ಭಾರತಿ ಬಿ ವಿ
ಅವಳು: ಇವತ್ತು ರಾತ್ರಿಯೊಳಗೆ ಸಮುದ್ರದೂರು ಸೇರಬೇಕು
ಅವನು: ಆಯ್ತು, ಆಯ್ತು … ನೀನು ಹತ್ತು ಸಾರಿ ಹೇಳಿಯಾಯ್ತು ಇದನ್ನ …
ಅವಳು: ಹೌದಾ? ಸರಿ, ಈಗ ಹನ್ನೊಂದನೆಯ ಸಲ ಹೇಳ್ತಿದೀನಿ … ರಾತ್ರಿಯೊಳಗೆ ಸಮುದ್ರದೂರು …
ಅವನು: ಹನ್ನೆರಡನೆಯ ಸಲ ಹೇಳಿದರೆ ಸಮುದ್ರದೊಳಗೆ ತಳ್ಳಿ ಬಿಡ್ತೀನಿ …
ಅವಳು: ನಾನು ಯಾಕೆ ಹೇಳ್ತಿದೀನಿ ಅಂತ ಕೇಳ್ತೀಯ ಅಂತ ಕಾಯ್ತಿದ್ದೆ …
ಅವನು: ಸರಿ, ಹೇಳಿ ಮುಗಿಸಿಬಿಡು, ಯಾಕೆ ?
ಅವಳು: ಇವತ್ತು ರಾತ್ರಿ ಹನ್ನೆರಡಕ್ಕೆ ನಾನು ಹುಟ್ಟಿದ ದಿನ ಸಮುದ್ರದ ಜೊತೆಯಲ್ಲೇ ಸೆಲೆಬ್ರೇಟ್ ಮಾಡ್ಕೊಳ್ಬೇಕು ನಾನು
ಅವನು ಸಮುದ್ರದ ಜೊತೆ ಬರ್ತ್‌ಡೇ! ಕೇಳಿದೋರು ನಿಜಕ್ಕೂ ಏನಂದ್ಕೊಳ್ತಾರೆ ಗೊತ್ತಾ … ತಲೆ ಕೆಟ್ಟಿದೆ ಅಂತ …
ಅವಳು: ಇನ್ಯಾರು ಕೇಳೋರಿದಾರೆ? ನೀನೊಬ್ಬ ತಾನೇ … ನೀನು ಈಗಾಗ್ಲೇ ಹಾಗಂದುಕೊಂಡು ಆಗಿರೋದ್ರಿಂದ ನೋ ಪ್ರಾಬ್ಲಮ್ ಬಿಡು!
ಅವನು: …………………….
ಅವಳು: ಉರಿಮಾರಿ!
ಅವನು : ……………….
****
ಅವನು: ತಲುಪಿಸಿದೆ ನಿನ್ನನ್ನ ಅಂತೂ ಇಂತೂ ನಿನ್ನ ಸಮುದ್ರರಾಜನ ಜೊತೆ ..
ಅವಳು: ಥ್ಯಾಂಕ್ಸ್ ಅನ್ನಲಾ? ಬೇಡ ಬಿಡು … ಇದು ನಿನ್ನ ಕರ್ತವ್ಯ ತಾನೇ!
ಅವನು: ಕರ್ತವ್ಯ! ಅಬ್ಬಬ್ಬಾ, ನಿಂಗೆ ಕಡಿಮೆ ಕೊಬ್ಬಿಲ್ಲ ಮಾರಾಯ್ತಿ….
ಅವಳು: ಸುಮ್ಮನೆ ಮತ್ತೆ ಜಗಳ ಮಾಡ್ಬೇಡ. ನಾನು ರಾತ್ರಿ ಹನ್ನೆರಡಾದ ಮೇಲೇನೇ ವಾಪಸ್ ಬರೋದು …
ಅವನು: ಆಯ್ತೂಊಊಊಊಊ
ಅವಳು; ಇವತ್ತು ಹುಣ್ಣಿಮೆ ಗೊತ್ತಾ …
ಅವನು: ಗೊತ್ತು, ಗೊತ್ತು. ಬೆಳಗಿನಿಂದ ನೀನು ಹೀಗಾಡುವಾಗಲೇ ಅಂದ್ಕೊಂಡೆ ಹುಣ್ಣಿಮೆಯೇ ಇರಬೇಕು ಇವತ್ತು ಅಂತ …
ಅವಳು: ……………….
ಅವನು: ಸಿಟ್ಟೇನೇ …
ಅವಳು: ……………….
****
ನಡುರಾತ್ರಿ ಹನ್ನೆರಡಕ್ಕೆ ಐದು ನಿಮಿಷ ಬಾಕಿ ಇರುವಾಗ ಅವನು ಎದ್ದು ದಪ್ಪ ಕಲ್ಲೊಂದನ್ನು ಹೊತ್ತು ಬರುತ್ತಾನೆ.
ಅವಳು: ತಲೆ ಮೇಲೆ ಎತ್ತಾಕ್ತೀಯಾ?
ಅವನು: ಥೂ ಅಪಶಕುನದ ಮುದ್ದೆಯೇ!
ಕಲ್ಲಿನ್ನಿಟ್ಟವ ಮತ್ತೆ ಎರಡು ನಿಮಿಷ ಅಂತರ್ಧಾನನಾದವ ಮತ್ತೆ ಬಂದಾಗ ಕೈಲೊಂದು ಪುಟ್ಟ ಕೇಕ್ …
ಅದರ ಮೇಲೆ ಒಂದು ಕ್ಯಾಂಡಲ್ ಹೊತ್ತಿಸಿದ …
ಅವನು: ನಿನ್ನ ವಯಸ್ಸು ಗೊತ್ತಿರ್ಲಿಲ್ಲ. ಅದಕ್ಕೆ ಒಂದೇ ಕ್ಯಾಂಡಲ್ ತಂದೆ! ಹ್ಯಾಪಿ ಬರ್ತ್‌ಡೇ ಕಣೇ … ಗಾಳಿಗೆ ಆರೋಗಕ್ಕೆ ಮುಂಚೆ ನೀನೇ ಊದ್ತೀಯಾ …?
ಅವಳು: ………
ಅವನು: ಸಿಟ್ಟೇನೇ ?
ಅವಳು: ಹೂಂ, ಮುಂಚೆ ಯಾಕೆ ಸಿಗ್ಲಿಲ್ಲ ನೀನು ……







ಭಾರತಿ ತುಂಬಾ ಚೆನ್ನಾಗಿದೆ . ನಾನು ನಿನಗೆ ಒಂದು ಪ್ರಶ್ನೆ ಕೇಳಲಾ? ಇದಕ್ಕೂ ಮುಂಚೆ ನನಗೆ ನಿನ್ನ ಲೇಖನಗಳ ಮೂಲಕ ಯಾಕೆ ಸಿಕ್ಕಿರಲಿಲ್ಲ?
Nice madam 🙂
ವ್ಹಾ!!! ಮೇಡಂ….ಬಹಳ ಚೆನ್ನಾಗಿದೆ.
ತಡವಾದರೂ ಸರಿ, ನದಿ ಸಮುದ್ರ ಸೇರಿಯಾಯಿತು…. 🙂 🙂
Sooper
Uma 😀 … Kushyaythu
ಕೇವಲ ಒಂದೇ ಪ್ರಶ್ನೆ..ಮುಂಚೇಕೆ ನೀನು ಸಿಕ್ಕಿರಲಿಲ್ಲ ??? ನಿಜ..
ಭಾರತಿ ಈ ರೀತಿ ಭಾವನೆಗಳನ್ನ ಬಡಿದೆಬ್ಬಿಸುವ ಪ್ರಶ್ನೆಗಳಿಗೆ ಉತ್ತರ ಸಿಗೋದಿಲ್ಲ ಅಲ್ವಾ??
ಭಾರ್ತಿ ಮುಂದೆ … ಸಕತ್ ಸಂಭಾಷಣೆ. 🙂
ರಂಗಪ್ರಯೋಗ..?
very nice..
Thanks all … Malini uhoo idu sumne …
mast mast mast.
ಸೊಗಸಾಗಿದೆ.
ಕವನದಂತಾ ಬರಹ. 🙂
channaagide maa…. nice….