ಮೂಲ ಹಿಂದಿ- ಅಶೋಕ್ ಕುಮಾರ್
ಕನ್ನಡಕ್ಕೆ: ನಾಗರಾಜ ಮಸೂತಿ
**
ಮೊದಲನೆ ಕ್ರಾಂತಿ
ಬಹುಶಃ ಬೀಜವೇ ಆರಂಭಿಸಿದೆ
ಮಣ್ಣಿನೊಂದಿಗೆ,
ನಂತರದಲ್ಲಿ ಹೆಮ್ಮರವಾಗಿ
ಬೆಳೆದು ನಿಂತಿರಬಹುದು
ಅಥವಾ
ಶಿಶುವಿನಿಂದು ಆರಂಭವಾಗಿರಬಹುದು
ಜನ್ಮತಳೆಯಲು.
ಪ್ರತಿಬಾರಿಯು
ಹೋರಾಟಗಾರರಿಗೆ ಪ್ರೀತಿ ಸಿಕ್ಕಿದೆ,
ಮಣ್ಣಿನಿಂದ ಮತ್ತು
ಮಾತೃವಿನಿಂದ,
ಕಾರಣ
ಮಾತೆಯ ಅರಿವಿಗಿದೆ
ಹೋರಾಟವಿಲ್ಲದೆ ಹೊಸ ಹುಟ್ಟು
ಸಾಧ್ಯವಿಲ್ಲ.
0 Comments