ಉದಯಕುಮಾರ ಹಬ್ಬು
**
ನಮ್ಮ ನಡುವೆ ಏಕೋ ಏನೋ
ಮೌನ ಪರದೆ ಬಿದ್ದಿದೆ
ಹೆಪ್ಪುಗಟ್ಟಿ ಸುಕ್ಕುಗಟ್ಟಿ
ಹುಬ್ಬುಗಂಟಿಕ್ಕಿದೆ
ಮೌನ ಸಹಿಸದಾಗಿದೆ
ಎದೆಯ ಹಾಡ ಕೇಳದಂತೆ
ಮನವು ಕಲ್ಲಾಗಿದೆ
ಯಾವ ಪದವು ಎಲ್ಲಿ ಇಡಲಿ
ಏನೂ ಅರಿಯದಾಗಿದೆ
ಕವಿಯ ಮನವು ತೆರೆದಿದೆ
ಹರಿದು ಎಲ್ಲೋ ಹೋಗಿದೆ
ಕವಿಯ ಪದವು ಹೃದಯದಾಚೆ
ಅರ್ಥಹೀನವಾಗಿವೆ
ಬುದ್ಧಿ ಗೆಟ್ಟ ನಾಲಿಗೆಯ
ಕಟ್ಟಿ ಹಾಕಬೇಕಿದೆ
ನಿನ್ನ ಮಾತ ನಾನು ತಿವಿದು
ಚಿಂದಿಚೂರು ಮಾಡಿದೆ
ಎದೆಯ ಬಡಿತ ನಿಂತಿದೆ
ನಾನು ನಾನು ನಾನು ಎನಲು
ನಿನ್ನ ಮುಖವು ಬಾಡಿದೆ
ನೀನು ನೀನು ನೀನು ಎನಲು
ನಿನ್ನ ಮುಖವು ಅರಳಿದೆ
ನಾವು ನಮ್ಮದೆಂಬ ಭಾವ
ಎಲ್ಲ ಕರಗಿ ಹೋಗಿದೆ
ನನ್ನ ತಪ್ಪು ನಾನು ಅರಿತೆ
ಬರಿದು ಮುನಿಸು ಏತಕೆ
ಎದೆಯ ಹಾಡು ಕೇಳದಿದೆ
ಮಾತು ಹಳಸಿ ಹೋಗಿದೆ
ಮೌನ ನಡುವೆ ಹರಡಿದೆ
ಮಾತು ತನ್ನ ಅರ್ಥವನ್ನು ತೊರೆದಿದೆ
ಸೇತುವೆ ಮುರಿದು ಬಿದ್ದಿದೆ
ಮೌನ ಮುರಿದು ಮನವು ತಣಿದು
ತನುವು ಕೇಕೆ ಹಾಡಿದೆ
ಇನ್ನು ಇನ್ನು ಇನ್ನು ಮೌನ ಏಕೆ
ಸೋತ ನನಗೆ ಲಾಲಿ ಹಾಡಿ
ನಿದ್ದೆ ನಿನ್ನ ತೊಡೆಯ ನೆಲೆಯಿದೆ
ಮುನಿಸ ಬಿಟ್ಟು ಹನಿಸು ಜೇನ
ಸುರಿಸಿ ಬಟ್ಟೆ ಒದ್ದೆಯಾಗದೇತಕೆ
ಇನ್ನು ತಡವು ಮಾತಿಗೆ
ಯಾಕೋ ತಿಳಿಯದಾಗಿದೆ
ಮಾತು ನಿಂತು ಮೌನ ಹನಿಯು
ನಮ್ಮ ನಡುವೆ ಜಿನುಗಿದೆ






0 Comments