ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗ ಉತ್ಸವದ ಬಗ್ಗೆ ವಸುಧೇಂದ್ರ ಹೇಳಿದ್ದು..

ಎರಡು ದಿನ ನಿರಂತರವಾಗಿ ಅವಧಿಯ ಸಹಭಾಗಿತ್ವದಲ್ಲಿ ಪ್ರದರ್ಶನಗೊಂಡ, ಶ್ರೀಪಾದ ಭಟ್ ಅವರ ನಿರ್ದೇಶನದ ನಾಟಕಗಳನ್ನು ನೋಡಿದೆ. ಮನಸ್ಸು, ಕಣ್ಣು, ಹೃದಯ, ಕಿವಿ – ಎಲ್ಲವೂ ಖುಷಿಯಿಂದ ಸಂತೃಪ್ತವಾಗಿ ಹೋಗಿವೆ.

ನೂರು ವರ್ಷಗಳ ಹಿಂದೆಯೆ ಗುರುದೇವ ರವೀಂದ್ರನಾಥರು ಎಷ್ಟೊಂದು ಸೂಕ್ಷ್ಮವಾಗಿ ನಮ್ಮ ಕಾಲದ ಸಂವೇದನೆಗಳನ್ನು ಕಟ್ಟಿ ಕೊಟ್ಟಿದ್ದಾರಲ್ಲಾ ಎಂದು ಅಚ್ಚರಿ. ಸಂಪೂರ್ಣ ರೂಪಕಗಳ ಜಗತ್ತಿನಲ್ಲಿಯೇ ಕತೆ ಕಟ್ಟುವುದು ಹೇಗೆಂದು ಈ ಪ್ರಯೋಗಗಳು ಕಲಿಸಿಕೊಟ್ಟವು.

ಹತ್ತು ವರ್ಷಗಳಿಂದ ನಿರಂತರವಾಗಿ ಒಂದು ಕನ್ನಡ ಪೋರ್ಟಲ್ ನಿರ್ವಹಿಸುವುದು ಸುಲಭದ ಕೆಲಸವಲ್ಲ. ಅಂತಹ ಸಾಧನೆಯ ಸಂಭ್ರಮವನ್ನು ಈ ನಾಟಕೋತ್ಸವದ ಮೂಲಕ ನಮ್ಮೊಡನೆ ಹಂಚಿಕೊಂಡ ಅವಧಿ ಬಳಗಕ್ಕೆ ಅಭಿನಂದನೆಗಳು.
ಮೊದಲ ದಿನದ ನಾಟಕವನ್ನು ನೋಡಲಾಗಲಿಲ್ಲ ಎಂಬ ಕೊರಗು ಉಳಿದು ಬಿಟ್ಟಿದೆ.

-ವಸುಧೇಂದ್ರ 

‍ಲೇಖಕರು avadhi

18 June, 2017

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading