ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವ ಫೋಟೋ ಬೇಕಾದರೂ ಬಳಸಿಕೊಳ್ಳಿ..


ಯಾವ ಫೋಟೋ ಬೇಕಾದರೂ ಬಳಸಿಕೊಳ್ಳಿ..ಯಾವ ಲೇಖನ ಬೇಕಾದರೂ ಆರಿಸಿಕೊಳ್ಳಿ..
‘ಅವಧಿ’ಯಾಗಾಲಿ, ‘ಆಲೆಮನೆ‘ ಬಳಗವಾಗಲೀ ಕಾಪಿರೈಟ್ ನಲ್ಲಿ ನಂಬಿಕೆ ಇಟ್ಟಿಲ್ಲ.
ಒಂದು ಕಡೆಯಿಂದ ಇನ್ನೊಂದು ಕಡೆಗೆ, ಒಂದು ಬಾಯಿಂದ ಇನ್ನೊಂದು ಕಿವಿಗೆ, ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಸಂಗತಿಗಳು ದಾಟುತ್ತಲೇ ಇರಬೇಕು ಎಂದು ನಂಬಿಕೆ ಇಟ್ಟ ಸಂವಹನ ದ ವಿದ್ಯಾರ್ಥಿಗಳು ನಾವು.
ಹಾಗಾಗಿ ಇಲ್ಲಿ ಬರುವ ಫೋಟೋ, ಲೇಖನ, ವಿಡಿಯೋ ಎಲ್ಲವನ್ನೂ ಬಳಸಿಕೊಳ್ಳಿ
ಬಳಸಿಕೊಂಡ ಕಡೆ- ಕೃಪೆ: ಅವಧಿ / ಆಲೆಮನೆ ಎಂದು ನಮೂದಿಸಿದರೆ ಸಂತೋಷ.
ಬ್ಲಾಗ್ ಗಳು ಹಾಗೆ ನಮೂದಿಸಿ ಲಿಂಕ್ ಸಹಾ ನೀಡಿದರೆ ಇನ್ನೂ ಸಂತೋಷ.
ಬಳಸಿಕೊಂಡ ಬಗ್ಗೆ mayflowermh@gmail.com ಗೆ ಮಾಹಿತಿ ನೀಡಿದಲ್ಲಿ ಸಂತೋಷವೋ ಸಂತೋಷ..

‍ಲೇಖಕರು avadhi

18 February, 2010

3 Comments

  1. ಸಂದೀಪ್ ಕಾಮತ್

    ನೀವು ಹಾಕಿದ ಫೋಟೋಗಳನ್ನು ನೋಡ್ತಾ ಇದ್ರೆ ನಮಗೂ ಸಂತೋಷವೋ ಸಂತೋಷ!

  2. ಅಶೋಕವರ್ಧನ ಜಿ.ಎನ್

    ‘ಇದನ್ನು ಪ್ರತಿ ಮಾಡುವುದಾಗಲೀ ಛಾಯಾಪ್ರತಿ ತೆಗೆಯುವುದಾಗಲೀ ಇರುವ ಬರುವ ಯಾವುದೇ ಇ-ಸೌಲಭ್ಯಗಳಲ್ಲಿ ದಾಸ್ತಾನು ಮಾಡುವುದಾಗಲೀ ಬಳಸುವುದಾಗಲೀ ಎರವಲು ಕೊಡುವುದಾಗಲೀ ಮರು-ಮಾರಾಟ ಮಾಡುವುದಾಗಲೀ …….’ ಹೀಗೆ ಉದ್ದುದ್ದಕ್ಕೆ ನಿಷೇಧಗಳ ಷರಾ ಮತ್ತು ಕಾಪೀರೈಟುಗಳ ಹೋರಾಟದ ದಿನಗಳಲ್ಲಿ ನಿಮ್ಮ ಈ ಮುಕ್ತ ಕೊಡುಗೆ ಅಪೂರ್ವ. ಅಭಿನಂದನೆಗಳು.
    ಅಶೋಕವರ್ಧನ ಜಿ.ಎನ್

  3. ಸಂಜು

    ನಿಮ್ಮ ಫೋಟೋಗಳನ್ನಾ ನೋಡ್ತಾ ಇದ್ದರೆ ಯಾರಿಗೆ ಆಗಲಿ ತಡೆಯೋದಕ್ಕೆ ಆಗೋದಿಲ್ಲ ದಕ್ಕೆ ಎಲ್ಲರೂ ಕಳ್ಳತನಕ್ಕೆ ಕೈ ಹಾಕುವ ಸಾಹಸಕ್ಕೆ ಇಳಿಯುತ್ತಾರೆ…ನಾನಂತು ಹೇಲುತ್ತೆನೆ ನಿಮ್ಮ ಫೋಟೋಗಳನ್ನು ಕದ್ದಿದ್ದೆನೆ ಆದರೆ ಅದರ ಪಾಪ ನನಗೆ ತಲುಪದಿರಲಿ ಅಂತ ಕೃಪೆ, ಅದರಂಚಿಕೆ ನಿಮ್ಮ ಬಗ್ಗೆ ಒಂದಿಷ್ಟು ಮಾತು ಬರೆಯುತ್ತೇನೆ . . . ನಿಮ್ಮ ಇಂಥಹ ಉದಾತ್ತವಾದ ಮಾತುಗಳಿಗೆ ನಾನು(ನಾವು) ಮಾರಿಹೋಗಿದ್ದೆವೆ . .ಧನ್ಯವಾದ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading