ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

"ಯಲಡಕೆ ತಿನ್ನು … ನೀ ಸುಳ್ಯಕ್ಕೆ ಬಂದದು ಅಲಾ…"

bharatraj sorake

ಭರತ್ ರಾಜ್ ಸೊರಕೆ 

“ಯಲಡಕೆ ತಿನ್ನು … ನೀ ಸುಳ್ಯಕ್ಕೆ ಬಂದದು ಅಲಾ…”
“ಈ ಕುರೆಗಳ ಉಪದ್ರಲಿ ಏನೂ ಉಲೆದಿಲೆ…”
12799069_961267763926802_4485981638355858527_nಎನ್ನುತ್ತಾ ಕೊಕ್ಕರ ಕೂತು, ಬೊಜ್ಜು ಬಾಯಿಲಿ ಎಲೆ ಅಡಿಕೆ ತುಂಬಿ, ತೋಟ, ಕಾಡಿನ ಕತೆ ಹೇಳುವ ಈ ಅಜ್ಜಿಯ ಭಾಷೆ, ಮಾತುಗಾರಿಕೆ ಮರುಳು ಮಾಡುವಂಥದ್ದು .
ಎಲಿಮಲೆ ಕಾನನದ ಸಸ್ಯ ಸಂಪತ್ತಿನ ಕತೆ, ಗುಂಡ್ಯ ಕಾಡಿನ ಗಣಿಗಾರಿಕೆಯ ಗುಸುಗುಸು, ಸುಳ್ಯ ಪೇಟೆಯಲ್ಲಿ ಏಕಾಂಗಿಯಾಗಿ ನಡೆದಾಡಿದ ಸಂಭ್ರಮ ಎಲ್ಲವನ್ನೂ ಈ ಅಜ್ಜಿಯ ಬಾಯಲ್ಲಿ ಕೇಳುವುದೇ ಚಂದ.
ಇವ್ರಿಗೆ, ನ್ಯೂಸ್ ಅಂದ್ರೆ ಪಬ್ಲಿಕ್ ಟಿವಿ. ಎಚ್.ಆರ್. ರಂಗನಾಥ್ ಅಂದ್ರೆ ಅಚ್ಚುಮೆಚ್ಚು . ರಂಗನಾಥ್ ಅವರ ಧ್ವನಿ ಕೇಳುತ್ತಲೇ ಬಡಕ್ ಅಂತ ಎದ್ದು ಕೂತು ‘ಓಯ್ …ಕೂಸೆ… ರಂಗ ಬಂದ ರಂಗ’ ಅಂತ ಎಲ್ಲರನ್ನು ಸೇರಿಸಿ, ಸುದ್ದಿ ತೋರಿಸುವ ಕುತೂಹಲಿ.
ಚಾನೆಲ್ ಚೇಂಜ್ ಮಾಡುವ ಭರದಲ್ಲಿ ನ್ಯಾಷನಲ್ ಜಿಯೋಗ್ರಫಿ ಎಲ್ಲಾದರೂ ಕಂಡರೆ- ಮರ್ಕಂಜದಲ್ಲಿ ಕಾಡಾನೆ ದಾಳಿ ಮಾಡಿದ್ದು, ಯಾರದ್ದೋ ಬೈಕಿಗೆ ಕಾಟಿ ಅಡ್ಡಬಂದದ್ದು , ಪರಿಸರದಲ್ಲಿ ಕೋತಿಗಳ ಕಾಟ ಜೋರಾಗಿದ್ದು ಎಲ್ಲವೂ ನೆನಪಿಗೆ ಬಂದು, ಮಾತಿನ ನಡುವೆ ಬೆರೆತು, ಸಕ್ಕರೆಯಂಥ ಮಾತುಕತೆ.
ವೃದ್ಧಾಪ್ಯದಲ್ಲೂ ಘಟನೆಗಳ ಕುತೂಹಲ, ಬದುಕಿನ ಜೀವನೋತ್ಸಾಹ ಕಂಡು ನನಗಂತೂ ಬೆರಗು

‍ಲೇಖಕರು Avadhi

5 March, 2016

1 Comment

  1. sangeetha raviraj

    ವಾವ್ ನಮ್ಮ ಅರೆಬಾಸೆ ಅವದಿಲಿ……ಬಾರಿ ಲಾಯ್ಕ ಉಟ್ಟು ಅವ್ವನ ಕತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading