ಶಿವು ಕುಮಾರ್
CSLC
ಕಿರಣ್ ಎಂ ಗಾಜಗನೂರು ಅವರು ಬರೆದ ‘ಮಡೆಸ್ನಾನ: ಪ್ರಗತಿಪರರು ಆಚರಣೆ ವಿರೋಧಿಗಳಲ್ಲ..’ಲೇಖನಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಇಲ್ಲಿ ಶಿವುಕುಮಾರ್ ನೀಡಿದ ಪ್ರತಿಕ್ರಿಯೆ ಇದೆ. ನಿಮ್ಮ ಪ್ರತಿಕ್ರಿಯೆಗೆ ಸ್ವಾಗತ.
ಮೊದಲಿಗೆ ಆಚರಣೆಯನ್ನು ಯಾರು ಸಮರ್ಥಿಸುತ್ತಿದ್ದಾರೆ ಎಂಬುದನ್ನು ನೋಡೋಣ, ನಾವು ಆಚರಣೆಯ ಕುರಿತು ಸಂಶೋಧನೆ ನಡೆಸುತ್ತಾ ವಸ್ತುನಿಷ್ಠವಾಗಿ ಅದನ್ನು ಸಮರ್ಥಿಸದೆ ಅಥವಾ ವಿರೋಧಿಸಿದೆ ಅದರ ಕುರಿತು ಮಾತನಾಡುತ್ತಿದ್ದೇವೆ. ಆದರೆ ಕಿರಣ್ ರವರು ತಮ್ಮ ಲೇಖನದಲ್ಲಿ ಮಡೆಸ್ನಾದ ಕುರಿತಾಗಿ ಹೇಳುವಾಗ, ಪ್ರಗತಿಪರರು ಆಚರಣೆಗಳ ವಿರೋಧಿಗಳಲ್ಲ ಬದಲಾಗಿ ಕೇವಲ ಅವುಗಳಲ್ಲಿರುವ ಮೌಢ್ಯಗಳ ವಿರೋಧಿಗಳು ಎಂದು ಸ್ಪಷ್ಟವಾಗಿ ಒಪ್ಪಿಕೊಂಡಿದ್ದಾರೆ. ಒಂದೊಮ್ಮೆ ಇದುವೇ ಅವರ ಸ್ಪಷ್ಟ ನಿಲುವಾದರೆ ಈ ಮುಂದಿನ ನಿರ್ಣಯ ಅನಿವಾರ್ಯ, ಅದೆಂದರೆ, ಆಚರಣೆಗಳಲ್ಲಿರುವ ಮೌಢ್ಯವನ್ನು ಮಾತ್ರ ವಿರೋಧಿಸುವುದು ಎಂದರೆ ಏನು? ಹಾಗೆಂದರೆ ಅದರಲ್ಲಿರುವ ಯಾವುದೋ ಒಂದು ನಂಬಿಕೆಯನ್ನು ಮಾತ್ರ ತಿರಸ್ಕರಿಸಬೇಕು ಎಂದರ್ಥ. ಹಾಗಾದರೆ ಆ ನಂಬಿಕೆಯನ್ನು ತಿರಸ್ಕರಿಸಿಯೂ ಆಚರಣೆ ಮುಂದುವರೆದರೆ ಸೋ ಕಾಲ್ಡ್ ಪ್ರಗತಿಪರರಿಗೆ ತೊಂದರೆ ಇಲ್ಲ (ಇದು ಕಿರಣ್ ರವರದ್ದೇ ವಾದ) ಅಂತಾದರೆ ಅವರು ಮಡೆಸ್ನಾನದ ವಿಚಾರದಲ್ಲಿ ಅದು ಬೇಕಾದರೆ ಮುಂದುವರೆಯಲಿ ಅದರಲ್ಲಿರುವ ಮೌಢ್ಯ ಬೇಡ ಎಂದು ಹೇಳುತ್ತಿದ್ದಾರೆ ಎಂದು ಅರ್ಥಮಾಡಿಕೊಳ್ಳಬಹುದು. ಇದೂ ಒಂದೊಮ್ಮೆ ನಿಜವೇ ಆದರೆ, ಮಡೆಸ್ನಾನದಲ್ಲಿರುವ ಮೌಢ್ಯವೇನು ಎಂದು ಮೊದಲು ಹುಡುಕಬೇಕಾಗುತ್ತದೆ? ಅದರಲ್ಲಿ ಯಾವುದೋ ಒಂದು ಮೌಢ್ಯ ಇದೆ ಎಂದು ಸಧ್ಯಕ್ಕೆ ಇಟ್ಟುಕೊಂಡರೆ, ಅದನ್ನು ತೆಗೆದು ಹಾಕಿ ಆಚರಣೆಯನ್ನು ಮಾತ್ರ ಇಟ್ಟುಕೊಳ್ಳಬೇಕಾಗುತ್ತದೆ-ಕಿರಣ್ ರವರ ಪ್ರಕಾರ. ಇಲ್ಲಿ ಆಚರಣೆಯನ್ನು ಇಟ್ಟುಕೊಳ್ಳುವುದು ಅಥವಾ ಮುಂದುವರೆಸುವುದು ಅಂದರೆ ಏನು? ಮತ್ತದೆ ಎಂಜಲೆಲೆಯ ಮೇಲೆ ಯಾವುದೋ ಒಂದು ಸಮುದಾಯ ಹೊರಳಾಡುವುದು ಅಲ್ಲವೇ? ಹಾಗಾಗಿ ವಾದದ ನೆಲೆಯಲ್ಲಿಯೂ ತಮ್ಮ ನಿಲುವು ಹಾಗೂ ವಿಚಾರಗಳೇ ಮಡೆಸ್ನಾನವನ್ನು ಸಮರ್ಥಿಸುತ್ತವೆ. ಅಂದರೆ ನೀವು ವಿರೋಧಿಸುತ್ತಿರುವ ಬ್ರಾಹ್ಮಣಶಾಹಿಯನ್ನು ಪರೋಕ್ಷವಾಗಿ ತಮಗೆ ಅರಿವಿಲ್ಲದೆ ಸಮರ್ಥನೆ ಮಾಡುತ್ತಿದ್ದೀರಿ. ಒಟ್ಟಿನಲ್ಲಿ ಕಿರಣ್ ರವರ ಪ್ರಕಾರ ಅವರು ಆಚರಣೆಯ ವಿರೋಧಿಗಳಲ್ಲ ಬದಲಿಗೆ ಮೌಢ್ಯದ ವಿರೋಧಿಗಳು ಎಂಬುದರ ಇಂಗಿತಾರ್ಥ ಅವರು ಮಡೆಸ್ನಾನ ಆಚರಣೆಯ ಸಮರ್ಥಕರೇ ಆಗಿರುವುದು.
ಹಾಗೆಯೇ ಮುಂದುವರೆದು…
“ಮನುವಿನಿಂದ ಮುಂದಿಡಲ್ಪಟ್ಟ, ಹಾಗು ಬ್ರಾಹಣೀಯ ಮೌಲ್ಯ, ನಮ್ಮ ಸಮಾಜವನ್ನು 4 ಭಾಗಗಳನ್ನಾಗಿ ಮಾಡಿ ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. ಇಂತಹ ಗುಣಾತ್ಮಕ ಚರ್ಚೆಗಳು ಈಗಾಗಲೇ ನಡೆಯುತ್ತಿವೆ” ಎಂಬ ನಿಮ್ಮ ವಾದ ಹೊಸದೇನಲ್ಲ. ಇಂತಹ ಹಳಸಲು ವಾದ ವಸಾಹತುಶಾಹಿಯ ಆಗಮನ ಕಾಲದಿಂದಲೂ ಭಾರತದಲ್ಲಿ ಇದೆ. ಇಂದಿಗೂ ಕೂಡ ಅದು ನಮ್ಮ ಸ್ವೀಕೃತ ಸತ್ಯವಾಗಿದೆ. ಅದು ನಿಮಗೂ ಗೊತ್ತಿರಬೇಕಲ್ಲ! ಅದನ್ನೆ ನಮ್ಮ ಸಮಾಜವಿಜ್ಞಾನ ಇಂದಿಗೂ ಹೇಳುತ್ತಿದೆ. ಇಂತಹ ವಾದಗಳಿಲ್ಲದಿದ್ದರೆ ನಮ್ಮ ಪ್ರಗತಿಪರರಿಗೆ ನೆಲೆಯೇ ಇಲ್ಲದಂತಾಗುತ್ತದೆ. ಆ ಭಯ ನಿಮ್ಮಲ್ಲೂ ಇದ್ದಹಾಗೆ ಕಾಣುತ್ತದೆ. (ಪ್ರಗತಿಪರರಿಗೆ ಆಚರಣೆಗಳು ಅರ್ಥವಾಗುತ್ತಿಲ್ಲ ಎಂದರೆ, ಇದುವರೆಗಿನ ಹಲವು ಚಳುವಳಿಗಳು ಮೌಲ್ಯಕಳೆದುಕೊಂಡುಬಿಡುತ್ತವೆ) ಎಂದು ಸಮರ್ಥಿಸಿಕೊಳ್ಳುವಾಗ ಅದು ಎದ್ದು ಕಾಣುತ್ತದೆ. ಒಬ್ಬ ಸಂಶೋಧಕನಾಗಿ ವಸ್ತು ಪಾತಳಿಯಲ್ಲಿ ವಿದ್ಯಮಾನವನ್ನು ನೋಡಿದರೆ ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ.
ಮಡೆಸ್ನಾನದ ಕುರಿತು ನಡೆಯುತ್ತಿರುವ ಚರ್ಚೆ ನಿಮಗೇಕೆ ಅರ್ಥವಾಗುತ್ತಿಲ್ಲ ಮತ್ತು ಅರ್ಥಹೀನ ವಾದಗಳನ್ನು ತಂದು ಹಗಲೆಲ್ಲಾ ಏಕೆ ಹಪಹಪಿಸುತ್ತೀದ್ದೀರಿ ಎಂದರೆ, ನಾವು ಮಾಡುತ್ತಿರುವ ಚರ್ಚೆಯು ಮಡೆಸ್ನಾನವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾಗಿದೆ, ಆದರೆ ನೀವು ಅದನ್ನು ಸರಿ ಅಥವಾ ತಪ್ಪು ಎಂಬ ಹಿನ್ನೆಲೆಯಿಂದ ನೋಡುತ್ತಿದ್ದೀರಿ, ಅವೆರಡು ಬೇರೆ ಬೇರೆ ವಲಯಗಳು, ಅಂದರೆ ಒಂದು ಮರದ ಕುರಿತು ವಿವರಣೆ ನೀಡುವುದು ಬೇರೆ, ಮರವು ಅಲ್ಲಿರಬೇಕೆ ಬೇಡವೇ ಎಂದು ನಿರ್ಣಯಿಸುವುದು ಬೇರೆ, ಆದ್ದರಿಂದ ನಾವು ಅರ್ಥ ಮಾಡಿಕೊಳ್ಳುವ ಪ್ರಸಂಗಕ್ಕೆ ಬಂದಾಗ ಬಹುತೇಕರು ಬೇರೆಯದೇ ಈಗಾಗಲೇ ಅಧ್ಯಯಯನ ಮಾಡದೆ ಹೊಂದಿರುವ ನಿಲುವಿನ ಆಧಾರದ ಮೇಲೆ ಅದರ ಕುರಿತು ಒಂದು ನೈತಿಕ ನಿರ್ಣಯ ಹೇರಲು ಬರುತ್ತಿದ್ದಾರೆ. ಆದರೆ ಅವೆರಡು ಬೇರೆ ಬೇರೆ
.
೧.ಮನುವುನಿಂದ ಮುಂದಿಡಲ್ಪಟ್ಟ, ಅಗೋಚರವಾದಂತಹ 4 ವರ್ಣಗಳು ನಿಮಗೆ ಹೇಗೆ ಕಂಡವೋ? ಇಂದಿಗೂ ಕೂಡ ಯಾವ ಬ್ರಾಹ್ಮಣರು ಮನುಸ್ಮೃತಿಯನ್ನು, ಅಥವಾ ಇತರೇ ಹಲವು ಜಾತಿಯವರು ಬ್ರಾಹ್ಮಣರನ್ನು ಕೇಳಿ ತಮ್ಮ ದಿನ ನಿತ್ಯದ ಮಸಾಲೆಯನ್ನು ಅರೆಯುತ್ತಾರೆ?
೨.ಆಚರಣೆಗಳು ಬ್ರಾಹ್ಮಣೀಕರಣಕ್ಕೆ ಒಳಗಾಗುವುದನ್ನು ಸಮಾಜ ವಿಜ್ಞಾನಗಳು ವಿರೋಧಿಸಿವೆ ಎಂಬ ವಾದವನ್ನು ನಿಮ್ಮ ಬೆಂಬಲಕ್ಕಿಟ್ಟುಕೊಂಡಿದ್ದೀರಿ, ಆದರೆ ಮಲೆಕುಡಿಯ ಜನಾಂಗ ಮಡೆಸ್ನಾನವನ್ನು ತನ್ನ ಆಚರಣೆಯನ್ನಾಗಿ ಆಚರಿಸುತ್ತಿದೆ. (ಇವರ ಸಂದರ್ಶನ ಮಾಡಿ ಕೇಳಿ) ಆದರೆ, ನೀವು (ಸೋ ಕಾಲ್ಡ್ ಪ್ರಗತಿಪರರು) ಮಲೆಕುಡಿಯರ ಆಚರಣೆಯನ್ನೇ ವಿರೋಧಿಸಿದಂತಾಗುತ್ತದೆಯಲ್ಲವೇ? ಇನ್ನು ಒಂದು ಸಾಧ್ಯತೆ ನೀವು ಹೇಳುವಂತೆ ಇದು ಬ್ರಾಹಣಶಾಹಿ ಹುಟ್ಟು ಹಾಕಿದ ಆಚರಣೆ ಎನ್ನುವುದು ಅಸ್ಪಷ್ಟವಾಗಿದೆ. ಬ್ರಾಹ್ಮಣೀಕರಣದ/ಸಂಸ್ಕೃತಾನುಕರಣದ ಕುರಿತು ಹೀಗೆ ಮೇಲ್ನೋಟದ ಸಂಗತಿಗಳ ಆಧಾರದ ಮೇಲೆ ಮಾತನಾಡುವುದಕ್ಕಿಂದ ಮೆಕ್ಕಿಮ್ ಮೆರಿಯಟ್ ರ ಪುಸ್ತಕವನ್ನು ಓದಿ ನೋಡಿ, ಅವರು ಸುಸ್ಪಷ್ಟವಾಗಿ ನೀವು ನಂಬಿಕೊಂಡಿರುವ ನಿಲುವನ್ನು ಹೇಗೆ ಪ್ರಶ್ನಿಸುತ್ತಾರೆ ಎಂದು.
೩. ಇನ್ನು ಭಾರತದ ಆಚರಣೆಗಳು ಬ್ರಾಹ್ಮಣ ಕೇಂದ್ರಿತ ಮೌಲ್ಯಗಳಿಂದ ಪ್ರಭಾವಿತವಾಗಿವೆ ಎಂದರೇ! ಇನ್ನೊಂದು ಕಡೆ ಜಾತಿ ವ್ಯವಸ್ಥೆ ಇಲ್ಲ ಎನ್ನುತ್ತೀರಿ. ಮತ್ತೊಂದು ಕಡೆ ವರ್ಣವ್ಯವಸ್ಥೆ ಸಮಾಜವಿಜ್ಞಾನ ಹೇಳುವಂತೆ ಇಲ್ಲ ಎನ್ನುತ್ತೀರಿ. ಇದು ನಿಮ್ಮಲ್ಲೇ ಇರುವ ಗೊಂದಲ ಮತ್ತು ಅಸಂಬದ್ಧತೆ.
೪. ಆಚರಣೆ ನಂಬಿಕೆಗಳೆ ಜನರ ಜೀವಾಳ ಎನ್ನುವಲ್ಲಿಯೂ ಕೂಡ ಆಚರಣೆಗಳನ್ನು ಅರ್ಥಮಾಡಿಕೊಳ್ಳದಿರುವುದು ಕಂಡುಬರುತ್ತದೆ. ದೇವರು ನಾವು ಇಡುವ ಎಡೆಯನ್ನು ನೈವೇದ್ಯವನ್ನು ಸ್ವೀಕರಿಸುವುದಿಲ್ಲ ಎಂದು ತಿಳಿದಿದ್ದರೂ ನಾವು ಅದನ್ನು ಮಾಡುತ್ತೇವೆ. ಅಂದರೆ ಇದರ ಹಿಂದೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಬಹುದು. ಹಿಂದೆ ಹಿರಿಯರು ನಮಗೆ ಅದನ್ನು ವರ್ಗಾಯಿಸಿದ್ದಾರೆ ನಾವು ಅನುಸರಿಸುತ್ತಿದೇವೆ ಅಷ್ಟೆ. ಆಚರಣೆ ನಂಬಿಕೆಗಳಿಗೂ ಯಾವುದೇ ಸಂಬಂಧವಿಲ್ಲ. ಜನರ ಜೀವಾಳವಾಗಿರುವ ನೀವು ಹೇಳಿದಂತೆ, ಇಲ್ಲದ ನಂಬಿಕೆಗಳನ್ನು ವಿರೋಧಿಸಿ ಆಚರಣೆಗಳನ್ನು ಮಾತ್ರ ವಿರೋಧಿಸುವುದಿಲ್ಲ ಎಂದರೆ ಅದಕ್ಕಿಂತ ಗೊಂದಲ ಮತ್ತೊಂದಿಲ್ಲ. ಇಲ್ಲದೆ ಇರುವುದನ್ನು ವಿರೋಧಿಸುತ್ತೀರಿ, ಹಾಗೂ ಇರುವುದನ್ನು ಮುಂದುವರೆಯಲಿ ಎನ್ನುತ್ತೀರಿ ಹಾಗಾದರೆ ನಿಮಗೂ ಹಿಂದುತ್ವದವರಿಗೂ ವ್ಯತ್ಯಾಸವಿರುವಂತೆ ತೋರುವುದಿಲ್ಲ. ಏಕೆಂದರೆ ಅವರು ಪಾಪ ನಿಮ್ಮ ಹಾಗೆಯೇ ಸಂಸ್ಕೃತಿಯಲ್ಲಿರುವ ಆಚರಣೆಗಳನ್ನು ವಿರೋಧಿಸುವುದಿಲ್ಲ, ಆದರೆ ಕ್ರಾಂತಿಕಾರಕವಾಗಿ ರಕ್ಷಿಸುತ್ತಾರೆ, ಆದರೆ ನೀವು ಸೌಮ್ಯವಾಗಿ ರಕ್ಷಿಸುತ್ತಿದ್ದೀರಿ ಅಷ್ಟೆ.







Leave it sir. We will practice this evil. Than you can be very happy. CSLC can do lot of research on this and publish in international conference to show how culturally vibrant our society. So that funds will flow from Belgium and other parts of the world for your institution. You can recruit some other young people and imbibe the same mind set to them.
ವಸಂತ ಅವರೆ,
ಇಲ್ಲಿ ನಡೆಯುತ್ತಿರುವ ಚರ್ಚೆಗೂ ನೀವು ಬರೆದಿರುವುದಕ್ಕೂ ಏನು ಸಂಬಂಧ? ಶಿವಕುಮಾರ ಅವರ ಲೇಖನಕ್ಕೆ ಸಂಬಂಧಿಸಿದಂತೆ ನೀವು ಪ್ರತಿಕ್ರಿಯೆ ಬರೆದಿದ್ದರೆ ಚೆನ್ನಾಗಿತ್ತು. ಆದರೆ ನೀವು ಬೇಡವಾದ ವಿಷಯಗಳ ಕುರಿತು ಬರೆದಿದ್ದೀರಿ. ಒಬ್ಬ ಓದುಗಳಾದ ನನಗೆ ಈ ವಿಷಯಗಳು ಯಾವ ಮಾಹಿತಿ ಅಥವ ಜ್ಞಾನ ನೀಡಲು ಸಾಧ್ಯ? ಆದರೆ, ನಿಮಗಿರುವ ’ವ್ಯಕ್ತಿಗತ ಅಸಹನ”ಯನ್ನು ಹೊರಹಾಕುತ್ತಿದ್ದಿರಿ ಎಂದು ನನಗೆ ಎನಿಸುತ್ತಿದೆ. ಇಂತಹ ಪ್ರತಿಕ್ರಿಯೆಗಳು ಯಾರಿಗೂ ಉಪಯೋಗವಿಲ್ಲ. ಹಾಗೆಯೇ ಈ ಬ್ಲಾಗ್ ನ ಉದ್ದೇಶವು ಕೂಡ ಬೇಡವಾದ ಇಂತಹ ವಿಷಯಗಳ ಕುರಿತು ಚರ್ಚೆ ನಡೆಸುವುದಲ್ಲ ಬದಲಿಗೆ, ವಿಷಯದ ಕುರಿತು ಚರ್ಚಿಸುವುದು. ಈ ಲೇಖನಕ್ಕೆ ಸಂಬಂಧಿಸಿದಂತೆ ನಿಮ್ಮ ನಿಲುವು ಅಥವ ಅಭಿಪ್ರಾಯವಿದ್ದರೆ ಬರೆಯಿರಿ ಆಗ ನಮ್ಮಂತಹ ಓದುಗರಿಗೆ ಅನುಕೂಲವಾಗುವುದು.
ಸಹನ, ದೊಡ್ಡಬಳ್ಳಾಪುರ
ಮಡೇಸ್ನಾನ ಮುಂದುವರೆಯಲಿ ಬಿಡಿ…. ಆದ್ರೆ, ಇಂತಹ ಆಚರಣೆ ಬಗ್ಗೆ ವೈಭವೀಕರಣ ಸಲ್ಲ…. ಯಾಕೆಂದ್ರೆ, ಆಯಾ ಪ್ರದೇಶಕ್ಕೆ ತಕ್ಕಂತೆ ಕೆಲ ಆಚರಣೆಗಳು ಇರುತ್ತೆ. ಅಷ್ಟಕ್ಕೂ ಆ ಆಚರಣೆಯನ್ನ ನೋಡಿದ್ರೆ, ಅಲ್ಲಾರೂ ಅನಕ್ಷರಸ್ಥರ ಹಾಗೇ ಕಾಣಲೇ ಇಲ್ಲ… ಎಲ್ರೂ ಓದಿದವರೇ ಅಂತಾ ಕಾಣುತ್ತೆ. ಇದ್ರ ವೈಭವೀಕರಣದಿಂದ ರಾಜ್ಯದ, ದೇಶದ ಮೂಲೆಮೂಲೆಯಿಂದ ಬರುವುದಕ್ಕೆ ಅವಕಾಶವಾಗುತ್ತೆ. ಈ ಬಗ್ಗೆ ಮಾತಾಡುವುದಕ್ಕಿಂತ ಮುಂಚೆ ನಮ್ಮನ್ನಾಳುವ ನಾಯಕರು ಎಷ್ಟರ ಮಟ್ಟಿಗೆ ಆಚರಣೆಗಳಲ್ಲಿ ಭಾಗವಹಿಸ್ತಾರೆ.. ಅವ್ರೇ ಹಾಗಾದ್ರೆ, ಪ್ರಜೆಗಳು ಅದೇ ಹಾದಿಲೀ ಸಾಗ್ತಾರೆ ಅಲ್ವೇ ?
ಪ್ರಿತಿಯ
ಶಿವಕುಮಾರ್ ಅವರೆ
ನಿಮ್ಮ ಪ್ರತಿಕ್ರಿಯೀಗೆ ಧನ್ಯವಾದಗಳು
೧) ನನ್ನ ವಾದ ಮಡೆ ಸ್ನಾನ ಎಂಬುದು ಒಂದು ಮೌದ್ಯವೇ ಹೊರತು ಆಚರಣೆ ಅಲ್ಲ ನಮ್ಮ ಸಾಮಾಜದಲ್ಲಿ ಹಲವಾರು ಆಚರಣೆಗಳಿವೆ ಆದರೆ ಬೆತ್ತಲೆ ಸೇವೆ, ಬಸವಿ ಬಿಡುವ ಪದ್ಧತಿ, ದಲಿತರ ಸಾಮಾಜಿಕ ಬಹಿಷ್ಕಾರ, ಮಡೆ ಸ್ನಾನ ಇತ್ಯಾದಿಗಳು ಆಚರಣೆಯ ಹೆಸರಿನಲ್ಲಿ ನಡೆಯುವ ಮೌದ್ಯಗಳು ಎಂಬುದಾಗಿದೆ. ಅದನ್ನೇ ವಿವರವಾಗಿ ಕೆಳಗಿನಂತೆ ಹೇಳಿದ್ದೇನೆ ಭಾರತದಂತಹ ಬಹುಸಂಸ್ಕ್ರತಿ ಸಮಾಜದಲ್ಲಿ ಇಲ್ಲಿ ಸಾವಿರಾರು ಆಚರಣೆಗಳಿವೆ ಲಕ್ಷಾಂತರ ನಂಬಿಕೆಗಳಿವೆ ಒಟ್ಟಾರೆ ಹೇಳುವುದಾರೆ ಆಚರಣೆ ಮತ್ತು ನಂಬಿಕೆಗಳೇ ಭಾರತದ ಜನಜೀವನದ ಜೀವಾಳ ಹೀಗಿರುವಾಗ ಪ್ರಗತಿಪರ ಸಂಘಟನೆಗಳು ಆಚರಣೆಗಳನ್ನು ವಿರೋಧಿಸುತ್ತಾರೆ ಎಂದು ಕಲ್ಪಿಸಿಕೊಳ್ಳುವುದು ಸಂಕುಚಿತ ಮನಸ್ಸಿನ ವಿಚಾರವಾಗುತ್ತದೆ. ಆಚರಣೆಯ ಹೆಸರಿನಲ್ಲಿ ನಡೆಯುವ ಮೌಢ್ಯತೆಯ ವಿರುಧ್ದ ಹೋರಾಡಿ ಯಶಸ್ವಿಯಾದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ ( ಉದಾ; ಚಂದ್ರಗುತ್ತಿಯ ಬೆತ್ತಲೆ ಸೇವೆ, ಉತ್ತರ ಕನರ್ಾಟಕದ ಬಸವಿ ಬಿಡುವ ಪದ್ಧತಿ ಇತ್ಯಾದಿಗಳನ್ನು ಹೆಸರಿಸಬಹುದು) ನಿಮಗೆ ಒಂದು ವಿಷಯ ತಿಳಿದಿರಲಿ ಇಂದು ಬ್ರಾಹ್ಮಣ ಶಾಹಿ ಎಂಬುದು ಒಂದು ಸಾಂಸ್ಥಿಕ ರೊಪಗಳಿಸಿಕೊಂಡಿದೆ ( ಒಂದು ಕಾಲದಲ್ಲಿ ಬ್ರಾಹ್ಮಣ ಶಾಹಿ ಬಳಸಿದ ವಿಧಾನಗಳನ್ನೇ ಬಳಸಿ ಹಲವಾರು ಜಾತಿಗಳು ಇದೆ ಹಾದಿ ಹಿಡಿದಿವೆ) ಇ ರೀತಿಯ ಮೌಡ್ಯಗಳನ್ನು ಆಚರಣೆಯ ಹೆಸರಿನಲ್ಲಿ ಮಟ, ಮಾನ್ಯ ಇತ್ಯಾದಿಗಳ ಮೂಲಕ ಬೆಳೆಸುತ್ತಾ, ಸಮಾಜದ ಸಾಮಾನ್ಯ ವಿದ್ಯಮಾನ ಎಂಬಂತೆ ಬಿಂಬಿಸುತ್ತಿವೆ. ವಿರೋಧಿಸಿದರೆ ಸಂಪ್ರದಾಯ, ಆಚರಣೆ, ಪರಂಪರೆ ಇತ್ಯಾದಿಗಳ ಹೆಸರಿನಲ್ಲಿ ತಾನೆ ಬೆಳೆಸಿದ ಪರಿಕಲ್ಪನೆಗಳ ಮೂಲಕ ರಕ್ಷಣೆ ಪಡೆಯುತ್ತಿದೆ. ಇನ್ನು ನನ್ನ ಪ್ರಕಾರ ಯಾವುದು ಮೌಡ್ಯ ಎಂದರೆ ಯಾವ ಸಂಗತಿಗಳು ಮನುಷ್ಯನ ನಾಗರೀಕ ಜೀವನಕ್ಕೆ ಅಪಮಾನ ಮಾಡುತ್ತವೆಯೋ, ಆತ್ಮ ಗೌರವಕ್ಕೆ ಧಕ್ಕೆ ತರುತ್ತವೆಯೋ ಅವನ್ನೇ ಮೌಡ್ಯ ಎನ್ನಬಹುದು.
೨)“ಮನುವಿನಿಂದ ಮುಂದಿಡಲ್ಪಟ್ಟ, ಹಾಗು ಬ್ರಾಹಣೀಯ ಮೌಲ್ಯ, ನಮ್ಮ ಸಮಾಜವನ್ನು 4 ಭಾಗಗಳನ್ನಾಗಿ ಮಾಡಿ ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. ಇಂತಹ ಗುಣಾತ್ಮಕ ಚರ್ಚೆಗಳು ಈಗಾಗಲೇ ನಡೆಯುತ್ತಿವೆ” ಎಂಬ ನಿಮ್ಮ ವಾದ ಹೊಸದೇನಲ್ಲ. ಇಂತಹ ಹಳಸಲು ವಾದ ವಸಾಹತುಶಾಹಿಯ ಆಗಮನ ಕಾಲದಿಂದಲೂ ಭಾರತದಲ್ಲಿ ಇದೆ. ಇಂದಿಗೂ ಕೂಡ ಅದು ನಮ್ಮ ಸ್ವೀಕೃತ ಸತ್ಯವಾಗಿದೆ. ಅದು ನಿಮಗೂ ಗೊತ್ತಿರಬೇಕಲ್ಲ! ಅದನ್ನೆ ನಮ್ಮ ಸಮಾಜವಿಜ್ಞಾನ ಇಂದಿಗೂ ಹೇಳುತ್ತಿದೆ. ಇಂತಹ ವಾದಗಳಿಲ್ಲದಿದ್ದರೆ ನಮ್ಮ ಪ್ರಗತಿಪರರಿಗೆ ನೆಲೆಯೇ ಇಲ್ಲದಂತಾಗುತ್ತದೆ. ಆ ಭಯ ನಿಮ್ಮಲ್ಲೂ ಇದ್ದಹಾಗೆ ಕಾಣುತ್ತದೆ.
* ನೀವು ಲೇಖನದ ನಿಮ್ಮ ವಾದಕ್ಕೆ ಪೂರಕವಾಗುವ ಆಯ್ದ ಭಾಗಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದಿರಿ ನಿಮ್ಮ ಮೇಲಿನ ಸಾಲು ಅದನ್ನೇ ಸೂಚಿಸುತ್ತದೆ ನೋಡಿ ನಾನು ಹೇಳಿರುವುದು ಹೀಗೆ ಮನುವಿನಿಂದ ಮುಂದಿಡಲ್ಪಟ್ಟು ಸಮಾಜದ ಎಲ್ಲಾ ಮಾನವರನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಬ್ರಾಹ್ಮಣಿಯ ಮೌಲ್ಯ, ಜೀವ ಮತ್ತು ಸಮಾನತೆಯ ವಿರೋಧಿಯೆಂದು ಭಾವಿಸಿದರೆ ತಪ್ಪಾಗಲಾರದು. ಈ ವಾದದದ ಸತ್ಯತೆ ಕುರಿತು ಹಲವಾರು ಗುಣಾತ್ಮಕ ಚರ್ಚೆಗಳು ಸಮಾಜ ವಿಜ್ಞಾನದಲ್ಲಿ ಈಗಾಗಲೇ ನಡೆಯುತ್ತಿವೆ ಅದು ಬೆರೆಯದೇ ವಿಚಾರ ಅಂದರೆ ಮನುವಿನಿಂದ ಮುಂದಿದಲ್ಪಟ್ಟ ಭಾರತದಲ್ಲಿ ಜಾತಿ ಪಧತಿಯಾ ವಿವರಣೆ ಇಗ ನಾವು ಸಮಾಜ ವಿಜ್ಞಾಗಳಲ್ಲಿ ಕಲಿಯುತ್ತಿರುವಂತೆ ಇಲ್ಲ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಶೂದ್ರ ಎಂಬ ವಿಂಗಡಣೆ ಇ ಸಮಾಜವನ್ನು ಅಧರಿಸಿಲ್ಲ ಎಂಬ ನನ್ನ ವಾದ ಬ್ರಾಹ್ಮಣಶಾಹಿಯಾ ಸಮರ್ಥನೆ ಖಂಡಿತ ಅಲ್ಲ ಉನ್ನತ ಜ್ಞಾನದ (ಸಂಪ್ರದಾಯ, ಆಚರಣೆ, ಪರಂಪರೆ) ಹೆಸರಿನಲ್ಲಿ ಶತಮಾನಗಳ ಅವರ ಶೋಷಣೆ ಖಂಡನೀಯ ಇದು ನನ್ನ ನಂಬಿಕೆ.
೩) ನಾವು ಮಾಡುತ್ತಿರುವ ಚರ್ಚೆಯು ಮಡೆಸ್ನಾನವನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬುದರ ಕುರಿತಾಗಿದೆ, ಆದರೆ ನೀವು ಅದನ್ನು ಸರಿ ಅಥವಾ ತಪ್ಪು ಎಂಬ ಹಿನ್ನೆಲೆಯಿಂದ ನೋಡುತ್ತಿದ್ದೀರಿ, ಅವೆರಡು ಬೇರೆ ಬೇರೆ ವಲಯಗಳು,
* ಖಂಡಿತ ಸರಿ ಆದರೆ ಬ್ರಾಹ್ಮಣ ಶಾಹಿ ಇದುವರೆಗೋ ತನ್ನ ತನವನ್ನು ರಕ್ಷಿಸಿಕೊಳ್ಳಲು ಸಂಪ್ರದಾಯ, ಆಚರಣೆ, ಪರಂಪರೆ ಇತ್ಯಾದಿಗಳ ಹೆಸರಿನಲ್ಲಿ ತಾನೆ ಬೆಳೆಸಿದ ಪರಿಕಲ್ಪನೆಗಳನ್ನು ಬಳಸಿಕೊಳ್ಳುತ್ತಿದೆ. ಮಡೆಸ್ನಾನ ಎಂಬ ಮೌದ್ಯವನ್ನು ಅರ್ಥಮಾಡಿಕೊಳ್ಳಲು ಸಂಶೋದನೆಯ ಹೆಸರಿನಲ್ಲಿ ತಾವು ಅದೇ ಆಚರಣೆ, ಪರಂಪರೆ ಇತ್ಯಾದಿಗಳ ಗುರಾಣಿ ಹಿಡಿದಿದ್ದಿರಲ್ಲ ಇದು ಎಲ್ಲೋ ಒಂದು ಕಡೆ ತಮ್ಮನ್ನು ಬ್ರಾಹ್ಮಣ ಶಾಹಿ ಪರ ಎನ್ನುವಂತೆ ಮಾಡುತ್ತದೆ. ನನ್ನ ಒಂದು ಪ್ರಶ್ನೆಗೆ ಉತ್ತರಿಸಿ ಜಾತಿ ವ್ಯವಸ್ಥೆಯ ಪ್ರಚಲಿತ ವಿವರಣೆ ನಮ್ಮ ಸಮಾಜದ ವಾಸ್ತವವನ್ನು ಅಧರಿಸಿಲ್ಲ ಎಂಬ ತಮ್ಮ ವಾದ ಇದುವರೆಗೂ ಬ್ರಾಹ್ಮಣರು ಜಾತಿಯನ್ನು ಆಧರಿಸಿ ಯಾವ ತಳ ವರ್ಗವನ್ನು ಶೋಷಿಸಿಲ್ಲ ಎಂಬುದೇ ?
೩)ಮನುವುನಿಂದ ಮುಂದಿಡಲ್ಪಟ್ಟ, ಅಗೋಚರವಾದಂತಹ 4 ವರ್ಣಗಳು ನಿಮಗೆ ಹೇಗೆ ಕಂಡವೋ? ಇಂದಿಗೂ ಕೂಡ ಯಾವ ಬ್ರಾಹ್ಮಣರು ಮನುಸ್ಮೃತಿಯನ್ನು, ಅಥವಾ ಇತರೇ ಹಲವು ಜಾತಿಯವರು ಬ್ರಾಹ್ಮಣರನ್ನು ಕೇಳಿ ತಮ್ಮ ದಿನ ನಿತ್ಯದ ಮಸಾಲೆಯನ್ನು ಅರೆಯುತ್ತಾರೆ?
*ಜಾತಿಯ ಕುರಿತಾದ ಒಂದು ಮುಖದ ಸಂಶೋದನೆ ನೋಡಿದವರಿಗೆ ಖಂಡಿತ ನಿಮ್ಮ ಹಾಗೆ ಅನ್ನಿಸುತ್ತದೆ ಆದರೆ ಜಾತಿ ಕುರಿತಾದ ಸಂಶೋದನೆಗೆ ಇನ್ನೊಂದು ಮುಖವು ಇದೆ ಉದಾ; ಗುಪ್ತಾರವರ ಪ್ರಕಾರ ಜಾತಿಯ ಬಗ್ಗೆ ಬೌದ್ಧಿಕ ಕ್ಷೇತ್ರದಲ್ಲಿ ನಡೆಯುತ್ತಿರುವ ಬಹುಪಾಲು ಚಚರ್ೆಗಳೆಲ್ಲವೂ ಬ್ರಾಹ್ಮಣೀಯ ಸಾಂಸ್ಕೃತಿಕ ಪಠ್ಯಗಳನ್ನಾಧರಿಸಿ, ಭಾರತೀಯ ಅಧ್ಯಯನದ ನೆಲೆಗಳನ್ನು ವಿವರಿಸಿವೆ. ಆದ್ದರಿಂದ ಇವು ಜಾತಿಯ ಬಗೆಗೆ ಬ್ರಾಹ್ಮಣರು ಹೊಂದಿರುವ ಅಭಿಪ್ರಾಯವನ್ನು ಮಾತ್ರ ಪ್ರತಿಬಿಂಬಿಸುವಂತಹುಗಳಾಗಿವೆ. ಮೇಲ್ಜಾತಿಗಳು ಈ ಭಾರತಶಾಸ್ತ್ರೀಯ ಗ್ರಂಥ ದೃಷ್ಟಿ ಅಧ್ಯಯನಗಳನ್ನು ಜಾತಿ ವ್ಯವಸ್ಥೆಯ ಸಮರ್ಥನೆಗಾಗಿ ಆಧರಿಸಿವೆ ಎಂದು ವಾದಿಸುತ್ತಾರೆ ಮುಂದುವರಿದು ೨೦ನೆ ಶತಮಾನದ ಜಾತಿ ಪದ್ದತಿಯು ತನ್ನ ಸಾಂಪ್ರದಾಯಿಕ ಗುಣ ಲಕ್ಷಣಗಳನ್ನು ಕಳೆದುಕೊಂಡಿದೆ ಎಂದು ಆನಂದ್ ತೆಲ್ತುಮ್ದೆ ಎಂಬ ಚಿಂತಕರು ವಾದಿಸುತ್ತಾರೆ. ಆದರೆ ತಾವು ಅದೇ ಸಾಂಪ್ರದಾಯಿಕ ಗುಣಗಳನ್ನು ಇಂದಿನ ಜಾತಿಗಳ ನಡುವೆ ಹುಡುಕಿ ಅವು ಸಿಗದಿದ್ದಾಗ ಅಯ್ಯೋ ಜಾತಿ ಪದ್ಧತಿ ಎಂಬುದು ಕ್ರಿಶ್ಚಿಯನ್ ಚಿಂತನೆಯ ಭಾಗ ಅಷ್ಟೇ ಅದು ಭಾರತದ ವಾಸ್ತವ ಅಲ್ಲ ಎನ್ನುತ್ತಿರ. ಮುನ್ದುವರಿದು ಬ್ರಾಹ್ಮಣರು ಮನುಸ್ಮೃತಿಯನ್ನು, ಅಥವಾ ಇತರೇ ಹಲವು ಜಾತಿಯವರು ಬ್ರಾಹ್ಮಣರನ್ನು ಕೇಳಿ ತಮ್ಮ ದಿನ ನಿತ್ಯದ ಮಸಾಲೆಯನ್ನು ಅರೆಯುತ್ತಿಲ್ಲ ಎಂಬ ತಿರ್ಮಾನಕ್ಕೆ ಬರುತ್ತಿರ. ಅದರೆ ಈಗಾಗಲೆ ಸಾಂಪ್ರದಾಯಿಕ ಗುಣ ಲಕ್ಷಣಗಳ ಅಚೆಗೆ ಸಾಂಸ್ಥಿಕರಣಗೊಳುತ್ತಿರುವ ಜಿಗುಟು ನವಬ್ರಾಹ್ಮಣರ ಈ ರಾಜಕೀಯ ಕ್ಯಾಂಪೇನ್ ಎಲ್ಲಕ್ಕಿಂತ ಅಪಾಯಕಾರಿ!! ಅದರ ಕುರಿತು ಯೋಚಿಸಿ (ಇ ಕುರಿತ ನನ್ನ ಓದು ಇನ್ನು ಸಾಗುತ್ತಿದೆ ಮುನ್ದಿನ ದಿನಗಳಲ್ಲಿ ಇನ್ನು ಹೆಚ್ಹಿನ ವಿವರ ಸಿಗಬಹುದು)
೪) ಆಚರಣೆಗಳು ಬ್ರಾಹ್ಮಣೀಕರಣಕ್ಕೆ ಒಳಗಾಗುವುದನ್ನು ಸಮಾಜ ವಿಜ್ಞಾನಗಳು ವಿರೋಧಿಸಿವೆ ಎಂಬ ವಾದವನ್ನು ನಿಮ್ಮ ಬೆಂಬಲಕ್ಕಿಟ್ಟುಕೊಂಡಿದ್ದೀರಿ, ಆದರೆ ಮಲೆಕುಡಿಯ ಜನಾಂಗ ಮಡೆಸ್ನಾನವನ್ನು ತನ್ನ ಆಚರಣೆಯನ್ನಾಗಿ ಆಚರಿಸುತ್ತಿದೆ. (ಇವರ ಸಂದರ್ಶನ ಮಾಡಿ ಕೇಳಿ) ಆದರೆ, ನೀವು (ಸೋ ಕಾಲ್ಡ್ ಪ್ರಗತಿಪರರು) ಮಲೆಕುಡಿಯರ ಆಚರಣೆಯನ್ನೇ ವಿರೋಧಿಸಿದಂತಾಗುತ್ತದೆಯಲ್ಲವೇ? ಇನ್ನು ಒಂದು ಸಾಧ್ಯತೆ ನೀವು ಹೇಳುವಂತೆ ಇದು ಬ್ರಾಹಣಶಾಹಿ ಹುಟ್ಟು ಹಾಕಿದ ಆಚರಣೆ ಎನ್ನುವುದು ಅಸ್ಪಷ್ಟವಾಗಿದೆ.
*ಮಲೆಕುಡಿಯರ ಬುಡಕಟ್ಟು ಹಿನ್ನೆಲೆಯ ಮೂಲನಿವಾಸಿ ಸಂಸ್ಕೃತಿಯೊಳಗೆ ಪ್ರಕೃತಿ ಆರಾಧನೆಯಂಥಹ ಭೂಮಿ ಕೇಂದ್ರಿತ ಆಚರಣೆಗಳಿದ್ದವೇ ಹೊರತು ಮೂರ್ತಿಪೂಜೆಯ ಇತಿಹಾಸ ಅವರದ್ದಾಗಿರಲಿಲ್ಲ. ಕುಕ್ಕೆ ಸುಬ್ರಮಣ್ಯದ ಮೂರ್ತಿಪೂಜೆ, ಉಂಡೆಲೆಯ ಮೇಲೆ ಉರುಳುವ ಮತ್ತು ರಥ ಕಟ್ಟುವ ಆಚರಣೆಗಳು ಅವರ ಮೇಲೆ ಹೇರಿದವಂತೆ ಕಾಣಿಸುತ್ತವೆಯೇ ಹೊರತು, ಅವರ ಮೂಲ ಸಂಸ್ಕೃತಿಯಂತೆ ಎಲ್ಲಿಯೂ ಕಾಣಿಸೋದಿಲ್ಲ. ದೇವಾಲಯದಲ್ಲಿ ಕೆಲಸ ಮಾಡುವ ನಾಲ್ಕು ಮಲೆಕುಡಿ ಜನರ ಸಂದರ್ಶನ ನವಬ್ರಾಹ್ಮಣರ ನವ ನಾಟಕದ ಭಾಗ ಅಷ್ಟೇ ಇ ಸಾಲಿಗೆ ಕನ್ನಡ ಪ್ರಭ ವರದಿಯನ್ನು ಸೇರಿಸಿಕೊಳ್ಳಿ, ಮಲೆಕುಡಿಯ (ತಮಿಳಿನ ಬೆಟ್ಟಕುಟುಂಬ) ಹೆಸರೇ ಹೇಳುವಂತೆ ಭೂಮಿಗಷ್ಟೇ ನಿಷ್ಠವಾಗಿರುವ ಶ್ರೀಮಂತ ಸಂಸ್ಕೃತಿಯ ಮೇಲೆ ಮೂರ್ತಿಪೂಜೆ…ಯನ್ನು ಹೇರಿದ್ದೂ ಅಲ್ಲದೇ ಅದು ಅವರ ಸಂಸ್ಕೃತಿ ಮತ್ತು ಆಚರಣೆಯೆಂಬಂತೆ ಸುಳ್ಳು ಪೋಣಿಸುತ್ತಿರುವ ಗಡದ್ದಾಗಿ ಉಂಡೆದ್ದು ಹೋಗುವರನ್ನ ಏನು ಮಾಡೋಣ? ಉಂಡೆದ್ದು ಹೋಗುವರ ಸಂಸ್ಕೃತಿ ಈ ದೇಶದ ಮುಕ್ಕಾಲುಪಾಲುವಾಸಿ ಜನರ ಸಂಸ್ಕೃತಿಯೂ ಅಲ್ಲ, ಅಸಹ್ಯವೂ ವಿಕೃತಿಯೂ ಆದ ಮೌಡ್ಯಗಳನ್ನು ನಂಬಿಕೆಯ ಸಂಪ್ರದಾಯ, ಆಚರಣೆ, ಪರಂಪರೆಗಳ ಹೆಸರಿನ ಮೇಲೆ ರೂಢಿಗತಗೊಳಿಸಲು ಹೊರಟವರು ಯಾರ ಕಿವಿಯ ಮೇಲೆ ಕಳ್ಳಿ ಹೂವು ಇಡಲು ಯತ್ನಿಸುತ್ತಿದ್ದಾರೋ ಗೊತ್ತಿಲ್ಲ.
5) ಆಚರಣೆ ನಂಬಿಕೆಗಳೆ ಜನರ ಜೀವಾಳ ಎನ್ನುವಲ್ಲಿಯೂ ಕೂಡ ಆಚರಣೆಗಳನ್ನು ಅರ್ಥಮಾಡಿಕೊಳ್ಳದಿರುವುದು ಕಂಡುಬರುತ್ತದೆ. ದೇವರು ನಾವು ಇಡುವ ಎಡೆಯನ್ನು ನೈವೇದ್ಯವನ್ನು ಸ್ವೀಕರಿಸುವುದಿಲ್ಲ ಎಂದು ತಿಳಿದಿದ್ದರೂ ನಾವು ಅದನ್ನು ಮಾಡುತ್ತೇವೆ. ಅಂದರೆ ಇದರ ಹಿಂದೆ ನಂಬಿಕೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸಬಹುದು. ಹಿಂದೆ ಹಿರಿಯರು ನಮಗೆ ಅದನ್ನು ವರ್ಗಾಯಿಸಿದ್ದಾರೆ ನಾವು ಅನುಸರಿಸುತ್ತಿದೇವೆ ಅಷ್ಟೆ. ಆಚರಣೆ ನಂಬಿಕೆಗಳಿಗೂ ಯಾವುದೇ ಸಂಬಂಧವಿಲ್ಲ.
*ಇಸ್ಲಾಂ, ಕ್ರಿಶ್ಚಿಯಾನಿಟಿಯಲ್ಲಿ ಒಂದು ಘಟನೆಯಲ್ಲಿ ಪಾಲ್ಗೊಳ್ಳುವ ೧೦೦ ಜನರಿಗೆ ಒಂದೇ ಕರಣ ಇರುತ್ತದೆ like ಚರ್ಚಿಗೆ ಯಾಕೆ ಹೋಗುತ್ತಿರ ಎಂದು ಕೇಳಿದರೆ ಹೋದ ೧೦೦ ಜನ ಬಹುಪಾಲು ಒಂದೇ ಉತ್ತರ ಕೊಡುತ್ತಾರೆ ಭಾರತದಲ್ಲಿ ಒಂದು ಘಟನೆಗೆ ಅದರಲ್ಲಿ ಪಾಲ್ಗೊಂಡ ೧೦೦ ಜನರಿಗೆ ನೋರು ಕಾರಣಗಳಿರುತ್ತವೆ ನೋಡಿ ಇಗ ಅರಳಿಕಟ್ಟೆಯನ್ನು ಸಾವಿರಾರು ಜನ ಸುತ್ತುತ್ತಾರೆ . ಎಲ್ಲರನ್ನು ಸೇರಿ ಒಂದೇ ಕರಣ ಎರಬೇಕಿಂದಿಲ್ಲ ಒಬ್ಬರಿಗೆ ಅರೋಗ್ಯ ಸರಿ ಹೋಗಲಿ ಎನ್ನುವುದು ಕಾರಣವಾದರೆ, ಇನ್ನೊಬ್ಬರಿಗೆ ಬೇಗ ಕೆಲಸ ಸಿಗಲಿ ಎಂಬಕಾರಣ ಇರುತ್ತದೆ, ಕಾರಣವೆ ಇಲ್ಲದೆ ಯಾರು ಯಾವ ಕೆಲಸ ಮಾಡುವುದಿಲ್ಲ ಹಾಗೆ ನೋಡಿದರೆ ಹಿಂದೆ ಹಿರಿಯರು ನಮಗೆ ಬಂದಿದೆ ಅದ್ದರಿಂದ ಮಾಡುತ್ತಿದ್ದೇವೆ ಎಂಬುದೇ ಅ ಕ್ರಿಯೆಯ ಹಿಂದಿನ ಇಲ್ಲಿನ ನಂಬಿಕೆ ಅಷ್ಟೇ ಆದರೆ ನೀವು ನಂಬಿಕೆಯನ್ನು ನೀವು ಬಿಲೀಫ್ಫ್ ರೀತಿಯಲ್ಲಿ ಅರ್ಥಮಾಡಿ ಕೊಳ್ಳುತ್ತಿದ್ದಿರ ಅಷ್ಟೇ
6) ಇನ್ನು ಭಾರತದ ಆಚರಣೆಗಳು ಬ್ರಾಹ್ಮಣ ಕೇಂದ್ರಿತ ಮೌಲ್ಯಗಳಿಂದ ಪ್ರಭಾವಿತವಾಗಿವೆ ಎಂದರೇ! ಇನ್ನೊಂದು ಕಡೆ ಜಾತಿ ವ್ಯವಸ್ಥೆ ಇಲ್ಲ ಎನ್ನುತ್ತೀರಿ. ಮತ್ತೊಂದು ಕಡೆ ವರ್ಣವ್ಯವಸ್ಥೆ ಸಮಾಜವಿಜ್ಞಾನ ಹೇಳುವಂತೆ ಇಲ್ಲ ಎನ್ನುತ್ತೀರಿ. ಇದು ನಿಮ್ಮಲ್ಲೇ ಇರುವ ಗೊಂದಲ ಮತ್ತು ಅಸಂಬದ್ಧತೆ.
*ಅದು ಅಸಂಬದ್ಧತೆ. ಒಂದು ವಿಷಯದ ಕುರಿತು ಯೋಚಿಸುವಾಗಿ ಅನಿವಾರ್ಯವಾಗಿ ಆಗುವ ಗೊಂದಲಗಳು ಮತ್ತು ಅದು ಕಲಿಯುವ ಲಕ್ಷಣ ಕೊಡ ಹೌದು