ ಪಾತ್ರಗಳಲ್ಲಿ ಮಿಂಚುತ್ತಿದೆ ಬಟ್ ಈ ಬಾರಿಯ ನಾಟಕ ಏಡ್ಸ್ ಕುರಿತಾಗಿತ್ತು! ನಾನು ಮಾಡುವುದಿಲ್ಲವೆಂದು ಅಂಗಲಾಚಿದರು ಬಿಡದ ಆಯಪ್ಪ ಒಂದಿಸ್ಟು ಭಾಷಣ ಮಾಡಿ ನನ್ನ ರೆಡಿ ಮಾಡಿದ್ದರು.
ಹಳ್ಳಿಯಲ್ಲಿ ನಾಟಕ ನೆಡೆಯಿತು, ಅಪ್ಪ ಗ್ರಾಪಂ ಸದಸ್ಯರಾಗಿದ್ದ ಕಾರಣ ಅವರೇ ಮುಖ್ಯ ಅತಿಥಿ, ಜೀವ ಬಿಗಿ ಹಿಡಿದು ನಾಟಕ ಮಾಡಿದ್ದೆ, ತಂಡದ ಮುಖ್ಯಸ್ಥ್ ಒಂದಿಷ್ಟು ಹೊಗಳಿದ್ದರು ನಾನು ಲೋಕಲ್ ಟ್ಯಾಲೆಂಟಂತ್. ಉಸಿರು ಬಿಗಿ ಹಿಡಿದು ಅಪ್ಪನ ಮುಖ ನೋಡದೆ ಮಾಡಿದ್ದೆ, ಫಂಕ್ಷನ್ ಮುಗಿದ ಮೇಲೆ ಅಪ್ಪ ಇದ್ದಕ್ಕಿದ್ದಂತೆ ಎಲ್ಲಾರನ್ನು ಮನೆಗೆ ಊಟಕ್ಕೆ ಕರೆದರು.
ಎಲ್ಲಾರಿಗೂ ಊಟ ಇಷ್ಟವಾಗಿತ್ತು, ಮನೆಯಲ್ಲಿ ಉಂಡವರ ಜಾತಿ-ನೀತಿಗಳನ್ನು ಮೆಲ್ಲಗೆ ಕೇಳಿಸಿಕೊಂಡ ಅವ್ವ ಹಿರಿ-ಹಿರಿ ಹಿಗ್ಗಿ ಹೋಗಿದ್ದಳು, ಅದೇ ಮೊದಲು ನನ್ನಿಂದಾಗಿ ನಮ್ಮ ಮನೆಯಲ್ಲಿ ಮೇಲ್ಜಾತಿಯವರು ಉಂಡಿದ್ದರು. ನನ್ನ ಬೀದಿ ನಾಟಕದ ಗೀಳನ್ನು ಮನ್ನಿಸಿ ನಾನು ಎಂತೆಂತಾ ದೊಡ್ಡ ಜಾತಿಯವರ ಜೊತೆ ಇರ್ತೀನಿ ಮತ್ತು ನಮ್ಮ ಮನೆಯಲ್ಲಿ ಅಂದು ತಿಂದವರು ಯಾರೆನ್ನುವುದು ಅವ್ವನ ಮುಖ್ಯ ವಿಷಯವಾಗಿತ್ತು. ಇಂದಿಗೂ ಅದನ್ನೂ ಅವ್ವ ಅವರಿವರ ಮುಂದೆ ಹೇಳುವುದನ್ನು ನಿಲ್ಲಿಸಿಲ್ಲ ಹಾಗೂ ಊಟಕ್ಕೆ ಬಂದವರು ಸಹ





0 Comments