
ಬೆಂಗಳೂರಿನ ನೀಲಿಮಾ ಪ್ರಕಾಶನ ಹೊರತರಲಿರುವ `ಹಾಡು ಹುಟ್ಟಿದ ಸಮಯ’ ಪುಸ್ತಕಕ್ಕೆ `ಮುಖಪುಟ ರಚನೆ’ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಮಧುರ ಚಿತ್ರಗೀತೆಗಳು ಸೃಷ್ಟಿಯಾದ ಆಪ್ತ ಸಂದರ್ಭಗಳನ್ನು ವಿವರಿಸುವ ಪುಸ್ತಕ ಇದಾಗಲಿದೆ.
ಚಲನಚಿತ್ರಗಳಿಗೆ ಅದ್ಭುತವಾದ, ಅಪರೂಪದ ಹಾಡುಗಳನ್ನು ಬರೆದ ಗೀತ ರಚನೆಕಾರರು ಹಾಗೂ ಅಪರೂಪದ ಟ್ಯೂನ್ ಸೃಷ್ಟಿಸಿದ ಸಂಗೀತ ನಿರ್ದೇಶಕರ ಮನಸ್ಥಿತಿಯನ್ನು ಮುಖಪುಟ ಬಿಂಬಿಸುವಂತಿರಬೇಕು. ಒಬ್ಬರು ಎಷ್ಟು ಮುಖಪುಟಗಳನ್ನಾದರೂ ಜೆಪೆಗ್ ಫಾರ್ಮ್ಯಾಟ್ ನಲ್ಲಿ ಕಳಿಸಬಹುದು. ಮುಖಪುಟಗಳು 140 ಎಂ.ಎಂ. * 210 ಎಂ.ಎಂ. ಅಳತೆಯಲ್ಲಿರಬೇಕು.
ನವೆಂಬರ್ ಕಡೆಯ ವಾರದಲ್ಲಿ ಪುಸ್ತಕ ಬಿಡುಗಡೆಯಾಗಲಿದೆ. ಅದಕ್ಕೂ ಒಂದು ವಾರ ಮೊದಲೇ ಫಲಿತಾಂಶ ಪ್ರಕಟಿಸಲಾಗುವುದು. ಮುಖಪುಟಗಳನ್ನು ಕಳಿಸಲು ಕಡೆಯ ದಿನ ಅಕ್ಟೋಬರ್ 25. ಕಳುಹಿಸಬೇಕಾದ ವಿಳಾಸ: manicoverpage@gmail.com
ಮುಖಪುಟ ರಚನೆ ಸ್ಪರ್ಧೆ
ನಿಮಗೆ ಇವೂ ಇಷ್ಟವಾಗಬಹುದು…





0 Comments