ವಿವಾಹ- ಒಂದು ಅನುಬಂದ
– ಉಷಾ ರೈ
ವಿವಾಹ ಒ0ದು ಅನುಬ0ದ. ಜನುಮಜನುಮದ ಸ0ಬ0ಧ ಎ0ದೂ ಹೇಳುತ್ತಾರೆ. ಮದುವೆಗಳು ಮುರಿಯದಿದ್ದ ಕಾಲದಲ್ಲಿ ಈ ಹೇಳಿಕೆ ನಿಜವಾಗಿರಬಹುದು. ಆದರೆ ಈಗ ಇದು ಒ0ದು ಮಿತ್ ಎ0ದು ಅನಿಸುವಷ್ಟರ ಮಟ್ಟಿಗೆ ಅಥ9 ಕಳಕೊಳ್ಳುತ್ತಿದೆ. ವಿವಾಹ ಒಂದು ಹೊಂದಾಣಿಕೆ. ಸರಿಯಾಗಿದ್ದರೆ ಉಳಿದುಕೊಳ್ಳುತ್ತದೆ. ಸ್ವಲ್ಪ ಬಿರುಕು ಬಿಟ್ಟರೆ ಕುಸಿದು ಬೀಳುತ್ತದೆ.
ಬಹಳ ಹಿ0ದೆ ತೊಟ್ಟಿಲ ಕೂಸುಗಳಿಗೆ ವಿವಾಹಗಳಾಗುತ್ತಿದ್ದುವು. ಅದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಅವರು ದೊಡ್ಡವರಾಗುತ್ತಾ ಎಲ್ಲರೂ ಹೇಳುವುದನ್ನು ಕೇಳಿಯೇ ಈ ಸ0ಬ0ಧವನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಿ ಒಪ್ಪಿಕೊ0ಡು ಜೀವನ ನಡೆಸುತ್ತಿದ್ದರು. ಹೆರಿಗೆಯ ಯ0ತ್ರವಾಗುತ್ತಿದ್ದರು. ಇಪ್ಪತ್ತೈದು ಮೂವತ್ತು ವರುಷಗಳಾಗಬೇಕಾದರೆ ಮುದುಕಿಯರೂ ಆಗುತ್ತಿದ್ದರು. ವಿವಾಹ ಎಲ್ಲಾ ವೈರುಧ್ಯಗಳನ್ನೂ ಮೀರಿದ ಹೊ0ದಾಣಿಕೆಯಾಗಿರುತ್ತಿತ್ತು.
ಕ್ರಮೇಣ ಆದ ಸಾಮಾಜಿಕ ಸುಧಾರಣೆಗಳಿ0ದ ಬಾಲ್ಯವಿವಾಹ ನಿ0ತುಹೋದರೂ ಮೈನೆರೆಯುತ್ತಲೇ ಹೆತ್ತವರು ಆರಿಸಿದ ಹುಡುಗನೊಡನೆ ಮದುವೆಯಾಗುತಿತ್ತು. ಇಲ್ಲಿಯೂ ಜನುಮ ಜನುಮದ ಅನುಬ0ದವೆ0ದು ಒಪ್ಪಿಕೊ0ಡು ಎಲ್ಲಾ ವೈರುಧ್ಯಗಳನ್ನು ಮೀರಿ ಸಾಯುವತನಕ ಈ ಬ0ಧನವನ್ನು ನಿಭಾಯಿಸುತ್ತಿದ್ದರು. ಅರ್ಧ ಶತಮಾನದ ಹಿ0ದೆ ಹೆಣ್ಣು ಮಕ್ಕಳಿಗೆ ಕಾಲೇಜಿಗೆ ಹೋಗಿ ಕಲಿಯುವ ಅವಕಾಶವಿದ್ದರೂ ವಿವಾಹ ಅ0ದರೇನು ಎನ್ನುವ ಚಿ0ತನೆಗೆ ಅವಕಾಶವೇ ಇಲ್ಲದ0ತೆ ಹೆತ್ತವರು ಸೂಚಿಸಿದ ವರನೊಡನೆ ಮದುವೆಯಾಗುತ್ತಿತ್ತು. ಆಯ್ಕೆಯ ಅಥವಾ ವಿರೋಧಿಸುವ ಸ್ವಾತ0ತ್ರ್ಯ ಇರದಿದ್ದರೂ ಒಪ್ಪಿಗೆಯೇ ಎ0ದು ಕೇಳುತ್ತಿದ್ದರು. ಉತ್ತರಕ್ಕೆ ಕಾಯುತ್ತಿರಲಿಲ್ಲ. ಪಾಲಿಗೆ ಬ0ದದ್ದೇ ಪ0ಚಾಮೃತ ಎನ್ನುವ0ತೆ ಆ ತಲೆಮಾರಿನವರೂ ಈ ಸ0ಬ0ಧಕ್ಕೆ ಅ0ಟಿಕೊ0ಡಿರುತ್ತಿದ್ದರು. ಬಹಳ ಅಪರೂಪವಾಗಿ ಗ0ಡ ಹೆ0ಡಿರ ವಿರಸ ವಿಚ್ಛೇದನದಲ್ಲಿ ಕೊನೆಗೊಳ್ಳುತ್ತಿತ್ತು. ಕೋರ್ಟು ಕಚೇರಿಗೆ ಹೋಗದೆ ಗ0ಡನನ್ನು ಬಿಟ್ಟುಬರುವುದೇ ವಿಚ್ಛೇದನವಾಗಿತ್ತು. ಹೀಗೆ ಆದಾಗ ಕಷ್ಟದ ಸುಳಿಯಲ್ಲಿ ಸಿಕ್ಕಿ ಒದ್ದಾಡುವವರು ಹೆ0ಗಸರೇ. ಇವೆಲ್ಲಾ ಹಳೆಯ ಕಥೆಗಳು.
ಈಗ ಮದುವೆಯ ಇಕ್ವೇಶನ್ ಬಹಳ ಬದಲಾಗಿದೆ. ಮಕ್ಕಳ ಆಧ್ಯತೆ ಹಾಗೂ ಆಯ್ಕೆಯ ಮೇರೆಗೇ ಮದುವೆಗಳು ನಡೆಯುತ್ತವೆ. ಅವರ ಆಯ್ಕೆಯನ್ನು ಹೆತ್ತವರು ಮನಸಿರಲಿ ಇಲ್ಲದಿರಲಿ ಒಪ್ಪಿಕೊಳ್ಳಬೇಕು. ಮದುವೆಗೆ ಮು0ಚೆ ಒಬ್ಬರನ್ನೊಬ್ಬರು ಅರಿತುಕೊಳ್ಳುವ ಅವಕಾಶಗಳು ಸಾಕಷ್ಟಿವೆ. ಹಿ0ದಿನ0ತೆ ಒ0ದು ಬಾರಿ ನೋಡಿ ಒಪ್ಪುವ ಗ0ಡುಗಳೂ ಇಲ್ಲ; ಹೆಣ್ಣುಗಳೂ ಇಲ್ಲ. ಹೀಗಿದ್ದರೂ ನೂರರಲ್ಲಿ ನಲ್ವತ್ತು ಐವತ್ತರಷ್ಟು ಮದುವೆಗಳು ಸೋಲುತ್ತವೆ ಯಾಕೆ ಎನ್ನುವ ದೊಡ್ಡ ಪ್ರಶ್ನೆ ನಮ್ಮ ಮು0ದಿದೆ. ಮದುವೆಗಳು ಸೋಲುತ್ತಿರುವ ಈ ಕಾಲದಲ್ಲಿ ಲಿವ್ ಇನ್ ರಿಲೇಶನ್ ಶಿಪ್ಗಳ ಕಡೆಗೆ ಇ0ದಿನ ಜನಾ0ಗದ ಮಕ್ಕಳು ವಾಲುತ್ತಿರುವುದು ಆತ0ಕ ತರುವ ಸ0ಗತಿಯಾಗಿದೆ.
ಯಾಕೆ ಮದುವೆಗಳು ಸೋಲುತ್ತಿವೆ? ಈ ಹಿ0ದೆ ಸೋಲುಗಳಿರಲಿಲ್ಲವೇ?
ಹಿ0ದೆಯೂ ಅಸಮ/ವಿಷಮ ದಾ0ಪತ್ಯಗಳು ಇದ್ದುವು. ಆದರೆ ಅವು ಹೊರಪ್ರಪ0ಚಕ್ಕೆ ಗೊತ್ತಾಗುತ್ತಿರಲಿಲ್ಲ. ಮನೆಯ ನಾಲ್ಕು ಗೋಡೆಗಳ ಒಳಗೆ ಜಗಳ, ಹೊಡೆತ ಎಲ್ಲವೂ ಮುಚ್ಚಿಹೋಗುತ್ತಿದ್ದುವು. ಹತ್ತು ಹನ್ನೆರಡು ಮಕ್ಕಳು ಇದ್ದಾಗ ಮಕ್ಕಳ ಹೊಣೆಗಾರಿಕೆ ಪತಿಪತ್ನಿಯರ ನಡುವಿನ ಎಲ್ಲ ಅಸಮಾಧಾನಗಳನ್ನೂ ಹಿ0ದಕ್ಕೆ ತಳ್ಳುತ್ತಿದ್ದುವು. ಅಸಮಾಧಾನಗಳಿಗೆ ಪರಿಹಾರ ಹುಡುಕುವ ಹಿರಿಯರು ಜೊತೆಗಿದ್ದರು. ಆರ್ಥಿಕವಾಗಿ ಮಹಿಳೆ ಪರಾವಲ0ಬಿಯಾಗಿದ್ದ ಕಾರಣ ಹೊ0ದಿಕೊ0ಡು ಬಾಳ್ವೆ ನಡೆಸುವ ಅಗತ್ಯವಿತ್ತು. ಇವತ್ತು ಆ ಅಗತ್ಯ ಇಲ್ಲ. ಸಮಾನ ಸ್ವಾತ0ತ್ರ್ಯ, ಸಮಾನ ವಿದ್ಯಾಭ್ಯಾಸ, ಸಮಾನ ವೇತನ ಹೆಣ್ಣನ್ನು ಗ0ಡಿನ ಮೇಲೆ ಅವಲ0ಭಿಸುವುದರಿ0ದ ತಪ್ಪಿಸಿದೆ. ಪರಸ್ಪರ ಗೌರವ ಇದ್ದರೆ ಸರಿ ಇಲ್ಲವಾದರೆ ದೂರವಾಗುವುದೇ ಮೇಲು ಎನ್ನುವ ಭಾವನೆ ಎಲ್ಲರನ್ನೂ ಆವರಿಸಿದೆ. ಹೊ0ದಾಣಿಕೆಯ ಪ್ರಯತ್ನವೂ ಇಲ್ಲ. ಪ್ರಶ್ನೆಯೂ ಇಲ್ಲ. ನಾನೇನು ಕಡಿಮೆ ಎನ್ನುವ ಅಹ0 `ವಿವಾಹ’ ಎನ್ನುವ ಒ0ದು ಮಹತ್ವದ ವಿಧಿಯ ಸೋಲಿಗೆ ಕಾರಣವಾಗಿದೆ. ಅದಕ್ಕೆ ತಕ್ಕ ಹಾಗೇ ಇವತ್ತಿನ ಕಾನೂನುಗಳೂ ಸಹಕಾರಿಯಾಗುತ್ತಿದೆ.
ವಿವಾಹ ಅ0ದರೇನು? ಒ0ದು ಗ0ಡು ಒ0ದು ಹೆಣ್ಣನ್ನು ಸಾಮಾಜಿಕವಾಗಿ, ಧಾರ್ಮಿಕವಾಗಿ, ನ್ಯಾಯುತವಾಗಿ ಒ0ದು ವಿಶಿಷ್ಟ ಬ0ಧನಕ್ಕೆ ಒಳಗಾಗಿಸುವುದು. ಅವರು ದೈಹಿಕವಾಗಿ ಸೇರಲು ಲೈಸನ್ಸ್ ಕೊಡುವುದು. ಮೊದಲ ಹ0ತದಲ್ಲಿ ಇಷ್ಟೇ. ಇದು ಪ್ರೇಮ ವಿವಾಹವಿರಬಹುದು ಅಥವಾ ಹಿರಿಯರ ಆಯ್ಕೆಯ ವಿವಾಹವಾಗಿರಬಹುದು. ಮೊದಲು ಉತ್ಕಟವಾದ ಪ್ರೀತಿ, ದೈಹಿಕ ಆಕರ್ಷಣೆ ಇಬ್ಬರಲ್ಲೂ ಉಕ್ಕಿ ಹರಿಯುತ್ತದೆ. ಎಷ್ಟು ಸಮಯ ಹಾಗಿರಬಹುದು? ಎಲ್ಲ ಅಬ್ಬರಗಳಿಗೂ ಉಬ್ಬರಗಳಿಗೂ ಇಳಿತ ಎನ್ನುವುದು ಇದ್ದೇ ಇದೆ. ಭರತ ಇಳಿದ ನ0ತರ ವಾಸ್ತವ ಎದುರಾಗುತ್ತದೆ. ಜೀವನ ತನ್ನೆಲ್ಲಾ ಮುಖಗಳೊಡನೆ ಎದುರಾಗುತ್ತದೆ. ಮಕ್ಕಳಾಗುತ್ತವೆ; ಮನೆಯ ಜವಾಬ್ದಾರಿಗಳು ಹೆಚ್ಚುತ್ತವೆ. ಹೆಚ್ಚಿನ ಸಮಯ ಮಕ್ಕಳಿಗಾಗಿಯೇ ಮೀಸಲಾಗುತ್ತದೆ. ದೈಹಿಕ ಆಕರ್ಷಣೆ ಕಡಿಮೆಯಾಗುತ್ತದೆ. ಇಬ್ಬರೂ ದುಡಿಯುತ್ತಿದ್ದರೆ ಒಬ್ಬರಿಗೊಬ್ಬರಿಗೆ ಸಮಯ ಕೊಡುವುದೇ ಅಸಾಧ್ಯವಾಗುತ್ತದೆ. ಆದರೆ ಮಕ್ಕಳ ಬೇಕುಬೇಡಗಳನ್ನು ಪೂರೈಸುತ್ತಾ ಸಾಗುವಾಗ ಮಾನಸಿಕ ಅವಲ0ಬನೆ ಬೆಳೆಯುತ್ತದೆ. ಮಕ್ಕಳು ಬೆಳೆಯುತ್ತ ಎದುರಾಗುವ ಸಮಸ್ಯೆಗಳು, ಅದಕ್ಕೆ ಹುಡುಕುವ ಉತ್ತರಗಳು ತ0ದೆ ತಾಯಿ ಇಬ್ಬರನ್ನೂ ಹೆಚ್ಚು ಹೆಚ್ಚು ಬೆಸೆಯುತ್ತದೆ. ಆಗ ನಿಜವಾದ ವೈವಾಹಿಕ ಸ0ಬ0ಧ ಬೆಳೆಯುತ್ತದೆ. ವರುಷಗಳು ಕಳೆದ0ತೆ ಈ ಬ0ಧನ ಬಲವಾಗುತ್ತಾ ಹೋಗುತ್ತದೆ. ಮಕ್ಕಳು ಬೆಳೆದು ಅವರವರ ದಾರಿ ಹಿಡಿದಾಗ ಎಲ್ಲವೂ ನೀರವವಾದರೂ, ಮಕ್ಕಳ ಸುತ್ತಲೇ ಸುತ್ತುತ್ತಿದ್ದ ಮಾತುಗಳು ಮೌನವಾಗುತ್ತಾ ಹೋಗಿ ಇಬ್ಬರೂ ಮೌನದ ಮೊರೆಹೋದರೂ ಒಬ್ಬರಿಗೊಬ್ಬರು ಇದ್ದೇವೆಯಲ್ಲ ಎನ್ನುವ ಭಾವ ಧೈರ್ಯ ಕೊಡುತ್ತದೆ. ಒಬ್ಬರಿಗೊಬ್ಬರು ಮಗುವಾಗುವ ಕಾಲವಿದು. ಇದೇ ವಿವಾಹ ಎನ್ನುವ ಅನುಬ0ದ. ಈ ಅನುಬ0ದವೇ ಮದುವೆಯ ವಿಧಿಗೆ ಅರ್ಥ ಕೊಡುವುದು.
ಯಾರ ಜೀವನವೂ ಹೂವಿನ ಹಾಸಿಗೆಯೇ ಆಗಿರುವುದಿಲ್ಲ. ಹೂವಿನ ಜೊತೆಗೆ ಮುಳ್ಳುಗಳೂ ಇರುತ್ತವೆ. ಆ ಮುಳ್ಳುಗಳನ್ನು ಬುದ್ದಿವ0ತಿಕೆಯಿ0ದ ಸರಿಸಿ ಹೂವಿನ ಮೇಲೆ ನಡೆಯುವ ಪ್ರಯತ್ನ ವಿವಾಹಗಳನ್ನು ಉಳಿಸುತ್ತದೆ. ಸಾಮಾಜಿಕ ಸ್ವಾಸ್ಥ್ಯ ಉಳಿಯಬೇಕಾದರೆ ಈ ವಿವಾಹದ ವಿಧಿಯನ್ನು ಉಳಿಸಬೇಕು. ಇಲ್ಲವಾದರೆ ಒ0ಟಿ ಹೆತ್ತವರ ಸ0ಖ್ಯೆ ಜಾಸ್ತಿಯಾಗುತ್ತದೆ. ಮಕ್ಕಳಿಗೆ ತ0ದೆ ತಾಯಿ ಇಬ್ಬರ ಪ್ರೀತಿಯೂ ಒಟ್ಟಿಗೆ ಸಿಗದ0ತಾಗುತ್ತದೆ. ಸಮಸ್ಯೆಯ ಮಕ್ಕಳ ಸ0ಖ್ಯೆ ಹೆಚ್ಚಾಗುತ್ತದೆ.
ಜೀವನದಲ್ಲಿ ಒ0ದಲ್ಲ ಒ0ದು ಬಾರಿ ಸಾಕಪ್ಪ ಈ ಬ0ಧನ ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಹೋಗಿಬಿಡುವಾ ಎನುವ ನಕಾರಾತ್ಮಕ ಭಾವನೆಗಳು ಎಲ್ಲರನ್ನೂ ಕಾಡುತ್ತವೆ. ಇ0ತಹ ನಕಾರಾತ್ಮಕ ಭಾವನೆಗಳನ್ನು ಸಕಾರಾತ್ಮಕವಾಗಿ ಬದಲಾಯಿಸಿ ಕೊಳ್ಳುವ ಮನಸ್ಸು, ಪ್ರಯತ್ನ ಎರಡೂ ಬೇಕು. ಆಗ ಅವರನ್ನು ಬೆಸೆಯುವುದು ಮಕ್ಕಳು ಎನ್ನುವುದೂ ಸುಳ್ಳಲ್ಲ. ವಿವಾಹದ ಮಹತ್ವ ಇರುವುದೇ ಮಕ್ಕಳಲ್ಲಿ. ಮಕ್ಕಳು ವೈವಾಹಿಕ ಜೀವನದ ಒ0ದು ಉಡುಗೊರೆ. ಮೊಮ್ಮಕ್ಕಳು ವೃದ್ದಾಪ್ಯದ ಒ0ದು ಸು0ದರ ಅನುಭವ. ಇದನ್ನೆಲ್ಲ ಅನುಭವಿಸಬೇಕಾದರೆ ವಿವಾಹ ಎನ್ನುವ ವಿಧಿ ಉಳಿಯಬೇಕು. ಈಗಿನವರ ಹೈಟೆಕ್ ಜೀವನ ಶೈಲಿ ವಿವಾಹವನ್ನು ಶಿಥಿಲಗೊಳಿಸಬಾರದು.
ಒ0ದು ಮಾತ್ರ ನಿಜ. ಯಾರೂ ಪರಿಪೂರ್ಣರಲ್ಲ. ಎಲ್ಲರಲ್ಲೂ ದೌರ್ಬಲ್ಯಗಳಿವೆ. ಒಬ್ಬರನ್ನೊಬ್ಬರು ಅರಿತುಕೊಳ್ಳುವ ಮನೋಭಾವವಿದ್ದರೆ, ಒಬ್ಬರನ್ನೊಬ್ಬರ ದೌರ್ಬಲ್ಯಗಳನ್ನು ಒಪ್ಪಿಕೊಳ್ಳುವ, ಅವರನ್ನು ಹಾಗೇ ಸ್ವೀಕರಿಸಿ ಪ್ರೀತಿಸುವ ಪ್ರೌಡಿಮೆಯಿದ್ದರೆ, ಇದ್ದುದರಲ್ಲಿ ಸುಖ ಕಾಣುವ ಮನೋವಿಶ್ವಾಸವಿದ್ದರೆ, ಮದುವೆಯೆ0ದರೆ ದೈಹಿಕ ಆಕರ್ಷಣೆ ಮಾತ್ರ ಅಲ್ಲ ಪರಸ್ಪರ ಮನಸ್ಸಿನ ಅವಲ0ಬನೆ ಎನ್ನುವ ಅರಿವು ಇದ್ದರೆ, ಮದುವೆಯನ್ನು ಗೌರವಿಸಿ ಉಳಿಸುವ ಆತ್ಮವಿಶ್ವಾಸವಿದ್ದರೆ ಮದುವೆಗಳು ಸೋಲುವುದಿಲ್ಲ. ಬೆಳ್ಳಿಹಬ್ಬ, ಚಿನ್ನದಹಬ್ಬ, ಮತ್ತೂ ಬದುಕಿದ್ದರೆ ವಜ್ರಮಹೋತ್ಸವ, ಪ್ಲಾಟಿನ0 ಉತ್ಸವ ಎಲ್ಲವನ್ನೂ ಆಚರಿಸಬಹುದು. ಇಲ್ಲದಿದ್ದರೆ ಯಾರಿಗೂ ಯಾರೂ ಇಲ್ಲ.








chendada baraha!
ತುಂಬಾ ಸೊಗಸಾದ ಲೇಖನ.
good aricle….
ಮೇಡಂ, ಗಂಭೀರವಾದ ಸಮಸ್ಯೆಯೊಂದನ್ನು ಎತ್ತಿಕೊಂಡು ಅದನ್ನು ಎಳೆ-ಎಳೆಯಾಗಿ ಬಿಡಿಸಿ ಹೇಳಿರುವಿರಿ. ಸಮಸ್ಯೆಗೆ ಸಮಾಧಾನವೂ ನಿಮ್ಮ ಲೇಖನದಲ್ಲಿಯೇ ಇದೆ. ದ್ವಂದ್ವದಲ್ಲಿರುವ ದಂಪತಿಗಳಿಗೆ ದಾರಿದೀಪ ಈ ನಿಮ್ಮ ಬರಹ.
indina vaastavada niguda samasye idu….nanagannisohaage ii samasyege mattondu maggalu ide.. nivu helida satyada jote manusya indu heechu hechu bayake,bedikegalannu tannalli taanu rupisikollutiddane.. ondu teranaada atrupti,asahane,ego , ivellavu kuda ii samasyege mulavaagutiveyeno anisuttide…
aadaru i samasyeya bagge belaku harisida tamage vandanegalu…