ಪಿ. ಲಂಕೇಶ್ರವರ `ಮುಟ್ಟಿಸಿಕೊಂಡವನು’ನಾಟಕದ ಪ್ರಥಮ ಪ್ರದರ್ಶನ

ನವ್ಯಸಾಹಿತ್ಯದ ಪ್ರಮುಖ ಲೇಖಕರಲ್ಲೊಬ್ಬರಾದ ಪಿ. ಲಂಕೇಶ್ ಕನ್ನಡ ಕಥಾ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದವರು. ಅವರು ಬರೆದ ಹಲವಾರು ವಿಶೇಷ ಕಥೆಗಳಲ್ಲಿ ‘ಮುಟ್ಟಿಸಿಕೊಂಡವನು’ ಕಥೆಯು ಕೂಡ ಒಂದಾಗಿದೆ.
ಜಾತಿ ಪದ್ಧತಿ ಶತಶತಮಾನಗಳ ಕಾಲದಿಂದಲೂ ಬೆಳೆದು ಬಂದಿರುವ ಕ್ರೂರ ಪದ್ಧತಿ, ಜಾತಿಯ ಹಿನ್ನೆಲೆಯಲ್ಲಿ ವ್ಯಕ್ತಿಗಳನ್ನು ನೋಡುವ ಮೌಢ್ಯ, ಆ ನೆಲೆಯಲ್ಲಿ ನಡೆದ ಶೋಷಣೆ ಸಂಪೂರ್ಣವಾಗಿ ಇನ್ನೂ ಹೋಗಿಲ್ಲ. ಶಿಕ್ಷಣ, ನಗರೀಕರಣ, ವಿಜ್ಞಾನದ ಬೆಳವಣಿಗೆಗಳಿಂದಲೂ ನಮ್ಮ ದೇಶ ಜಾತಿ ಪದ್ಧತಿಯಿಂದ ಮುಕ್ತವಾಗದಿರುವುದು ನಮ್ಮ ದುರಂತ. ವ್ಯಕ್ತಿ ವ್ಯಕ್ತಿಯ ನಡುವಿನ ತಾರತಮ್ಯ ಭಾವವಳಿದು ಮಾನವೀಯವಾಗಿ ನೋಡುವ ಗುಣ ಬೆಳೆಯಬೇಕಾಗಿದೆ ಮತ್ತು ಶರಣರ, ಸಂತರ ಸಮಾನತೆಯ ಆಶಯ ಸಾಕಾರಗೊಳ್ಳಬೇಕಿದೆ. ಬದಲಾವಣೆಗಾಗಿ ಹಂಬಲಿಸುತ್ತಿರುವ ಸಮಾಜಕ್ಕೆ ಬಿಡುಗಡೆಯ ದಾರಿಯನ್ನು ತೋರಿಸುವ ದಿಕ್ಕಿನಲ್ಲಿ ಈ ಕತೆ ಮಹತ್ವದ್ದಾಗಿದೆ.

ಮೈಸೂರು ರಂಗಾಯಣವು ಕೆ.ಆರ್. ನಂದಿನಿ ಅವರ ನಿರ್ದೇಶನದಲ್ಲಿ ರಂಗಾಯಣದ ಹಿರಿಯ ಕಲಾವಿದರು ಪ್ರಸ್ತುಪಡಿಸುತ್ತಿರುವ `ಮುಟ್ಟಿಸಿಕೊಂಡವನು’ನಾಟಕದ ಪ್ರಥಮ ಪ್ರದರ್ಶನವನ್ನು 2023 ಆಗಸ್ಟ್ 20 ರಂದು ಸಂಜೆ 6.30ಕ್ಕೆ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ನಾಟಕ | : | ಮುಟ್ಟಿಸಿಕೊಂಡವನು |
ರಚನೆ | : | ಪಿ. ಲಂಕೇಶ್ |
ಸAಗೀತ ವಿನ್ಯಾಸ | : | ಪ್ರಶಾಂತ್ ಹಿರೇಮಠ |
ರಂಗವಿನ್ಯಾಸ | : | ಹೆಚ್.ಕೆ. ದ್ವಾರಕಾನಾಥ್ |
ಬೆಳಕಿನ ವಿನ್ಯಾಸ | : | ಮಹೇಶ್ ಕಲ್ಲತ್ತಿ |
ರಂಗರೂಪ, ನಿರ್ದೇಶನ | : | ಕೆ.ಆರ್. ನಂದಿನಿ |

0 ಪ್ರತಿಕ್ರಿಯೆಗಳು