ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೊಜಿ಼ಲ್ಲಾ ಫೈರ್’ಫಾಕ್ಸ್ (Mozilla FireFox) ಕನ್ನಡ ಆವೃತ್ತಿ ನೋಡಿದ್ದೀರಾ?

ಬಿ ಆರ್ ಸತ್ಯನಾರಾಯಣ

ಅಂತರ್ಜಾಲ ಸೇವೆಯನ್ನು ಒದಗಿಸುವ ಸಂಸ್ಥೆಗಳು ಸ್ಥಳೀಯ ಭಾಷೆಗಳ ಬಳಕೆಯಿಂದ ಹೆಚ್ಚಿನ ಗ್ರಾಹಕರನ್ನು ತಲುಪುವ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೆ ಏಕೊ ಕನ್ನಡದ ವಿಷಯದಲ್ಲಿ ಅದು ಸ್ವಲ್ಪ ನಿಧಾನ! ಅದಕ್ಕೆ ಆ ಸಂಸ್ಥೆಗಳನ್ನಷ್ಟೇ ದೂರುವುದರಲ್ಲಿ ಯಾವುದೇ ಅರ್ಥವಿಲ್ಲ. ಅದಕ್ಕೆ ನಮ್ಮ ಆಡಳಿತ ವ್ಯವಸ್ಥೆ, ಸರ್ಕಾರಗಳ ಇಚ್ಛಾಶಕ್ತಿ ಹಾಗೂ ನಮ್ಮ ಅಂದರೆ ಬಳಕೆದಾರರ ಬೇಡಿಕೆಯ ಕೊರತೆ ಇವುಗಳೆಲ್ಲಾ ಕಾರಣಗಳಾಗಿವೆ.

ಅದು ಏನೇ ಇರಲಿ; ಗೂಗಲ್ ಮತ್ತು ಯಾಹೂ ಅಂತಹ ಪ್ರಮುಖ ಕಂಪೆನಿಗಳವರು ಕನ್ನಡ ಆಯ್ಕೆಯ ಸ್ವಾತಂತ್ರ್ಯವನ್ನು ನಮಗೆ ನೀಡಿದ್ದಾರೆ. ಈಗ ಅವುಗಳ ಸಾಲಿಗೆ ಸೇರಿರುವುದು ಮೊಜಿ಼ಲ್ಲಾ ಫೈರ್’ಫಾಕ್ಸ್ ಎಂಬ ಸಂಸ್ಥೆ. ಅಂತರ್ಜಾಲದಲ್ಲಿ ನಮಗೆ ಬೇಕಾದ ಪುಟಗಳನ್ನು ತೆರೆಯಲು ಮೊದಲು ನಮಗೆ ಹೆಚ್ಚಿನ ಆಯ್ಕೆಗಳಿರಲಿಲ್ಲ. ಅದರಲ್ಲಿ ಬಹುತೇಕರ ಆಯ್ಕೆ ಮೈಕ್ರೊಸಾಫ್ಟ್’ನವರ ವಿಂಡೋಸ್ ಎಕ್ಸ್‍ಪ್ಲೋರರ್ ಮಾತ್ರವಾಗಿತ್ತು. ನಂತರದ ದಿನಗಳಲ್ಲಿ ಗೂಗಲ್ ಕ್ರೋಮ್ ಬಂದಿತು. ಈಗ ಮುಂಚೂಣಿಗೆ ಬಂದಿರುವುದೆಂದರೆ ಮೊಜಿ಼ಲ್ಲಾ ಫೈರ್‍ಫಾಕ್ಸ್! ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ಫೈರ್‍ಫಾಕ್ಸ್ ಸುಮಾರು ನೂರಕ್ಕೂ ಬೇರೆ ಬೇರೆ ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಅವುಗಳಲ್ಲಿ ಭಾರತದ ಹಲವಾರು ಭಾಷೆಗಳು, ನಮ್ಮ ಕನ್ನಡವೂ ಸೇರಿದೆ ಎಂಬುದು ಗಮನಿಸಬೇಕಾದ ವಿಷಯ.

https://www.mozilla.org ಈ ಪುಟದಿಂದ ಸೆಟ್‍ಅಪ್ ಫೈಲನ್ನು ಡೌನ್‍ಲೋಡ್ ಮಾಡಿಕೊಂಡು ನಮ್ಮ ಗಣಕದಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಹುದು. ವಿಂಡೋಸ್, ಮ್ಯಾಕ್ ಓಎಸ್ ಎಕ್ಸ್, ಲೈನಕ್ಸ್ ಮತ್ತು ಲೈನಕ್ಸ್ 64 ಬಿಟ್ ಈ ಯಾವುದೇ ಆಪರೇಟಿಂಗ್ ಸಿಸ್ಟೆಮ್‍ಗಳಿದ್ದರೂ ಅದಕ್ಕೆ ಬೇಕಾದ ಸೆಟ್‍ಅಪ್ ಫೈಲ್ ಬೇರೆಯಾಗಿಯೇ ಸಿಗಲಿದೆ.
ಕಂಪ್ಯೂಟರಿನಲ್ಲಿ ತೆರೆದ ಪುಟಗಳ ಮಾಹಿತಿಯನ್ನು ಕನ್ನಡದಲ್ಲೇ ನೀವು ನೋಡಬಹುದು. ಕೆಳಗೆ ಒಂದೇ ಸಮನೆ ಓಡುವ ತಾಂತ್ರಿಕ ವಿವರಣೆಗಳೂ ಕನ್ನಡದಲ್ಲೇ ಇರುತ್ತವೆ. ಅದರ ಅನುವಾದವೂ ಚೆನ್ನಾಗಿಯೇ ಇದೆ ಎಂಬುದು ಗಮನಿಸಬೇಕಾದ ಅಂಶ.

ಅನುವಾದದಲ್ಲಿ ಅಗತ್ಯವಿರುವೆಡೆ ಇಂಗ್ಲಿಷ್ ಪದಗಳನ್ನು ಹಾಗೇ ಉಳಿಸಿಕೊಳ್ಳಲಾಗಿದೆ. ಇದರಿಂದ ಓದುವಿಕೆಗೆ ಹಾಗೂ ಅರ್ಥೈಸುವಿಕಗೆ ಯಾವುದೇ ಅಡೆತಡೆಯೂ ಇಲ್ಲ.
ನಿಜವಾಗಿಯೂ ಮೊಜಿ಼ಲ್ಲಾ ಫೈರ್‍ಫಾಕ್ಸ್ ಸಂಸ್ಥೆಯ ಈ ಕಾರ್ಯ ಪ್ರಶಂಸನೀಯ. ಇಂತಹ ವಿಷಯದಲ್ಲಿ ಕನ್ನಡಗರಾದ ನಮ್ಮ ಕರ್ತವ್ಯವೇನು ಎಂಬುದು ಮುಖ್ಯವಾಗುತ್ತದೆ. ನಾವು ಹೆಚ್ಚೆಚ್ಚು ಜನ ಈ ಕನ್ನಡ ಆವೃತ್ತಿಯನ್ನು ಡೌನ್ ಲೋಡ್ ಮಾಡಿಕೊಂಡು ಬಳಸತೊಡಗಿದರೆ, ಸಂಸ್ಥೆಯವರಿಗೂ ಈ ಸೌಲಭ್ಯವನ್ನು ಮತ್ತಷ್ಟು ಉತ್ತಮಗೊಳಿಸುವ ಉಮೇದು ಹಾಗೂ ಅನುವಾರ್ಯತೆ ಬರಲಿದೆ. ಇದರಿಂದ ನಮ್ಮ ಭಾಷೆಗೂ ಅನುಕೂಲ.
ಇಂದೇ ಪ್ರಯತ್ನಿಸಿ.
 

‍ಲೇಖಕರು G

26 September, 2014

1 Comment

  1. srinivasamurthy

    ನಾನು ಎರಡು ವರ್ಶಗಳಿಂದ ಇದನ್ನು ಬಳಸುತ್ತಿದ್ದೇನೆ. ನನ್ನ ಗೆಳೆಯರಿಗೂ ಇದನ್ನು ನೀಡಿದ್ದೇನೆ. ಕನ್ನಡದ spell checker ಕೂಡ ಇದರೊಂದಿಗೆ ಬಳಸಬಹುದಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading