ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಗಾಯಣದ ಸಮಸ್ಯೆಗೆ ನನ್ನ ಪ್ರತಿಕ್ರಿಯೆ – ಚಿದಂಬರ ರಾವ್ ಜಂಬೆ

ರಂಗಾಯಣದ ಸಮಸ್ಯೆಗೆ ನನ್ನ ಪ್ರತಿಕ್ರಿಯೆ ಸನ್ಮಾನ್ಯ ಗೋವಿಂದ ಕಾರಜೋಳರಲ್ಲಿ ಒಂದು ವಿನಂತಿ ತಾವೊಬ್ಬ ಸಜ್ಜನ ಸಂವೇದನಾಶೀಲ ಜನಪ್ರತಿನಿಧಿಗಳು ಎಂದು ಭಾವಿಸುತ್ತೇನೆ. ಹಾಗಾಗಿ ಜನಪ್ರತಿನಿಧಿಗಳು ಅಧಿಕಾರಿಗಳಿಗಿಂತ ಜನರಾಡುವ ಮಾತನ್ನ ಗಂಭೀರವಾಗಿ ಆಲಿಸಬೇಕು ಮತ್ತು ಅಷ್ಟೇ ತೀವ್ರತೆಯಿಂದ ಸ್ಪಂದಿಸಬೇಕು. ಮೈಸೂರು ರಂಗಾಯಣ ಬಹಳ ವರ್ಷಗಳ ಪರಿಶ್ರಮದಿಂದ, ರಾಜ್ಯದ ಒಳಗಿನ ಮತ್ತು ಹೊರಗಿನ ಹಾಗೂ ಅಂತರಾಷ್ಟ್ರೀಯ ಪ್ರಜ್ಞಾವಂತ ರಂಗ ನಿದರ್ೇಶಕರು, ಸಾಹಿತಿಗಳು, ಕಲಾವಿದರು ಮತ್ತು ಜನರ ಕಾಳಜಿಯಿಂದ ಕಟ್ಟಿದಂಥ ಸಂಸ್ಥೆ. 25ವರ್ಷಗಳ ಸುಧೀರ್ಘ ಅವಧಿಯಲ್ಲಿ ಇಡೀ ಭಾರತದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತನ್ನದೇಆದ ಛಾಪನ್ನು ಮೂಡಿಸಿದೆ. ಇದು ನಾವೆಲ್ಲಾ ಹೆಮ್ಮೆಪಡುವಂಥ ವಿಷಯ. ಈಗ ಕಲಾವಿದರನ್ನು ಮೂರು ಗುಂಪಗಳನ್ನಾಗಿ ಒಡೆದು ಯಾವ ರಂಗಸಂಸ್ಕೃತಿಯನ್ನು ಕಟ್ಟಬಯಸುತ್ತೀರಿ? 1) ಈಗಾಗಲೇ ಸಾಕಷ್ಟು ವೈವಿಧ್ಯಮಯ ಪ್ರದರ್ಷನಗಳನ್ನು ತನ್ನ ಒಡಲಲ್ಲಿ ಇರಿಸಿಕೊಂಡಿರುವ ಮೈಸೂರು ರಂಗಾಯಣ ಇನ್ನು ಮುಂದೆ ಆ ಪ್ರದರ್ಷನಗಳನ್ನು ಮಾಡುವಂತಿಲ್ಲ. ರಂಗಪ್ರಯೋಗಕ್ಕಾಗಿಯೇ ಹುಟ್ಟುಹಾಕಿದ್ದ ರಂಗಾಯಣದ ಒಂದು ಮುಖ್ಯ ಉಧ್ದಿಶ್ಯ ನಾಶವಾದಂತಾಯಿತು. ಇಷ್ಟು ರಂಗಪ್ರದರ್ಷನಗಳನ್ನು ಕಾಪಿಟ್ಟುಕೊಂಡ ಇನ್ನೊಂದು ರೆಪರ್ಟರಿ ಇಡೀದೇಶದಲ್ಲಿಯೇ ಇನ್ನೊಂದಿಲ್ಲ, ಇದು ಈ ರಂಗಾಯಣದ ವೈಶಿಷ್ಟ. 2) ಸೂಕ್ಷ್ಮಸಂವೇದನೆಯುಳ್ಳವರಾಗಿದ್ದರಿಂಲೇ ಕಲಾವಿದರಾಗಿರುತ್ತಾರೆ.ಈ ಕಲಾವಿದರೊಂದಿಗೆ ಧಾರವಾಡ ಮತ್ತು ಶಿವಮೊಗ್ಗ ರಂಗಾಯಣಗಳ ನಿದರ್ೇಶಕರು ಕೆಲಸ ನಿರ್ವಹಿಸಲಾದೀತೆ? ಇಷ್ಟಕ್ಕೂ ಆ ನಿದರ್ೇಶಕರು ಮತ್ತು ಸ್ಥಳೀಕರು ಇವರು ಬೇಕೆಂದು ಕೇಳಿದ್ದಾರೆಯೇ? ಇಲ್ಲವೆಂದಾದರೆ ಎಲ್ಲರಿಗೂ ಮುಜುಗುರದ ವಿಷಯವಾದೀತು. ಯಾರ ಪ್ರತಿಷ್ಠೆಗಾಗಿ ಈ ಎಲ್ಲಾ ನಡೆಯುತ್ತಿದೆ? ಹೋಗುವವರು-ಕರೆದುಕೊಳ್ಳುವವರು ಇಬ್ಬರಲ್ಲಿಯೂ ಪ್ರೀತಿ, ಹೊಂದಾಣಿಕೆಯಿದ್ದಾಗ ಮಾತ್ರ ಆಶಯ ಈಡೇರುತ್ತದೆ. ಇಲ್ಲವಾದರೆ ಮೂರೂ ರಂಗಾಯಣಕ್ಕೂ ‘ದುರಂತವೇ’ ನಾಟಕವಾದೀತು. 3) ಅಗತ್ಯಬಿದ್ದರೆ ಅನುಭವಿಗಳಾದ ಈ ಕಲಾವಿದರನ್ನು ಸಂಪನ್ಮೂಲವ್ಯಕ್ತಿಗಳನ್ನಾಗಿ ಆ ರಂಗಾಯಣಗಳನ್ನು ಕಟ್ಟಲು ಬಳಸಿಕೊಳ್ಳಬಹುದು. 4) ಈ ರಂಗಾಯಣಗಳಿಗೆ ರಾಜ್ಯದಲ್ಲಿ ಕಲಾವಿದರು ಇಲ್ಲವೋ ಅಥವಾ ಸಕರ್ಾರಕ್ಕೆ ತೆಗೆದುಕೊಳ್ಳುವ ಮನಸ್ಸಿಲ್ಲವೋ? ಖಾಯಂ ಆಗಿ ಸಕರ್ಾರೀ ನೌಕರರನ್ನಾಗಿ ಮಾಡಬೇಕೆಂದಿಲ್ಲ. ಇವರನ್ನು ಗುತ್ತಿಗೆ ಆಧಾರದಮೇಲೆ ತೆಗೆದುಕೊಳ್ಳಬಹುದು. ನಮ್ಮ ರಾಜ್ಯದಲ್ಲಿರುವಷ್ಟು ರಂಗಶಾಲೆಗಳು ಇಡೀ ದೇಶದಲ್ಲಿ ಬೇರಾವ ರಾಜ್ಯದಲ್ಲಿಯೂ ಇಲ್ಲ. ಕಲಾವಿದರೇ ಬೇಡವೆಂದಾದರೆ ರಂಗಾಯಣಗಳನ್ನಾದರೂ ಯಾಕೆ ಮಾಡಬೇಕಿತ್ತು? 5) ಈವರೆಗೂ ರಂಗಾಯಣಗಳಿಗೆ ಸ್ಪಷ್ಟ ರೂಪವೇಇಲ್ಲ, ಕನ್ನಡ ಸಂಸ್ಕೃತಿ ಇಲಾಖೆ ಅಧಿಕಾರಿಗಳ ಮಜರ್ಿಗಳಿಗನುಗುಣವಾಗಿ ನಡೆಯುತ್ತದೆ. ರಂಗಸಮಾಜ ಒಂದು ಸ್ವಾಯುತ್ತ ಸಂಸ್ಥೆ, ಇಲಾಖಾ ಸಚಿವರು ಅಧ್ಯಕ್ಷರಾಗಿರುತ್ತಾರೆ. ಅಧ್ಯಕ್ಷರು ರಂಗಾಯಣದ ಅಗತ್ಯಗಳನ್ನು ನಿದರ್ೇಶಕರೊಂದಿಗೆ ಚಚರ್ಿಸಿ, ಸಕರ್ಾರದಿಂದಾಗುವ ಕೆಲಸಗಳನ್ನು ಮಾಡಿಸಿಕೊಡಬೇಕಾಗುತ್ತದೆ. ಹೀಗೆ ಸಕರ್ಾರಕ್ಕೂ ರಂಗಾಯಣಕ್ಕೂ ಸಂಪರ್ಕಸೇತುವಾಗಿ ಕೆಲಸಮಾಡುತ್ತಾರೆ. ದಿ| ಎಂ. ಪಿ ಪ್ರಕಾಶ ಅವರು ಸಚಿವರಾಗಿದ್ದಾಗ ಈರೀತಿಯಲ್ಲಿ ವ್ಯವಹರಿಸುತ್ತಿದ್ದರು. ಕೆಲವು ಅಧಿಕಾರಿಗಳು ರಂಗಾಯಣವನ್ನು ಇಲಾಖೆಯಂತಲೇ ಭಾವಿಸಿ ನಡೆಸಿಕೊಳ್ಳುತ್ತಾರೆ, ಹಾಗೆಯೇ ಸಚಿವರಿಗೂ ಪಾಠಮಾಡುತ್ತಾರೆ? ಕೆಲವೊಮ್ಮೆ ಅಧಿಕಾರಿಗಳು ಸಿದ್ಧಪಡಿಸಿಕೊಂಡು ಬಂದಿದ್ದನ್ನೇ ಸಚಿವರ ಬಾಯಿ ಮೂಲಕ ಹೇಳಿಸಿ ಸದಸ್ಯರ ಕೈ ಎತ್ತಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ರಂಗಾಯಣದ ಕಷ್ಟ ಸುಖಗಳು ಸಚಿವರಿಗೆ ಅರ್ಥವಾಗುವುದಿಲ್ಲ. ನಿದರ್ೇಶಕರು ಅಧ್ಯಕ್ಷರೊಂದಿಗೆ ಮುಕ್ತವಾಗಿ ವ್ಯವಹರಿಸುವಂತಿರಬೇಕು. ಸಾಂಸ್ಕೃತಿಕ ಸಂಸ್ಥೆಗಳನ್ನು ಪ್ರೀತಿ ವಿಶ್ವಾಸ ಸಮಾನ- ಗೌರವಗಳೊಂದಿಗೆ ಕಟ್ಟಬೇಕೇ ವಿನ: ಆದೇಶದಿಂದಲ್ಲ. ಅಧಿಕಾರಿಗಳಿಗೆ ಆದೇಶ ಬಿಟ್ಟು ಬೇರೆ ಅರ್ಥವಾಗುವುದಿಲ್ಲ. ಇನ್ನಾದರೂ ಸಚಿವರು ಪ್ರೀತಿ ವಿಶ್ವಾಸದಿಂದ ರಂಗಾಯಣವನ್ನು ಕಟ್ಟುವ ಕೆಲಸಮಾಡಲಿ ಎಂದು ಆ ಭಗವಂತನಲ್ಲಿ ಪ್ರಾಥರ್ಿಸುತ್ತೇನೆ. ಇಂತಿ ನಿಮ್ಮವ ಚಿದಂಬರ ರಾವ್ ಜಂಬೆ ಅಡ್ಡೇರಿ-ಸಾಗರ, ಶಿವಮೊಗ್ಗ. 9448253488  ]]>

‍ಲೇಖಕರು G

3 June, 2012

2 Comments

  1. prasad raxidi

    ಶಿವಮೊಗ್ಗೆಯಲ್ಲಿ ರಂಗಾಯಣ (ಅಥವಾ ರಂಗ ಸಂಸ್ಥೆ) ಸ್ಥಾಪಿಸುವ ಬದಲಿಗೆ ಗುಲಬರ್ಗಾ ಹೆಚ್ಚು ಸರಿಯಾದ ಆಯ್ಕೆಯಾಗುತ್ತಿತ್ತು. ಅಕ್ಕ-ಪಕ್ಕಗಳಲ್ಲಿರುವ ನೀನಾಸಂ ಮತ್ತು ಸಾಣೇಹಳ್ಳಿ ಈಗಾಗಲೇ ಕೆಲಸ ಮಾಡುತ್ತಿದೆ. ಈಗ ಇರುವ ಮೈಸೂರು ರಂಗಾಯಣವನ್ನು ಒಡೆಯುವ ಕೆಲಸ ದುರುದ್ದೇಶದ್ದೆಂದೇ ತೋರುತ್ತದೆ.ರಂಗಾಯಣವನ್ನು ಒಡೆಯದೆ ಅಲ್ಲಿನ ಹಿರಿಕಲಾವಿದ ಅನುಭವ ನಾಡಿಗೆ ಸಿಗುವ ವ್ಯವಸ್ಥೆ ಮಾಡಬೇಕು. ಸರಕಾರಕ್ಕೆ ಕಾಳಜಿಯಿದ್ದರೆ ಜಿಲ್ಲೆ- ತಾಲ್ಲೂಕು ಕೇಂದ್ರಗಳಲ್ಲಿ ಸರಳವಾದ ಎಲ್ಲ ಅನುಕೂಲವಿರುವ ರಂಗಮಂದಿರಗಳನ್ನು ಕಟ್ಟಿ ಹವ್ಯಾಸಿಗಳಿಗೆ ಸುಲಭ ದರದಲ್ಲಿ ಬಾಡಿಗಗೆ ಕೊಡಲಿ ಸಾಕು. ತಮಗೆ ಬೇಕಾದ ರಂಗಭೂಮಿಯನ್ನು ಜನ ಕಟ್ಟಿಕೊಳ್ಳುತ್ತಾರೆ.
    -ಪ್ರಸಾದ್ ರಕ್ಷಿದಿ

  2. Parameshwara.K

    ಸಂಸ್ಕೃತಿ ಇಲಾಖೆಯನ್ನ ಕೈಗಾರಿಕಾ ಇಲಾಖೆಯನ್ನೊ ಅಥವ ಲೋಕೋಪಯೋಗಿ ಇಲಾಖೆಯನ್ನೊ ನಡೆಸಿದಂತೆ ನಡೆಸುವ ಇಂತಹ “ಸಂಸ್ಕೃತಿ” ಉಳ್ಳವರಿಗೆ ಏನು ಹೇಳುವುದು. ದಪ್ಪ ಛರ್ಬಿ ಜನ. ಕಡೇ ಪಕ್ಷ ಸಂಸ್ಕೃತಿ ಇಲಾಖೆಯನ್ನಾದರು ಸಂಸ್ಕೃತಿ ಎಂದರೆ ಏನು ಎಂದು ತಿಳಿದಿರುವವರು ನಡೆಸುವಂತಾಗಲಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading