ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮುಕ್ತ ಮುಕ್ತ’ದ ಬಗ್ಗೆ ಅಂಚೆಯಣ್ಣನ ರಿಕ್ವೆಸ್ಟ್

ಸುಘೋಷ್ ಎಸ ನಿಗಳೆ

ಕಾಶಿಯಸ್ ಮೈಂಡ್

ಮುಕ್ತ ಮುಕ್ತದಲ್ಲಿ ನಟನಾದ ಬಳಿಕ ಆಗಿರುವ ಅನುಭವಗಳಲ್ಲಿ ಇದು ಈವರೆಗಿನ ಅತ್ಯಂತ ಕ್ಲಾಸಿಕ್ ಅನುಭವ. ಜನರು ಈ ಧಾರಾವಾಹಿಯನ್ನು ಹೇಗೆಲ್ಲ ನೋಡುತ್ತಾರೆ, ಎಷ್ಟು ಆಸಕ್ತಿಯಿಂದ ವೀಕ್ಷಿಸುತ್ತಾರೆ, ಈ ಧಾರಾವಾಹಿಯಿಂದ ಏನೆಲ್ಲ ಬಯಸುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ.

ನಾನು ಬರೆದ ಲೇಖನವೊಂದಕ್ಕೆ ಸಂಭಾವನೆಯನ್ನು ಎಂಓ ಮಾಡಲಾಗಿತ್ತು. ಅದನ್ನು ಹಿಡಿದುಕೊಂಡು ಅಂಚೆಯಣ್ಣ ನನ್ನ ಮನೆ ಬಾಗಿಲು ತಟ್ಟಿದರು. ಬಾಗಿಲು ತೆರೆಯುತ್ತಲೇ ನನ್ನನ್ನು ನೋಡಿದವರೆ ಎಕ್ಸೈಟ್ ಆಗಿ “ಓಹ್..ಸಾರ್ ನೀವಾ…” ಎಂದು ಮಾತಿಗಾರಂಭಿಸಿ ಸುಮಾರು ಹದಿನೈದು ನಿಮಿಷಗಳ ಕಾಲ ಹಾಗೆಯೇ ಮಾತಾಡುತ್ತ ನಿಂತುಬಿಟ್ಟರು.

ಚಿಕ್ಕವನಿದ್ದಾಗಿನಿಂದಲೂ ನನಗೆ ಅಂಚೆಯಣ್ಣ ಅಂದರೆ ಎಲ್ಲಿಲ್ಲದ ಪ್ರೀತಿ. ಅಮ್ಮನಿಗೆ ಪತ್ರ ಬರೆಯುವ ಹವ್ಯಾಸ ತುಂಬಾ ಇತ್ತು. ಅದು ನನಗೂ ಹರಿದು ಬಂತು. ಹೊಸವರ್ಷಕ್ಕೆ ದೀಪಾವಳಿಗೆ ಗ್ರೀಟಿಂಗ್ ಕಾರ್ಡ್ ಕಳಿಸುವುದು, ಶಾಲೆಯ ಫಲಿತಾಂಶ ಬಂದ ಮೇಲೆ ಅದನ್ನು ನೆಂಟರಿಷ್ಟರಿಗೆ ತಿಳಿಸುವುದು ಹೀಗೆಲ್ಲ ಮೊದಲು ತುಂಬಾ ಪತ್ರ ಬರೆಯುತ್ತಿದ್ದೆ. ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಪತ್ರ ಬರೆದಿಲ್ಲ. ಕಾರಣ ಸುಲಭ. ಮೊಬೈಲ್ ಬಂದಿದೆ ಅದಕ್ಕೆ. ಇರಲಿ.

ಧಾರಾವಾಹಿ, ಪಾತ್ರಗಳು, ಕಂಟೆಂಟ್ ಎಲ್ಲವನ್ನು ಮಾತನಾಡಿದ ಬಳಿಕ ಅಂಚೆಯಣ್ಣ ಹೇಳಿದರು.

“ಸರ್ ನಿಮಗೊಂದು ರಿಕ್ವೆಸ್ಟ್ ಮಾಡ್ಕೋತಿನಿ. ಬೇಜಾರು ಮಾಡ್ಕೋಬೇಡಿ. ದಯವಿಟ್ಟು ಇದನ್ನ ಸೀತಾರಾಮ್ ಸಾರ್ ಅವರಿಗೂ ಹೇಳಿ” ಅಂದರು.

“ಪರ್ವಾಗಿಲ್ಲ ಹೇಳಿ” ಅಂದೆ.

“ಸರ್, ನೋಡಿ ನಮ್ಮದು ತುಂಬಾ ಹಳೆಯ ಡಿಪಾರ್ಟಮೆಂಟ್. ನಾವು ಪ್ರಧಾನಿ ಬಳಿಯೂ ಹೋಗುತ್ತೇವೆ. ಬಡವನ ಮನೆಗೂ ಹೋಗುತ್ತೇವೆ. ಆದರೆ ನಮ್ಮ ಕಷ್ಟ ಮಾತ್ರ ಹಾಗೇ ಇದೆ. ನಿಮ್ಮ ಸೀರಿಯಲ್ ನಲ್ಲಿ ಪತ್ರ, ಪಾರ್ಸೆಲ್ ಎಲ್ಲ ಹಿಡ್ಕೊಂಡು ಶಂಕರಮೂರ್ತಿ ಮನೆಗೋ, ನಿಮ್ಮ ಮನೆಗೋ ಬರ್ತಾರಲ್ಲ ಆಗ ಅವರ ಕೈಯಲ್ಲಿ ‘ಪೋಸ್ಟ್’ ಅಂತ ಕೂಗ್ಸಿ ಸಾರ್. ‘ಕೊರಿಯರ್’ ಅಂತ ಬೇಡ” ಅಂದರು.

ಒಂದು ಕ್ಷಣ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಖಂಡಿತ ಸೀತಾರಾಮ್ ಸರ್ ಗೆ ಹೇಳುತ್ತೇನೆ” ಅಂದೆ. ಅಂಚೆಯಣ್ಣ ಖುಷಿಯಾಗಿ ಮುಂದಿನ ಮನೆಗೆ ಪೋಸ್ಟ್ ಹಾಕಲು ಹೋದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ಅಂಚೆ ಇಲಾಖೆಯನ್ನು ಖಾಸಗಿಯವರ ಕೈಗೆ ಕೊಡುವ ನಿರ್ಧಾರ ಮಾಡಲು ಹೊರಟಿದೆ. ನಮ್ಮ ರಾಜಕಾರಣಿಗಳ ಚರ್ಮ ನಿಜಕ್ಕೂ ದಪ್ಪ ಅಲ್ವಾ?

 

‍ಲೇಖಕರು G

14 July, 2011

7 Comments

  1. prasadraxidi

    ಅಂಚೆ, ಎಲ್ಲೈಸಿ, ಆಸ್ಪತ್ರೆ, ಶಾಲೆ, ಎಲ್ಲದರ ಕತ್ತನ್ನೂ ಸರ್ಕಾರಗಳೇ ಹಿಸುಕುತ್ತಿವೆ. ಜಾಗತೀಕರಣ, ವ್ಯಾಪಾರೀಕರಣ, ಖಾಸಗೀಕರಣ ಇತ್ಯಾದಿ ಈ ಎಲ್ಲ “ಕರಣ” ಗಳ ನಡುವೆ ಅಂತಃಕರಣ ಅನ್ನೋದು ಉಳಿದೀತೆ..?

  2. malathi S

    🙂 so sweet!!
    malathi S

  3. jogi

    ದುಗ್ಗಪ್ಪ ಗೌಡ ನೆನಪಾದ. ನನ್ನ ಸಾವಿರಾರು ಪತ್ರಗಳನ್ನು ನನಗೆ ತಲುಪಿಸಿ ನನ್ನ ಹೊಟೆಲಿನಲ್ಲಿ ನಾನೇ ಮಾಡಿಕೊಟ್ಟ ಚಾ ಕುಡಿದು ಹೋಗುತ್ತಿದ್ದ. ಅಷ್ಟೊಂದು ಪತ್ರಗಳನ್ನು ಯಾರಾದರೂ ಕುಗ್ರಾಮದ ನಡುವೆ ಮುರುಕು ಹೊಟೆಲು ಇಟ್ಟುಕೊಂಡಿರುವ ನನಗೆ ಯಾಕೆ ಬರೀತಾರೆ ಅನ್ನುವ ಕುತೂಹಲ ಅವನ ಕಣ್ಣಲ್ಲಿರುತ್ತಿತ್ತು. ಅವನನ್ನು ಮತ್ತೊಮ್ಮೆ ನೋಡಬೇಕು ಅನ್ನಿಸುತ್ತಿದೆ.

  4. prashanth

    nivedhane
    jothege
    janara vedane…………
    kelida kivige
    odisida aksharakke
    namma vandane..

  5. Gubbachchi Sathish

    ancheyanna, jai ho…long live the king.

  6. D.RAVIVARMA

    patragalu bari patragalalla avu bhavanegalannu,no vu nalivannu hottutaruva apta mitraragiddavu nanaginnu nenapide,nanu doorada gulbargadalli pg oduttiddaga prati dinavu patrakkagi kayuttidde gelatiya patra tandeya patra geleyapatra nannorina hosa suddigalu ellavu egalu nenasikondare mai pulakagolluttade.hageya yaradaru satta suddi patrakke masi balidu kalisuttiddaru,halavomme e patra horage ittu odi alle bisaduttiddaru ancheya annana seve ultimate,kasagikarada hodetakke sikki nashavada sarvajanika rangadalli anchevibhagakuda ondu,entha malegaladalli,bisili kaladalli aa hale cycle mele anche hottu taruva manege manegalige mana managalige suddi talupisuva ee annanigodu hatsoff. d.ravi varma hospet

  7. Sudha ChidanandaGowda.

    ee deshadalli, ee dinagalalli sanna sanna aasegalu eshtu dubaariyaaguttive..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading