ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೆಗಾಸೀರಿಯಲ್ನ ಮೆಗಾ ಕ್ಲೈಮ್ಯಾಕ್ಸ್! – ಕಾಮಿಡಿ ಸಿಡಿ!!

ಮೆಗಾಸೀರಿಯಲ್ನ ಮೆಗಾ ಕ್ಲೈಮ್ಯಾಕ್ಸ್!

~ಎಸ್.ಜಿ.ಶಿವಶಂಕರ್

ಸ್ಟ್ಯಾಫ್ ರೂಮಿನ ಒಳಗಿದ್ದ ನನ್ನ ಚೇಂಬರಿನ ಬಾಗಿಲು ಹಾಕುವಾಗ ಒಳಗೆ ನುಗ್ಗಿದ ವಿಧ್ಯಾಥರ್ಿ ಕಂಡು ಕಸಿವಿಸಿಯಾಯಿತು. ಸಂಜೆ ಐದಾಗಿತ್ತು. ಕಾಲೇಜು ಖಾಲಿಯಾಗಿತ್ತು. ನನ್ನನ್ನು ಭೇಟಿ ಮಾಡಲು ಈ ಸಮಯವೇ ಬೇಕೆ ಈತನಿಗೆ? ‘ಇಷ್ಟೊತ್ತಿನ ತನಕಾ ಎಲ್ಲಿದ್ದೆ..? ನಾನೇನು ಮನೆಗೆ ಹೋಗ್ಬೇಕೋ ಬೇಡ್ವೋ..?’ ಪ್ರಾಧ್ಯಾಪಕನ ದ್ವನಿಯಲ್ಲಿ ಗದರಿಸಿದೆ. ‘ಇದ್ಯಾಕ್ ಇಂಗ್ ಗರಮ್ ಆಗಿದೀರ ಸಾರ್..? ನಾನ್ ಕಲ್ಲೇಶಿ ನಿಮ್ಮ ಹಳೇ ಶಿಷ್ಯ! ಮತರ್ುಬಿಟ್ರಾ ಸಾರ್..’ ನಿಜ. ಬಂದವನು ನನ್ನ ಶಿಷ್ಯ ಕಲ್ಲೇಶಿಯೇ ಆಗಿದ್ದ. ಶಿಷ್ಯ ಎಂದು ಹೇಳಿಕೊಳ್ಳಲು ನಾಚಿಕೆ ಪಡುವಂತವನು! ಕ್ಲಾಸ್ ರೂಮಿಗಿಂತಲೂ ಸ್ಕೂಟರ್ ಸ್ಟ್ಯಾಂಡು, ಕ್ಯಾಂಟೀನು, ಬೀದಿಯ ಕಲ್ವಟರ್ುಗಳಲ್ಲಿಯೇ ಇಡೀ ಎಂ.ಬಿ.ಎ ಎನ್ನುವ ಕೋಸರ್್ ಮುಗಿಸಿದವನು. ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಪಡೆದು ಇಪ್ಪತ್ತು ವರ್ಷಗಳ ನಂತರವೂ ಖಾಲಿ ಬಿಟ್ಟ ಸೈಟಿನಲ್ಲಿ ಅಡ್ಡಾದಿಡ್ಡಿ ಬೆಳೆದ ಕಾಂಗ್ರೆಸ್ ಗ್ರಾಸಿನಂತೆ ಕೆದರಿದ ತಲೆಗೂದಲು, ಹಣೆಗೆ ಗಂಧ, ಜೊತೆಗೆ ತಮಿಳರಂತೆ ಅರ್ಧ ವಿಭೂತಿ, ಭ್ರೂಮಧ್ಯದಲ್ಲಿ ಕುಂಕುಮ, ವರ್ಷಗಟ್ಟಲೆ ಒಗೆಯದಂತೆ ಕಾಣಿಸುವ ಜೀನ್ಸ್, ‘ಐಯಾಮ್ ಪ್ರಿನ್ಸ್ ಚಾಮರ್ಿಂಗ್’ ಎಂಬ ಒಕ್ಕಣೆ ಹೊತ್ತ ಕಪ್ಪು ಬಣ್ಣದ ಟೀ ಷಟರ್ು! ಅತ್ಯಂತ ಕೆಟ್ಟ ಶಿಷ್ಯ ಎನಿಸಿಕೊಂಡ ಕಲ್ಲೇಶಿ! ಎಂತಾ ಕೆಟ್ಟ ವಿಧ್ಯಾಥರ್ಿಯಾದರೂ ಶಿಷ್ಯನೇ ತಾನೆ.? ‘ಇದೇನಯ್ಯ ಇಷ್ಟೊತ್ನಲ್ಲಿ..? ಕಾಲೇಜಲ್ಲಿ ಉಳಿದಿರೋದು ನಾನೊಬ್ಬನೇ! ಬಾಗ್ಲು ಹಾಕೋಕೆ ಪಳನಿ ಕಾಯ್ತಿದಾನೆ! ಲೇಟ್ ಮಾಡಿದ್ರೆ ವಿಚಿತ್ರ ಕನ್ನಡದಲ್ಲಿ ಲೇಟಾದ್ರೆ ವಂಡಿ ಚಿಕ್ಕಕಿಲ್ಲ ಅಂತ ಗಲಾಟೆ ಮಾಡ್ತಾನೆ..!’ ‘ಪಳನಿ ಇಲ್ಲ ಸಾರ್’ ‘ಮತ್ತೆಲ್ಲಿ ಹಾಳಾಗಿ ಹೋದ..?’ ‘ಟೀ ತರಾಕೆ ಕಳ್ಸಿದ್ದೀನಿ ಸಾರ್. ನಿಮ್ಮತ್ರ ಒಂದರ್ಧ ಗಂಟೆ ಮಾತಾಡಬಹುದಾ ಸಾರ್..?’ ಅತ್ಯಂತ ವಿನಯದಿಂದ ಕಲ್ಲೇಶಿ ಹೇಳಿದಾಗ ಇಲ್ಲ ಎನ್ನಲಾಗುತ್ತದೆಯೆ? ‘ನೀನು ಕ್ಯಾಂಪಸ್ಸಿಗೆ ಬರೋದು ಹೆಚ್ಚೋ..ನಾನು ಅರ್ಧ ಗಂಟೆ ಲೇಟಾಗಿ ಮನೆಗೆ ಹೋಗೋದು ಹೆಚ್ಚೋ..? ಬಾ ಕೂತ್ಕೋ..ಅದೇನು ಹೇಳು..’ ಮುಚ್ಚುತ್ತಿದ್ದ ಬಾಗಿಲನ್ನು ತೆರೆದು ಕೂತೆ. ಕಲ್ಲೇಶಿ ಬಹಳ ವಿನಯವನ್ನು ಪ್ರದಶರ್ಿಸುತ್ತಾ ಟೇಬಲ್ಲೆದುರಿನ ಕುಚರ್ಿಯಲ್ಲಿ ಮುದುರಿ ಕೂತ. ‘ಯಾವ ಹೊಸಾ ಸಿನೀಮಾ ಮಾಡ್ತಿದ್ದೀಯ..?’ ಮಾತಿಗೆಳೆದೆ. ಕಲ್ಲೇಶಿ ಬೆಂಗ್ಳೂರು ಹತ್ತಿರದ ದೇವ್ನಳ್ಳಿ ಕುಳ. ಅಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಂದಿದ್ದೇ ತಡ. ಅಲ್ಲಿಯವರೆಲ್ಲಾ ಏಕ್ದಂ ಕೋಟ್ಯಾಧಿಪತಿಗಳಾಗಿಬಿಟ್ಟರು. ಕಲ್ಲೇಶಿ ಅಪ್ಪ ನಾಲ್ಕೆಕರೆ ಜಮೀನು ಮಾರಿ ಮಗನ ಕೈಗೊಂದು ಕೋಟಿ ಹಾಕಿ ಮಜಾ ಮಾಡ್ಕೋ ಹೋಗು ಅಂದನಂತೆ! ಕಲ್ಲೇಶಿ ಕನ್ನಡದ ಋಣ ತೀರಿಸೋಕೇಂತ ಸಿನೀಮಾ ಫೀಲ್ಡಿಗಿಳಿದು ಒಂದೇ ಸಮ ನಾಲ್ಕು ಸಿನೀಮಾ ತೆಗೆದಿದ್ದ. ಅದನ್ನ ಅವನೇ ಒಮ್ಮೆ ಡಿಪಾಟ್ಮರ್ೆಂಟಿಗೆ ಬಂದಾಗ ಹೇಳಿದ್ದ. ಎಲ್ಲಾ ರೌಡಿಸಂ ಸಿನೀಮಾಗಳು ! ಮನೇಲಿ ಟಿವಿ ಮುಂದೆ ಕೂತಿದ್ದಾಗ ನನ್ನವಳು ಯಾವುದೋ ಸೀರಿಯಲ್ ತೋರಿಸಿ ಇದು ನಿಮ್ಮ ಶಿಷ್ಯ ಕಲ್ಲೇಶಿ ಸೀರಿಯಲ್ಲು ಅಂತ ಹೇಳಿದ್ದು ನೆನಪಾಯಿತು. ‘ಸಿನೀಮಾ ಬಿಟ್ಪಿಟ್ಟೆ ಸಾ..’ ಕಲ್ಲೇಶಿ ಮಾತಲ್ಲಿ ಸ್ವಲ್ಪ ನಿರಾಸೆಯಿತ್ತು. ‘ಯಾಕೆ ಕಲ್ಲೇಶಿ..? ಆರು ತಿಂಗಳಿಗೊಂದು ಸಿನೀಮಾ ತೆಗೀತೀನಿ, ಅದ್ರಲ್ಲಿ ನೀವು ಹೇಳ್ಕೊಟ್ಟ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಟೆಕ್ನಿಕೆಲ್ಲಾ ಉಪಯೋಗಿಸ್ತೀನಿ ಅಂತ ಕಳೆದ ಸಲ ಬಂದಾಗ ಹೇಳಿದ್ದೆಯಲ್ಲಾ..?’ ‘ಅದೇನೋ ನಿಜ ಸಾರ್ ನಾಲ್ಕು ಸಿನೀಮಾ ತೆಗೆದೆ. ಎಲ್ಲಾ ಒಂದೇ ಸಮ ತೋಪಾದೋ. ಅದ್ಕೇ ಈಗ ಟಿವಿ ಸೀರಿಯಲ್ಲಿಗೆ ಇಳಿದಿದ್ದೀನಿ ಸಾರ್! ಮೆಗಾ ಸೀರಿಯಲ್ಲು..ಪಕ್ಕಾ ಫ್ಯಾಮಿಲಿ ಸ್ಟೋರಿ, ಈಗಾಗ್ಲೇ ಮುನ್ನೂರು ಎಪಿಸೋಡ್ ಆಗಿದೆ’   ಕಲ್ಲೇಶಿ ಮಾತಿಗೆ ದಂಗಾಗಿ ಹೋದೆ! ಭೂಮಿಗೆ ಭಾರ, ಕಾಲೇಜಿಗೆ ತಲೆನೋವು ಎಂದುಕೊಡಿದ್ದ ಕಲ್ಲೇಶಿ ಇಷ್ಟೊಂದು ಬದಲಾಗ್ತಾನೆ ಅಂತ ಅಂದ್ಕೊಂಡಿರಲಿಲ್ಲ! ‘ಭಲೇ..ಭಲೇ! ಭಾರಿ ಆಸಾಮೀನಯ್ಯಾ ನೀನು! ಕ್ಲಾಸಿನಲ್ಲಿ ಕೂರದೇನೇ ಎಂ.ಬಿ.ಎ ಮುಗಿಸಿದೆ! ಈಗ ನೋಡಿದ್ರೆ ಮೆಗಾ ಸೀರಿಯಲ್ ಮೇಕರ್!’ ‘ಏ ಸುಮ್ನಿರಿ ಸಾರ್..ನೀವು ಹೊಗ್ಳಿದ್ರೆ ನಂಗೆ ಸಂಕೋಚ! ಇನ್ನೂ ಬೈಯ್ಯಿರಿ ನನಗೆ ಸಂತೋಷವಾಗುತ್ತೆ’ ಎಂದ. ಪಳನಿ ಟೀ ಮತ್ತು ಬಿಸ್ಕೆಟ್ಟು ತಂದಿಟ್ಟ. ‘ಕಲ್ಲೇಶಿ ಸಾರು ರೊಂಬ ಪೆರಿಯ ಆಳು’ ಎಂದು ಹೊಗಳಿದ. ಪಳನಿ ತಮಿಳು ನಾಡಿನಿಂದ ಮೈಸೂರಿಗೆ ಡೈರೆಕ್ಟ್ ಇಂಪೋಟರ್್ ಅದ ಆಸಾಮಿ! ಇಲ್ಲೇ ಟೆಂಟ್ ಹಾಕಿ ಇಡೀ ತನ್ನ ಹಳ್ಳಿಯನ್ನೇ ಕರೆಸಿಕೊಂಡ ಚತುರ. ಕಾಲೇಜಿಗೆ ಹತ್ತಿರವೇ ಅವನ ಮಿನಿ ತಮಿಳುನಾಡಿದೆ. ‘ಹೌದು ನಿನ್ನ ಕೈಗೆ ಯಾರು ಕಾಸು ಹಾಕ್ತಾರೋ ಅವರೆಲ್ಲಾ ಪೆರಿಯವರೇ..ಇವತ್ತೇನು ಲೇಟಾದ್ರೂ ಸುಮ್ಮನಿದ್ದೀಯ..?’ ಅಚ್ಚರಿಯಿಂದ ಪ್ರಶ್ನಿಸಿದೆ. ‘ಕಲ್ಲೇಶಿ ಸಾರು ಡ್ರಾಪ್ ಕೊಡ್ತಾನೆ’ ಪಳನಿಯ ಡಿಕ್ಷನರಿಯಲ್ಲಿ ಬಹುವಚನ ಏಕವಚನಗಳು ಎಲ್ಲಾ ಒಂದೇ! ‘ಟೀ ಕುಡೀರಿ ಸಾರ್..ಅಂಗೇ ಬಿಸ್ಕೆಟ್ಟೂ ಕಡೀರಿ…ಗುಡ್ ಡೇ ಬಿಸ್ಕೆಟ್ಟು!’ ಕಲ್ಲೇಶಿ ಉಪಚರಿಸಿದ. ‘ಅದೆಲ್ಲಾ ಇಲರ್ಿ ಬಂದ ವಿಷಯ ಏನು..? ಇಷ್ಟೊತ್ನಲ್ಲಿ ಬಬರ್ೇಕಾದ್ರೆ ಏನಾದ್ರೂ ಇರಲೇಬೇಕು..! ‘ಇನ್ನೇನಿಲ್ಲಾ ಸಾರ್, ಮೆಗಾ ಸೀರಿಯಲ್ ವಿಷಯಾನೆ…ಮುನ್ನೂರು ಎಪಿಸೋಡು ಮುಗಿದಿವೆ. ಕತೇನೆ ಎಂಗೆಂಗೋ ತಿರುಚಿ, ಬೇಕಾಗಿಲ್ಲದ ಕಡೇಲೆಲ್ಲಾ ಹೊಸಾ ಕ್ಯಾರೆಕ್ಟರುಗಳನ್ನ ತುರುಕಿ, ಏನೇನೋ ಮಾಡಿ-ಈಗ ಹೆಂಗೆ ಮುಗಿಸೋದು ಅನ್ನೋದೆ ಸಮಸ್ಯೆಯಾಗಿದೆ. ನೀವೂ ನಾಟ್ಕ ಬರಿಯೋರು ಜೊತೆಗೆ ಮ್ಯಾನೇಜ್ಮೆಂಟ್ ಪಾಠ ಹೇಳೋರು…ಹಂಗಾಗಿ ನೆನಪಾಯ್ತು ಬ0ದೆ’ ಕಲ್ಲೇಶಿ ಬಂದ ವಿಷಯವನ್ನು ಸಂಕ್ಷಿಪ್ತವಾಗಿ ಹೇಳಿದ. ‘ಅದಿಲರ್ಿ ಕತೇನ ಯಾಕೆ ಸಿಕ್ಕಾಪಟ್ಟೆ ತಿರುಚಿದ್ದು..?’ ‘ಅದಿಲ್ದ್ರಿದ್ರೆ ಮುನ್ನೂರು ಎಪಿಸೋಡ್ಗಂಟ ಎಳಿಯೋಕಾಗ್ತಿತ್ತ ಸಾರ್..’ ‘ಮುನ್ನೂರು ಎಪಿಸೋಡು ಯಾಕೆ ಎಳೀಬೇಕಿತ್ತು..?ಕತೆ ಎಷ್ಟಿತ್ತೋ ಅಷ್ಟ್ರಲ್ಲಿ ಮುಗಿಸ್ಬೇಕಿತ್ತು’ ಕಲ್ಲೇಶಿ ಸಮಸ್ಯೆ ನನಗಿನ್ನು ಅರ್ಥವಾಗಿರಲಿಲ್ಲ. ‘ಅದ್ನೆಲ್ಲಾ ನಿಮ್ಗೇಳಾದು ಕಷ್ಟ! ಈ ಫೀಲ್ಡ್ ಇರೋದೇ ಹಂಗೆ ಸಾರ್! ಮೆಗಾ ಸೀರಿಯಲ್ ಬಿಟ್ಟು ಚುಟುಕ ಚೂರು ಎಲ್ಲಾ ಛಾನಲ್ಲಿನೋರು, ಜಾಹೀರಾತಿನವರೂ ಮೂಸಿ ನೋಡೊಲ್ಲ ಸಾರ್. ನನ್ನ ಸೀರಿಯಲ್ಲಿಗೆ ಟಿ.ಆರ್.ಫಿ ಚೆನ್ನಾಗಿ ಬಂದಿದೆ ಸಾರ್! ಇನ್ನೊಂದತ್ತು ಎಪಿಸೋಡಲ್ಲಿ ಎಲ್ಲಾ ಮುಗಿಯೋಹಂಗೆ ಏನಾದ್ರೂ ಐಡಿಯಾ ಕೊಡಿ ಸಾರ್..ಬೇಗ್ನೆ ಮುಗಿಸೀಂತ ಚಾನಲ್ಲಿನೋರು ಬೇರೆ ಗಲಾಟೆ ಮಾಡ್ತಿದ್ದಾರೆ..’ ಟಿವಿ ಸೀರಿಯಲ್ ಕ್ಷೇತ್ರದ ಬವಣೆಯನ್ನು ಕಲ್ಲೇಶಿ ಹೇಳಿಕೊಂಡ! ‘ಸರಿ, ನಿನ್ನ ಸೀರಿಯಲ್ ಥೀಮ್ ಹೇಳು, ಮುಖ್ಯ ಪಾತ್ರಗಳು ಯಾವುವು, ಈಗ ಏನು ನಡೀತಿದೆ ಅಂತ ಹೇಳು’ ಸಾಧ್ಯವಾದರೆ ಪರಿಹಾರ ಹೇಳಿಬಿಡೋಣ ಎಂದು ಆಸಕ್ತಿಯಿಂದ ಕಿವಿಯಗಲಿಸಿ ಟೀ ಕಪ್ಪು ಕೈಗೆತ್ತಿಕೊಂಡೆ. ಕಲ್ಲೇಶಿ ಹೇಳಲು ಶುರು ಮಾಡಿದ ಅಷ್ಟೆ..ಇಪ್ಪತ್ತು ನಿಮಿಷಗಳಾದರೂ ಇನ್ನೂ ಪಾತ್ರ ಪರಿಚಯದಲ್ಲೇ ಇರುವಂತಿತ್ತು! ನಾನು ಪೇಪರಿನಲ್ಲಿ ಪಾತ್ರಗಳ ಹೆಸರು ಮತ್ತವರ ಸಂಬಂಧಗಳನ್ನ ಬರೆದುಕೊಳ್ಳುತ್ತಿದ್ದೆ. ಆಗಲೇ ಐವತ್ತಕ್ಕೂ ಹೆಚ್ಚು ಪಾತ್ರಗಳು ಬಂದಿದ್ದವು! ‘ಈಗೆಷ್ಟನೇ ಎಪಿಸೋಡಲ್ಲಿದ್ದೀಯಾ ಕಲ್ಲೇಶಿ..?’ ಅನುಮಾನ ಬಂದು ಕೇಳಿದೆ. ‘ಇಪ್ಪತ್ತರಲ್ಲಿದ್ದೀನಿ ಸಾರ್’ ‘ಮುನ್ನೂರಕ್ಕೆ ಯಾವಾಗ್ಬತರ್ೀಯಾ..?’ ನನ್ನ ಪ್ರಶ್ನೆಗೆ ಕಲ್ಲೇಶಿ ಕಕ್ಕಾಬಿಕ್ಕಿಯಾದ. ‘ನೀನು ಹೀಗೇಳಿದ್ರೆ ಬೆಳಗಾದ್ರೂ ಮುಗಿಯೊಲ್ಲ! ಒದ್ಕೆಲ್ಸ ಮಾಡು, ವಾಪಸ್ಸು ನಿನ್ನ ಯೂನಿಟ್ತಿಗೆ ಹೋಗಿ ಬ್ರೈನ್ ಸ್ಟಾರಮ್ ಮಾಡು’ ಸಲಹೆ ಕೊಟ್ಟೆ. ‘ಅದ್ಕೆ ಬ್ರೈನ್ ಇಬರ್ೇಕಲ್ವಾ ಸಾರ್..?’ ಅವನ ಮಾತಿಗೀಗ ತಬ್ಬಿಬ್ಬಾದವನು ನಾನೆ! ‘ಅದೇ ಸಾರ್, ನಮ್ಮ ಯೂನಿಟ್ ಪಡ್ಡೆಗಳಿಗೆ ಬ್ರೈನೇ ಇಲ್ಲ! ಇಲ್ದಿದ್ರೆ ಆ ಪಾಟಿ ಕತೆ ತಿರುಚಿ, ಶುರು ಮಾಡಿದ್ದಕ್ಕೂ ಈಗ ನಡೀತಿರೋದಕ್ಕೂ ಸಂಬಧವೇ ಇಲ್ಲದ ಹಾಗ್ಮಾಡಿದಾರೆ! ಯಾವ್ಯಾವ ಪಾತ್ರ ಬಂದು ಹೋದವೋ ಲೆಕ್ಕಾನೇ ಮಡಗಿಲ್ಲ. ಅದಾಗದ ಮಾತು ಏನಾದ್ರೂ ಜಾಣತನದಲ್ಲಿ ನೀವೇ ಹೇಳಿ ಸಾರ್’ ಕಲ್ಲೇಶಿ ಮತ್ತೆ ಇಕ್ಕಟ್ಟಿಗೆ ಸಿಕ್ಕಿಸಿದ. ‘ಸರಿ, ಈಗ ಕೊನೇ ಎಪಿಸೋಡು ಹೇಳ್ಬಿಡು, ನೋಡೋಣ ಏನಾದ್ರೂ ಹೊಳೆಯುತ್ತಾಂತ!’ ‘ದೊಡ್ಡ ಶ್ರೀಮಂತರ ಮನೆ. ಮನೆ ತುಂಬಾ ಜನ. ಇಪ್ಪತ್ತು ವರ್ಷದ ಹಿಂದೆ ಕಳೆದು ಹೋಗಿದ್ದ ಮಗ ದೇವಸ್ಥಾನಕ್ಕೆ ಹೋದಾಗ ಕಾರಿಗೆ ಸಿಕ್ತಾನೆ. ಆಸ್ಪತ್ರೆ, ಟ್ರೀಟ್ಮೆಂಟು ನಡಿಯೋ ಹೊತ್ತಿಗೆ ಅವನೇ ಮನೆ ಮಗ ಅನ್ನೋದು ತಾಯಿಕರುಳಿಗೆ ಗೊತ್ತಗುತ್ತೆ. ತಂದೆ ಮಗನ್ನ ಒಪ್ಪೋಕೆ ತಯಾರಿಲ್ಲ! ತಾಯಿ ಗುರುತಿಸುತ್ತಾಳೆ. ಸಖತ್ ಸೆಂಟಿಮೆಂಟ್ಸು ಹಾಕಿದೀವಿ ಸಾರ್! ಅಜ್ಜ-ಅಜ್ಜಿ, ತಮ್ಮ-ತಂಗಿಯರು, ಮದ್ವೆಯಾಗಿದ್ರೂ ತವರುಮನೇಲೇ ಉಳಿದಿರೋ ಅತ್ತೆ, ಇವರು ಯಾರೂ ಮಗನ್ನ ಒಪ್ಪೋಕೆ ತಯಾರಿಲ್ಲ! ತಾಯಿಗೆ ಮಾತ್ರ ಮಗ ಬೇಕೇಬೇಕು! ಅವನನ್ನ ಮನೇಗೆ ಸೇರಿಸಿದ್ರೆ ನಾವೆಲ್ಲಾ ಆಚೆ ಹೋಗ್ತೀವೀಂತ ಒಂದೊಂದೇ ಪಾತ್ರ ದಮಕೀ ಹಾಕ್ತಾವೆ! ತಾಯಿ ಕಂಗಾಲಾಗಿದ್ದಾಳೆ..ಈಗ ಇದ್ನ ಹೆಂಗೆ ಕೊನೆ ಮಾಡಾನ ಸಾರ್..?’ ‘ಇದನ್ನ ಹೇಗೆ ಕೊನೆ ಮಾಡ್ಬೇಕೂಂತಾ ವೀಕ್ಷಕರನ್ನೇ ಕೇಳ್ಬಿಡು!’ ಸುಲಭ ಪರಿಹಾರ ಸೂಚಿಸಿದೆ. ‘ಕಲ್ಲೊಡೀತಾರೆ!’ ಗರಂ ಆಗಿ ಹೇಳಿದ ಕಲ್ಲೇಶಿ. ‘ನಿಂಗಲ್ಲವಲ್ಲ! ಅವರ ಟೀವೀಗೆ ತಾನೇೆ’ ಎಂದು ಉಢಾಳ ಮಾತು ತೇಲಿಸಿದೆ. ‘ಅದಾಗಕಿಲ್ಲ ಸಾರ್! ಅವನು ಯಾರೋ ಏನೋ..? ಅವನು ಒಳಗ್ಬಂದ್ರೆ ನಾನಾಚೆಗೆ ಅಂತ ಎಲ್ಲಾ ಪಾತ್ರದ ಬಾಯಲ್ಲೂ ಹೇಳ್ಸಿ ಆಗಿದೆ! ತಾಯಿ ಮಾತ್ರ ಅವನು ನನ್ನ ಮಗನೇ ಅವನು ಮನೇಲೇ ಇರಬೇಕೂಂತಿದಾಳೆ..ಅವನು ಒಳಗೆ ಬರದಿದ್ರೆ ನಾನು ಮೇಲಕ್ಕೆ ಹೋಗ್ತೀನಿ ಅಂತ ಅಂದಿದ್ದಾಳೆ’ ‘ಅಲ್ಲಾ ಕಲ್ಲೇಶಿ, ಅವನನ್ನ ಮನೆ ಮಗಾಂತ ಒಪ್ಪಿಕೊಂಡ್ರೆ ನಿನ್ನ ಗಂಟೇನು ಹೋಗುತ್ತೆ..?’ ‘ಎಲ್ಲಾ ಅಷ್ಟು ಸಲೀಸಾಗಿ ಆಗ್ಬಿಟ್ರೆ…ಸೀರಿಯಲ್ಲಾಗೇನಿರುತ್ತೆ ಮಣ್ಣು..? ಸಂಘರ್ಷ ಇಲರ್ೇಬೇಕು ಸಾರ್..’ ‘ಸಮಸ್ಯೆ ಕಗ್ಗಂಟಾಗಿದ್ರೆ ಅ ಮಗನನ್ನೇ ಮತ್ತೆ ಕಳೆದು ಹೋಗೋ ಹಾಗೆ ಮಾಡಬಹುದಲ್ಲ?’ ‘ಅಲ್ಲಾ ಸಾರ್.. ಇಪ್ಪತ್ತೈದು ವರ್ಷದೋನು ಅದೆಂಗೆ ಕಳೆದು ಹೋಗ್ತಾನೆ ಸಾರ್..?’ ‘ಮುಂಚೆ ಕಳೆದುಹೋಗಿದ್ದಕ್ಕೆ ತಾನೆ ಈಗ ಸಿಕ್ಕಿರೋದು..? ಇನ್ನೊಂದ್ಸಲಾನೂ ಕಳೆದು ಹೋದ್ರಾಯ್ತು’ ‘ಅದು ಲಾಜಿಕ್ ಅಲ್ಲ ಸಾರ್’ ಲೊಚಗುಟ್ಟಿದ ಕಲ್ಲೇಶಿ. ‘ಸರಿ ಕೊನೇನ ಟ್ರ್ಯಾಜಿಡಿ ಮಾಡ್ಬೇಕೂಂತಿದ್ದೀಯೋ..ಇಲ್ಲಾ ಕಾಮಿಡಿ ಮಾಡ್ಬೆಕೂಂತಿದ್ದೀಯೋ..?’ ‘ಜನರ ಮನಸ್ಸಲ್ಲಿ ಉಳಿಯೋದು ಟ್ರ್ಯಾಜಿಡೇನೆ ಸಾರ್! ಅದನ್ನೇ ಮಾಡಾನ ಸಾರ್’ ಕಲ್ಲೇಶಿಯ ಸೀರಿಯಲ್ಲು ನನ್ನ ತಲೆಯನ್ನು ಬಿಸಿ ಮಾಡಿತು. ಪಾತ್ರಗಳು ಗೊತ್ತಿಲ್ಲದ, ಮುನ್ನೂರು ಎಪಿಸೋಡು ಮುಗಿಸಿದ ಸೀರಿಯಲ್ಲಿಗೆ ನಾನು ಹೇಗೆ ಕೊನೆ ಸೂಚಿಸಲಿ..? ಕೊನೆಗೆ ಟೈಟಲ್ ಕೇಳಿದ್ರೆ ಏನಾದ್ರೂ ಹೊಳೆಯಬಹುದೂಂತ ಕಲ್ಲೇಶೀನಾ ಕೇಳಿದೆ. ‘ಚೈತ್ರದ ಚಿಂಗಾರಿ’ ಎಂದ ಹೆಮ್ಮೆಯಿಂದ. ‘ಈ ಟೈಟಲ್ಲಿಗೂ ನೀನು ಹೇಳಿದ ಕತೇಗೂ ಏನೂ ಸಂಬಂಧವೇ ಇಲ್ಲವಲ್ಲ ಕಲ್ಲೇಶಿ?’ ಬೆಚ್ಚಿಬಿದ್ದು ಉದ್ಗರಿಸಿದೆ. ‘ಅದೆಲ್ಲಾ ಈಗ ಮಾತಾಡೋದು ಬ್ಯಾಡ ಸರ್..ಸೀರಿಯಲ್ ಮುಗಿಸೋಕೆ ಏನಾರೂ ಒಂದು ಐಡಿಯಾ ಕೊಡಿ ಸಾರ್’ ಕಲ್ಲೇಶಿ ಮೊಂಡು ಹಿಡಿದು ಕೂತಿದ್ದ. ‘ಇದೇನು ಮ್ಯಾನೆಜ್ಮೆಂಟ್ ಕೇಸ್ಸ್ಟಡಿ ಅಂದ್ಕೊಂಡೆಯಾ ಕಲ್ಲೇಶಿ..? ಇದು ನನ್ಕೈಲಿ ಆಗೊಲ್ಲ ಅನ್ನಿಸುತ್ತೆ..’ ಅಧೀರನಾಗಿ ಹೇಳಿದೆ. ‘ನೀವೇ ಹೀಗಂದರೆ ಹ್ಯಾಗೆ ಸಾರ್.?’ ಕಲ್ಲೇಶಿ ಕಳವಳಿಸಿದ! ‘ಕಲ್ಲೇಶಿ ಸಾರ್..ನಾ ಒರು ಐಡಿಯಾ ಚೊಲ್ಲಲೇ..?’ ಮೂಲೆಯಿಂದ ಬಂದ ದನಿಗೆ ಆಚ್ಚರಿಗೊಂಡು ಆ ಕಡೆ ನೋಡಿದೆ. ಪಳನಿ! ತನ್ನ ವಿಚಿತ್ರ ತಮಿಳ್ಗನ್ನಡದಿಂದ ನುಡಿದಿದ್ದ! ಎಲಾ ಇವನ..? ಸೀರಿಯಲ್ಲಿಗೆ ಕ್ಲೈಮಾಕ್ಸ್ ಸೂಚಿಸೋವರೆಗೂ ಬಂದನೆ ಈತ ಎಂದು ಬೆದರಿ ನೋಡಿದೆ. ‘ಚೊಲ್ಲು ಪಳನಿ..ಎನ್ನ ಉನ್ನೈ ಐಡಿಯಾ ಚೊಲ್ಲು..?’ ಅಚ್ಚ ಕನ್ನಡಿಗ..ದೇವನಹಳ್ಳಿ ಕುಳ! ಸಾಲಾಗಿ ಸಿನೀಮಾ ತೆಗೆದವ! ಮುನ್ನೂರು ಎಪಿಸೋಡಿನ ಮೆಗಾ ಸೀರಿಯಲ್ ಹೊಸೆದವನು, ಪಳನಿಯನ್ನು ಅವನದೇ ಭಾಷೆಯಲ್ಲೇ ಬೇಡಿದ್ದು ಕಂಡು ನಾನು ದಂಗಾದೆ! ಸಿನೀಮಾದವರು ಹೀಗೆ ಅಂತ ಕೇಳಿದ್ದೆ! ಈಗ ನೋಡಿದ ಹಾಗಾಯ್ತು! ಯಾರಾದ್ರೂ ಒಂದು ಮ್ಯಾಜಿಕ್ ಐಡಿಯಾ ಕೊಡ್ತಾರಾಂತ ಕಾದಿತರ್ಾರಂತೆ! ‘ಕಡವಳೇ ಬಂದು..ಇವನೈದಾನ್ ಕುಟುಂಬ ಕುಳಂದೈ ಅನ್ನಿ ಚೊಲ್ಲಿಬಿಟ್ಟರೆ.. ಎಪ್ಪಡಿ..?’ ಪಳನಿ ಮಾತಿಗೆ ಕಲ್ಲೇಶಿ ಕುಣಿದಾಡಿದ! ‘ಭಲೇ..ಭಲೇ ಭೇಷ್ ಪಳನಿ! ಸಖತ್ ಐಡಿಯಾ ಕೊಟ್ಟೆ..! ದೇವರ ಮಾತಂದ್ರೆ ಮುಗಿದೇ ಹೋಯ್ತಲ್ಲ..? ಎಲ್ಲರೂ ಒಪ್ಪಲೇಬೇಕು..ವೀಕ್ಷಕರು ಕೂಡ’ ಎನ್ನುತ್ತಲೇ ಹೋಗಿ ಪಳನಿಯನ್ನು ತಬ್ಬಿಕೊಂಡುಬಿಟ್ಟ ಕಲ್ಲೇಶಿ. ‘ಅಲ್ಲಾ ಕಲ್ಲೇಶಿ ಇದು ಹೇಗೆ ಸರಿ ಹೋಗುತ್ತೆ..?’ ಕಂಗಲಾಗಿ ನಾನು ಅನುಮಾನ ವ್ಯಕ್ತಪಡಿಸಿದೆ. ‘ಯಾಕಾಗೊಲ್ಲ ಸಾರ್..? ನೋಡ್ತಿರಿ ಸಾರ್..ಹೇಗೆ ಕ್ಲೈಮಾಕ್ಸ್ ತತರ್ೀನೀಂತ! ಕೊನೆ ಎಪಿಸೋಡಿನ ದಿವಸ ಫೋನು ಮಾಡ್ತೀನಿ..ನೋಡೋದು ಮರೀಬೇಡಿ ಸಾರ್! ನಡಿ ಪಳನಿ ನಿಂಗೆ ಒಳ್ಳೆ ಊಟ ಹಾಕಿಸಿ ಮನೆಗೆ ಡ್ರಾಪ್ ಮಾಡ್ತೀನಿ’ ಕಲ್ಲೇಶಿ ಮುಖ ಸೂರ್ಯಕಾಂತಿ ಹೂವಿನ ಹಾಗೆ ಅರಳಿತ್ತು! ಪಳನಿಯನ್ನೆಬ್ಬಿಸಿಕೊಂಡು ಹೊರಟೇಬಿಟ್ಟ! ನನ್ನ ಮೊಬೈಲು ರಿಂಗಾಯಿತು. ‘ರೀ..ಮನೇ ಇರೋದು ಮತರ್ುಬಿಟ್ರೋ ಹೇಗೆ..?’ ಮನೆಯವಳ ಎಚ್ಚರಿಕೆಯ ದನಿ ಮೊಬೈಲಿನಲ್ಲಿ ಉಲಿಯಿತು. ‘ಹೊರಡ್ತಾ ಇದೀನಿ’ ಎಂದು ಚುಟುಕಾಗಿ ಹೇಳಿ ಸ್ಕೂಟರ್ ಸ್ಟ್ಯಾಂಡಿನತ್ತ ನಡೆದೆ. ಇದಾಗಿ ತಿಂಗಳು ಕಳೆದಿತು. ಕಲ್ಲೇಶಿ ಹೇಳಿದಂತೆ ಫೋನೇನೂ ಮಾಡಲಿಲ್ಲ! ‘ಇವತ್ತು ಚೈತ್ರದ ಚಿಂಗಾರಿ ಕೊನೇ ಎಪಿಸೋಡು ನೋಡ್ಬನ್ನಿ ನಿಮ್ಮ ಶಿಷ್ಯಂದು’ ಎಂದು ಮನೆಯವಳು ಹೇಳಿದಾಗ ಹಾಲಿನಿಂದ ಎದ್ದು ಡೈನಿಂಗ್ ಹಾಲಿಗೆ ಬಂದೆ. ಟಿವಿ ಮುಂದೆ ನನ್ನ ಸಂಸಾರವೇ ನೆರೆದಿತ್ತು! ಮನಸ್ಸಿಲ್ಲದ ಮನಸ್ಸಿನಿಂದ ಟಿವಿ ತೆರೆಯತ್ತ ನೋಡಿದೆ. ಕೈಲಿ ಮಾತ್ರ ಪೇಪರ್ ಹಿಡಿದೇ ಇದ್ದೆ. ‘ಆ ದರಿದ್ರ ಪೇಪರಿನಲ್ಲಿ ಏನಿರುತ್ತೋ..? ರಾತ್ರಿ ಮಲಗೋವಗರ್ೂ ಓದೋ ಅಂತಾದ್ದು ಏನಿರುತ್ತೆ..? ಒಂದಿವ್ಸ ನಿಮ್ಮ ಶಿಷ್ಯಂದು ಸೀರಿಯಲ್ ನೋಡಿದ್ರೇನಾಗುತ್ತೆ..?’ ಮಾತು ಬೆಳಸಲಿಚ್ಚಿಸರೆ ಪೇಪರ್ ಟೀಪಾಯ್ ಮೇಲಿಟ್ಟು ಟಿವಿ ಪರದೆ ನೋಡಿದೆ. ಸಿಕ್ಕಾಪಟ್ಟೆ ಜಾಹೀರಾತುಗಳ ನಂತರ ಸೀರಿಯಲ್ ಶುರುವಾಯಿತು. ಟೈಟಲ್ ಸಾಂಗ್ ಜೊತೆಗೆ ಒಂದು ನಿಮಿಷದ ಟೈಟಲ್ ಸೀನ್! ಕಲ್ಲೇಶಿ ಕಾಣಿಸಿಕೊಂಡು ಸಮಸ್ತ ಕನ್ನಡ ಜನತೆಗೆ ತನ್ನ ಸೀರಿಯಲ್ಲು ನೋಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದ. ನಂತರ ಮತ್ತೆ ಐದು ನಿಮಿಷ ಜಾಹೀರಾತುಗಳು! ಐದು ನಿಮಿಷ ಸೀರಿಯಲ್ಲು ಮತ್ತೆ ಹತ್ತು ನಿಮಿಷ ಜಾಹೀರಾತು! ಹೀಗೇ ಮುಂದುವರಿಯಿತ್ತಿತ್ತು! ‘ಕೊನೆ ಹೇಗಿರುತ್ತೋ ನೋಡ್ಬೇಕು’ ನನ್ನವಳು ಮೂರನೆ ಸಲ ಹೇಳಿದಳು. ಸೀರಿಯಲ್ ಮುಗಿಯಲು ಇನ್ನು ಕೊನೇ ಮೂರು ನಿಮಿಷ ಮಾತ್ರ ಉಳಿದಿತ್ತು! ಮನೆಯವರೆಲ್ಲಾ ಉಸಿರು ಬಿಗಿಹಿಡಿದು ಕೂತಿದ್ದರು. ಜಾಹೀರಾತಿನ ನಂತರ ಸೀರಿಯಲ್ ಶುರುವಾಯಿತು. ಎಲ್ಲ ಪಾತ್ರಗಳೂ ವಾಗ್ಯುದ್ಧ ನಡೆಸಿ ರೋಷಾವಿಷ್ಟರಾಗಿ ನಿಂತಿದ್ದರು. ತಾಯಿ ಮತ್ತು ಮಗನ ಕಣ್ಣುಗಳಲ್ಲಿ ಗ್ಲಿಸಿರಿನ್ ಕಣ್ಣೀರು ಧಾರಾಕಾರವಾಗಿ ಸುರಿಯುತ್ತಿತ್ತು! ಒಮ್ಮೇಲೆ ಹೊರಬಾಗಿಲ ಕಡೆಯಿಂದ ಓಂಕಾರ ನಾದ ಕೇಳಿಬಂತು! ಕ್ಯಾಮೆರಾ ಬಾಗಿಲತ್ತ ತಿರುಗುತ್ತದೆ. ಅಂದರೆ ಪಾತ್ರಗಳೆಲ್ಲಾ ಬಾಗಿಲಕಡೆ ನೋಡುತ್ತವೆ ಎಂಬ ಭಾವನೆ ಬರುವಂತೆ ಚಿತ್ರೀಕರಣ. ಸವರ್ಾಭರಣಗಳಿಂದ ಅಲಂಕೃತಳಾಗಿ, ಮುಖದಲ್ಲಿ ಮಂದಹಾಸ ಸೂಸುತ್ತಾ ಓರ್ವ ಯುವತಿ ಬಾಗಿಲಲ್ಲಿ ಕಾಣಿಸುತ್ತಾಳೆ. ಆಕೆಯ ತಲೆಯ ಹಿಂದೆ ಪ್ರಭಾವಳಿ! ಆಕೆ ‘ದೇವಿ’ ಎಂದು ಹೇಳಬೇಕಾದ ಅವಶ್ಯಕತೆಯೇ ಇಲ್ಲ! ಅಕೆ ಮೆಲ್ಲಮಲ್ಲನೆ ಮನೆಯನ್ನು ಪ್ರವೇಶಿಸಿ ನೇರವಾಗಿ ಸಮಸ್ಯೆಯ ಕೇಂದ್ರಬಿಂದುವಾದ ಮಗನ ಬಳಿಗೆ ಬರುತ್ತಾಳೆ. ಮಂದಸ್ಮಿತೆಯಾಗಿ ಅವನ ತಲೆಯ ಮೇಲೆ ಕೈಯನ್ನಿಟ್ಟು, ಎಲ್ಲರನ್ನೂ ಒಮ್ಮೆ ನೋಡಿ ನೇರವಾಗಿ ದೇವರ ಕೋಣೆಗೆ ಹೋಗಿ ಅದೃಷ್ಯಳಾಗುತ್ತಾಳೆ. ಎಲ್ಲ ಪಾತ್ರಗಳ ಕಣ್ಣಲ್ಲೂ ಆನಂದಾಶ್ರು! ಎಲ್ಲರೂ ಬಂದು ಮಗನನ್ನು ಆಲಂಗಿಸಿಕೊಳ್ಳುತ್ತಾರೆ. ಮತ್ತೆ ಟೈಟಲ್ ಸಾಂಗ್ ಉಲಿಯುತ್ತದೆ! ‘ಚೈತ್ರದ ಚಿಂಗಾರಿ’ ಮೆಗಾ ಎಪಿಸೋಡು ಕೊನೆಗೂ ಮುಗಿದಿತ್ತು! ನನ್ನ ಮನಸ್ಸಿನಲ್ಲಿ ಗೊಂದಲ ಎದ್ದಿತ್ತು. ಎಲಾ.. ಪಳನಿ ಹೇಳಿದ್ದನ್ನು ನಾನು ಹೇಳಲಾಗಲಿಲ್ಲವೆ..?ಇಲ್ಲಾ ಇಂತಾ ಐಡಿಯಾ ಬರೋದು ಪಳನಿ ಮತ್ತು ಕಲ್ಲೇಶಿಯಂತವರಿಗೆ ಮಾತ್ರವೋ..? ಅವರೇ ಇವಕ್ಕೆಲ್ಲಾ ಲಾಯಕ್ಕೋ..? ಹೀಗೆ ಪ್ರಶ್ನೆಗಳು ಹುಟ್ಟಿದುವು. ‘ಸಖತ್ತಾಗಿತ್ತಲ್ವಾ ಎಡಿಂಗು..?’ ನನ್ನ ಮಗಳು ತನ್ನ ತಾಯಿಯ ಕಡೆ ನೋಡುತ್ತಾ ಹೇಳಿದಾಗ ನಾನು ಟೀಪಾಯ್ ಮೇಲಿದ್ದ ಪೇಪರನ್ನು ಕೈಗೆತ್ತಿಕೊಂಡು ಮುಖ ಹುದುಗಿಸಿದೆ!  ]]>

‍ಲೇಖಕರು G

26 January, 2012

1 Comment

  1. bharathi

    idensaaaaar … moor saavra episode hoseyora munde munnoorakke kalleshi susthaag koothnallaa …!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading